ಬಳ್ಳಾರಿ: ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನೀರು ಸರಬರಾಜು ಸ್ಥಗಿತಗೊಳಿಸುವುದನ್ನು ಖಂಡಿಸಿ ರೈತ ಸಂಘ ಶುಕ್ರವಾರ ಕರೆ ನೀಡಿರುವ ಬಳ್ಳಾರಿ ಬಂದ್ ಶುರುವಾಗಿದೆ. ನೀರಾವರಿ ಸಲಹಾ ಸಮಿತಿಯ ಸಭೆ ಈ ಮೊದಲ ನಿರ್ಣಯದಂತೆ ನ.30ರ ವರೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಮಾಧವರೆಡ್ಡಿ ನೇತೃತ್ವದ ರೈತ ಸಂಘ ಬಳ್ಳಾರಿ ಬಂದ್ಗೆ ಕರೆ ನೀಡಿದೆ.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನವೆಂಬರ್ ಅಂತ್ಯದವರೆಗೆ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ ನಂತರ ಬೆಂಗಳೂರಿನಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ನ.10ರ ವರೆಗೆ ಮಾತ್ರ ನೀಡಲಿದೆ ಎಂದು ಹೇಳಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಪೆಟ್ರೋಲ್ ಬಂಕ್, ಹಾಲಿನ ಅಂಗಡಿಗಳು ಸೇರಿ ಅಗತ್ಯ ಸೇವೆಗಳು ಆರಂಭಗೊಂಡಿವೆ. ಹೊಟೇಲ್ಗಳು ವಿರಳ ಸಂಖ್ಯೆಯಲ್ಲಿ ತೆರೆದಿವೆ. ಬೀದಿ ಬದಿ ವ್ಯಾಪಾರಸ್ಥರು ವಹಿವಾಟನ್ನು ಬೆಳಿಗ್ಗೆಯಿಂದಲೇ ಆರಂಭಿಸಿದ್ದಾರೆ. ರೈತ ಸಂಘದ ಬಂದ್ ಗೆ ವಿವಿಧ ಸಂಘಟನೆಗಳಿಗೆಬೆಂಬಲ ವ್ಯಕ್ತಪಡಿಸಿವೆ.