ಬೆಂಗಳೂರು: ಬೆಂಗಳೂರಿನ ಕೆಲವು ಭಾಗಗಳಲ್ಲಿ ಫೆ. 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ರಂದು ವಿಧಾನ ಪರಿಷತ್ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆ. 14ರ ಪ್ರೇಮಿಗಳ ದಿನಾಚರಣೆಯಂದು ಮದ್ಯಪಾನಕ್ಕೆ ನಿಷೇಧ ಹೇರಲಾಗಿದ್ದು, ಈ ಬೆಳವಣಿಗೆಗೆ ಎಫ್ & ಬಿ ಉದ್ಯಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Job Offer: ಬೆಂಗಳೂರಿನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ : 12ನೇ ತರಗತಿ ಪಾಸಾಗಿದ್ರೆ ಸಾಕು!
ಫೆ. 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ರಂದು ವಿಧಾನ ಪರಿಷತ್ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆ. 14ರ ಸಂಜೆ 5ರಿಂದ ಫೆ. 16ರ ಮಧ್ಯರಾತ್ರಿವರೆಗೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನ್ಯಾಷನಲ್ ರೆಸ್ಟೋರೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಪಾಪ್ಯೂಲರ್ ನೈಬರ್ ಹುಡ್ ಪಬ್-1522 ಸಂಸ್ಥಾಪಕ ಚೇತರ್ ಹೆಗಡೆ ಅವರು ಪ್ರೇಮಿಗಳ ದಿನದಂದು ಹೆಚ್ಚೆಚ್ಚು ಜನರು ರೆಸ್ಟೋರೆಂಟ್ ಗಳಿಗೆ ಬರುತ್ತಾರೆ. ಇದಕ್ಕಾಗಿಯೇ ನಾವು ತಿಂಗಳಾನುಗಟ್ಟಲೆಯಿಂದ ಸಿದ್ಧತೆಗಳ ಆರಂಭಿಸಿದ್ದೆವು. ಆದರೆ, ಸರ್ಕಾರ ಈ ನಿರ್ಧಾರ ನಮಗೆ ನಷ್ಟವನ್ನು ತಂದೊಡ್ಡಲಿದೆ ಎಂದು ಹೇಳಿದ್ದಾರೆ.