ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಯನ್ನು ತಾನೇ ಆತಿಥ್ಯವಹಿಸಬೇಕು ಎಂದು ಪಾಕಿಸ್ತಾನ ನಿರ್ಧಾರ ಮಾಡಿದೆ. ಆದ್ರೆ ಇದರ ಬಗ್ಗೆ ಐಸಿಸಿ ಹಾಗೂ ಬಿಸಿಸಿಐ ಹಲವು ಆಕ್ಷೇಪಣೆಗಳನ್ನು ಎತ್ತಿವೆ. ಇದೇ ವಿಚಾರಕ್ಕೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ರೀಡೆಯೊಂದಿಗೆ ರಾಜಕೀಯವನ್ನು ಹೆಣೆದುಕೊಂಡಿರುವ ಬಿಸಿಸಿಐ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಅತಂತ್ರ ಸ್ಥಿತಿಯಲ್ಲಿರಿಸಿದೆ ಎಂದು ಪಾಕ್ ಆಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಬ್ರಿಡ್ ಮಾದರಿಯ ವಿರುದ್ಧ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ನಿಲುವನ್ನು ನಾನು ಸಂಪೂರ್ಣವಾಗಿ ಬೆಂಬಲಿಸತ್ತೇನೆ. ಏಕೆದರೆ 26/11ರ ಘಟನೆಯ ನಂತರ ಭದ್ರತಾ ಕಾಳಜಿಗಳ ಹೊರತಾಗಿಯೂ ಪಾಕಿಸ್ತಾನ್ ತಂಡವು ದ್ವಿಪಕ್ಷೀಯ ವೈಟ್-ಬಾಲ್ ಸರಣಿ ಸೇರಿದಂತೆ ಐದು ಬಾರಿ ಭಾರತ ಪ್ರವಾಸ ಮಾಡಿದೆ. https://ainlivenews.com/if-you-do-these-things-on-saturday-you-are-guaranteed-to-get-shani-dosha/ ಹೀಗಾಗಿ ಈ ಬಾರಿ ಭಾರತ ಪಾಕಿಸ್ತಾನದಲ್ಲಿ ಬಂದು ಆಡಬೇಕೆಂದು ಶಾಹಿದ್ ಅಫ್ರಿದಿ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಚಾಂಪಿಯನ್ಸ್ ಟ್ರೋಫಿ ವಿಷಯದಲ್ಲಿ ಐಸಿಸಿ ಮತ್ತು ಅದರ ನಿರ್ದೇಶಕರ ಮಂಡಳಿಯು ನ್ಯಾಯಸಮ್ಮತತೆಯನ್ನು ಎತ್ತಿಹಿಡಿಯಲು ಇದು ಸಕಾಲ. ಈ ಮೂಲಕ…
Author: AIN Admin
ನವದೆಹಲಿ: ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರು ಅಮೆರಿಕದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯವೊಂದು ಗೌತಮ್ ಅದಾನಿ ಮತ್ತು ಇತರ ಏಳು ಜನರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದೆ. ಇದಕ್ಕೆ ಪೂರಕವಾಗಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಕಾರ್ಯನಿರ್ವಾಹಕರ ವಿರುದ್ಧ ಸಮನ್ಸ್ ನೀಡಲು ಅಥವಾ ಬಂಧನ ವಾರಂಟ್ ನೀಡಲು ಅಮೆರಿಕದಿಂದ ಭಾರತ ಯಾವುದೇ ವಿನಂತಿಯನ್ನು ಸ್ವೀಕರಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ. https://ainlivenews.com/if-you-do-these-things-on-saturday-you-are-guaranteed-to-get-shani-dosha/ ವಾರದ ಸುದ್ದಿಗೋಷ್ಠಿಯಲ್ಲಿ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ ಇದು ಖಾಸಗಿ ಸಂಸ್ಥೆ, ವ್ಯಕ್ತಿ ಮತ್ತು ಅಮೆರಿಕ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ಕಾನೂನು ವಿಷಯ ಎಂದು ತಿಳಿಸಿದರು. ಸಮನ್ಸ್ ಅಥವಾ ಬಂಧನ ವಾರಂಟ್ ಸೇವೆಗಾಗಿ ವಿದೇಶಿ ಸರ್ಕಾರದ ಯಾವುದೇ ವಿನಂತಿಯು ಪರಸ್ಪರ ಕಾನೂನು ನೆರವಿನ ಭಾಗವಾಗಿದೆ ಮತ್ತು ಅಂತಹ ವಿನಂತಿಗಳನ್ನು ಸ್ವೀಕರಿಸಿದಾಗ ಅರ್ಹತೆಗಳ…
ಬೆಂಗಳೂರು: ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಮಾವೇಶ ಮಾಡುತ್ತಿರಬಹುದು ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ವಾಭಿಮಾನ ಸಮಾವೇಶವನ್ನು ಸಿದ್ದರಾಮಯ್ಯನವರು ಯಾವ ಪುರಷಾರ್ಥಕ್ಕೆ ಮಾಡಿಸುತ್ತಿದ್ದಾರೋ ಗೊತ್ತಿಲ್ಲ, ಸರ್ಕಾರದ ಸಾಧನೆಗಳನ್ನು ರಾಜ್ಯದ ಜನ ಪ್ರಶ್ನಿಸುತ್ತಿದ್ದಾರೆ, https://ainlivenews.com/if-you-do-these-things-on-saturday-you-are-guaranteed-to-get-shani-dosha/ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಅವರು ಸಮಾವೇಶ ಮಾಡುತ್ತಿರಬಹುದು ಹೇಳಿದರು. ಇನ್ನೂ ಸಮಾವೇಶದ ಮೂಲಕ ಸಿದ್ದರಾಮಯ್ಯನವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗಿಂತ ಜಾಸ್ತಿ ತಮ್ಮದೇ ಹೈಕಮಾಂಡ್ ಗೆ ತಮ್ಮ ಸಾಮರ್ಥ್ಯದ ಸಂದೇಶ ನೀಡಿ ಸಿಎಂ ಕುರ್ಚಿಯನ್ನು ಗಟ್ಟಿಮಾಡಿಕೊಳ್ಳುವ ಯೋಚನೆ ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಜಗಳ ಶುರುವಾಗಿ ಓರ್ವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಅಂಧ್ರಳ್ಳಿಯ ಅನುಪಮ ಶಾಲೆ ಬಳಿ ನಡೆದಿದೆ. ಅಭಿಷೇಕ್(36) ಕೊಲೆಯಾದ ವ್ಯಕ್ತಿಯಾಗಿದ್ದು, ಬ್ಯಾಡರಹಳ್ಳಿ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ತಿಕ್,ಚೇತನ್ ಬಂಧಿತ ಆರೋಪಿಗಳಾಗಿದ್ದು, https://ainlivenews.com/if-you-do-these-things-on-saturday-you-are-guaranteed-to-get-shani-dosha/ ಕಳೆದ ಎರಡು ದಿನಗಳ ಹಿಂದೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಖಡ್ಗದಿಂದ ಅಭಿಷೇಕ್ ತಲೆಗೆ ಕಾರ್ತಿಕ್ ಹೊಡೆದಿದ್ದಾನೆ. ಗಾಯಗೊಂಡು ಆಸ್ಪತ್ರೆ ಸೇರಿದ್ದ ಅಭಿಷೇಕ್, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಬಿಜೆಪಿಯೊಳಗಿನ ಭಿನ್ನಮತ ಸದ್ಯಕ್ಕಂತು ಮುಗಿಯೋತರ ಕಾಣ್ತಿಲ್ಲ, ಎರಡು ಗುಂಪುಗಳ ನಡುವಿನ ಹೋರಾಟ ಜೋರಾಗ್ತಿದೆ. ವಿಜಯೇಂದ್ರ ಬೆಂಬಲಿಸಿ ರೇಣುಕಾಚಾರ್ಯ ನೇತೃತ್ವದ ಟೀಂ ಇಂದಿನಿಂದ ಹೋರಾಟ ಶುರುಮಾಡಿದೆ, ಯತ್ನಾಳ್ ರನ್ನೇ ಟಾರ್ಗೆಟ್ ಮಾಡಿರೋ ಟೀಂ ವೈಯಕ್ತಿಕ ಟಾಕ್ ವಾರ್ ಗಿಳಿದಿದೆ. ಈ ಮಧ್ಯೆ ಯತ್ನಾಳ್ ರೇಣುಕಾಚಾರ್ಯ ಟೀಂ ಅನ್ನ ಲಫಡಾ ಎಂದಿದ್ದು ರಕ್ತದಲ್ಲಿ ಪತ್ರ ಬರೆದವರ ವಿರುದ್ಧ ವ್ಯಂಗ್ಯವಾಡ್ತಾ ಸವಾಲು ಹಾಕಿದ್ದಾರೆ. ಬಿಜೆಪಿಯ ಬಣ ಬಡಿದಾಟ ಇದೀಗ ಎರಡೂ ಬಣಗಳ ನಡುವೆ ಪ್ರತಿಷ್ಟೆಯ ಹೋರಾಟಕ್ಕೆ ವೇದಿಕೆ ಸಿದ್ದವಾಗಿದೆ. ಯತ್ನಾಳ್ ಬಣದ ವಕ್ಫ್ ಹೋರಾಟಕ್ಕೆ ಟಕ್ಕರ್ ಕೊಡಲು ವಿಜಯೇಂದ್ರ ಪರವಾಗಿ ರೇಣುಕಾಚಾರ್ಯ ಟೀಂ ಹೋರಾಟ ಆರಂಭಿಸಿದೆ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಸದಾಶಿವನಗರದ ಮನೆಯಲ್ಲಿ ಟಿಫನ್ ಗೆ ಸೇರಿದ ಸುಮಾರು 35 ಕ್ಕೂ ಹೆಚ್ಚು ಮಾಜಿ ಶಾಸಕರು ಶಕ್ತಿ ಪ್ರದರ್ಶನ ತೋರಿಸಿದ್ರು. https://ainlivenews.com/if-you-do-these-things-on-saturday-you-are-guaranteed-to-get-shani-dosha/ ರೇಣುಕಾಚಾರ್ಯ ಟೀಂ ಸುದ್ದಿಗೋಷ್ಟಿ ನಡೆಸಿ ಆಕ್ರೋಶ ಹೊರಹಾಕ್ತು. ಯತ್ನಾಳ್ ರನ್ನೇ ಟಾರ್ಗೆಟ್ ಮಾಡಿದ ನಾಯಕರು ವೈಯಕ್ತಿಕ ವಿಚಾರಗಳನ್ನು…
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟ ಹೆಚ್ಚಾಗ ತೊಡಗಿದ್ದು, ವಿಕಲಚೇತನರಿಗೆ ಅನುದಾನ ಕಡಿತ ಮಾಡಿದ ಆರೋಪಕ್ಕೆ ಒಳಗಾಗಿದೆ. ವಿಕಲಚೇತನರ ಅನುದಾನ ಕಡಿತ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಆಕ್ರೋಶ ಹೊರಹಾಕಿದೆ. ಕಳೆದ ವರ್ಷಕ್ಕಿಂತ ವಿಕಲಚೇತರ ಅನುದಾನದಲ್ಲಿ 80% ರಷ್ಟು ಹಣ ಕಡಿತ ಮಾಡಲಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಈ ವಿಚಾರವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. https://ainlivenews.com/if-you-do-these-things-on-saturday-you-are-guaranteed-to-get-shani-dosha/ ಕಳೆದ ವರ್ಷ ಸರ್ಕಾರ ವಿಕಲಚೇನರ ವಿವಿಧ ಯೋಜನೆಗಳಿಗೆ 53 ಕೋಟಿ ರೂ. ಅನುದಾನ ಮೀಸಲು ಇಡಲಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬರೀ 10 ಕೋಟಿ ರೂ. ಅನುದಾನ ಮಾತ್ರ ಹಂಚಿಕೆ ಮಾಡಲಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಇದು ದಿವ್ಯಾಂಗರಿಗೆ ಆಗುತ್ತಿರುವ ಅನ್ಯಾಯ. ಇದರಿಂದ ಅವರ ಅಗತ್ಯ ಸೇವೆಗಳಿಗೆ ಧಕ್ಕೆ ಆಗಲಿದೆ. ಮೀಸಲಿಟ್ಟ ನಿಧಿಯನ್ನು ಅವರಿಗಾಗಿ, ಅವರ ಸೇವೆಗಾಗಿ ಉಪಯೋಗಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯದಲ್ಲಿ ಇಂದು 9 ನೇ ಘಟಿಕೋತ್ಸವ ಸಮಾರಂಭ ಬಹಳ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯುಜಿಸಿ ಅಧ್ಯಕ್ಷ ಪ್ರೊ.ಎಂ ಜಗದೀಶ್ ಕುಮಾರ್ ಭಾಗಿಯಾಗಿದ್ದರು. ರೇವಾ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ವಿಧ್ಯಾಭ್ಯಾಸ ಪಡೆದ ಒಟ್ಟು 4,537 ವಿದ್ಯಾರ್ಥಿಗಳಲ್ಲಿ 3,311 ಪದವಿಪೂರ್ವ, 1,156 ಸ್ನಾತಕೋತ್ತರ ಮತ್ತು 70 ಮಂದಿ ಡಾಕ್ಟರೇಟ್ ಪದವಿಗಳನ್ನು ಪಡೆದುಕೊಂಡರು. https://ainlivenews.com/if-you-do-these-things-on-saturday-you-are-guaranteed-to-get-shani-dosha/ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 66 ವಿದ್ಯಾರ್ಥಿಗಳು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು. ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಯುಜಿಸಿ ಅಧ್ಯಕ್ಷ ಪ್ರೊ. ಜಗದೀಶ್ ಕುಮಾರ್ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಕಿವಿಮಾತು ಹೇಳಿದರು. ರೇವಾ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಕುಲಾಧಿಪತಿ ಡಾ.ಪಿ ಶ್ಯಾಮ ರಾಜು ಅಧ್ಯಕ್ಷತೆ ವಹಿಸಿದ್ದರು. ಸಮ ಕುಲಾಧಿಪತಿ ಉಮೇಶ್ ಉಪಸ್ಥಿತರಿದ್ದರು.
ಶ್ರೀಲಂಕಾದಲ್ಲಿ ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿರುವ ಫೆಂಗಲ್ ಚಂಡಮಾರುತ ತೀವ್ರತೆ ಪಡೆದಿದ್ದು, ಇಂದು ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗೆ ಅಪ್ಪಳಿಸಿದೆ. ಈಗಾಗಲೇ ತಮಿಳುನಾಡಿನಲ್ಲಿ ಮಳೆಯಬ್ಬರ ಜೋರಾಗಿದೆ. ಶನಿವಾರ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚೆನ್ನೈ, ತಿರುವಳ್ಳೂರ್, ಕಾಂಚೀಪುರಂ, ಕಲ್ಲಕುರಿಚಿ ಸೇರಿದಂತೆ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಚೆನ್ನೈನಲ್ಲಿ ಭಾರಿ ಮಳೆಯಿಂದಾಗಿ ವಿಮಾನ ಮತ್ತು ರೈಲು ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಮಳೆಯ ಅಬ್ಬರದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ 10ಕ್ಕೂ ಹೆಚ್ಚು ಆಗಮನ ಮತ್ತು ನಿರ್ಗಮನ ರದ್ದುಗೊಳಿಸ ಲಾಗಿದೆ. ಇಂಡಿಯೋ ತನ್ನ ಎಲ್ಲಾ ಆಗಮನ ಮತ್ತು ನಿರ್ಗಮನ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರೊಂದಿಗೆ ಅಬುದಾಬಿಯಿಂದ ಚೆನ್ನೈಗೆ ತೆರಳಬೇಕಿದ್ದ ಇಂಡಿಗೋ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ಬೆಂಗಳೂರಿಗೆ ತಿರುಗಿಸಲಾಗಿದೆ. https://ainlivenews.com/if-you-do-these-things-on-saturday-you-are-guaranteed-to-get-shani-dosha/ ಚಂಡಮಾರುತದಿಂದಾಗಿ ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ…
ಬೆಂಗಳೂರು: ಅನುದಾನ ಕೊಡ್ತಿಲ್ಲ,ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡ್ತಿಲ್ಲ.ಕ್ಷೇತ್ರದಲ್ಲಿ ಜನರಿಂದ ಥೂಛೀ ಅನ್ನಿಸಿಕೊಳ್ಬೇಕು ಅಂತ ಕೆಲವು ಶಾಸಕರು ಅಸಮಾಧಾನ ಹೊರಹಾಕಿದ್ದರು.ಕೆಲವು ಹಿರಿಯ ಶಾಸಕರು ಬೇಸರ ಪಟ್ಟಿದ್ದರು.ಬೇಸರ ಹೊರಹಾಕಿದ್ದವರು ಆಪರೇಷನ್ ಕಮಲಕ್ಕೆ ತುತ್ತಾಗಬಹುದು,ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತೆ ಅನ್ನೋ ಕಾರಣಕ್ಕೆ ಸಿಎಂ ಪುನಾರಚನೆ ಮಾಡಿ ಕೆಲವರಿಗೆ ಅವಕಾಶ ನೀಡೋಣ ಅಂದುಕೊಂಡಿದ್ರು. ಅದ್ರಂತೆ ಪುನಾರಚನೆ ಸದ್ದು ಜೋರಾಗಿತ್ತು.ಈಗ ಹೈಕಮಾಂಡ್ ಬ್ರೇಕ್ ಹಾಕಿದೆ.ಇದ್ರಿಂದ ಬೇಸರಗೊಂಡಿರುವ ಶಾಸಕರನ್ನ ಸಮಾಧಾನ ಮಾಡೋಕೆ ಸಿಎಂ ಮುಂದಾಗಿದ್ದಾರೆ.ಹಾಗಾಗಿ ಶಾಸಕರಿಗೆ ವಿಶೇಷ ಯೋಜನೆಯಡಿ ಅನುದಾನ ನೀಡೋಕೆ ಪ್ಲಾನ್‌ಮಾಡಿದ್ದಾರೆ.ಬಜೆಟ್ ನಲ್ಲೂಹೆಚ್ಚಿನ ಅನುದಾನ ನೀಡೋಕೆಯೋಚಿಸ್ತಿದ್ದಾರೆ. https://ainlivenews.com/if-you-do-these-things-on-saturday-you-are-guaranteed-to-get-shani-dosha/ ಒಟ್ನಲ್ಲಿ ,ಸಂಪುಟ ಪುನಾರಚನೆಗೆ ಯಾವಾಗ ಮುಹೂರ್ತ ಕೂಡಿ ಬರುತ್ತೋ ಗೊತ್ತಿಲ್ಲ.. ಇಷ್ಟು ದಿನ ಮಂತ್ರಿಗಿರಿ ಕಳೆದುಕೊಳ್ಳೋ ಭೀತಿಯಲ್ಲಿದ್ದ ಸಚಿವರು ಹೈಕಮಾಂಡ್ ನಿರ್ಧಾರದಿಂದ ಫುಲ್‌ಖುಷ್ ಆಗಿದ್ದಾರೆ.ಆದ್ರೆ ಸಚಿವ ಸ್ಥಾನ ಸಿಗುತ್ತೆ,ಗೂಟದ ಕಾರಿನಲ್ಲಿ ಓಡಾಡಬಹುದು ಅನ್ನೋ ಕನಸುಕಂಡಿದ್ದವರಿಗೆ ನಿರಾಸೆಯಾಗಿದೆ.
ಬೆಂಗಳೂರು: ಕೊಲೆ ಮಾಡುವ ಉದ್ದೇಶದಿಂದ ರೂಂಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಹೇಳಿದ್ದಾರೆ. ಪ್ರಿಯಕರನಿಂದ ಪ್ರಿಯತಮೆಯನ್ನು ಬರ್ಬರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದು, 4 ದಿನಗಳ ಹಿಂದೆ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಮಹಿಳೆ ಕೊಲೆ ಆಗಿದೆ. ಆರೋಪಿ ಆರವ್ ಹನೋವ್ ಕೇರಳ ಮೂಲದವನು. ಸಿಸಿಟಿವಿಯಲ್ಲಿ ಆತ ಅಪಾರ್ಟ್ಮೆಂಟ್ನಿಂದ ಹೊರಗಡೆ ಹೋಗುವುದು ಗೊತ್ತಾಗುತ್ತೆ. ಆತನ ಪತ್ತೆಗೆ ಮೂರು ತಂಡ ರಚನೆ ಮಾಡಲಾಗಿತ್ತು. ಕೇರಳ, ಉತ್ತರ ಕರ್ನಾಟಕಕ್ಕೆ ತಂಡಗಳನ್ನು ಕಳುಹಿಸಲಾಗಿತ್ತು. ಕೊನೆಗೆ ದೇವನಹಳ್ಳಿ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. https://ainlivenews.com/if-you-do-these-things-on-saturday-you-are-guaranteed-to-get-shani-dosha/ ವೈಯಕ್ತಿಕ ವಿಚಾರಕ್ಕೆ ಕೊಲೆ ಮಾಡಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಹಗ್ಗವನ್ನು ಮೊದಲೇ ಖರೀದಿ ಮಾಡಿದ್ದಾನೆ. ಜೆಪ್ಟೋದಲ್ಲಿ ನೈಲಾನ್, ಚಾಕು ತರಿಸಿಕೊಂಡಿದ್ದ. ಕೊಲೆಯಾದ ಮಹಿಳೆ ಹೆಚ್ಎಸ್ಆರ್ ಲೇಔಟ್ ಕೌನ್ಸಲಿಂಗ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಬೊಂಬಲ್ ಅನ್ನೋ ಆ್ಯಪ್ ಮೂಲಕ ಪರಿಚಯ ಆಗಿದ್ದಾರೆ. ಆರೋಪಿ ಇಲ್ಲಿಂದ ರೈಲ್ವೆ ಸ್ಟೇಷನ್ ಮೂಲಕ ಉತ್ತರ ಪ್ರದೇಶ, ವಾರಣಾಸಿ…