ಚಿಕ್ಕಬಳ್ಳಾಪುರ, ಜ.29: ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಪೋರ್ಡ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಳಿಕ ಹೊತ್ತಿ ಉರಿದ ಘಟನೆ ನಡೆದಿದೆ. ಕುಟುಂಬವೊಂದು ಬೆಂಗಳೂರಿನಿಂದ ನಂದಿಗಿರಿಧಾಮದ ಪ್ರವಾಸಕ್ಕೆ ಬಂದಿತ್ತು. ಈ ವೇಳೆ ನಂದಿ ಬೆಟ್ಟ ಏರುತ್ತಿದ್ದ ಪೋರ್ಡ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ತಿದ್ದಂತೆ ಎಚ್ಚೆತ್ತ ಚಾಲಕ ಕಾರಿನಲ್ಲಿದ್ದವರನ್ನು ಕೆಳಗೆ ಇಳಿಯುವಂತೆ ಹೇಳಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಕಾರಿನಲ್ಲಿದ್ದವರು ಬಚಾವ್ ಆಗಿದ್ದಾರೆ. ಬಳಿಕ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ..
Author: AIN Admin
ಚಿಕ್ಕಬಳ್ಳಾಪುರ, ಜ.29: ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಟ್ರಕ್ಕಿಂಗ್ಗೆ ಹೋಗಿದ್ದ ಇಬ್ಬರು ಯುವಕರು ಪ್ರಪಾತಕ್ಕೆ ಬಿದ್ದಿರುವ ಘಟನೆ ನಡೆದಿದೆ. ಗಿರಿಧಾಮದ ವೀರಭದ್ರೇಶ್ವರ ದೇವಸ್ಥಾನ ಇಳಿಜಾರಿನಲ್ಲಿ ಸಿಲುಕಿದ್ದು, ಬಳಿಕ 112 ಗೆ ಕರೆ ಮಾಡಿ ರಕ್ಷಣೆಗೆ ಮೊರೆಯಿಟ್ಟಿದ್ದಾರೆ. ಕೂಡಲೇ ಸ್ಥಳಕ್ಕೆ ನಂದಿಗಿರಿಧಾಮ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಅಪಾಯಕಾರಿ ಪ್ರಪಾತದಲ್ಲಿ ರಕ್ಷಣಾ ಸಾಮಾಗ್ರಿಗಳ ಮೂಲಕ ಕಾರ್ಯಾಚರಣೆ ನಡೆಸಿ ಯುವಕರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವರಾಜ್ ಕರಲಿಂಗನ್ನವರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ದೊಡ್ಡಬಳ್ಳಾಪುರದ ಮನೋಜ್ ಕುಮಾರ್, ಮಂಜುನಾಥ್ ಎನ್ನುವರನ್ಜು ರಕ್ಷಣೆ ಮಾಡಿದೆ. ಅಪಾಯಕಾರಿ ಪ್ರಪಾತದಲ್ಲಿ ಜಾರಿ ಬಿದ್ದಿರುವ ಓರ್ವ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೋರ್ವ ಯುವಕನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಗಾಯಗೊಂಡಿದ್ದ ಮನೋಜ್ನನ್ನು ಅಗ್ನಿಶಾಮಕ ಸಿಬ್ಬಂದಿ ಹೊತ್ತುಕೊಂಡು ಮೇಲಕ್ಕೆ ಬಂದಿದ್ದು, ಸದ್ಯ ಗಾಯಾಳು ಮನೋಜ್ನನ್ನು ಚಿಕ್ಕಬಳ್ಳಾಫುರ ಜಿಲ್ಲಾಆಸ್ಪತ್ರಗೆ ರವಾನಿಸಲಾಗಿದೆ. ಮನೋಜ್ ಹಾಗೂ ಮಂಜುನಾಥ್ ಇಂದು ಬೆಳಿಗ್ಗೆ ನಂದಿಗಿರಿಧಾಮಕ್ಕೆ ಟ್ರಕ್ಕಿಂಗ್ ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಸೂಪರ್ ಹಿಟ್ ಸಿನಿಮಾ ಚಾರ್ಲಿ 777 ಹಾಗೂ ಡಾರ್ಲಿಂಗ್ ಕೃಷ್ಣ ನಟನೆಯ ಲಕ್ಕಿ ಮ್ಯಾನ್ ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ನಟಿ ಸಂಗೀತಾ ಶೃಂಗೇರಿ ದೈವಕ್ಕೆ ಕೋಲ ನೀಡಿ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಸ್ಯಾಂಡಲ್ ವುಡ್ ತಾರೆಯರು ಒಬ್ಬರ ಹಿಂದೊಬ್ಬರಂತೆ ದೈವಕ್ಕೆ ಕೋಲ ನೀಡುತ್ತಿದ್ದಾರೆ. ಇದೀಗ ನಿರೂಪಕಿ ಅನುಶ್ರೀ ಜೊತೆ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ಸಂಗೀತಾ ಶೃಂಗೇರಿ ಕೋಲ ಸೇವೆ ಮಾಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಸಂಗೀತಾ ‘ನಾನು ಕಳೆದೆರಡು ದಿನಗಳಿಂದ ದಿವ್ಯ ಅನುಭವದಲ್ಲಿ ಇದ್ದೇನೆ. ಆ ಭಾವನೆಗಳನ್ನು ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ತುಳುನಾಡು ದೈವ ಕೋಲಕ್ಕೆ ನಾನು ಸಾಕ್ಷಿಯಾಗಿದ್ದೇನೆ ಎನ್ನುವುದು ನನ್ನ ಪುಣ್ಯ. ಇಂಥದ್ದೊಂದು ಸಾನಿಧ್ಯ ಸಿಕ್ಕಿರುವುದಕ್ಕೆ ಕಾರಣ ನಿರ್ದೇಶಕರಾದ ಕಿರಣ್ ರಾಜ್ ಮತ್ತು ಭರತ್ ರಾಜ್ ಕೆ ಯಾದವ್. ಇವರ ಕುಟುಂಬಕ್ಕೆ ಕೃತಜ್ಞೆತೆಗಳು’ ಎಂದು ಬರೆದುಕೊಂಡಿದ್ದಾರೆ.
ಮಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗ್ಲೆ ಸಾಕಷ್ಟು ಶೂಟಿಂಗ್ ಮುಗಿಸಿರುವ ರಜನಿಕಾಂತ್ ಇದೀಗ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದಿಳಿದಿದ್ದಾರೆ. ಇಂದಿನಿಂದ ರಜನಿಕಾಂತ್ ಮುಖ್ಯಭೂಮಿಕೆಯ ಜೈಲರ್ ಸಿನಿಮಾದ ಶೂಟಿಂಗ್ ಎರಡು ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿದೆ. ಹೀಗಾಗಿ ಚಿತ್ರತಂಡದೊಂದಿಗೆ ಇಂದು ರಜನಿಕಾಂತ್ ತುಳುನಾಡಿಗೆ ಆಗಮಿಸಿದ್ದಾರೆ. ಕರಾವಳಿಯ ಹಲವು ಭಾಗಗಳಲ್ಲಿ ‘ಜೈಲರ್’ ಸಿನಿಮಾದ ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಜೈಲರ್ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಮಂಗಳೂರಿನಲ್ಲಿ ನಡೆಯಲಿರುವ ಶೂಟಿಂಗ್ ನಲ್ಲಿ ಶಿವರಾಜ್ ಕುಮಾರ್ ಕೂಡ ಭಾಗಿಯಾಗಲಿದ್ದಾರೆ. ರಜನಿಕಾಂತ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಅಭಿಮಾನಿಗಳ ದಂಡೇ ನಟನನ್ನು ಸುತ್ತುವರೆದಿದೆ. ಹೀಗಾಗಿ ಶೂಟಿಂಗ್ ನಡೆಯುವ ಸ್ಥಳಗಳಲ್ಲಿ ಭಾರೀ ಬಿಗಿಭದ್ರತೆ ಕಲ್ಪಿಸಲಾಗುತ್ತಿದೆ. ಜೈಲರ್ ರಜನಿಕಾಂತ್ ನಟನೆಯ 169ನೇ ಸಿನಿಮಾವಾಗಿದ್ದು, ಇದೇ ಮೊದಲ ಬಾರಿ ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಐಶ್ವರ್ಯ ರೈ ಕೂಡ ಈ…
ಮೈಸೂರು (ಹೆಚ್.ಡಿ. ಕೋಟೆ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ. ವಿಷ್ಣುವರ್ಧನ್ ಪ್ರತಿಷ್ಠಾನ (ರಿ) ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಪ ಇಲಾಖೆಯ ವತಿಯಿಂದ ಹೆಚ್.ಡಿ. ಕೋಟೆಯ ಹಾಲಾಳು ಗ್ರಾಮ, ಉದ್ಬೂರು ಕ್ರಾಸ್ ಬಳಿ ಆಯೋಜಿಸಿರುವ ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೊಳಿಸಿದರು. ಸ್ಮಾರಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಾನು ವಿಷ್ಣುವರ್ಧನ್ ಅಭಿಮಾನಿಯಾಗಿ ಬಂದಿದ್ದೇನೆ. ನಾಗರಹಾವು ಸಿನಿಮಾ ನೋಡಿದವರು ವಿಷ್ಣುವರ್ಧನ್ ಅಭಿಮಾನಿ ಆಗುತ್ತಾರೆ. ಯುವಕರು, ಸಾಹಸ, ಪೌರಾಣಿಕ ಪಾತ್ರ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಸಾಹಸ ಸಿಂಹ ಆಗಿ ಮೆರೆದಿದ್ದಾರೆ. ಯಾವುದೇ ಪಾತ್ರ ನೀಡಿದರೂ ವಿಷ್ಣುವರ್ಧನ್ ನೈಜವಾಗಿ ನಟಿಸುತ್ತಿದ್ದರು. ವಿಷ್ಣು ಒಬ್ಬ ಭಾವುಕ ಜೀವಿ, ಮಾನವೀಯತೆ ಮೆರೆದವರು. ಕೊನೆಯ ಕಾಲದಲ್ಲಿ ಆಧ್ಯಾತ್ಮಿಕವಾಗಿ ಆಸಕ್ತಿ ಬೆಳೆಸಿಕೊಂಡರು ಎಂದು ತಿಳಿಸಿದರು. ಸ್ಮಾರಕ ನಿರ್ಮಿಸುವ ಸಂದರ್ಭದಲ್ಲಿ ದೊಡ್ಡ ವಿವಾದ ಆಯ್ತು. ಭಾರತಿಯವರು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನ ಕೈಗೊಂಡರು. ಯಡಿಯೂರಪ್ಪ ಸಿಎಂ ಆಗಿದ್ದಾಗ 11 ಕೋಟಿ ರೂ. ನೀಡಿದರು.ಇದಕ್ಕಾಗಿ ಯಡಿಯೂರಪ್ಪ, ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು…
ರಾಯಚೂರು: ವಿಶ್ವರ್ಮರನ್ನು ಎಸ್ಟಿ ಮೀಸಲಾತಿಗೆ ಸೇರಿಸಲು ಒತ್ತಾಯಿಸಿ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಪಾದಯಾತ್ರೆಯನ್ನು ಲಿಂಗಸ್ಗೂರಿನಿಂದ ರಾಯಚೂರುವರೆಗೆ ಹಮ್ಮಿಕೊಂಡಿದ್ದು ಎಸ್ಟಿ ಮೀಸಲಾತಿಗಾಗಿ ಪಾದಯಾತ್ರೆಗೆ ಕೆ.ಪಿ.ನಂಜುಂಡಿ ಆಗಮಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವರ್ಮ ಮಹಾಸಭಾ ರಾಯಚೂರು ಜಿಲ್ಲಾಧ್ಯಕ್ಷ ಮಾರುತಿ ಬಡಿಗೇರ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಮನವಿ ಪತ್ರವನ್ನು ನೀಡಲು ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಅಧ್ಯಕ್ಷರಾದ ಕೆ.ಪಿ. ನಂಜುಂಡಿ ಅವರು ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವರ್ಮ ಮಕ್ಕಳ ವಿಶ್ವರ್ಮ ಅವರ ಮಕ್ಕಳ ಭವಿಷ್ಯಕ್ಕಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದು, ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕು ಮತ್ತು ರಾಜ್ಯದ ಮೂಲೆ ಮೂಲೆಯಿಂದ ಪ್ರತಿ ಜಿಲ್ಲೆಯಿಂದ ಸಾಕಷ್ಟು ಜನ ವಿಶ್ವರ್ಮರು ನಾಳೆ ಭಾಗವಹಿಸಲಿದ್ದಾರೆ. ರಾಜ್ಯ ಯುವ ಅಧ್ಯಕ್ಷ ಶ್ರೀನಿವಾಸ್ ಮಳವಳ್ಳಿ, ರಾಜ್ಯ ಪ್ರಧಾನ ಕರ್ಯರ್ಶಿಗಳಾದ ಲೋಹಿತ್ ಕಲ್ಲೂರ್, ಬ್ರಹ್ಮ ಗಣೇಶ್ ವಕೀಲ, ಸೋಮಣ್ಣ ಸುಕಲಾಪೇಟೆ, ಪ್ರಧಾನ ಕರ್ಯರ್ಶಿ ಕೆ.ರಾಮು ಗಾನಧಾಳ, ಮನೋಹರ ಬಡಿಗೇರ್, ಯಾದಗಿರಿ ಜಿಲ್ಲಾಧ್ಯಕ್ಷ ಆನಂದ ಲಕ್ಷ್ಮಿಪುರ, ಜಿಲ್ಲಾ ಸಂಘಟನಾ ಕರ್ಯರ್ಶಿ ಮೌನೇಶ್ ಗೊನವರ,…
ಮೈಸೂರು, ಜ.29: ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಜೇಜಿನ ಸಭಾಂಗಣದಲ್ಲಿ ರಾಜ್ಯ ಮಟ್ಟದ ಜಾನಪದ ಪ್ರಪಂಚ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿ ಕಲಬುರಗಿ ತಾಲ್ಲೂಕಿನ ಹಡಗಿಲ್ ಹಾರುತಿ ಗ್ರಾಮದ ಹಿರಿಯ ಜಾನಪದ ಕಲಾವಿದೆ ತಾರಾಬಾಯಿ ಬಸಣ್ಣಾ ಬಿಳಾಲಕರ ಅವರು ಸೇರಿದಂತೆ ಮತ್ತಿತರರ ಕಲಾವಿದರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ, ಸಫಾಯಿ ಕರ್ಮಚಾರಿ ಅಯೋಗದ ಅಧ್ಯಕ್ಷ ಶಿವಣ್ಣ, ಶಾಸಕರಾದ ಅನಿಲ್ ಚಿಕ್ಕಮಾದು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಮೈಸೂರು, ವಿಭಾಗಿಯ ಸಂಚಾಲಕ ಡಾ.ಕಾವೇರಿ ಪ್ರಕಾಶ್ , ಕರಾವಳಿ ವಿಭಾಗದ ಸಂಚಾಲಕ ಡಾ.ಭಾರತಿ ಮರವಂತೆ, ಬೆಳಗಾವಿ ವಿಭಾಗ ಸಂಚಾಲಕ ಆನಂದಪ್ಪ ಜೋಗಿ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕ್ಯಾತನಹಳ್ಳಿ ಪ್ರಕಾಶ ಮತ್ತು ಕನ್ನಡ ಜಾನಪದ…
ಬಾಗಲಕೋಟೆ, ಜ.29: ನಾಡಿನ ಶ್ರೇಷ್ಠ ಉದ್ಯಮಿ ಅಂಬಾದಾಸ್ ಕಾಮೂರ್ತಿ ಅವರು ರಚನಾತ್ಮಕ ಹಾಗೂ ವಿಧಾಯಕ ಆಶಯಗಳನ್ನು ಅನುಷ್ಠಾನಗೊಳಿಸಿಕೊಳ್ಳಲು ಈ ಸಮಾವೇಶ ಆಯೋಜಿಸಲಾಗಿದೆ ನಾಡಿನ ಎಲ್ಲ ಪೂಜ್ಯರನ್ನು ಒಂದೇ ವೇದಿಕೆ ಮೇಲೆ ಬರಮಾಡಿಕೊಂಡು ತಮ್ಮ ಆಶಯಗಳಿಗೆ ಅವರನ್ನು ಸಾಕ್ಷಿಯಾಗಿಸಿಕೊಂಡಿದ್ದಾರೆ. ರೈತ ನೇಕಾರ ಕಾರ್ಮಿಕ ಅದರಂತೆ ಎಲ್ಲ ಸಮುದಾಯಗಳ ಜೀವನ ಮಟ್ಟವನ್ನು ಸುಧಾರಿಸಲು ಅವರು ಹಲವಾರು ರಚನಾತ್ಮಕ ರೂಪರೇಷೆಗಳನ್ನು ಹಾಕಿಕೊಂಡಿದ್ದಾರೆ ತಮ್ಮ ಕನಸುಗಳನ್ನು ನನಸಾಗಿಸಲು ಅವರು ತೇರದಾಳ್ ಮತ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಈ ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ಅವರು ಜನರ ಆಶೀರ್ವಾದವನ್ನು ಕೋರಿದ್ದಾರೆ ಎಂದು ಪ. ಪೊ. ಶ್ರೀ ಶ್ರೀ ಶ್ರೀ 1008 ಶ್ರೀಮದ್ ಜಗದ್ಗುರು ಶಿವಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳು ವೀರ ಬಿಕ್ಷಾವರ್ತಿ ಮಠ ಹಳೆ ಹುಬ್ಬಳ್ಳಿಯಲ್ಲಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಎಸ್ಆರ್ಎಸ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆಟದ ಮೈದಾನದಲ್ಲಿ ಸ್ವಾಭಿಮಾನಿ ಸಮುದಾಯಗಳ ಸಮಾವೇಶದಲ್ಲಿ ಮಾತನಾಡಿದರು. ಸ್ವಾಭಿಮಾನಿ ಸಮಾವೇಶ : ನಮಗೆ ಯಾರು ಹೀತವರು…
ಹುಬ್ಬಳ್ಳಿ, ಜ.29: ಕಿತ್ತೂರು ಕರ್ನಾಟಕದಲ್ಲಿ ಮಿಂಚಿನ ಸಂಚಾರ ನಡೆಸಿ ಪಕ್ಷದ ಕಾರ್ಯಕರ್ತರಿಗೆ ಹೊಸ ಚೈತನ್ಯ ತುಂಬಿರುವ ಕೇಂದ್ರ ಗೃಹ ಸಚಿವ ಅಮಿತ ಶಾ, ಶನಿವಾರ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿ, ಮುಂದಿನ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವಂತೆ ಸೂಚನೆ ನೀಡಿದ್ದಾರೆ. ಬೆಳಗ್ಗೆ ಹುಬ್ಬಳ್ಳಿಯಲ್ಲಿ, ಸಂಜೆ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಎರಡೂವರೆ ಗಂಟೆಗಳ ಕಾಲ ಸುದೀರ್ಘವಾಗಿ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ ಶಾ, ಚುನಾವಣಾ ರಣತಂತ್ರ ಕುರಿತು ಸಮಾಲೋಚನೆ ನಡೆಸಿದರು. ಪಕ್ಷದ ನಾಯಕರೆಲ್ಲರೂ ಭಿನ್ನಮತ, ಗುಂಪುಗಾರಿಕೆ ಬದಿಗಿಟ್ಟು ಒಂದಾಗಿ ಚುನಾವಣೆ ಎದುರಿಸುವಂತೆ ಕಟ್ಟಪ್ಪಣೆ ಮಾಡಿದರು. ಒಗ್ಗಟ್ಟಿನ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಸೂಚನೆ ನೀಡಿದರು ಎನ್ನಲಾಗಿದೆ. ಸಭೆ ಬಳಿಕ, ಬೆಳಗಾವಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಅಮಿತ್ ಶಾ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದು ಖಚಿತ ಎಂದರು. ಬಿಎಸ್ವೈ, ಬೊಮ್ಮಾಯಿ, ಪ್ರಹ್ಲಾದ…
ಬೆಂಗಳೂರು: ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ನಂದಮೂರಿ ತಾರಕ ರತ್ನ ಅವರು ಹೃದಯಾಘಾತಕ್ಕೊಳಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಶಿವರಾಜ್ ಕುಮಾರ್ ಹಾಗೂ ಬಾಲಯ್ಯ ಅವರು ನಟ ಹಾಗೂ ರಾಜಕಾರಣಿ ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ನಂದಮೂರಿ ತಾರಕ ರತ್ನ ಅವರು ಹೃದಯಾಘಾತಕ್ಕೊಳಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಶಿವರಾಜ್ ಕುಮಾರ್ ಹಾಗೂ ಬಾಲಯ್ಯ ಅವರು ನಟ ಹಾಗೂ ರಾಜಕಾರಣಿ ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ತಾರಕ ರತ್ನ ಅವರ ಆರೋಗ್ಯ ವಿಚಾರಿಸಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ತಾರಕ ರತ್ನ ಆರೋಗ್ಯದಲ್ಲಿ ಕೊಂಚ ಚೇತರಿಕೆ ಇದೆ. ಕಣ್ಣುಗಳ ಚಲನೆ ಕಂಡು ಬರುತ್ತಿದೆ ಎಂದು ಅವರು ಹೇಳಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ತಾರಕ ರತ್ನ ಅವರ ಆರೋಗ್ಯ ವಿಚಾರಿಸಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ತಾರಕ ರತ್ನ ಆರೋಗ್ಯದಲ್ಲಿ ಕೊಂಚ…