ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಜಗಳ ಶುರುವಾಗಿ ಓರ್ವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಅಂಧ್ರಳ್ಳಿಯ ಅನುಪಮ ಶಾಲೆ ಬಳಿ ನಡೆದಿದೆ. ಅಭಿಷೇಕ್(36) ಕೊಲೆಯಾದ ವ್ಯಕ್ತಿಯಾಗಿದ್ದು, ಬ್ಯಾಡರಹಳ್ಳಿ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ತಿಕ್,ಚೇತನ್ ಬಂಧಿತ ಆರೋಪಿಗಳಾಗಿದ್ದು,
ಎಚ್ಚರ.. ಎಚ್ಚರ.. ಶನಿವಾರ ಈ ಕೆಲಸಗಳನ್ನು ಮಾಡಿದ್ರೆ ಶನಿ ದೋಷ ಬರೋದು ಗ್ಯಾರಂಟಿ!
ಕಳೆದ ಎರಡು ದಿನಗಳ ಹಿಂದೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಖಡ್ಗದಿಂದ ಅಭಿಷೇಕ್ ತಲೆಗೆ ಕಾರ್ತಿಕ್ ಹೊಡೆದಿದ್ದಾನೆ. ಗಾಯಗೊಂಡು ಆಸ್ಪತ್ರೆ ಸೇರಿದ್ದ ಅಭಿಷೇಕ್, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.