ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ ರಾಂಪುರ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕ ಘಟಕ ರಬಕವಿ ಬನಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ರಬಕವಿ ಬನಹಟ್ಟಿ ತಾಲೂಕ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಇದೇ ಶನಿವಾರ ದಿನಾಂಕ 23.11.2024 ರಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ರಾಂಪುರ ಆವರಣದಲ್ಲಿ ನಡೆಯಲಿದೆ. https://ainlivenews.com/kanakadasas-ritual-ideas-should-be-followed-bairati-basavaraj/ ಬನಹಟ್ಟಿಯ ಬಸ್ ನಿಲ್ದಾಣದಿಂದ ರಾಮಪುರ ಶಾಲೆಯವರೆಗೂ ಭವ್ಯ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. ಸಾನಿಧ್ಯ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ರಬಕವಿ. ಅಧ್ಯಕ್ಷತೆ: ಶ್ರೀ ಜಯವಂತ ಕಾಡದೇವರ ಹಿರಿಯ ಮಕ್ಕಳ ಸಾಹಿತಿಗಳು. ಸರ್ವಾಧ್ಯಕ್ಷತೆ: ಕುಮಾರಿ ಸುಹಾನಿ ಗಿರೀಶ್ ಮುತ್ತೂರು ಡಿ ಕೆ ಕೊಟ್ರಶೆಟ್ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಬಕವಿ. ಉದ್ಘಾಟಕರು ಸಿದ್ದು ಸವದಿ ಶಾಸಕರು ತೇರದಾಳ. ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಶ್ರೀಮತಿ ಉಮಾಶ್ರೀ ವಿಧಾನ ಪರಿಷತ್ ಸದಸ್ಯರು ಬೆಂಗಳೂರು.…
Author: AIN Author
ಕೆಆರ್ ಪುರ: 500 ವರ್ಷಗಳಿಗೂ ಹಿಂದೆ ಜೀವಿಸಿದ್ದ ಕನಕದಾಸರು ಇಂದೂ ನಮಗೆ ಪ್ರಸ್ತುತ. ಎಲ್ಲಾ ದಾಸರು ಕೀರ್ತನೆ ಗಳನ್ನು ಬರೆದಿದ್ದರೂ ಕನಕದಾಸರು ಅವರಲ್ಲಿ ಶ್ರೇಷ್ಠರಾಗಿ ಕಂಡುಬರುತ್ತಾರೆ. ಅದಕ್ಕೆ ಕಾರಣ ಕನಕದಾಸರು ಸಮಾಜ ದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವುದಕ್ಕೆ ಮಾಡಿದ ಪ್ರಯತ್ನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ರತ್ನಗಳು ಎಂದು ಶಾಸಕ ಬೈರತಿ ಬಸವರಾಜ್ ಅಭಿಪ್ರಾಯ ಪಟ್ಟರು. ಬೆಂಗಳೂರು ಪೂರ್ವ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೆಆರ್ ಪುರದಲ್ಲಿ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕನಕ ದಾಸರ ಕೀರ್ತನೆಗಳು 16 ನೇ ಶತಮಾನದಲ್ಲೇ ಸಮಾಜಕ್ಕೆ ಸಾರಿದರು ಅವರ ಮಾರ್ಗದರ್ಶನ ದಲ್ಲಿ ನಾವು ಸಾಗಬೇಕಿದೆ ಎಂದರು. ಮಹಾನ್ ಸಂತ ಕನಕದಾಸರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜ ಬಾಂದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದರು. https://ainlivenews.com/creation-of-bhumi-app-for-better-price-for-farmers-crops-raghunandan/ ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಸಾಧಕರಿಗೆ ಗೌರವಿಸಲಾಯಿತು ಈ ಸಂದರ್ಭದಲ್ಲಿ ತಹಶಿಲ್ದಾರರಾದ ರಾಜೀವ್, ಮಹೇಶ್, ಬಿಇಒ ಗೋವಿಂದಪ್ಪ, ನಾಗರಾಜ್, ಮಾಜಿ ಪಾಲಿಕೆ ಸದಸ್ಯರಾದ ಶ್ರೀಕಾಂತ್,…
ಹುಬ್ಬಳ್ಳಿ: ಗ್ರಾಮೀಣ ಭಾಗದ ರೈತರಿಗೆ ಗುಣಮಟ್ಟದ ಬೆಳೆ ಬೆಳೆಯಲು ಹಾಗೂ ಬೆಳೆದ ಬೆಳೆಗಳಿಗೆ ಉತ್ತಮ ದರ ನೀಡುವ ಉದ್ದೇಶದಿಂದ ಖರೀದಿದಾರರನ್ನು ಆಕರ್ಷಿಸಲು ಭೂಮಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಘುನಂದನ್ ಹೇಳಿದ್ದಾರೆ. https://ainlivenews.com/free-health-check-up-camp-in-navlagunda-on-nov-24/ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತರು ಬೆಳೆಯುವ ಬೆಳೆಗಳ ನಿರ್ವಹಣೆ ಹಾಗೂ ಮಾರಾಟ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ದರ ಸಮರದ ನಡುವೆ ದಲ್ಲಾಳಿಗಳ ಕಾಟದಿಂದ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ರೈತರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ರೈತನ ಯಶಸ್ಸೇ ನಮ್ಮ ಯಶಸ್ಸು ಎಂಬ ಧೈಯದೊಂದಿಗೆ ಈ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ ಎಂದರು. ಈಗಾಗಲೇ ಆ್ಯಪ್ ನ್ನು ರೈತರಿಗೆ ಅನುಕೂಲವಾಗುವಂತೆ ಮೊಬೈಲ್ ಪ್ಲೇ ಸ್ಟೋರ್’ ನಲ್ಲಿ ಬಿಡುಗಡೆ ಮಾಡಲಾಗಿದೆ. ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಾವಿರಾರು ರೈತರು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಬೆಳೆಗಳು, ಹಾಗೂ ಬೆಲೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ತರಕಾರಿ, ಕಾಳುಗಳು ಸೇರಿದಂತೆ ರೈತ ಬೆಳೆಯುವ ಎಲ್ಲ ದವಸ…
ಹುಬ್ಬಳ್ಳಿ: ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ನವಲಗುಂದದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ಮಠ ಇವರ ಸಂಯುಕ್ತಾಶ್ರಯದಲ್ಲಿ ಇದೇ ನ.24ರ ರವಿವಾರದಂದು ಮಠದ ಆವರಣದಲ್ಲಿನ ಶ್ರೀ ನಾಗಲಿಂಗ ಭವನದಲ್ಲಿ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಹಮ್ಮಿಕೊಳ್ಳಲಾಗಿದೆ https://ainlivenews.com/axle-cut-of-vehicle-going-to-sabarimala-ayyappas-devotees-escaped-from-danger/ ನವಲಗುಂದದ ಶ್ರೀ ಹಾದಿ ಬಸವೇಶ್ವರ ಸೇವಾ ಸಮಿತಿಯ ಸಹಕಾರದಲ್ಲಿ ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ಶಿಬಿರದ ದಿವ್ಯಸಾನಿಧ್ಯವನ್ನು ಮಠದ ಗುರುಗಳಾದ ಶ್ರೀ ವೀರೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಶಿಬಿರದ ನೇತೃತ್ವ ವಹಿಸಲಿದ್ದಾರೆ. ಶಿಬಿರದಲ್ಲಿ ನರರೋಗ, ಎಲುಬು-ಕೀಲು, ಹೃದ್ರೋಗಕ್ಕೆ ಸಂಬಂಧಿಸಿದ ಖ್ಯಾತ ವೈದ್ಯರು ತಪಾಸಣೆ ಮಾಡಲಿದ್ದು, ಎಲುಬು ಸಾಂದ್ರತೆ, ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿ ಉಚಿತ ಸಲಹೆ, ಔಷಧ ನೀಡಲಾಗುವುದು. ಆಸಕ್ತರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ 8123350860, 9019718892 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಮಂಡ್ಯ :- ಮಂಡ್ಯ ನಗರದ ಸಾಂಜೋ ಆಸ್ಪತ್ರೆ ಬಳಿ ಅಯ್ಯಪ್ಪನ ಭಕ್ತರು ಸಂಚರಿಸುತ್ತಿದ್ದ ವಾಹನವೊಂದು ಅಪಘಾತಕ್ಕೀಡಾಗಿ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಅಯ್ಯಪ್ಪನ ಭಕ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. https://ainlivenews.com/mangalya-bhagya-for-orphans-on-23rd-by-sevabharati-trust/ ಬೆಂಗಳೂರಿನ ಕೆಂಗೇರಿಯಿಂದ ಗುರುವಾರ ಸಂಜೆ 24 ಮಂದಿ ಅಯ್ಯಪ್ಪ ಭಕ್ತರು ಶಬರಿಮಲೆಗೆ ತೆರಳುತ್ತಿದ್ದ ವೇಳೆ ಮಂಡ್ಯ ನಗರದ ಸಾಂಜೋ ಆಸ್ಪತ್ರೆ ಬಳಿ ಆಗಮಿಸುತ್ತಿದ್ದಂತೆ ವಾಹನದ ಆಕ್ಸಲ್ ಕಟ್ಟಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ರಾಷ್ಟ್ರೀಯ ಹೆದ್ದಾರಿ ಬದಿಯ ತಂತಿ ಬೇಲಿಗೆ ಹೊರಳಿ ನಿಂತುಕೊಂಡಿದೆ. ಈ ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಗಾಯಾಳುವನ್ನು ಸ್ಥಳೀಯರು ಹಾಗೂ ವಾಹನ ಸವಾರರು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಮಂಡ್ಯ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ವರದಿ : ಗಿರೀಶ್ ರಾಜ್ ಮಂಡ್ಯ
ಹುಬ್ಬಳ್ಳಿ : ಸೇವಾಭಾರತಿ ಟ್ರಸ್ಟ್‌ನ ಇಲ್ಲಿನ ಬಾಲ ಕಲ್ಯಾಣ ಕೇಂದ್ರದಲ್ಲಿ ಬೆಳೆದು, ವಿದ್ಯಾಭ್ಯಾಸ ಮಾಡಿದ ಯುವತಿ ಅನ್ನಪೂರ್ಣೆಶ್ವರಿಯ ವಿವಾಹ ನಿಶ್ಚಯವಾಗಿದ್ದು, ಗದಗ ಜಿಲ್ಲೆ ಹೊಳೆ ಆಲೂರಿನ ಸಾಫ್ಟ್ ವೇರ್ ಇಂಜಿನಿಯರ್ ವಿನೋದಕುಮಾರನೊಂದಿಗೆ ನ. 23ರಂದು ಮದುವೆ ನಡೆಯಲಿದೆ. https://ainlivenews.com/millions-of-sim-cards-are-suddenly-blocked-check-your-mobile-once/ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ, ಅನಾಥ ಹಾಗೂ ಪಾಲಕರಿಗೆ ಸಲಹಲು ಸಾಧ್ಯವಾಗದ ಹೆಣ್ಣು ಮಕ್ಕಳನ್ನು ಇಲ್ಲಿನ ಬಾಲ ಕಲ್ಯಾಣ ಕೇಂದ್ರದಲ್ಲಿ ಸಲಹಿ, ವಿದ್ಯಾಭ್ಯಾಸ ನೀಡಲಾಗುವುದು. ನಂತರ ಆಕೆಯ ವಿವಾಹವನ್ನೂ ಮಾಡುತ್ತೇವೆ ಎಂದರು. ಬಾಲ ಕಲ್ಯಾಣ ಕೇಂದ್ರದಲ್ಲಿ ಬೆಳೆದ ಆರು ಯುವತಿಯರ ವಿವಾಹ ಇದುವರೆಗೆ ಮಾಡಲಾಗಿದ್ದು, ಇದು 7ನೇ ವಿವಾಹ. ಇದೀಗ ವಿವಾಹ ನಿಶ್ಚಯವಾಗಿರುವ ಅನ್ನಪೂರ್ಣೆಶ್ವರಿ ಅನಾಥೆಯಾಗಿದ್ದು, 11 ವರ್ಷಗಳ ಹಿಂದೆ ಆಕೆಯ ಸಂಬಂಧಿಕರು ಆಕೆಯನ್ನು ಕರೆತಂದಿದ್ದರು ಎಂದು ಹೇಳಿದರು. ಬಿಇ ಪೂರ್ಣಗೊಳಿಸಿರುವ ಅನ್ನಪೂಣೇಶ್ವರಿ, ಸೇವಾಭಾರತಿ ಟ್ರಸ್ಟ್‌ನ ವಿವಿಧ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಬಾಲ ಕಲ್ಯಾಣ ಕೇಂದ್ರದಲ್ಲಿ ಸಧ್ಯ 1ನೇ ತರಗತಿಯಿಂದ ಡಿಗ್ರಿವರೆಗೆ ವಿದ್ಯಾಭ್ಯಾಸ…
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ TRAI ಹೊಸ ನಿಯಮವನ್ನು ತಂದಿದೆ. ಈ ಹೊಸ ನಿಯಮದ ಪ್ರಕಾರ, ಟೆಲಿಕಾಂ ಕಂಪನಿಗಳು ತಮ್ಮ ನೆಟ್‌ವರ್ಕ್ ಯಾವ ಪ್ರದೇಶಗಳಲ್ಲಿ ಲಭ್ಯವಿದೆ ಎಂಬ ವಿವರಗಳನ್ನು ನೀಡಬೇಕು. ಅದೇ ಸಮಯದಲ್ಲಿ, ಸ್ಪ್ಯಾಮ್ ಕರೆಗಳನ್ನು ತಡೆಯಲು ಹೊಸ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಂದಿದೆ. https://ainlivenews.com/if-even-one-bpl-card-is-cancelled-fierce-fight-renukacharya/ ಟ್ರಾಯ್ ಸಹಯೋಗದಲ್ಲಿ ದೇಶದ ಟೆಲಿಕಾಂ ಇಲಾಖೆ ಸುಮಾರು 122 ಕೋಟಿ ಮೊಬೈಲ್ ಬಳಕೆದಾರರ ರಕ್ಷಿಸಲು ಕಠಿಣ ಕ್ರಮ ತೆಗೆದುಕೊಂಡಿದೆ. ಟ್ರಾಯ್ ಮತ್ತು ಟೆಲಿಕಾಮ್ ಇಲಾಖೆ ಇತ್ತೀಚೆಗೆ 1.77 ಕೋಟಿ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಿದೆ. ಟೆಲಿಕಾಂ ಆಪರೇಟರ್‌ಗಳ ಸುಮಾರು 1.7 ಕೋಟಿ ಸಿಮ್ ಕಾರ್ಡ್‌ಗಳನ್ನು ಸರ್ಕಾರ ಬ್ಲಾಕ್ ಮಾಡಿದೆ. ಟ್ರಾಯ್ ಮತ್ತು ಟೆಲಿಕಾಮ್ ಇಲಾಖೆ ಇತ್ತೀಚೆಗೆ 1.77 ಕೋಟಿ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಿದೆ. ಕ್ಯಾನ್ಸಲ್ ಆಗಿರುವ ಸಿಮ್ ಕಾರ್ಡ್ಗಳಿಂದ ನಕಲಿ ಫೋನ್ ಕರೆ ಮಾಡಲು ಬಳಕೆ ಆಗುತ್ತಿತ್ತು. ಟೆಲಿಕಾಂ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪ್ರತಿದಿನ ಸುಮಾರು 1.35 ಕೋಟಿ ನಕಲಿ ಕರೆಗಳನ್ನು…
ಬೆಂಗಳೂರು:- ಒಂದೇ ಒಂದು BPL ಕಾರ್ಡ್ ರದ್ದಾದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. https://ainlivenews.com/it-is-wrong-to-file-a-criminal-case-on-your-spouse-supreme/ ಈ ಸಂಬಂಧ ಮಾತನಾಡಿದ ಅವರು, ರದ್ದಾಗಿರುವ ರೇಷನ್ ಕಾರ್ಡ್‌ಗಳನ್ನು ಸರ್ಕಾರ ವಾಪಸ್ ಕೊಡದೇ ಹೋದರೆ ಹಳ್ಳಿಹಳ್ಳಿಗಳಲ್ಲಿ ಹೋರಾಟದ ಮೂಲಕ ಬಿಜೆಪಿ ಜಾಗೃತಿ ಮೂಡಿಸಬೇಕಾಗುತ್ತದೆ ಎಂದರು. ಚುನಾವಣೆ ಪೂರ್ವದಲ್ಲಿ ಯಾವುದೇ ಷರತ್ತು ವಿಧಿಸದೇ ಎಲ್ಲರಿಗೂ ಉಚಿತ ಎಂದು ಗ್ಯಾರಂಟಿ ಘೋಷಿಸಿದ್ದೀರಿ. ಈಗ ಬಿಪಿಎಲ್ ರದ್ದುಪಡಿಸಿದ್ದೀರಿ. ಸಿಎಂ, ಆಹಾರ ಸಚಿವರು ಈಗ ಉತ್ತರ ಕೊಡಿ ಎಂದು ಆಗ್ರಹಿಸಿದರು. ಮಹಾರಾಷ್ಟ್ರ ಚುನಾವಣೆ ಮುಗಿಯುತ್ತಿದ್ದಂತೆ ಬಿಪಿಎಲ್ ರದ್ದು ಮಾಡಲು ಹೊರಟಿದ್ದೀರಿ. ಒಂದೇ ಒಂದು ಬಿಪಿಎಲ್ ಕಾರ್ಡ್ ಕೂಡಾ ರದ್ದು ಮಾಡಬಾರದು. ಮಾಡಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ನವದೆಹಲಿ:-ಇತ್ತೀಚಿನ ದಿನಗಳಲ್ಲಿ ಲವ್ ಬ್ರೇಕಪ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೇ ಲವ್ ಮಾಡುವಾಗ ಚೆನ್ನಾಗಿ ಇದ್ದು, ಆಮೇಲೆ ವರಸೆ ಬದಲಿಸುತ್ತಾರೆ. https://ainlivenews.com/hubli-on-november-23-there-was-a-power-outage-in-different-parts-of-the-city/ ಆಮೇಲೆ ಸಂಗಾತಿಗಳ ಮೇಲೆ ಬಿರುಕು ಉಂಟಾಗಿ ಕೋರ್ಟ್ ಮೆಟ್ಟಿಲೇರುತ್ತಾರೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಮಹತ್ವದ ತೀರ್ಪು ಒಂದನ್ನು ನೀಡಿದೆ. ಬ್ರೇಕ್ ಅಪ್ ಆದಾಕ್ಷಣ ಸಂಗಾತಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವುದು ತಪ್ಪು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಪ್ರಶಾಂತ್ ವಿರುದ್ಧ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಗೆಳತಿ ನೀಡಿದ ದೂರಿನ ಮೇರೆಗೆ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದ ವ್ಯಕ್ತಿಗೆ ರಿಲೀಫ್ ಕೊಟ್ಟಿದ್ದಾರೆ. ಇಬ್ಬರ ನಡುವೆ ಸಂಬಂಧ ಮೊದಲು ಚೆನ್ನಾಗಿಯೇ ಇತ್ತು, ಅದೇ ಬ್ರೇಕ್ ಅಪ್ ಬಳಿಕ ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ತಪ್ಪು. ಆರೋಪಿ ಮತ್ತು ದೂರುದಾರರಿಬ್ಬರೂ ದೆಹಲಿಯಲ್ಲಿ ವಾಸವಿದ್ದು, ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪೀಠ ಗಮನಿಸಿದೆ. 2019…
ಹುಬ್ಬಳ್ಳಿ, ನ.21, 2024: 110/11 ಕೆ.ವಿ ಅಕ್ಷಯ ಕಾಲೋನಿ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯದ ನಿಮಿತ್ತ ನ.23 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. https://ainlivenews.com/hubli-dhimanta-awardee-ravi-kadang-is-honored/ ವಿದ್ಯುತ್ ವ್ಯತ್ಯಯದ ಪ್ರದೇಶಗಳು: ಲಕ್ಷ್ಮೀ ನಾರಾಯಣ ನಗರ, ಐ.ಬಿ.ಎಲ್.ಆರ್ ಕಾಲೇಜ್, ಲಿಡಕರ ಕಾಲೋನಿ, ಕ್ಲಾಸಿಕ ಲೇಔಟ್,ಟೆಂಗಿನ ಕಾಯಿ ಲೆಔಟ್, ವಿಹಾನ ಆಸ್ಪತ್ರೆ, ಲಕ್ಷ್ಮೀ ಕಾಲೋನಿ, ೫ನೇ ಅವಿನ್ಯೂ, ಶಿರೂರು ಪಾರ್ಕ್ ಬ್ಯಾಕ್ ಸ್ಟೇಜ್, ಶಿರೂರು ಪಾರ್ಕ 1ನೇ ಸ್ಟೇಜ್, ಪ್ರಭಾತ ಕಾಲೋನಿ, ಪ್ರಗತಿ ಕಾಲೋನಿ, ಸಿಲ್ವರ್ ರೆಸಿಡೆನ್ಸಿ ಅಪಾರ್ಟಮೆಂಟ್, ವಿದ್ಯಾನಗರ, ಚೇತನಾ ಕಾಲೋನಿ, ಜಯ ನಗರ, ಬೃಂದಾವನ ಲೇಔಟ್, ಆರಾಧನಾ ಅಪಾರ್ಟಮೆಂಟ್, ತಿಮ್ಮಸಾಗರ ಗುಡಿ, ಅಕ್ಷಯ ಕಾಲೋನಿ 1,2,3, ಮತ್ತು 4ನೇ ಫೇಸ್, ತೋಳನ ಕೆರೆ ಎಚ್.ಟಿ, ರವಿ ನಗರ, ಶ್ರೇಯಾ ಪಾರ್ಕ್, ಕೆ.ಇ.ಸಿ.ಲೇಔಟ್, ಮಾನಸ ಗಿರಿ, ಸರಸ್ವತಿಪುರ, ರಾಮಕೃಷ್ಣ ನಗರ, ರೇಣುಕಾ ನಗರ,ಗಾಂದಿ ನಗರ,ಸೂರ್ಯಕಾಂತಿ ಅಪಾರ್ಟಮೆಂಟ್,…