ಮಲೆನಾಡಿನಲ್ಲಿ ಕಳೆದ ವರ್ಷ ಅಡಕೆ ತೋಟಗಳನ್ನು ನಲುಗಿಸಿದ್ದ ಎಲೆಚುಕ್ಕಿ ಮತ್ತು ಇತರೆ ರೋಗಗಳನ್ನು ಈ ಬಾರಿ ಪ್ರಕೃತಿಯೇ ನಿಯಂತ್ರಣದಲ್ಲಿಟ್ಟಿದೆ. ಹವಾಮಾನದಲ್ಲಿ ವಿಪರೀತ ಬದಲಾವಣೆಗಳಾದಾಗ ಪ್ರಕೃತಿಯು ತನ್ನನ್ನು ತಾನೆ ನಿಯಂತ್ರಿಸಿಕೊಳ್ಳುವಂತೆ ಅಡಕೆ ತೋಟಗಳನ್ನು ಬಾಧಿಸಿದ್ದ ಹಲವು ರೋಗಗಳನ್ನು ಪ್ರಕೃತಿ ನಿಯಂತ್ರಣದಲ್ಲಿಟ್ಟಿದೆ. ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ಎಲೆಚುಕ್ಕಿ, ಕೊಳೆ, ಹಳದಿ ಎಲೆ, ಹಿಂಗಾರು ಒಣಗು, ಕಾಂಡಕೊರಕ, ಬೇರು ಹುಳ ಮತ್ತು ಇತರೆ ರೋಗಗಳು ತೋಟಗಳನ್ನು ಆವರಿಸಿಕೊಂಡು ಅಡಕೆ ಮರಗಳನ್ನು ನಲುಗಿಸಿದ್ದವು. ಕೇವಲ ತೋಟಗಳಲ್ಲದೆ ರೋಗ ನಿಯಂತ್ರಣದ ಪ್ರಯತ್ನದಲ್ಲಿರೈತರು ಸಹ ಸಂಕಷ್ಟಕ್ಕೀಡಾಗಿದ್ದರು. ಅತಿಯಾದ ಮಳೆಯಿಂದಾಗಿ ಥಂಡಿ ಮತ್ತು ವಾತಾವರಣದಲ್ಲಿನ ಅತಿಹೆಚ್ಚು ತೇವಾಂಶವು ಎಲೆಚುಕ್ಕಿ ರೋಗ ಉಲ್ಬಣಗೊಳ್ಳಲು ಕಾರಣವಾಗಿತ್ತು. ಈ ವರ್ಷ ವಾಡಿಕೆಗಿಂತ ಕಡಿಮೆಯಾದ ಮಳೆಯು ರೋಗಕ್ಕೆ ಕಡಿವಾಣ ಹಾಕಿದೆ. ರೋಗ ಸಂಪೂರ್ಣವಾಗಿ ನಿವಾರಣೆಯಾಗದಿದ್ದರೂ ಹತೋಟಿಯಲ್ಲಿದೆ. ಮಳೆ ಹೆಚ್ಚಾದಾಗಲೆಲ್ಲ ಕಾಣಿಸಿಕೊಳ್ಳುತ್ತಿದ್ದ ಕೊಳೆ ರೋಗದ ಸದ್ದು ಸಹ ಈ ಬಾರಿ ಕೇಳಿ ಬಂದಿಲ್ಲ. ರೋಗ ಬಾಧೆಯಿಂದ ತೋಟ ನೋಡಲು ಸಹ ಬೇಸರವಾಗುತ್ತಿತ್ತು. ಈ ವರ್ಷ ಸ್ವಲ್ಪ ಸುಧಾರಿಸಿವೆ…
Author: AIN Author
ಪಾಂಡವಪುರ:- ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸರ್ಕಾರ ರೈತರನ್ನು ಬಲಿ ಕೊಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಮಾತನಾಡಿದ ಅವರು,ತಮಿಳುನಾಡಿನಲ್ಲಿ 60 ಟಿಎಂಸಿ ನೀರಿದ್ದರೂ ಸಹ ರಾಜ್ಯದ ಕಾಂಗ್ರೆಸ್ ಸರಕಾರ ತಮಿಳುನಾಡಿನಲ್ಲಿರುವ ಕಾಂಗ್ರೆಸ್ ಒಕ್ಕೂಟದ ದೋಸ್ತಿ ಸರಕಾರಕ್ಕಾಗಿ ಕಾವೇರಿ ನೀರು ಹರಿಬಿಟ್ಟಿತು. ವಿದ್ಯುತ್ ಸಮಸ್ಯೆಯಂತ ಹೇಳತೀರದಾಗಿದೆ. ವಿದ್ಯುತ್ ಸಮಸ್ಯೆಯಿಂದ ರೈತ ಸಂಕುಲ, ಕೈಗಾರಿಕೆ, ಉದ್ಯಮಗಳು ನಲುಗಿ ಹೋಗಿವೆ ಎಂದು ಹರಿಹಾಯ್ದರು. ಕಾಂಗ್ರೆಸ್ ಕೇಂದ್ರದ ಎನ್‌ಡಿಆರ್‌ಎಫ್ ಅನುದಾನ ನೀಡಿಲ್ಲ ಎಂದು ಆರೋಪಿಸುತ್ತಿದೆ. ಶೀಘ್ರವೇ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆ ಮಾಡಿಸಲಾಗುವುದು. ರಾಜ್ಯ ಸರಕಾರ ಬರಕ್ಕಾಗಿ ರಾಜ್ಯದ 31 ಜಿಲ್ಲೆಗೆ 302 ಕೋಟಿ ಮೀಸಲಿಟ್ಟಿದೆ. ಎನ್‌ಡಿಆರ್‌ಎಫ್ ಅನುದಾನ ಬರುವ ತನಕ ಬೇರೆಡೆಯಿಂದ ಬರಕ್ಕಾಗಿ 1 ಸಾವಿರ ಕೋಟಿ ಹಣವನ್ನು ಎತ್ತಿಟ್ಟು ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಎನ್‌ಡಿಆರ್‌ಎಫ್ ಅನುದಾನ ಬಂದ ಬಳಿಕ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಎದುರಾಗಿರುವ ಬರದ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡುವ ಆಲೋಚನೆ ಇಲ್ಲದೆ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ.…
ಬೆಂಗಳೂರು: ಟೀಂ ಇಂಡಿಯಾದ ನಾಯಕ, ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Crciket) ವಿಶೇಷ ಸಾಧನೆ ಮಾಡಿದ್ದಾರೆ. ಈ ವಿಶ್ವಕಪ್‌ನ ಪವರ್ ಪ್ಲೇನಲ್ಲಿ (Power Play) 250ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರನಾಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ. ಈ ಟೂರ್ನಿಯಲ್ಲಿ 2 ಅರ್ಧಶತಕ, ಒಂದು ಶತಕವನ್ನು ಹಿಟ್‌ಮ್ಯಾನ್ ಸಿಡಿಸಿದ್ದಾರೆ. ರೋಹಿತ್ ಬ್ಯಾಟಿನಿಂದ ಇಲ್ಲಿಯವರೆಗೆ 22 ಸಿಕ್ಸ್, 50 ಬೌಂಡರಿ ಸಿಡಿಯಲ್ಪಟ್ಟಿದೆ. ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪೈಕಿ ರೋಹಿತ್ ಶರ್ಮಾ 5ನೇ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಒಟ್ಟು 8 ಪಂದ್ಯಗಳಿಂದ 442 ರನ್ ಹೊಡೆದಿದ್ದಾರೆ. ನ್ಯೂಜಿಲೆಂಡ್‌ನ ರಚಿನ್ ರವೀಂದ್ರ (Rachin Ravindra) 565 ರನ್ ಹೊಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 550 ರನ್ ಹೊಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.
ಕಲ್ಲುಸಕ್ಕರೆ ನೋಡಲು ಕಲ್ಲಿನಂತಿರುತ್ತದೆ ವಿನ: ರುಚಿಯಲ್ಲಿ ಸಕ್ಕರೆಯೇ ಸಾಮಾನ್ಯ ಸಕ್ಕರೆಯನ್ನು ಹರಳುಗಟ್ಟಿಸಿ ಕಲ್ಲು ಸಕ್ಕರೆಯನ್ನು ತಯಾರಿಸುವ ಕೆಲವು ಸಿಹಿ ಅಂಶಗಳು ನಷ್ಟವಾಗುವ ಕಾರಣ ಸಕ್ಕರೆಗಿಂತಲೂ ಇದರಲ್ಲಿ ಸಿಹಿ ಕಡಿಮೆ ಇರುತ್ತದೆ. ಕಲ್ಲುಸಕ್ಕರೆಯನ್ನು ಸಿಹಿಕಾರಕವಾಗಿ ತಯಾರಿಸಲಾಗುತ್ತದೆಯಾದರೂ ಇದರ ಒಔಷಧೀಯ ರೂಪದಲ್ಲಿಯೇ ಹೆಚ್ಚು. ಊಟದ ಬಳಿಕ ಮುಕ್ಕಳಿಸದೇ ಅಥವಾ ಹಲ್ಲುಜ್ಜಲು ಮರೆತರೆ ಹಲ್ಲುಗಳ ಸಂಧುಗಳಲ್ಲಿ ಸಿಲಿಕಿದ ಆಹಾರಕಣಗಳನ್ನು ಬ್ಯಾಕ್ಟೀರಿಯಾಗಳು ಕೊಳೆಸಿ ಬಾಯಿಯ ದುರ್ಗಂಧಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ಬಳಿಕ ಚಿಕ್ಕ ತುಂಡು ಕಲ್ಲುಸಕ್ಕರೆಯನ್ನು ತಿಂದರೆ ಈ ಬ್ಯಾಕ್ಟೀಯಾಗಳನ್ನು ಕೊಂದು ಉಸಿರಿನ ತಾಜಾತನ ಉಳಿಸಿಕೊಳ್ಳಲು ನೆರವಾಗುತ್ತದೆ. ಗಂಟಲು ನೋವು : ಚಳಿಗಾಲದಲ್ಲಿ ಕೆಲವಾರು ರೋಗಗಳು ಅನಿವಾರ್ಯ ಎಂಬಂತೆ ಆವರಿಸುತ್ತದೆ. ಇದರಲ್ಲಿ ಗಂಟಲು ನೋವು ಒಂದು ಗಂಟಲುನೋವು ಎದುರಾದ ತಕ್ಷಣ ಕಲ್ಲುಸಕ್ಕರೆ ತಿಂದರೆ ಇದು ತಕ್ಷಣವೇ ಗುಣವಾಗುತ್ತದೆ. ಒಂದು ವೇಳೆ ನೋವು ಹೆಚ್ಚಿದ್ದರೆ ಕಲ್ಲುಸಕ್ಕರೆಯೊಂದಿಗೆ ಕಾಳುಮೆಣಸಿನ ಪುಡಿ ಮತ್ತು ಕೊಂಚ ತುಪ್ಪ ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸಬೇಕು. ರಕ್ತದಲ್ಲಿ ಹೀಮೋಗ್ಲೋಬಿನ್ ಹೆಚ್ಚಿಸುತ್ತದೆ ರಕ್ತದಲ್ಲಿ ಹೀಮೋಗ್ಲೋಬಿನ್ ಕಡಿಮೆಯಾದಾಗ…
ರಾಮನಗರ:- ಬಿಡದಿಯವರೆಗೂ ‘ನಮ್ಮ ಮೆಟ್ರೊ’ ರೈಲು ಸಂಚಾರ ವಿಸ್ತರಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬೆಂಗಳೂರಿನ ಸಂಚಾರ ದಟ್ಟನೆ ತಪ್ಪಿಸಲು ಬಿಡದಿಯವರೆಗೂ ‘ನಮ್ಮ ಮೆಟ್ರೊ’ ರೈಲು ಸಂಚಾರ ವಿಸ್ತರಣೆ ಮಾಡಲಾಗುವುದು. ಬಿಡದಿಯ ತನಕ ಮೆಟ್ರೊ ಮಾರ್ಗ ವಿಸ್ತರಣೆಗೆ ಈಗಾಗಲೇ ಸರ್ವೇ ಮಾಡಿಸಲಾಗುತ್ತಿದೆ. ಈ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಸೂಚಿಸಿದ್ದೇನೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಹೇಳಿದರು. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಮೆಟ್ರೊ ಮಾರ್ಗ ವಿಸ್ತರಿಸುವಂತೆ ಶಾಸಕರು ಮತ್ತು ಸಂಸದರು ಮನವಿ ಸಲ್ಲಿಸಿದ್ದರು ಎಂದರು. ಬಿಡದಿಯಲ್ಲಿ 10 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಇದುವರೆಗೂ ಯಾವುದೇ ಉದ್ದೇಶಕ್ಕೆ ಬಳಸಿಕೊಂಡಿಲ್ಲ. ಬೆಂಗಳೂರಿನಲ್ಲಿ ಸಿಗುವ ಸೌಲಭ್ಯ ಈ ಭಾಗಕ್ಕೂ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಈ ಭಾಗದ ಆಸ್ಪತ್ರೆ, ವಿದ್ಯಾಸಂಸ್ಥೆ,…
ಬೆಂಗಳೂರು:- ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲೋದು ಗ್ಯಾರಂಟಿ ಇಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,2024ರ ನಂತರ ಮೋದಿ ಸರ್ಕಾರ ಇರುವುದೇ ಗ್ಯಾರಂಟಿ ಇಲ್ಲ, ನಮ್ಮ ರಾಜ್ಯ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡುವುದಕ್ಕಿಂತ ಮೊದಲು ಅವರ ಪಕ್ಷದ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ಗಮನಹರಿಸಲಿ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಚಂಡ ಬಹುಮತದೊಂದಿಗೆ ಆಯ್ಕೆಯಾಗಿ ಜನರ ಆಶೋತ್ತರಗಳಿಗೆ ಅನುಗುಣವಾಗಿ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಾ ಜನಪರ ಆಡಳಿತ ನೀಡುತ್ತಿದೆ. ಅದನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸೋಲಿನ ಹತಾಶೆಯಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಬೀಳಿಸಲು ಮಾಸ್ಟರ್ ಮೈಂಡ್ ಯೋಜನೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕುಮಾರಸ್ವಾಮಿಯವರಿಗೆ ಮೈಂಡೇ ಇಲ್ಲ, ಇನ್ನೂ ಮಾಸ್ಟರ್‌ಮೈಂಡ್ ಎಲ್ಲಿಂದ ಎಂದು ಟೀಕಿಸಿದರು.
ಕೋಲ್ಕತ್ತಾ: ಭೀಕರ ರಸ್ತೆ ಅಪಘಾತಕ್ಕೀಡಾಗಿ 11 ತಿಂಗಳ ಕಾಲ ಟೀಂ ಇಂಡಿಯಾದಿಂದ (Team India) ದೂರ ಉಳಿದಿದ್ದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳುವ ಸುಳಿವು ನೀಡಿದ್ದಾರೆ. ರಸ್ತೆ ಅಪಘಾತದ ಬಳಿಕ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದ ರಿಷಬ್ ಪಂತ್ ಗುರುವಾರ (ನ.9) ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ (Rishabh Pant Practice) ನಡೆಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ಯಾಂಪನ್‌ನಲ್ಲಿಂದು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಕಾಲಿಗೆ ಯಾವುದೇ ಪ್ಯಾಡ್‌ಗಳನ್ನ ಧರಿಸದೇ ಬ್ಯಾಟಿಂಗ್ ಅಭ್ಯಾಸ ಮಾಡಿದ್ದು, 2024ರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಸೂಚನೆ ಕೊಟ್ಟಿದ್ದಾರೆ. ಬಳಿಕ ಮೈದಾನದಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ರಿಷಬ್ ನಿಮ್ಮ ಫ್ಯೂಚರ್ ಇನ್ನಷ್ಟು ಬ್ರೈಟ್ ಆಗಲಿ, ಆದಷ್ಟು ಬೇಗ ಟೀಂ ಇಂಡಿಯಾಕ್ಕೆ ನಿಮ್ಮ ಬರುವಿಕೆಯನ್ನು ಎದುರು ನೋಡುತ್ತೇವೆ ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಶುಭಕೋರಿದ್ದಾರೆ. ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪನ್‌ನಲ್ಲಿ…
ಮಂಡ್ಯ: ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ, ಸ್ವಾರ್ಥ ರಾಜಕಾರಣಿ ಅಲ್ಲ. ಸ್ವತಃ ನಿರ್ಧಾರ ಕೈಗೊಂಡು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಪಕ್ಷಕ್ಕಾಗಿ ಕೊನೆಯವರೆಗೂ ದುಡಿಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿವಿ ಸದಾನಂದ ಗೌಡ ತಿಳಿಸಿದರು. ಮಂಡ್ಯದ ದೊಡ್ಡಬ್ಯಾಡರಹಳ್ಳಿಯಲ್ಲಿ ಮಾತನಾಡಿದ ಡಿವಿ ಸದಾನಂದ ಗೌಡ ಅವರು, ” ಸಾಯುವವರೆಗೂ, ಹೆಣದ ಮೇಲೆ ಫ್ಲಾಗ್ ಹಾಕುವವರಗೂ ರಾಜಕಾರಣದಲ್ಲಿರಬೇಕು ಅನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ನಾನು ಅಷ್ಟು ಸ್ವಾರ್ಥಿಯಲ್ಲ. ಹೀಗಾಗಿ, ಚುನಾವಣೆಯಿಂದ ದೂರ ಉಳಿಯುತ್ತಿದ್ದೇನೆ ” ಎಂದಿದರು. https://ainlivenews.com/knee-pain-treatment-joint-pain-treatment/ ಪಕ್ಷ ಸೂಚನೆ ಮೇರೆಗೆ ಡಿವಿ ಸದಾನಂದ ಗೌಡರು ನಿವೃತ್ತಿ ಎಂದು ಬಿಎಸ್ ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ” ರಾಷ್ಟ್ರೀಯ ನಾಯಕರು ಸುಪ್ರೀಂ. ನನಗೆ ಕೇಂದ್ರದ ಯಾವುದೇ ನಾಯಕರ ಒತ್ತಡ ಇಲ್ಲ. ನಾನು ನನ್ನ ರಾಜಕೀಯ ಜೀವನದಲ್ಲಿ ಒತ್ತಡದ ರಾಜಕಾರಣ ಮಾಡಿದವನಲ್ಲ. ಯಾರೇ ದೊಡ್ಡವರಿದ್ದರು, ನ್ಯಾಷನಲ್ ಪ್ರೆಸಿಡೆಂಟ್ ಇರಲಿ ನನಗೆ ಒತ್ತಡ ಇಲ್ಲ ” ಎಂದು ಹೇಳಿದರು.
ರಾಂಚಿ: ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ಸೇರಲು ಪ್ರಚೋದನೆ ನೀಡುತ್ತಿದ್ದ ಇಬ್ಬರು ಉಗ್ರ ಸಂಘಟನೆಯ ಕಾರ್ಯಕರ್ತರನ್ನು ಜಾರ್ಖಂಡ್‍ನ (Jharkhand) ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಬಂಧಿತರನ್ನು ಎಮ್.ಡಿ ಆರಿಜ್ ಹುಸೇನ್ ಮತ್ತು ನಸೀಮ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ಐಸಿಸ್ ಸೇರಲು ಪ್ರಚೋದನೆ ನೀಡುತ್ತಿದ್ದರು. ಅಲ್ಲದೇ ಯುವಕರೊಂದಿಗೆ ಸಂಪರ್ಕ ಸಾಧಿಸಿ ಅವರನ್ನು ಉಗ್ರ ಸಂಘಟನೆಗೆ ಸೇರಲು ಸಹಕಾರ ನೀಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ಮೊಬೈಲ್‍ನಲ್ಲಿ (Mobile) ಸಂಶಯಾಸ್ಪದ ಚಾಟಿಂಗ್‍ಗಳು ಪತ್ತೆಯಾಗಿದೆ. ಜಿಹಾದ್ ಮತ್ತು ಐಸಿಸ್ ಸಿದ್ಧಾಂತಕ್ಕೆ ಸಂಬಂಧಿಸಿದ ಎರಡು ಪುಸ್ತಕಗಳನ್ನು ಹಂಚಿರುವುದು ತನಿಖೆ ವೇಳೆ ತಿಳಿದು ಬಂದಿದೆ. https://ainlivenews.com/knee-pain-treatment-joint-pain-treatment/ ಅಲ್ಲದೇ ಆರೋಪಿಗಳು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ನೆಲೆಗೊಂಡಿರುವ ಐಸಿಸ್ ಮತ್ತು ಇತರ ನಿಷೇಧಿತ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕದಲ್ಲಿರುವುದನ್ನು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ಭಯೋತ್ಪಾದನೆ ಸಂಬಂಧಿತ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು :- ಯಡಿಯೂರಪ್ಪ ಎನ್ನುವುದು ಶಕ್ತಿ. ಯಡಿಯೂರಪ್ಪ ರಾಜಕೀಯ ಜೀವನ ಆರಂಭಿಸಿದ್ದೇ ಶಿಕಾರಿಪುರದಲ್ಲಿ. ತಮ್ಮ ಕರ್ಮಭೂಮಿ ಶಿಕಾರಿಪುರದಲ್ಲಿ ಅವರು ಹೋರಾಟ ಕಟ್ಟಿದ ಪರಿ, ಜನರ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯವೈಖರಿ, ಏನೇ ಆದರೂ ದಕ್ಕಿಸಿಕೊಳ್ಳುವ ಸಾಮರ್ಥ್ಯ, ಜನ ಸಾಮಾನ್ಯರ ನಾಡಿ ಮಿಡಿತ ಅರಿತು ಅವರಲ್ಲೊಬ್ಬರಾಗುವ ತಳಮಟ್ಟದ ಅನುಭವ, ಎಲ್ಲವನ್ನೂ ದಕ್ಕಿಸಿಕೊಳ್ಳುವ ಮತ್ತು ದಕ್ಕಿಸಿಕೊಂಡ ಮೇರು ವ್ಯಕ್ತಿತ್ವದ ನಾಯಕರಾದ, ಶಿಕಾರಿಪುರದಿಂದ ರಾಜ್ಯದ ಎಲ್ಲೆಡೆ ಆವರಿಸಿಕೊಂಡ ರೀತಿ ಎಲ್ಲವೂ ಈಗ ಇತಿಹಾಸ. ಇಂತಹ ನಾಯಕರೊಬ್ಬರ ನಿರ್ವಾತವನ್ನು ಭರ್ತಿ ಮಾಡುವುದು ಸುಲಭವಲ್ಲ. ಆದರೆ ಯಡಿಯೂರಪ್ಪನವರ ರೀತಿಯಲ್ಲಿಯೇ ಶಿಕಾರಿಪುರದಿಂದಲೇ ಚುನಾವಣಾ ರಾಜಕೀಯ ಆರಂಭಿಸಿರುವ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಆ ಸ್ಥಾನವನ್ನು ಸಮರ್ಥವಾಗಿ ಭರ್ತಿ ಮಾಡುವತ್ತ ಹೆಜ್ಜೆಯನ್ನು ಈಗಾಗಲೇ ತೋರಿದ್ದು, ಇದರ ಫಲವಾಗಿ ಅವರಿಗೆ ಚಿಕ್ಕ ವಯಸ್ಸಿಲ್ಲಿಯೇ ರಾಜ್ಯಾಧ್ಯಕ್ಷ ಸ್ಥಾನ ಒದಗಿ ಬಂದಿದೆ. ಬಾಲ್ಯದಿಂದಲೇ ಹೋರಾಟ, ಮಾನವೀಯ ಮುಖ, ಜನಪರ ತುಡಿತದ ತಂದೆಯ ವ್ಯಕ್ತಿತ್ವವನ್ನೇ ನೋಡುತ್ತಾ ಬೆಳೆದ ವಿಜಯೇಂದ್ರ ಸ್ವಭಾವತಃ ತಂದೆಯ ಗುಣವನ್ನೇ ಮೈಗೂಡಿಸಿಕೊಂಡಂತೆ ಕಾಣುತ್ತದೆ.…