ಕನ್ನಡದ ಸಿನಿಮಾ ರಂಗದ ಪ್ರತಿಭಾವಂತ ನಟ ಪ್ರಜ್ವಲ್ ದೇವರಾಜ್ ನಟನೆಯ ಹೊಸ ಸಿನಿಮಾದಲ್ಲಿ ಮೇಘಾ ಶೆಟ್ಟಿ (Megha Shetty) ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಮೊನ್ನೆಷ್ಟೇ ಈ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದ್ದು, ಈ ಚಿತ್ರದಲ್ಲಿ ಶ್ರುತಿ ಹರಿಹರನ್ ಕೂಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜಲಕ್ಷ್ಮಿ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ (Raja Kalai Kumar) ಪ್ರಥಮ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕರಾಗಿ ನಟಿಸುತ್ತಿರುವ ‘ಚೀತಾ’ (Cheeta) ಚಿತ್ರದ ಮುಹೂರ್ತ ಸಮಾರಂಭ ಕನ್ನಡ ರಾಜ್ಯೋತ್ಸವದ ಶುಭದಿನದಂದು ಹೆಚ್. ಎಂ. ಟಿ ಶಾಲೆ ಆಟದ ಮೈದಾನದಲ್ಲಿ ನೆರವೇರಿದೆ. ಪ್ರಜ್ವಲ್ ದೇವರಾಜ್ ಕನ್ನಡ ಬಾವುಟ ಹಾರಿಸುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು. ಮುಹೂರ್ತ ಸಮಾರಂಭದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದ್ದರು. ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡಾನ್ಸರ್ ಆಗಿ, ಡಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಮಾತನಾಡಿದ…
Author: AIN Author
ಬೆಂಗಳೂರು: ನಗರದಲ್ಲಿ ರಸ್ತೆಬದಿ ನಿಲ್ಲಿಸಿದ್ದ 25ಕ್ಕೂ ಹೆಚ್ಚು ವಾಹನಗಳ ಗಾಜು ಒಡೆದು ಹಾಕಲಾಗಿದ್ದು, ಕೃತ್ಯ ಎಸಗಿದ್ದ ಮೂವರು ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಜೀವ್ ಗಾಂಧಿನಗರದ ರಸ್ತೆಗಳಲ್ಲಿ ಕಾರು, ದ್ವಿಚಕ್ರ ವಾಹನ ಹಾಗೂ ಆಟೊಗಳನ್ನು ನಿಲ್ಲಿಸಲಾಗಿತ್ತು. ಮಾಸ್ಕ್ ಧರಿಸಿದ್ದ ಮೂವರು ಕಿಡಿಗೇಡಿಗಳು, ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಲಾಂಗ್‌ನಿಂದ ವಾಹನಗಳ ಗಾಜು ಒಡೆದು ಪರಾರಿಯಾಗಿದ್ದಾರೆ’ ಎಂದು ಸ್ಥಳೀಯರು ಹೇಳಿದರು. ‘ಆರೋಪಿಗಳ ಕೃತ್ಯದಿಂದಾಗಿ 20ಕ್ಕೂ ಹೆಚ್ಚು ಕಾರುಗಳು, 5 ದ್ವಿಚಕ್ರ ವಾಹನಗಳು ಹಾಗೂ ಆಟೊ ಜಖಂಗೊಂಡಿವೆ. ಕಿಡಿಗೇಡಿಗಳನ್ನು ಪತ್ತೆ ಮಾಡಿ, ಕಠಿಣ ಕ್ರಮ ಜರುಗಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೆಂಗಳೂರು:- ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಇಂದು ಸಂಜೆ 5 ಗಂಟೆಯಿಂದ ‘ಎಕ್ಸ್’ ಅಭಿಯಾನ ಹಮ್ಮಿಕೊಂಡಿದೆ. ‘#ಕನ್ನಡಬಾವುಟ_ನಮ್ಮಗುರುತು’, ‘#KannadaFlag_MyPride’ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಈ ಅಭಿಯಾನ ನಡೆಯಲಿದೆ. ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಯನ್ನು ಅಂಗೀಕರಿಸಬೇಕೆಂದು ‘ಎಕ್ಸ್’ ಅಭಿಯಾನದ ಮೂಲಕ ಒತ್ತಾಯಿಸಲಾಗುವುದು ಎಂದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ. ‘ಕನ್ನಡಿಗರಿಗೆ ಕನ್ನಡ ಬಾವುಟ ಮೊದಲ ಗುರುತು. ಭಾರತ ಒಕ್ಕೂಟದ ಭಾಗವಾಗಿ ನಮ್ಮದೇ ಆದ ಬಾವುಟವೊಂದನ್ನು ಹೊಂದುವುದಕ್ಕೆ ಅವಕಾಶ ಇರಬೇಕು. ಈಗಾಗಲೇ ಕೋಟ್ಯಂತರ ಕನ್ನಡಿಗರು ಕನ್ನಡ ಬಾವುಟವನ್ನು ಆರಾಧಿಸುತ್ತಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರ ಕೂಡಲೇ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಬಹಳ ಉಪಯುಕ್ತವಾದ ಆಯ್ಕೆಯೊಂದನ್ನು ವಾಟ್ಸ್ಆ್ಯಪ್ ನೀಡಿದೆ. WABetaInfo ಮಾಡಿರುವ ವರದಿಯ ಪ್ರಕಾರ, ಬಳಕೆದಾರರು ಇದೀಗ ಫೋನ್ ನಂಬರ್ ಪ್ರೈವಸಿ ಆಯ್ಕೆಯನ್ನು ಪಡೆದಿದ್ದಾರೆ ಎಂದು ಹೇಳಿದೆ. ವಾಟ್ಸ್ಆ್ಯಪ್ನ (WhatsApp) ನೂತನ ಬೇಟಾ ವರ್ಷನ್ ಅಪ್ಡೇಟ್ ಮಾಡಿದರೆ ಈ ಆಯ್ಕೆ ಸಿಗಲಿದೆ. ಫೋನ್ ನಂಬರ್ ಪ್ರೈವಸಿ ಫೀಚರ್ ಕಮ್ಯೂನಿಟಿ ಅನೌನ್ಸ್ಮೆಂಟ್ ಗ್ರೂಪ್ನಲ್ಲಿ ಕಾಣಸಿಗಲಿದೆ. ಹೆಸರೇ ಸೂಚಿಸುವಂತೆ, ಬಳಕೆದಾರರು ತಮ್ಮ ಮೊಬೈಲ್ ನಂಬರ್ ಅನ್ನು ಕಮ್ಯೂನಿಟಿ ಅನೌನ್ಸ್ಮೆಂಟ್ ಗ್ರೂಪ್ನಲ್ಲಿ ಮರೆಮಾಡುವ ಮೂಲಕ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯದೊಂದಿಗೆ, ಅವರ ಫೋನ್ ಸಂಖ್ಯೆಯು ಕಮ್ಯೂನಿಟಿ ಅಡ್ಮಿನ್ ಮತ್ತು ಅವರ ನಂಬರ್ ಅನ್ನು ಸೇವ್ ಮಾಡಿಟ್ಟುಕೊಂಡವರಿಗೆ ಮಾತ್ರ ಗೋಚರಿಸುತ್ತದೆ. ಗ್ರೂಪ್ನಲ್ಲಿ ಇರುವ ಇತರೆ ಸದಸ್ಯರಿಂದ ತಮ್ಮ ಮೊಬೈಲ್ ಸಂಖ್ಯೆಗಳನ್ನು ಮರೆಮಾಡಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ.
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ಕೂಡ ಹೊಸ ನಿಯಮಗಳು ಜಾರಿಯಾಗಿವೆ. ಇತ್ತೀಚಿಗೆ ನಿರ್ಮಲ ಸೀತಾರಾಮನ್ ಅವರು ತೆರಿಗೆ ಪಾವತಿಯಲ್ಲಿ ಅನೇಕ ವಿನಾಯಿತಿಯನ್ನು ನೀಡುತ್ತಿದ್ದಾರೆ. ಭಾರತದಲ್ಲಿ ಹಲವು ಆದಾಯಗಳಿಗೆ ತೆರಿಗೆ ಇಲ್ಲ ಅನ್ನುವ ಮಾಹಿತಿ ಇನ್ನೂ ಕೂಡ ಸಾಕಷ್ಟು ಜನರಿಗೆ ತಿಳಿದಿಲ್ಲ ಎಂದು ಹೇಳಬಹುದು. ವ್ಯಾಪಾರ ಅಥವಾ ಉದ್ಯೋಗದಿಂದ ಬಂದ ಆದಾಯದ ಮೂಲಗಳಿಗೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ .ಆದರೆ ಕೆಲವು ತೆರಿಗೆ ವಿಧಿಸದ ಗಳಿಕೆಗಳಿವೆ. ಇಲಾಖೆಯು ಕೆಲ ಮೂಲದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಇದೀಗ ಯಾವ ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ. ಇನ್ನುಮುಂದೆ ಈ 5 ಆದಾಯಗಳಿಗೆ ತೆರಿಗೆ ಕಟ್ಟುವ ಅಗತ್ಯ ಇಲ್ಲ ಕೃಷಿ ಮೇಲಿನ ಆದಾಯ ಭಾರತ ಕೃಷಿ ಪ್ರಧಾನ ದೇಶವಾಗಿದೆ. ಕೃಷಿ ಚಟುವಟಿಕೆಗಳಿಂದ ಗಳಿಸಿದ ಆದಾಯವು ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 10(1) ಅಡಿಯಲ್ಲಿ ಆದಾಯ ತೆರಿಗೆಯಿಂದ ಮುಕ್ತವಾಗಿದೆ. ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕೃಷಿ ಕ್ಷೇತ್ರವನ್ನು ಬೆಂಬಲಿಸುವುದು…
ಸೆಮಿಫೈನಲ್ ಪ್ರವೇಶಿಸಲು ಕಠಿಣ ಸವಾಲು ಎದುರಿಸುತ್ತಿರುವ ಪಾಕಿಸ್ತಾನ ತಂಡ ತನ್ನ 9ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಶನಿವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆಂಗ್ಲರು 2019ರಲ್ಲಿ ಗೆದ್ದ ವಿಶ್ವ ಕಿರೀಟವನ್ನು ಈ ಬಾರಿ ಕಳೆದುಕೊಳ್ಳುವುದು ಈಗಾಗಲೆ ಖಚಿತಗೊಂಡಿರುವ ನಡುವೆ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅರ್ಹತೆಗಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸುವ ತವಕದಲ್ಲಿದ್ದಾರೆ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 4 ಗೆಲುವು, 4 ಸೋಲಿನ ಸಹಿತ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ, ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಬೇಕಾದರೆ ಬರೀ ಗೆದ್ದರಷ್ಟೇ ಸಾಕಾಗದು. ರನ್ರೇಟ್ನಲ್ಲೂ ನ್ಯೂಜಿಲೆಂಡ್ ತಂಡವನ್ನು ಮೀರಿಸುವುದು ಅಗತ್ಯವಾಗಿದೆ. ಆದರೆ ಇದಕ್ಕಾಗಿ ಪಾಕ್, ಮೊದಲು ಬ್ಯಾಟಿಂಗ್ಗೆ ಇಳಿದಾಗ ಕನಿಷ್ಠ 287 ರನ್ಗಳಿಂದ ಪಂದ್ಯ ಗೆಲ್ಲಬೇಕಾಗಿದೆ. ಒಂದು ವೇಳೆ ಪಾಕ್ ಚೇಸಿಂಗ್ ಮಾಡುವುದಾದರೆ, 284 ಎಸೆತ ಉಳಿದಿರುವಂತೆಯೇ ಗುರಿ ತಲುಪಬೇಕಾಗುತ್ತದೆ. ಅಂದರೆ, ಒಂದು ವೇಳೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ಗೆ ಇಳಿದರೆ ಪಾಕಿಸ್ತಾನ…
ಶಿವಮೊಗ್ಗ: ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಸ್ಥಿತಿ ಭೀಷ್ಮನಂತಿದೆ. ಕುರುಕ್ಷೇತ್ರ ಯುದ್ಧ ಮಾತ್ರ ಮಾಡಬೇಕು. ಪಟ್ಟಕ್ಕೆ ಕೂರುವ ಹಾಗಿಲ್ಲ. ಅದರ ಯಶ ಬೇರೆಯವರು ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಬಾಣಗಳನ್ನೂ ಬಿಟ್ಟು ಅವರಿಗೆ ಘಾಸಿಗೊಳಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಡಿಯೂರಪ್ಪ ಅವರ ಅಪ್ಪಟ ಶಿಷ್ಯ. ಅವರಿಗಾದ ಅನ್ಯಾಯದ ಬಗ್ಗೆ ನನಗೆ ನೋವಿದೆ. ವಿಪರ್ಯಾಸವೆಂದರೆ ಅವರ ಪುತ್ರರಿಗೆ ಈ ವಿಚಾರ ಬೇಕಾಗಿಲ್ಲ ಎನಿಸುತ್ತದೆ. ವಯಸ್ಸಿನ ಕಾರಣಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಆದರೆ ಚುನಾವಣೆ ವೇಳೆಯಲ್ಲಿಅವರೇ ಪ್ರಚಾರ, ಬರ ಅಧ್ಯಯನಕ್ಕೂ ಬೇಕು. ಹಾಗಾದರೆ ಈಗ ಅವರಿಗೆ ವಯಸ್ಸಾಗಿಲ್ಲವೆ? ಪಾಪ ಹಿರಿಜೀವವನ್ನು ಬಿಜೆಪಿ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದರು. https://ainlivenews.com/knee-pain-treatment-joint-pain-treatment/ ಇನ್ನು ಬಿಜೆಪಿಯ ಬರ ಅಧ್ಯಯನದ ಬಗ್ಗೆ ಟೀಕೆ ಮಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಬರ ಅಧ್ಯಯನ ಮಾಡುತ್ತಿರುವುದೇ ಒಂದು ವಿಡಂಬನೆ. ಈಗಾಗಲೇ ಕೇಂದ್ರದ ತಜ್ಞರ ತಂಡ ಭೇಟಿ ನೀಡಿದೆ. ವೈಜ್ಞಾನಿಕ ಅಂಕಿ ಅಂಶಗಳನ್ನು ಸಲ್ಲಿಸಿದೆ. ರಾಜ್ಯ ಸರಕಾರ…
ಮಲೆನಾಡಿನಲ್ಲಿ ಕಳೆದ ವರ್ಷ ಅಡಕೆ ತೋಟಗಳನ್ನು ನಲುಗಿಸಿದ್ದ ಎಲೆಚುಕ್ಕಿ ಮತ್ತು ಇತರೆ ರೋಗಗಳನ್ನು ಈ ಬಾರಿ ಪ್ರಕೃತಿಯೇ ನಿಯಂತ್ರಣದಲ್ಲಿಟ್ಟಿದೆ. ಹವಾಮಾನದಲ್ಲಿ ವಿಪರೀತ ಬದಲಾವಣೆಗಳಾದಾಗ ಪ್ರಕೃತಿಯು ತನ್ನನ್ನು ತಾನೆ ನಿಯಂತ್ರಿಸಿಕೊಳ್ಳುವಂತೆ ಅಡಕೆ ತೋಟಗಳನ್ನು ಬಾಧಿಸಿದ್ದ ಹಲವು ರೋಗಗಳನ್ನು ಪ್ರಕೃತಿ ನಿಯಂತ್ರಣದಲ್ಲಿಟ್ಟಿದೆ. ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ಎಲೆಚುಕ್ಕಿ, ಕೊಳೆ, ಹಳದಿ ಎಲೆ, ಹಿಂಗಾರು ಒಣಗು, ಕಾಂಡಕೊರಕ, ಬೇರು ಹುಳ ಮತ್ತು ಇತರೆ ರೋಗಗಳು ತೋಟಗಳನ್ನು ಆವರಿಸಿಕೊಂಡು ಅಡಕೆ ಮರಗಳನ್ನು ನಲುಗಿಸಿದ್ದವು. ಕೇವಲ ತೋಟಗಳಲ್ಲದೆ ರೋಗ ನಿಯಂತ್ರಣದ ಪ್ರಯತ್ನದಲ್ಲಿರೈತರು ಸಹ ಸಂಕಷ್ಟಕ್ಕೀಡಾಗಿದ್ದರು. ಅತಿಯಾದ ಮಳೆಯಿಂದಾಗಿ ಥಂಡಿ ಮತ್ತು ವಾತಾವರಣದಲ್ಲಿನ ಅತಿಹೆಚ್ಚು ತೇವಾಂಶವು ಎಲೆಚುಕ್ಕಿ ರೋಗ ಉಲ್ಬಣಗೊಳ್ಳಲು ಕಾರಣವಾಗಿತ್ತು. ಈ ವರ್ಷ ವಾಡಿಕೆಗಿಂತ ಕಡಿಮೆಯಾದ ಮಳೆಯು ರೋಗಕ್ಕೆ ಕಡಿವಾಣ ಹಾಕಿದೆ. ರೋಗ ಸಂಪೂರ್ಣವಾಗಿ ನಿವಾರಣೆಯಾಗದಿದ್ದರೂ ಹತೋಟಿಯಲ್ಲಿದೆ. ಮಳೆ ಹೆಚ್ಚಾದಾಗಲೆಲ್ಲ ಕಾಣಿಸಿಕೊಳ್ಳುತ್ತಿದ್ದ ಕೊಳೆ ರೋಗದ ಸದ್ದು ಸಹ ಈ ಬಾರಿ ಕೇಳಿ ಬಂದಿಲ್ಲ. ರೋಗ ಬಾಧೆಯಿಂದ ತೋಟ ನೋಡಲು ಸಹ ಬೇಸರವಾಗುತ್ತಿತ್ತು. ಈ ವರ್ಷ ಸ್ವಲ್ಪ ಸುಧಾರಿಸಿವೆ…
ಪಾಂಡವಪುರ:- ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸರ್ಕಾರ ರೈತರನ್ನು ಬಲಿ ಕೊಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಮಾತನಾಡಿದ ಅವರು,ತಮಿಳುನಾಡಿನಲ್ಲಿ 60 ಟಿಎಂಸಿ ನೀರಿದ್ದರೂ ಸಹ ರಾಜ್ಯದ ಕಾಂಗ್ರೆಸ್ ಸರಕಾರ ತಮಿಳುನಾಡಿನಲ್ಲಿರುವ ಕಾಂಗ್ರೆಸ್ ಒಕ್ಕೂಟದ ದೋಸ್ತಿ ಸರಕಾರಕ್ಕಾಗಿ ಕಾವೇರಿ ನೀರು ಹರಿಬಿಟ್ಟಿತು. ವಿದ್ಯುತ್ ಸಮಸ್ಯೆಯಂತ ಹೇಳತೀರದಾಗಿದೆ. ವಿದ್ಯುತ್ ಸಮಸ್ಯೆಯಿಂದ ರೈತ ಸಂಕುಲ, ಕೈಗಾರಿಕೆ, ಉದ್ಯಮಗಳು ನಲುಗಿ ಹೋಗಿವೆ ಎಂದು ಹರಿಹಾಯ್ದರು. ಕಾಂಗ್ರೆಸ್ ಕೇಂದ್ರದ ಎನ್‌ಡಿಆರ್‌ಎಫ್ ಅನುದಾನ ನೀಡಿಲ್ಲ ಎಂದು ಆರೋಪಿಸುತ್ತಿದೆ. ಶೀಘ್ರವೇ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆ ಮಾಡಿಸಲಾಗುವುದು. ರಾಜ್ಯ ಸರಕಾರ ಬರಕ್ಕಾಗಿ ರಾಜ್ಯದ 31 ಜಿಲ್ಲೆಗೆ 302 ಕೋಟಿ ಮೀಸಲಿಟ್ಟಿದೆ. ಎನ್‌ಡಿಆರ್‌ಎಫ್ ಅನುದಾನ ಬರುವ ತನಕ ಬೇರೆಡೆಯಿಂದ ಬರಕ್ಕಾಗಿ 1 ಸಾವಿರ ಕೋಟಿ ಹಣವನ್ನು ಎತ್ತಿಟ್ಟು ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಎನ್‌ಡಿಆರ್‌ಎಫ್ ಅನುದಾನ ಬಂದ ಬಳಿಕ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಎದುರಾಗಿರುವ ಬರದ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡುವ ಆಲೋಚನೆ ಇಲ್ಲದೆ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ.…
ಬೆಂಗಳೂರು: ಟೀಂ ಇಂಡಿಯಾದ ನಾಯಕ, ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Crciket) ವಿಶೇಷ ಸಾಧನೆ ಮಾಡಿದ್ದಾರೆ. ಈ ವಿಶ್ವಕಪ್‌ನ ಪವರ್ ಪ್ಲೇನಲ್ಲಿ (Power Play) 250ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರನಾಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ. ಈ ಟೂರ್ನಿಯಲ್ಲಿ 2 ಅರ್ಧಶತಕ, ಒಂದು ಶತಕವನ್ನು ಹಿಟ್‌ಮ್ಯಾನ್ ಸಿಡಿಸಿದ್ದಾರೆ. ರೋಹಿತ್ ಬ್ಯಾಟಿನಿಂದ ಇಲ್ಲಿಯವರೆಗೆ 22 ಸಿಕ್ಸ್, 50 ಬೌಂಡರಿ ಸಿಡಿಯಲ್ಪಟ್ಟಿದೆ. ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪೈಕಿ ರೋಹಿತ್ ಶರ್ಮಾ 5ನೇ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಒಟ್ಟು 8 ಪಂದ್ಯಗಳಿಂದ 442 ರನ್ ಹೊಡೆದಿದ್ದಾರೆ. ನ್ಯೂಜಿಲೆಂಡ್‌ನ ರಚಿನ್ ರವೀಂದ್ರ (Rachin Ravindra) 565 ರನ್ ಹೊಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 550 ರನ್ ಹೊಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.