ಕನ್ನಡ ಡಿಜಿಟಲ್ ಕ್ಷೇತ್ರದಲ್ಲಿ ಸಕ್ಕತ್ ಸ್ಟುಡಿಯೋ ಟ್ರೆಂಡ್ಸೆಟ್ಟರ್ ಆಗಿರುವುದು ಸುಳ್ಳಲ್ಲಾ.. ಸುನೀಲ್ ರಾವ್, ಅನುಪಮಾ ಗೌಡ, ಸಿಂಧು ಲೋಕನಾಥ್ ಮುಂತಾದವರು ನಟಿಸಿರುವ “ಲೂಸ್ ಕನೆಕ್ಷನ್” ನಮ್ಮ ಕನ್ನಡದ ಮೊದಲ ವೆಬ್ ಸರಣಿಯ ನಿರ್ಮಿಸಿದ್ದು ಇದೇ ಸಂಸ್ಥೆ. ಸ್ಟಾರ್ ದಂಪತಿಗಳಾದ ಆರ್. ಜೆ. ಪ್ರದೀಪ್ ಮತ್ತು ಶ್ವೇತಾ ಆರ್ ಪ್ರಸಾದ್ ಅವರ ನೇತೃತ್ವದಲ್ಲಿ ಶುರುವಾದ ಸಕ್ಕತ್ ಸ್ಟುಡಿಯೋ ವೈವಿಧ್ಯಮಯ ವೆಬ್ ಸರಣಿಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತಲೇ ಇತ್ತು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರ ಸಹಯೋಗದೊಂದಿಗೆ ಸಕ್ಕತ್ ಸ್ಟುಡಿಯೋ, ನಾಗಭೂಷಣ ಮತ್ತು ಸಂಜನಾ ಆನಂದ್ ಅಭಿನಯದ “ಹನಿಮೂನ್”, ಪೂರ್ಣ ಮೈಸೂರು ಮತ್ತು ಸಿರಿ ರವಿಕುಮಾರ್ ಅಭಿನಯದ “ಬೈ ಮಿಸ್ಟೇಕ್” ಮತ್ತು ಅರವಿಂದ್ ಅಯ್ಯರ್ ಮತ್ತು ದಿಶಾ ಮದನ್ ಅಭಿನಯದ “ಹೇಟ್ ಯು ರೋಮಿಯೋ” ಹೀಗೆ ಉನ್ನತ ಮಟ್ಟದ ಸರಣಿಗಳು ನಿರ್ಮಾಣವಾಗಿ ವೂಟ್ ( Voot), ಆಹಾ (Aha ), ಮುಂತಾದ ಒಟಿಟಿ ಪ್ಲಾಟ್‌ಫಾರಂ ಗಳಲ್ಲಿ ನೋಡುಗರ ಗಮನ…
Author: AIN Author
ಬೆಂಗಳೂರು: ಚಿತ್ರನಟ ದರ್ಶನ್ ಅವರ ಮನೆಯ ಸಾಕು ನಾಯಿಗಳು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು ದರ್ಶನ್ ಸೇರಿ ಇಬ್ಬರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ಎಫ್‌ಐಆರ್ ದಾಖಲಾಗಿದೆ. ಆರ್.ಆರ್.ನಗರದ ಬಿಇಎಂಎಲ್ 5ನೇ ಹಂತದ ನಿವಾಸಿ, ವಕೀಲೆ ಅಮಿತಾ ಜಿಂದಾಲ್ ಎಂಬುವರು ದೂರು ನೀಡಿದ್ದಾರೆ. ಅ.28ರಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು. https://ainlivenews.com/preparation-of-rr-nagar-police-to-issue-notice-to-actor-darshan/ ಸ್ಪರ್ಶ ಆಸ್ಪತ್ರೆಗೆ ಕಾರ್ಯಕ್ರಮವೊಂದಕ್ಕೆ 28ರಂದು ತೆರಳಿದ್ದೆ. ಕಾರನ್ನು ದರ್ಶನ್ ಮನೆ ಪಕ್ಕದಲ್ಲಿದ್ದ ಖಾಲಿ ಪ್ರದೇಶದ ಎದುರಿನ ರಸ್ತೆಯಲ್ಲಿ ನಿಲುಗಡೆ ಮಾಡಿದ್ದೆ. ಕಾರ್ಯಕ್ರಮ ಮುಗಿಸಿ ವಾಪಸ್ ಬಂದಾಗ ನಾಯಿಗಳು ದಾಳಿ ನಡೆಸಿದವುದು ತಿಳಿಸಿದ್ದಾರೆ. ಎರಡು ನಾಯಿಗಳನ್ನು ಕಟ್ಟಿದ್ದು, ಒಂದನ್ನು ಹಾಗೆಯೇ ಬಿಡಲಾಗಿತ್ತು. ಕಾರು ತೆಗೆದುಕೊಳ್ಳಬೇಕಿದ್ದು, ನಾಯಿಗಳನ್ನು ಬೇರೆಯಡೆ ಒಯ್ಯಲು ಕಾವಲುಗಾರನಲ್ಲಿ ಮನವಿ ಮಾಡಿದೆ. ಆದರೆ, ಆತ ಕಾರು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆಸಿದ.ಈ ಸಂದರ್ಭದಲ್ಲಿ ನಾಯಿಗಳು ದಾಳಿ ನಡೆಸಿದವು ಹೊಟ್ಟೆ ಭಾಗಕ್ಕೆ ಗಾಯವಾಗಿದೆ. ಬಟ್ಟೆ ಹರಿದುಹಾಕಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಾಯಿಗಳು ಕಚ್ಚುತ್ತವೆ ಎಂದು ಎಚ್ಚರಿಕೆ ವಹಿಸಿರಲಿಲ್ಲ.…
ಉಡುಪಿ: 15 ವರ್ಷಗಳ ಹಿಂದೆ ನಡೆದ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ (Raghupathi Bhat) ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ 1 ವರ್ಷ ಜೈಲುಶಿಕ್ಷೆ ವಿಧಿಸಿ ಉಡುಪಿ ಸಿಜೆಎಂ ಜಿಲ್ಲಾ ನ್ಯಾಯಾಲಯ (Udupi CJM Court) ಶುಕ್ರವಾರ ಆದೇಶಿಸಿದೆ. ಜೂನ್ 10, 2008 ರಂದು ಉಡುಪಿಯಲ್ಲಿ (Udupi) ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತುಲ್ ರಾವ್‌ಗೆ 1 ವರ್ಷ ಜೈಲು (Jail) ಶಿಕ್ಷೆಯೊಂದಿಗೆ ದಂಡ ವಿಧಿಸಿದೆ. 15 ವರ್ಷಗಳ ಹಿಂದೆ ನಡೆದಿದ್ದಾದ್ರೂ ಏನು? 2008ರ ಜೂ.10ರಂದು ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಅತುಲ್ ರಾವ್, ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲಿ ಕರೆದು ಕೊಂಡು ಹೋಗಿ ಕುಂಜಾರುಗಿರಿಯ ದಾರಿ ಮಧ್ಯೆ ಕಾರನ್ನು ಇಟ್ಟು, ಅದರ ಒಳಗೆ ಬಳೆಯ ಚೂರು, ರಕ್ತದ…
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ (Deep Fake Video) ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಸ್ವತಃ ಕೇಂದ್ರ ಸರಕಾರವೇ ಈ ಕುರಿತು ಪ್ರತಿಕ್ರಿಯಿಸಿತ್ತು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಆಕ್ರೋಶ ಹೊರ ಹಾಕಿದ್ದರು. ಇದೀಗ ಕನ್ನಡದ ನಟಿಯರಾದ ಚೈತ್ರಾ ಆಚಾರ್ (Chaitra Achar) ಮತ್ತು ರುಕ್ಮಿಣಿ (Rukmini) ಕೂಡ ಈ ಕುರಿತು ಮಾತನಾಡಿದ್ದಾರೆ. ಈ ನಡೆ ಅಪಾಯಕಾರಿಯಾದದ್ದು ಎಂದಿದ್ದಾರೆ. ಇಂತಹ ದುಷ್ಟ ನಡೆಯನ್ನು ಮುಲಾಜಿಲ್ಲದೇ ಎಲ್ಲರೂ ಖಂಡಿಸಬೇಕು. ಮೊದಲು ಇಂತಹ ಆಪ್ ಗಳನ್ನು ನಟಿಯರೇ ಬ್ಯಾನ್ ಮಾಡಬೇಕು. ಎಲ್ಲ ರೀತಿಯಲ್ಲೂ ಇದನ್ನು ನಾವು ವಿರೋಧಿಸಬೇಕು. ಸೆಲೆಬ್ರಿಟಿಗಳಿಗೆ ಹೀಗೆ ಆದರೆ, ಸಾಮಾನ್ಯ ಇನ್ನೆಷ್ಟು ಕಷ್ಟ ಪಡಲ್ಲ ಎಂದು ನಟಿಯರು ಮಾತನಾಡಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ ವಿಡಿಯೋ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಪರ ಬಿಗ್ ಬಿ, ನಾಗಚೈತನ್ಯ, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರು ಧ್ವನಿಯೆತ್ತಿದ್ದಾರೆ. ಈ ಬೆನ್ನಲ್ಲೇ, ಗೆಳತಿ ರಶ್ಮಿಕಾ…
ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ (Teaser) ಇದೇ ನವೆಂಬರ್ 12ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಖ್ಯಾತ ನಟ ದರ್ಶನ್ (Darshan) ಮತ್ತು ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha) ಅವರು ಟೀಸರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದು ಸೂರಿ ಸಿನಿಮಾವಾಗಿದ್ದರಿಂದ ಟೀಸರ್ ಬಗ್ಗೆ ಕುತೂಹಲ ಮೂಡಿದೆ. ಭಾವ ತುಂಬಿದ ಹಾಡುಗಳ ಮೂಲಕ ಫೇಮಸ್ ಆಗಿದ್ದ ಜಯಂತ್ ಕಾಯ್ಕಿಣಿ, ಇದೀಗ ಅಭಿಷೇಕ್ ಅಂಬರೀಶ್ (Abhishek Ambarish) ನಟನೆಯ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾಗಾಗಿ ಮಾಸ್ ಗೀತೆಯೊಂದನ್ನು ಬರೆದಿದ್ದಾರೆ. ‘ಓಗ.. ಓಗ..’ ಎಂದು ಶುರುವಾಗುವ ಗೀತೆಯಲ್ಲಿ ಕೇಳದೇ ಇರುವಂಥ ಹಲವು ಪದಗಳನ್ನು ಬಳಸಲಾಗಿದೆ. ಅವೆಲ್ಲವೂ ಗ್ರಿಬಿಶ್ ಪದಗಳಾಗಿವೆಯಂತೆ. ಹೀಗಾಗಿ ಹಾಡು ಹೊಸ ರೀತಿಯಲ್ಲೇ ಕೇಳಿಸುತ್ತದೆ. ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡಿಗೆ ಜಯಂತ್ ಕಾಯ್ಕಿಣಿ (Jayant Kaykini) ಸಾಹಿತ್ಯ ಬರೆದಿದ್ದರೆ, ಕಪಿಲ್ ಕಪಿಲನ್ ಹಾಡಿದ್ದಾರೆ. ಅಭಿಷೇಕ್ ಅಂಬರೀಶ್ ಸಖತ್ತಾಗಿಯೇ ಗೀತೆಗೆ ಸ್ಟೆಪ್ ಹಾಕಿದ್ದಾರೆ.…
ನಾ ಕೋಳಿಕ್ಕೆ ರಂಗ.. ದೀಪಾವಳಿ ಸಂಭ್ರಮ ಹೆಚ್ಚಿಸಲು ಇಂದು ತೆರೆಕಂಡ ಮತ್ತೊಂದು ಕನ್ನಡದ ಸಿನಿಮಾ. ಮೆಜೆಸ್ಟಿಕ್ನಲ್ಲಿ ಅನ್ನದಾತರಾಗಿ ಗುರುತಿಸಿಕೊಂಡಿರುವ ಸೋಮಶೇಖರ್, ಒಂದೊಂದು ರೂಪಾಯಿಯನ ಕೂಡಿಟ್ಟು ಮಾಡಿರುವ ಚಿತ್ರ. ಮಾಸ್ಟರ್ ಆನಂದ್ ಹಾಗೂ ಅಭಿನೇತ್ರಿ ಭವ್ಯ ನಟನೆಯ ಈ ಸಿನಿಮಾ ಹೇಗಿದೆ? ಪ್ರೇಕ್ಷಕರು ಏನಂದ್ರು? ಎಷ್ಟು ಸ್ಟಾರ್ ರೇಟಿಂಗ್? ಇಲ್ಲಿದೆ ನೋಡಿ ಫುಲ್ ಡೀಟೈಲ್ಸ್. ನಾ ಕೋಳಿಕ್ಕೆ ರಂಗ.. ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡು, ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಹೊಸ ಪ್ರತಿಭೆಗಳೇ ಕೂಡಿ ಮಾಡಿರುವ ಸಿನಿಮಾ. ಗೊರವಾಲೆ ಮಹೇಶ್ ನಿರ್ದೇಶನದಲ್ಲಿ ಮಾಸ್ಟರ್ ಆನಂದ್ನ ಟನಾಗಿ ಬಣ್ಣ ಹಚ್ಚಿದ್ದು, ತಾಯಿ ಪಾತ್ರದಲ್ಲಿ ಹಿರಿಯ ನಟಿ ಭವ್ಯ ಮಿಂಚಿದ್ದಾರೆ. ಅಲ್ಲದೆ, ಹೊನ್ನವಳ್ಳಿ ಕೃಷ್ಣ, ಶೋಭರಾಜ್, ಬಿರಾದಾರ್, ರಾಕ್ಲೈನ್ ಸುಧಾಕರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಲ್ಲಿನಕೋಟೆ ಚಿತ್ರದುರ್ಗದಿಂದ ಬಂದು ಮೆಜೆಸ್ಟಿಕ್ನಲ್ಲಿ ನಾಲ್ಕೈದು ಮೊಬೈಲ್ ಕ್ಯಾಂಟೀನ್ಗಳನ್ನ ನಡೆಸುತ್ತಿರುವ ಎಸ್.ಟಿ. ಸೋಮಶೇಖರ್, ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಅಂದಹಾಗೆ ಇವರ ಮಗಳು ರಾಜೇಶ್ವರಿಯೇ ಈ ಚಿತ್ರದ ಕಥಾನಾಯಕಿ. ಈಕೆ ಈ ಚಿತ್ರದಿಂದ…
ಸ್ಯಾಂಡಲ್‌ವುಡ್ (Sandalwood) ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ಇಂದು ತಮ್ಮ ಹುಟ್ಟು ಹಬ್ಬವನ್ನು (Birthday) ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದ ದಿನದಂದು ಅವರ ನಟನೆಯ ಭೈರಾದೇವಿ ಮತ್ತು ಅಜಾಗ್ರತ ಚಿತ್ರಗಳ ಪೋಸ್ಟರ್ ರಿಲೀಸ್ ಆಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಬರ್ತ್‌ಡೇ ಆಚರಣೆಯಿಂದ ದೂರವಿದ್ದ ಸ್ವೀಟಿ, ಈ ಬಾರಿ ಫ್ಯಾನ್ಸ್‌ಗೆ ಭೇಟಿಯಾಗಲು ಸಮಯ ಮೀಸಲಿಟ್ಟಿದ್ದಾರೆ. ಅಭಿಮಾನಿಗಳ ಜೊತೆಯೇ ಇಂದು ತಮ್ಮ ಹುಟ್ಟುಹಬ್ಬವನ್ನು (Birthday) ಫ್ಯಾನ್ಸ್ ಜೊತೆ ನಟಿ ಆಚರಿಸಿಕೊಳ್ಳಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ನಟಿ ಫ್ಯಾನ್ಸ್‌ಗೆ ಆಹ್ವಾನ ನೀಡಿದ್ದರು. ನಮಸ್ಕಾರ, ಹಲವು ವರ್ಷಗಳಿಂದ ಅಭಿಮಾನಿಗಳನ್ನ ಭೇಟಿ ಮಾಡೋಕೆ ಆಗಿರಲಿಲ್ಲ. ನ.11ರಂದು ಶನಿವಾರ ನನ್ನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ. ಅಂದು ನಿಮಗೆ ಸಿಗುತ್ತೇನೆ ಎಂದಿದ್ದರು ರಾಧಿಕಾ ಕುಮಾರಸ್ವಾಮಿ. ಇದೇ ಮೊದಲ ಬಾರಿಗೆ ಅವರು ತಮ್ಮ ಮನೆಯ ವಿಳಾಸ ಕೂಡ ನೀಡಿದ್ದರು. 10/11 ಎರಡನೇ ಮುಖ್ಯ ರಸ್ತೆ, ಎರಡನೇ ಕ್ರಾಸ್ ಆರ್‌ಎಂವಿ ಎರಡನೇ ಸ್ಟೇಜ್, ಮೂರನೇ ಬ್ಲಾಕ್ ನ್ಯೂ…
ಹೈದರಾಬಾದ್: ಪಂಚರಾಜ್ಯ ಚುನಾವಣೆಯಲ್ಲಿ ಗ್ಯಾರಂಟಿಗಳು ಸಖತ್ ಸದ್ದು ಮಾಡ್ತಿವೆ. ತೆಲಂಗಾಣದಲ್ಲಿ (Telangana) ಅಧಿಕಾರದ ಫಸಲು ತೆಗೆಯಲು ಕರ್ನಾಟಕ ಮಾದರಿಯಲ್ಲೇ ಇಲ್ಲೂ ಕೂಡ ಕಾಂಗ್ರೆಸ್ ಪಕ್ಷ (Congress Guarantee) ಗ್ಯಾರಂಟಿಗಳನ್ನು ನಂಬಿಕೊಂಡಿದೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. https://ainlivenews.com/great-job-opportunity-in-hindustan-aeronautics-limited-posting-in-bangalore/ ಕಾಮಾರೆಡ್ಡಿ ಕ್ಷೇತ್ರದಲ್ಲಿ ರೇವಂತ್ ರೆಡ್ಡಿ (Revanth Reddy) ಪರ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದ್ರು. ಸಿಎಂ ಕೆಸಿಆರ್ ವಿರುದ್ಧ ರೇವಂತ್ ಗೆಲ್ಲೋದು ಫಿಕ್ಸ್ ಅಂದ್ರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತೆ ಎಂಬ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ರು. ಕೆಸಿಆರ್ ಕರ್ನಾಟಕಕ್ಕೆ ಬಂದು ಗ್ಯಾರಂಟಿಗಳ ಜಾರಿಯನ್ನು ನೋಡಲಿ ಎಂದು ಸವಾಲ್ ಹಾಕಿದ್ರು. ಕಾಂಗ್ರೆಸ್‍ನಲ್ಲಿ ಆರು ಗ್ಯಾರಂಟಿ..! * ಗ್ಯಾರಂಟಿ 1 – ಪ್ರತಿ ತಿಂಗಳು ಅತ್ತೆಗೆ 4,000 ರೂ. – ಸೊಸೆಗೆ 2,500 ರೂ. * ಗ್ಯಾರಂಟಿ 2 – ಪ್ರತಿ ಹೆಣ್ಣುಮಗುವಿನ ಖಾತೆಗೆ ಪ್ರತಿ ತಿಂಗಳು 2,500 ರೂ. (ಮಹಾಲಕ್ಷ್ಮಿ ಯೋಜನೆ) * ಗ್ಯಾರಂಟಿ 3 –…
ಬೆಂಗಳೂರು: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ಸಿಗುತ್ತೆ ಅಂತ ನಾವ್ಯಾರು ನಿರೀಕ್ಷೆ ಇಟ್ಟಿರಲಿಲ್ಲ ದೆಹಲಿಗೆ ಹೋಗಿ ರಾಜ್ಯಾಧ್ಯಕ್ಷ ಹುದ್ದೆ ಕೊಡಿ ಅಂತಾನೂ ಕೇಳಿರಲಿಲ್ಲ 25 ಲೋಕಸಭಾ ಕ್ಷೇತ್ರ ಗೆಲ್ಲಬೇಕು ಅನ್ನೋದು ಸುಲಭದ ಮಾತಲ್ಲ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಗುರಿ ಇಟ್ಟಿದ್ದೇವೆ. ಮೋದಿ ಮತ್ತೆ ಪ್ರಧಾನಿಯಾಗಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಎಸ್ವೈ, ನಾನು ಯಾರ ಬಳಿಯೂ ಮನವಿ ಮಾಡಿಲ್ಲ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡುವಂತೆ ಮನವಿ ಮಾಡಿಲ್ಲ. ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ಬೆಂಗಳೂರು: ರೌಡಿಶೀಟರ್ ಸಹದೇವ್ ಹತ್ಯೆ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಪೊಲೀಸರಿಂದ 8 ಆರೋಪಿಗಳನ್ನ ಬಂಧಿಸಲಾಗಿದೆ. ವಿನಯ್, ಧರ್ಮ ಸೇರಿ ಎಂಟು ಮಂದಿ ಬಂಧಿತ ಆರೋಪಿಗಳು https://ainlivenews.com/only-green-firecrackers-allowed-what-are-the-mandatory-rules-for-bursting-firecrackers/ ಗಣೇಶ ಹಬ್ಬದಿಂದಲೂ ಗಲಾಟೆ ಮಾಡಿಕೊಳ್ಳುತ್ತಿದ್ದ ಗ್ಯಾಂಗ್ ಗಣೇಶ ಬಿಡುವ ವಿಚಾರಕ್ಕೆ ಸಹದೇಹ ಮತ್ತು ವಿನಯ್ ನಡುವೆ ಗಲಾಟೆ.. ಈ ವೇಳೆ ಆರೋಪಿ ವಿನಯ್ ಮೇಲೆ ಹಲ್ಲೆ ಮಾಡಿದ್ದ ಸಹದೇವ. ನಂತರ ಆರೋಪಿ ವಿನಯ್ ತಮ್ಮನ ಮೇಲೂ ಹಲ್ಲೆ ಮಾಡಿದ್ದ ಸಹದೇವ.. ನಂತರ ನವೆಂಬರ್ 8 ರಂದು ಟೀ ಕುಡಿಯಲು ಬಂದಿದ್ದ ಸಹದೇವ.. ಈ ವೇಳೆ ಅಲ್ಲಿಯೇ ಇದ್ದ ವಿನಯ್ ಗ್ಯಾಂಗ್.ಕ್ಷುಲ್ಲಕ ವಿಚಾರಕ್ಕೆ ವಿನಯ್ ಸಹದೇವ ನಡುವೆ ಕಿರಿಕ್. ಯಾಕೆ ಅವತ್ತು ಕೊಟ್ಟಿದ್ದು ಸಾಕಾಗಿಲ್ವಾ ಎಂದಿದ್ದ ಸಹದೇವ.. ಈ ವೇಳೆ ಮಾರಕಾಸ್ತ್ರಗಳಿಂದ ಸಹದೇವ ಮೇಲೆ ಅಟ್ಯಾಕ್ ಮಾಡಿದ ವಿನಯ್ ಗ್ಯಾಂಗ್.. ವಿನಯ್, ಧರ್ಮನಿಂದ ಸಹದೇವನ ಮೇಲೆ ಅಟ್ಯಾಕ್.. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ ಸಹದೇವ.. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಪುಟ್ಟೇನಹಳ್ಳಿ ಪೊಲೀಸರು..