ನಾ ಕೋಳಿಕ್ಕೆ ರಂಗ.. ದೀಪಾವಳಿ ಸಂಭ್ರಮ ಹೆಚ್ಚಿಸಲು ಇಂದು ತೆರೆಕಂಡ ಮತ್ತೊಂದು ಕನ್ನಡದ ಸಿನಿಮಾ. ಮೆಜೆಸ್ಟಿಕ್ನಲ್ಲಿ ಅನ್ನದಾತರಾಗಿ ಗುರುತಿಸಿಕೊಂಡಿರುವ ಸೋಮಶೇಖರ್, ಒಂದೊಂದು ರೂಪಾಯಿಯನ ಕೂಡಿಟ್ಟು ಮಾಡಿರುವ ಚಿತ್ರ. ಮಾಸ್ಟರ್ ಆನಂದ್ ಹಾಗೂ ಅಭಿನೇತ್ರಿ ಭವ್ಯ ನಟನೆಯ ಈ ಸಿನಿಮಾ ಹೇಗಿದೆ? ಪ್ರೇಕ್ಷಕರು ಏನಂದ್ರು? ಎಷ್ಟು ಸ್ಟಾರ್ ರೇಟಿಂಗ್? ಇಲ್ಲಿದೆ ನೋಡಿ ಫುಲ್ ಡೀಟೈಲ್ಸ್.
ನಾ ಕೋಳಿಕ್ಕೆ ರಂಗ.. ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡು, ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಹೊಸ ಪ್ರತಿಭೆಗಳೇ ಕೂಡಿ ಮಾಡಿರುವ ಸಿನಿಮಾ. ಗೊರವಾಲೆ ಮಹೇಶ್ ನಿರ್ದೇಶನದಲ್ಲಿ ಮಾಸ್ಟರ್ ಆನಂದ್ನ ಟನಾಗಿ ಬಣ್ಣ ಹಚ್ಚಿದ್ದು, ತಾಯಿ ಪಾತ್ರದಲ್ಲಿ ಹಿರಿಯ ನಟಿ ಭವ್ಯ ಮಿಂಚಿದ್ದಾರೆ. ಅಲ್ಲದೆ, ಹೊನ್ನವಳ್ಳಿ ಕೃಷ್ಣ, ಶೋಭರಾಜ್, ಬಿರಾದಾರ್, ರಾಕ್ಲೈನ್ ಸುಧಾಕರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಕಲ್ಲಿನಕೋಟೆ ಚಿತ್ರದುರ್ಗದಿಂದ ಬಂದು ಮೆಜೆಸ್ಟಿಕ್ನಲ್ಲಿ ನಾಲ್ಕೈದು ಮೊಬೈಲ್ ಕ್ಯಾಂಟೀನ್ಗಳನ್ನ ನಡೆಸುತ್ತಿರುವ ಎಸ್.ಟಿ. ಸೋಮಶೇಖರ್, ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಅಂದಹಾಗೆ ಇವರ ಮಗಳು ರಾಜೇಶ್ವರಿಯೇ ಈ ಚಿತ್ರದ ಕಥಾನಾಯಕಿ. ಈಕೆ ಈ ಚಿತ್ರದಿಂದ ಭರವಸೆಯ ನಟಿ ಅನಿಸಿಕೊಂಡಿದ್ದಾರೆ.