ಬಳ್ಳಾರಿ: ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಡ್ರಿಲ್ ಹೊಡೆದು ಮೊಳೆ ಹೊಡೆದ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆ ವಿರುದ್ಧ ಪುರಾತತ್ವ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಯುನೆಸ್ಕೋ ವಿಶ್ವ ಪರಂಪರೆಯ ಐತಿಹಾಸಿಕ ತಾಣ, 7ನೇ ಶತಮಾನದ ಶಿವನ ದೇವಾಲಯವಾಗಿರುವ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ವಿರೂಪಾಕ್ಷ ದೇವಾಲಯದ ಕಂಬಕ್ಕೆ ಧಾರ್ಮಿಕ ದತ್ತಿ ಇಲಾಖೆ ಮೊಳೆ ಹೊಡೆದಿದೆ. ಈ ಸಂಬಂಧ ಪುರಾತತ್ವ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು ಸ್ಮಾರಕಗಳಿಗೆ ಧಕ್ಕೆ ಆಗಿದೆ ಎಂದು ನೋಟಿಸ್ ಜಾರಿ ಮಾಡಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ವಿರೂಪಾಕ್ಷೇಶ್ವರ ದೇಗುಲದ ಉತ್ತರ ದಿಕ್ಕಿನಲ್ಲಿ ಗೇಟ್ ಕೂರಿಸಲು ಧಾರ್ಮಿಕ ದತ್ತಿ ಇಲಾಖೆ ಮೊಳೆ ಹೊಡೆದಿದೆ. ದೇಗುಲಕ್ಕೆ ಭಕ್ತರು ದಕ್ಷಿಣ ಧ್ರುವದಿಂದ ಬಂದು ದರ್ಶನದ ಬಳಿಕ ಉತ್ತರ ಧ್ರುವದಿಂದ ಹೊರ ಹೋಗುತ್ತಾರೆ. ಭಕ್ತರು ಸರತಿ ಸಾಲಿನಲ್ಲಿ ಹೋಗಲು ತಂತಿ ಬೇಲಿ ನಿರ್ಮಿಸಲು ಮೊಳೆ ಹೊಡೆಯಲಾಗಿದೆ. ಆದರೆ ಮೊಳೆ ಹೊಡೆಯುವ ವೇಳೆ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಅನುಮತಿ ಪಡೆಯದೇ ಮೊಳೆ ಹೊಡೆದಿದ್ದಕ್ಕೆ ಪುರಾತತ್ವ ಇಲಾಖೆ ಗರಂ ಆಗಿದೆ.…
Author: AIN Author
ದೀಪಾವಳಿ ಹಬ್ಬದ (Deepavali Festival) ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ದೀಪ ಬೆಳಗುವ ಮೂಲಕ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ದೀಪಾವಳಿ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಹೀಗಿರುವಾಗ ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ ಎಂದು ವಿಶೇಷವಾಗಿ ರಾಧಿಕಾ ಪಂಡಿತ್ (Radhika Pandit) ವಿಶ್ ಮಾಡಿದ್ದಾರೆ. ರಾಧಿಕಾ ಯಶ್ (Radhika Yash) ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ ರಾಧಿಕಾ ಪಂಡಿತ್ ದೀಪಾವಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು, ನಿಮ್ಮ ಬಾಳಿನಲ್ಲಿ ಕತ್ತಲೇ ಕಳೆದು ಬೆಳಕು ಮೂಡಲಿ ಎಂದು ಪ್ರೀತಿಯಿಂದ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಶುಭಕೋರಿದ್ದಾರೆ. ಇನ್ನೂ ಚಂದವನದ ಸಿಂಡ್ರೆಲ್ಲಾ ರಾಧಿಕಾ, ಮತ್ತೆ ನಟನೆಗೆ ಮರಳಲಿ ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಯಶ್ 19 (Yash 19) ಬಗ್ಗೆ ಅದೆಷ್ಟು ಫ್ಯಾನ್ಸ್‌ಗೆ ಕುತೂಹಲ ಇದ್ಯೋ, ಹಾಗೆಯೇ ರಾಧಿಕಾ ಮುಂದಿನ ಸಿನಿಮಾ (Films) ಬಗ್ಗೆ ಅಪ್‌ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.…
ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಾಗಿ (Grammy Award) ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿಯೂ ಭಾರತದಿಂದ ಕೆಲ ವಿಡಿಯೋಗಳು ಪ್ರಶಸ್ತಿಗಾಗಿ ಕಳುಹಿಸಲಾಗಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೊದಿ (Narendra Modi) ಅವರು ಕಾಣಿಸಿಕೊಂಡಿದ್ದ ಸಿರಿಧಾನ್ಯಗಳ ಮೇಲಿನ ಹಾಡನ್ನು ಗ್ರ್ಯಾಮಿ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದೆ. ಪೌಷ್ಠಿಕ ಆಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳನ್ನು ಈ ಹಾಡಿನಲ್ಲಿ ಬಿಂಬಿಸಲಾಗಿತ್ತು. ಅಬಂಡನ್ಸ್ ಆಫ್ ಮಿಲೆಟ್ಸ್ಹೆ (Abundance of Millets) ಸರಿನಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿತ್ತು. ಈಗಾಗಲೇ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದಿರುವ ಗಾಯಕ ಫಾಲು ಮತ್ತು ಅವರ ಪತಿ ಗೌರವ್ ಶಾ ಈ ಹಾಡಿಗೆ ದನಿಯಾಗಿದ್ದರು ಈ ಹಾಡಿನ ವಿಶೇಷ ಅಂದರೆ, ಮೋದಿ ಅವರು ಕೂಡ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಗಾಯಕಿ ಫಲ್ಗುಣಿ ಕಳೆದ ವರ್ಷ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ಈ ಹಾಡಿನ ಪರಿಕಲ್ಪನೆ ಮೂಡಿ ಬಂದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಕಥೆ ಗೌರಿಶಂಕರ. ಕರ್ನಾಟಕದ ಸುಂದರ ತಾಣ ಹಾಸನಾಂಬೆಯ ತವರೂರಾದ ಹಾಸನದಲ್ಲಿ ಈ ಕತೆಯು ಕೇಂದ್ರೀಕೃತವಾಗಿರುತ್ತದೆ. ಈ ಧಾರಾವಾಹಿಯ ನಾಯಕಿ ‘ಗೌರಿ’ ಸಮಾಜದಲ್ಲಿ ಘನತೆ ಗೌರವವನ್ನು ಹೊಂದಿರುವ ಪರಿವಾರದಲ್ಲಿ ಬೆಳೆದಿರುವ ಈಕೆ ಯಾರನ್ನೂ ನೋಯಿಸದ ಮುಗ್ದ ಮನಸ್ಸಿನ ಕಣ್ಮಣಿ. ಆದರೆ ಸಮಯ ಬಂದರೆ ತನ್ನ ನಿಲುವನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಧೈರ್ಯವಂತೆ ಕೂಡ. ಜೊತೆಗೆ ತಂದೆಯಂತೆ ತಾನು ಪ್ರೊಫೆಸರ್ ಆಗಬೇಕೆಂಬ ಕನಸನ್ನು ಹೊತ್ತಿರೋಳು. ಇನ್ನು ಕಥಾ ನಾಯಕ ‘ಶಂಕರ’ ಅಲಿಯಾಸ್ ಜೋಗಿ, ಹೆಣ್ಣು ಮಕ್ಳು ಅಂದ್ರೆ ನಾಲ್ಕುಗೋಡೆ ಮಧ್ಯೆ ಇರ್ಬೇಕು ಅಂತ ನಂಬಿರೋ ಮನೆತನದಲ್ಲಿ ಬೆಳೆದವ. ಈತ ನೋಡೋಕೆ ರಫ್ ಆದ್ರೆ ಮಗುವಿನಂತ ಮನಸ್ಸು. ತನಗನಿಸಿದ್ದನ್ನು ಮಾಡಲೇಬೇಕು ಅನ್ನೋ ಹಠವಾದಿ. ಒಂದು ಕಡೆ ಶಾಂತಿ, ಸಹನೆ, ತಾಳ್ಮೆಯಿಂದ ಕೂಡಿದ ಗೌರಿ ಪರಿವಾರ.…
ಬೆಂಗಳೂರು: ಪಟಾಕಿ ಮಾರಾಟದ ವಿಚಾರವಾಗಿ ಕೋರ್ಟ್ಗೆ ಮೊರೆ ಹೋಗಿದ್ದ ಪಟಾಕಿ ಮಾಲೀಕರಿಗೆ ಇದೆ ತಿಂಗಳ 17ನೇ ತಾರೀಖಿನವರೆಗೂ ಪಟಾಕಿ ಮಾರಾಟಕ್ಕೆ ಕರ್ನಾಟಕದ ಹೈಕೋರ್ಟ್ ಅನುಮತಿ ನೀಡಿದೆ ಹೀಗಾಗಿ ಇಂದು ಅತ್ತಿಬೆಲೆಯಿಂದ ಚಂದಾಪುರದವರೆಗೆ ಪಟಾಕಿ ಅಂಗಡಿಗಳು ತಲೆಹತ್ತಿದೆ.. ಇನ್ನು ಹೈಕೋರ್ಟ್ 21 ಜನ ಪಟಾಕಿ ಮಾರಾಟಗಾರರು ಮಾರಾಟದ ವಿಚಾರವಾಗಿ ಕೋರ್ಟ್ಗೆ ಮೊರೆ ಹೋಗಿದ್ದರು.. ಹೀಗಾಗಿ ನೆನ್ನೆ ರಾತ್ರಿ ಹೈಕೋರ್ಟ್ ಪಟಾಕಿ ಮಳಿಗೆಗಳಿಗೆ ಅನುಮತಿಯನ್ನು ನೀಡಿದೆ. ಇನ್ನು ಪಟಾಕಿ ಅಂಗಡಿ ಮಾರಾಟಕ್ಕೆ ಅನುಮತಿ ಸಿಕ್ಕಿದ್ದ ಬೆನ್ನಲ್ಲೇ ಪಟಾಕಿಯನ್ನು ಖರೀದಿ ಮಾಡಲು ಗ್ರಾಹಕರು ಮುಗಿಬಿದ್ದಿದ್ದಾರೆ.. ಇನ್ನು ಪಟಾಕಿ ಖರೀದಿಗಾಗಿ ಹೆದ್ದಾರಿಯಲ್ಲಿ ಟಾಪಿಕ್ ಜಾಮ್ ಉಂಟಾಗಿತ್ತು ಅಲ್ಲದೆ ಟ್ರಾಫಿಕ್ ಜಾಮ್ ಆಗಿ ಜನರು ಪರದಾಡುವಂತೆ ಪರಿಸ್ಥಿತಿ ಎದರಗಿತ್ತು ಇನ್ನು ಈ ಹಿಂದೆ ಸೆಪ್ಟೆಂಬರ್ 7ನೇ ತಾರೀಖಿನಂದು ಅತ್ತಿಬೆಲೆ ಪಟಾಕಿ ಅಂಗಡಿಲಿ ಅಗ್ನಿ ದುರಂತದಿಂದ 17 ಜನ ಮೃತಪಟ್ಟಿದ್ದು ಸರ್ಕಾರ ಅನುಮತಿಯನ್ನು ನಿರಾಕರಣೆ ಮಾಡಿದ್ದು ದೀಪಾವಳಿ ಅಂಗವಾಗಿ ಗ್ರೀನ್ ಪಟಾಕಿ ಹೊಡೆಯಲು ಗ್ರೀನ್ ಸಿಗ್ನಲ್ ನ್ನು ಕೊಟ್ಟಿತ್ತು ಹೀಗಾಗಿ…
ಬೆಂಗಳೂರು: ಟಿಕೆಟ್ ಮಷೀನ್ ಕೈಕೊಟ್ಟ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿರುವ ಒಂದೇ ಒಂದು ಬಸ್ಸು ಹೊರಗಡೆ ಹೋಗದೆ ಸಾರ್ವಜನಿಕರು ಪರದಾಟ ನಡೆಸಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ https://ainlivenews.com/bjp-never-supports-family-politics-k-s-eshwarappa/ ಇಂದು ಮುಂಜಾನೆ ಟಿಕೆಟ್ ಜನರೇಟರ್ ಹಾಕದೆ ಹಿನ್ನೆಲೆಯಲ್ಲಿ ಕೆಲವೊಂದು ಭಾಗಕ್ಕೆ ಕೆಎಸ್ಆರ್ಟಿಸಿ ಬಸ್ವಾಗದೆ ಸ್ಥಳೀಯರು ಸಾರ್ವಜನಿಕರು ಉದ್ಯೋಗಸ್ಥರು ದೂರದ ಪ್ರಯಾಣ ಬಳಸುವ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲವನ್ನು ಉಂಟು ಮಾಡಿತು.. ಇನ್ನು ರಾಮನಗರ ವಿಭಾಗದ ಆನೇಕಲ್ ಡಿಪ್ಪೋ ದಲ್ಲಿ ಟೆಕ್ನಿಕಲ್ ಪ್ರಾಬ್ಲಮ್ ನಿಂದ ಬೆಳಗ್ಗೆ ನಾಲ್ಕು ಗಂಟೆಯಿಂದ ಒಂಬತ್ತು ಗಂಟೆಯವರೆಗೂ ಕೆಎಸ್ಆರ್ಟಿಸಿ ಬಸ್ಗಾಗಿ ಜನರು ಪರದಾಡುವಂತೆ ಪರಿಸ್ಥಿತಿ ಎದರಗಿತ್ತು.. ಇನ್ನು ಕೆ ಎಸ್ ಆರ್ ಟಿ ಸಿ ಬಸ್ ಬಾರದ ಹಿನ್ನೆಲೆಯಲ್ಲಿ ಆನೇಕಲ್ ಜನತೆ ಅಧಿಕಾರಿಗಳೇ ಇಡಿ ಶಾಪವನ್ನು ಹಾಕಿದ್ದರು. ಇನ್ನು ಬಸ್ಸಿಲ್ಲದ ಪರಿಣಾಮ ಬಸ್ ಸ್ಟಾಂಡ್ ನಲ್ಲಿ ಜನರು ಕೂಡ ತುಂಬಿ ತುಳುಕುತ್ತಿದ್ರು . ಇನ್ನು ಆನೆಕಲ್ ನಿಂದ ತಮಿಳುನಾಡು ಹೊಸೂರು ತಮಿಳುನಾಡಿನ ತಳಿ, ಬೆಂಗಳೂರು ರಾಮನಗರ ಮಾದೇಶ್ವರ…
ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆಗೈದು (Murder) ದುಷ್ಕರ್ಮಿ ಪರಾರಿಯಾಗಿರುವ ಆಘಾತಕಾರಿ ಘಟನೆ ಉಡುಪಿಯ (Udupi) ಸಂತೆಕಟ್ಟೆ (Santekatte) ನೇಜಾರು (Nejaru) ಸಮೀಪ ನಡೆದಿದೆ. ತಾಯಿ ಹಾಗೂ ಮೂವರು ಮಕ್ಕಳನ್ನು ದುಷ್ಕರ್ಮಿ ಕೊಲೆಗೈದಿದ್ದಾನೆ. ಮೃತರನ್ನು ತಾಯಿ ಹಸೀನಾ (46), ಮಕ್ಕಳಾದ ಅಫ್ನಾನ್ (23), ಅಯ್ನಝ್ (21), ಆಸಿಂ (12) ಎಂದು ಗುರುತಿಸಲಾಗಿದೆ. ಹರಿತವಾದ ಆಯುಧಗಳಿಂದ ಇರಿದು ನಾಲ್ವರನ್ನು ಕೊಲೆ ಮಾಡಿದ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ. ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿ ಮಾತಿನ ಚಕಮಕಿ ನಡೆಸಿದ್ದಾನೆ. ಮೊದಲು ಹಸೀನಾ, ಅಫ್ನಾನ್ ಹಾಗೂ ಅಯ್ನಾಝ್‌ಗೆ ಇರಿದಿದ್ದಾನೆ. ಈ ವೇಳೆ ಹೊರಗಡೆ ಆಟವಾಡುತ್ತಿದ್ದ ಆಸಿಂ ಸದ್ದು ಕೇಳಿ ಮನೆ ಒಳಗಡೆ ಬಂದಿದ್ದಾನೆ. ನಂತರ ಕಿರಿಯ ಮಗನನ್ನೂ ಕೊಂದಿದ್ದಾನೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಇದಾದ ಬಳಿಕ ಗಲಾಟೆ ಕೇಳಿ ಪಕ್ಕದ ಮನೆಯ ಯುವತಿ ತನ್ನ ಮನೆಯಿಂದ ಹೊರ ಬಂದಿದ್ದಾಳೆ. ದುಷ್ಕರ್ಮಿ ಆಕೆಯನ್ನೂ ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯೊಳಗಿದ್ದ ಹಸೀನಾ ಅತ್ತೆಗೂ ತೀವ್ರವಾದ ಗಾಯಗಳಾಗಿವೆ. ಹಸೀನಾ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಅವರ…
ದೀಪಾವಳಿ.. ಬೆಳಕಿನ ಹಬ್ಬ, ಭಾರತದಲ್ಲಿ ಅತ್ಯಂತ ಸಂತೋಷದಾಯಕ ಮತ್ತು ಬಹು ನಿರೀಕ್ಷಿತ ಆಚರಣೆಗಳಲ್ಲಿ ಒಂದಾಗಿದೆ. ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ದೀಪಾವಳಿ ಹಬ್ಬಕ್ಕೆ ಡಿ ಬಾಸ್ ದರ್ಶನ್ ಅವರು ರಾಜ್ಯದ ಜನತೆಗೆ ಹಾಗು ತನ್ನೆಲ್ಲಾ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು
ಚಿತ್ರದುರ್ಗ: ಬಿಜೆಪಿ (BJP) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ (BY Vijayendra) ‘ಹೊಸ ಬಾಟಲಿಯಲ್ಲಿ ಹಳೆ ವೈನ್’ ಹಾಕಿದಂತೆ. ಹೀಗಾಗಿ ಆ ವಿಚಾರಕ್ಕೆ ನೋ ರಿಯಾಕ್ಷನ್ ಎಂದು ಸಚಿವ ಡಿ.ಸುಧಾಕರ್ (D Sudhakar) ಹೇಳಿದರು. ಚಿತ್ರದುರ್ಗದಲ್ಲಿ (Chitradurga) ನಡೆದ ಒನಕೆ ಓಬವ್ವ ಜಯಂತಿಯ ಮೆರವಣಿಗೆ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವಾಗಿರುವುದಕ್ಕೆ ಕೆಲ ಹಿರಿಯ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಅವರ ಪಕ್ಷದಲ್ಲಿನ ಅಸಮಾಧಾನ ಅವರ ಆಂತರಿಕ ವಿಚಾರವಾಗಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಹೀಗಾಗಿ ನಾವು ಆ ವಿಚಾರಕ್ಕೆ ಮೂಗು ತೂರಿಸಲ್ಲ ಎಂದರು. ನಮ್ಮ ಸಿದ್ಧಾಂತವೇ ಬೇರೆ, ಬಿಜೆಪಿಯವರ ಸಿದ್ಧಾಂತವೇ ಬೇರೆಯಾಗಿದ್ದು, ಅವರು ಸಮಾಜ ಒಡೆಯುವ ನೀತಿ ಹೊಂದಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಅವರ ನೇತೃತ್ವದ ಬಿಜೆಪಿ ಅಧಿಕಾರ ಪಡೆಯಲ್ಲ ಎಂದು ಭವಿಷ್ಯ ನುಡಿದರು. ಹಾಗೆಯೇ ಬಿಜೆಪಿಗೆ ಈವರೆಗೆ ರಾಜ್ಯಾಧ್ಯಕ್ಷರಿಲ್ಲ ಎಂದು ಹೇಳುತ್ತಿದ್ದರು. ಈಗ ನೇಮಕವಾಗಿದೆ. ನಾವು ಎಲ್ಲೂ ಬಿಜೆಪಿಗೆ ಗೇಲಿಮಾಡಿಲ್ಲ. ಆದರೆ ಇಲ್ಲಿಯವರೆಗೂ ವಿರೋಧ ಪಕ್ಷದ ನಾಯಕರೇ ಬಿಜೆಪಿಗೆ…
ಹಾಸನ: ವರ್ಷಕ್ಕೆ ಒಂದು ಬಾರಿ ದರ್ಶನ ನೀಡುವ ಹಾಸನಾಂಬೆಯ ಜಾತ್ರಾ ಮಹೋತ್ಸವ ಇತಿಹಾಸದಲ್ಲೇ ದಾಖಲೆ ಬರೆದಿದ್ದು, ದಾಖಲೆಯ ಆದಾಯ ಗಳಿಸಿದೆ. 9 ದಿನಗಳ ದರ್ಶನದಲ್ಲಿ ಒಟ್ಟು 4,56,22,580 ರೂ. ಸಂಗ್ರಹವಾಗಿದೆ. ವಿಶೇಷ ದರ್ಶನದ ಪಾಸ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಕೋಟಿ ಕೋಟಿ ಆದಾಯ ಗಳಿಸಿದೆ. ನ.3ರಿಂದ ಪ್ರಾರಂಭವಾಗಿ ನ.11ರ ಮಧ್ಯಾಹ್ನ 2ಗಂಟೆಯವರೆಗೆ ಒಟ್ಟು 4,56,22,580 ರೂ. ಆದಾಯ ಬಂದಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಸಾವಿರ ರೂ. ಟಿಕೆಟ್ ಮಾರಾಟದಿಂದ 2,30,91,000 ರೂ. ಸಂಗ್ರಹವಾಗಿದ್ದು, 300 ರೂ. ಟಿಕೆಟ್ ಮಾರಾಟದಿಂದ 1,79,65,500 ರೂ. ಸಂಗ್ರಹವಾಗಿದೆ. ಲಡ್ಡು ಪ್ರಸಾದ ಮಾರಾಟದಿಂದ ಕೂಡ 45,66,080 ಹಣ ಸಂಗ್ರಹವಾಗಿದ್ದು, ಒಟ್ಟು 4,56,22,580 ರೂ. ಆದಾಯವನ್ನು ಹಾಸನಾಂಬ ದೇವಾಲಯ ಗಳಿಸಿದೆ. ಹಾಸನಾಂಬೆ ದರ್ಶನೋತ್ಸವ ಇತಿಹಾಸದಲ್ಲೇ ಅತಿ ಹೆಚ್ಚಿನ ಆದಾಯ ಗಳಿಸಿದ್ದು, ಇನ್ನೂ ಮೂರು ದಿನ ಬಾಕಿ ಇರುವಾಗಲೇ ಕೋಟಿ ಕೋಟಿ ಆದಾಯ ಗಳಿಸಿದೆ.