ದೀಪಾವಳಿ.. ಬೆಳಕಿನ ಹಬ್ಬ, ಭಾರತದಲ್ಲಿ ಅತ್ಯಂತ ಸಂತೋಷದಾಯಕ ಮತ್ತು ಬಹು ನಿರೀಕ್ಷಿತ ಆಚರಣೆಗಳಲ್ಲಿ ಒಂದಾಗಿದೆ. ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ
ದೀಪಾವಳಿ ಹಬ್ಬಕ್ಕೆ ಡಿ ಬಾಸ್ ದರ್ಶನ್ ಅವರು ರಾಜ್ಯದ ಜನತೆಗೆ ಹಾಗು ತನ್ನೆಲ್ಲಾ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು