Author: AIN Author

ಭಾರತದ ನಾಯಕ ರೋಹಿತ್‌ ಶರ್ಮಾ, ಏಕದಿನ ಕ್ರಿಕೆಟ್‌ನ ಕ್ಯಾಲೆಂಡರ್‌ ವರ್ಷದಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದ ದಾಖಲೆ ಬರೆದಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನೆದರ್‌ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್‌ 2 ಸಿಕ್ಸರ್‌ ಸಿಡಿಸಿದ್ದು, ಈ ವರ್ಷದ ಸಿಕ್ಸರ್‌ ಗಳಿಕೆಯನ್ನು 59ಕ್ಕೆ ಏರಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್‌ ದಾಖಲೆಯನ್ನು ಮುರಿದರು. ವಿಲಿಯರ್ಸ್‌ 2015ರಲ್ಲಿ 58 ಸಿಕ್ಸರ್‌ ಸಿಡಿಸಿದ್ದರು. ಕ್ರಿಸ್‌ ಗೇಲ್‌ 2019ರಲ್ಲಿ 56 ಸಿಕ್ಸರ್‌ ಬಾರಿಸಿದ್ದರು. ವಿಶ್ವಕಪ್‌ನಲ್ಲೂ ದಾಖಲೆ: ರೋಹಿತ್‌ ಈ ವಿಶ್ವಕಪ್‌ನಲ್ಲೇ 23 ಸಿಕ್ಸರ್‌ ಸಿಡಿಸಿದ್ದು, ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ನಾಯಕ ಎಂಬ ಖ್ಯಾತಿಗೆ ಪಾತ್ರರಾದರು. 2019ರಲ್ಲಿ ಇಂಗ್ಲೆಂಡ್ ನಾಯಕ ಇಯಾನ್‌ ಮೊರ್ಗನ್‌ 22 ಸಿಕ್ಸರ್‌ ಬಾರಿಸಿದ್ದರು. ರೋಹಿತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳ ಮೈಲಿಗಲ್ಲನ್ನೂ ತಲುಪಿದರು. ಟೆಸ್ಟ್‌ನ 88 ಇನ್ನಿಂಗ್ಸ್‌ಗಳಲ್ಲಿ 16, 252 ಏಕದಿನದಲ್ಲಿ 55 ಹಾಗೂ 140 ಟಿ20 ಇನ್ನಿಂಗ್ಸ್‌ಗಳಲ್ಲಿ 29 ಫಿಫ್ಟಿ ಬಾರಿಸಿದ್ದಾರೆ. ಈ ಮೂಲಕ 100 ಫಿಫ್ಟಿ ಬಾರಿಸಿದ…

Read More

ಬೆಂಗಳೂರು:ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ ಮತ್ತು ಕೆಲವು ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಕರ್ನಾಟಕ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಮಾಜಿ ಸಿಎಂ-ಪಿಎಂ ಭೇಟಿ ವೇಳೆ ಬಿವೈ ವಿಜಯೇಂದ್ರ ಅವರು ಮಾತುಕತೆ ನಡೆಸಿ ಹೊಸ ಜವಾಬ್ದಾರಿ ನಿರ್ವಹಣೆ ಕುರಿತು ಸಲಹೆಗಳನ್ನು ಪಡೆಯುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಶುಕ್ರವಾರ ಬಿವೈ ವಿಜಯೇಂದ್ರ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಎಂದು ಹೈಕಮಾಂಡ್ ಘೋಷಿಸಿ ಆದೇಶಿಸಿತು. ಕೇಂದ್ರದ ವರಿಷ್ಠರ ಈ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರರ ಆಯ್ಕೆ ನಿರ್ಧಾರವು ರಾಜ್ಯ ಬಿಜೆಪಿ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಯಡಿಯೂರಪ್ಪನವರ ಜತೆ ಗುರುತಿಸಿಕೊಂಡ ಒಂದಷ್ಟು ನಾಯಕರು ಮಾತ್ರ ನೂತನ ರಾಜ್ಯಾಧ್ಯಕ್ಷರಿಗೆ…

Read More

ಸಿದ್ದಾಪುರ: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದಪುರ ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಬಳಿ ಪುರಾತನ ಆಭರಣಗಳು ಹಾಗೂ ನಿಧಿ ಪತ್ತೆಯಾಗಿದೆ. ವಿರಾಜಪೇಟೆ ಸಿದ್ದಾಪುರ ಮಾರ್ಗ ಮಧ್ಯದ ಅಮ್ಮತಿ ಸಮೀಪದ ಮುಖ್ಯ ರಸ್ತೆಯಲ್ಲಿರುವ ಪುರಾತನ ಈಶ್ವರ ದೇವಸ್ಥಾನವು ಟಾಟಾ ಕಾಫಿ ಸಂಸ್ಥೆಗೆ ಸೇರಿದ ಜಾಗದಲ್ಲಿ ದೇವಸ್ಥಾನವಿದ್ದು ತೋಟ ಕಾರ್ಮಿಕರು ಕೆಲಸ ನಿರ್ವಹಿಸುತಿದ್ದ ವೇಳೆ ಭೂಮಿಯಡಿಯಲ್ಲಿ ಕುಡಿಕೆಯಲ್ಲಿ ಆಭರಣಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ. ತೋಟದ ವ್ಯವಸ್ಥಾಪಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಿದ್ದಾಪುರ ಪೊಲೀಸ್ ಸಬ್ -ಇನ್ಸ್ ಪೆಕ್ಟರ್ ಪಿ.ಎಂ.ರಾಘವೇಂದ್ರ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಗಳ ತಂಡ ತಹಶಿಲ್ದಾರರ್ ಹಾಗೂ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಆಭರಣಗಳನ್ನು ಸಂಗ್ರಹಿಸಿ ಮಹಜರು ನಡೆಸಿ ನಿಯಮ ರೀತ್ಯ ಕ್ರಮಗಳ ಬಳಿಕ ಜಿಲ್ಲಾಧಿಕಾರಿಗಳ ವಶಕ್ಕೆ ನೀಡಲಾಯಿತ್ತು.

Read More

ರಾಂಚಿ: ವೇಗವಾಗಿ ಚಲಿಸುತ್ತಿದ್ದ ರೈಲೊಂದು (Train) ಹಠಾತ್ ಆಗಿ ನಿಂತ ಪರಿಣಾಮ ಇಬ್ಬರು ಪ್ರಯಾಣಿಕರು ಸಾವಿಗೀಡಾದ ಘಟನೆ ಜಾರ್ಖಂಡ್‌ (Jharkhand) ಪರ್ಸಾಬಾದ್ ಎಂಬಲ್ಲಿ ನಡೆದಿದೆ. ಪುರಿ-ನವದೆಹಲಿ ನಡುವೆ ಸಂಚರಿಸುವ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲಿಗೆ ವಿದ್ಯುತ್ ಸರಬರಾಜಾಗುವುದು ತಕ್ಷಣ ನಿಂತಿದೆ. ಈ ವೇಳೆ ವಿದ್ಯುತ್ ತಂತಿ ತುಂಡಾಗಿರುವುದು ಗಮನಕ್ಕೆ ಬಂದಿದ್ದು ಚಾಲಕ ಎಮರ್ಜನ್ಸಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ಸುಮಾರು 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ತಕ್ಷಣ ನಿಂತ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌  https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಅಪಘಾತದ (Accident) ನಂತರ ನಾಲ್ಕು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲನ್ನು ಅಪಘಾತ ಸ್ಥಳದಿಂದ ಡೀಸೆಲ್ ಎಂಜಿನ್ ಮೂಲಕ ಗೋಮೊಹ್‍ಗೆ ತರಲಾಯಿತು. ನಂತರ ಎಲೆಕ್ಟ್ರಿಕ್ ಎಂಜಿನ್ ಮೂಲಕ ದೆಹಲಿಗೆ ಕಳುಹಿಸಲಾಯಿತು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ತಂತಿ ತುಂಡಾಗಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಈ…

Read More

ಲಕ್ನೋ:- ಇಲ್ಲಿನ ಗೋಪಾಲಬಾಗ್‌ನಲ್ಲಿರುವ ಪಟಾಕಿ ಮಾರುಕಟ್ಟೆಯ ಕೆಲವು ಅಂಗಡಿಗಳಲ್ಲಿ ನಿನ್ನೆ ಅಂದರೆ ಭಾನುವಾರ ಬೆಂಕಿ ಕಾಣಿಸಿಕೊಂಡು ಭಾರೀ ಅವಘಡ ಉಂಟಾಗಿದೆ. ಗೋಪಾಲಬಾಗ್ ಪ್ರದೇಶದಲ್ಲಿ ನಡೆದ ಈ ಭೀಕರ ದುರ್ಘಟನೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಒಂಭತ್ತು ಮಂದಿ ಸುಟ್ಟು ಕರಕಲಾಗಿದ್ದು, ಏಳು ಪಟಾಕಿ ಅಂಗಡಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ ಪೊಲೀಸ್ ಮೂಲಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ರಾಯಾದ ಗೋಪಾಲ್‌ಬಾಗ್‌ನಲ್ಲಿರುವ ತಾತ್ಕಾಲಿಕ ಪಟಾಕಿ ಮಾರುಕಟ್ಟೆಯಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಈ ಏಳು ಅಂಗಡಿಗಳಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಎಂದು ಮಹಾವನ್ ಪ್ರದೇಶದ ಅಧಿಕಾರಿ ಅಲೋಕ್ ಸಿಂಗ್ ಹೇಳಿದ್ದಾರೆ. ಘಟನೆ ವೇಳೆ ಪಟಾಕಿ ಮಾರುಕಟ್ಟೆಯಲ್ಲಿ ಜನಸಂದಣಿ ಇದ್ದಿದ್ದು, ಜನರು ಪಟಾಕಿ ಖರೀದಿಯಲ್ಲಿ ನಿರತರಾಗಿದ್ದರು. ಆರಂಭದಲ್ಲಿ ಒಂದು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿ ಹರಡಲು ಪ್ರಾರಂಭಿಸಿ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಆವರಿಸಿತು ಎಂದು ಅಲೋಕ್ ಸಿಂಗ್ ಹೇಳಿದರು. ಘಟನೆಯ ನಂತರ…

Read More

ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬದ ಸಂಭ್ರಮ ಹಿರಿಯ ನಟಿ ಮಾಲಾಶ್ರೀ ಅವರ ಮನೆಯಲ್ಲಿ ಈ ಬಾರಿ ಕೊಂಚ ಹೆಚ್ಚ ಎನ್ನಬಹುದು. ಹಬ್ಬದ ಸಂಭ್ರಮವನ್ನು ಸಂಭ್ರಮಿಸಲು ಮಾಲಾಶ್ರೀ ಅವರು ಮಗಳು ಆರಾಧನಾ ಜೊತೆ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ. ಅಮ್ಮ – ಮಗಳು ನೂತನ ರೀತಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದೇವೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ. ಬಹಳ ವರ್ಷಗಳ ನಂತರ ನಾನು ಫೋಟೊ ಶೂಟ್ ಮಾಡಿಸಿಕೊಂಡಿದ್ದೀನಿ. ಮಗಳ ಜೊತೆಗೆ ಫೋಟೊ ಶೂಟ್ ಮಾಡಿಸಿಕೊಂಡಿರುವುದು ಹೆಚ್ಚು ಖುಷಿಯಾಗಿದೆ. ಈ ವರ್ಷ ನನ್ನ ಮಗಳು “ಕಾಟೇರ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾಳೆ. ನನಗೆ ತಾವು ನೀಡಿರುವ ಪ್ರೋತ್ಸಾಹ ನನ್ನ ಮಗಳಿಗೂ ನೀಡಿ ಎನ್ನುತ್ತಾರೆ ನಟಿ ಮಾಲಾಶ್ರೀ.

Read More

ಇಷ್ಟು ನಿರೀಕ್ಷೆ ಮೂಡಿಸಿಯೂ ಥ್ರೆಡ್ಸ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರನ್ನು ಉಳಿಸಿಕೊಳ್ಳಲು ಸದ್ಯ ಕೊಂಚ ಕಷ್ಟಪಡುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ, ಎಲಾನ್ ಮಸ್ಕ್‌ ಒಡೆತನದ ಎಕ್ಸ್‌ಗೆ ಸರಿಸಮವಾಗಿ ಪ್ರತಿಸ್ಪರ್ಧೆಯೊಡ್ಡಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸುವತ್ತ ಥ್ರೆಡ್ಸ್‌ ಕಾರ್ಯನಿರ್ವಹಿಸುತ್ತಿದೆ ಎಂಬ ಅಂಶ ಬಹಿರಂಗವಾಗಿದೆ. ಎಕ್ಸ್‌ನಲ್ಲಿರುವ ವಿವಿಧ ವೈಶಿಷ್ಟ್ಯಗಳ ಮೇಲೆ ಥ್ರೆಡ್ಸ್ ಕಾರ್ಯನಿರ್ವಹಿಸುತ್ತಿರುವ ವಿಷಯ ಥ್ರೆಡ್ಸ್‌ನ ಉದ್ಯೋಗಿಯೊಬ್ಬರು ಆಕಸ್ಮಿಕವಾಗಿ ಹಂಚಿಕೊಂಡಿದ್ದರಿಂದ ಈ ವಿಷಯ ಸೋರಿಕೆಯಾಗಿದೆ! ಮೆಟಾ-ಮಾಲೀಕತ್ವದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ `ಟ್ರೆಂಡಿಂಗ್ ಟಾಪಿಕ್ಸ್‌’ ವೈಶಿಷ್ಟ್ಯದ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುವ ಸ್ಕ್ರೀನ್‌ಶಾಟ್‌ ಅನ್ನು ಥ್ರೆಡ್ಸ್‌ ಬಳಕೆದಾರರು ಪೋಸ್ಟ್‌ ಮಾಡಿದ್ದಾರೆ. ಇದು ಎಕ್ಸ್‌ನಲ್ಲಿ ಇರುವಂತೆ `ವಾಟ್ಸ್ ಹ್ಯಾಪನಿಂಗ್’ ಎಂಬ ಫೀಚರ್‌ ಅನ್ನು ಹೋಲುತ್ತದೆ. ಆದಾಗ್ಯೂ, ಟ್ರೆಂಡಿಂಗ್ ವೈಶಿಷ್ಟ್ಯವು ಎಕ್ಸ್ ಅಪ್ಲಿಕೇಶನ್‌ನಲ್ಲಿ ಇರುವಂತೆಯೇ ಸುದ್ದಿ, ಕ್ರೀಡೆ ಮತ್ತು ಮನರಂಜನೆಯಂತಹ ಇತರ ವಿಭಾಗಗಳನ್ನು ಒಳಗೊಂಡಿರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮೆಟಾ ಉದ್ಯೋಗಿಗಳು ವಿಶೇಷ ಫೀಡ್ ಅನ್ನು ಹೊಂದಿದ್ದಾರೆ. ಅಲ್ಲಿ ಅವರು ಇತರ ಉದ್ಯೋಗಿಗಳಿಗೆ ಮಾತ್ರ ನೋಡಲು ವಿಷಯಗಳನ್ನು ಪೋಸ್ಟ್ ಮಾಡಬಹುದು. ಥ್ರೆಡ್ಸ್‌ ಎಂಜಿನಿಯರ್ ಟ್ರೆಂಡಿಂಗ್…

Read More

ಕಲಬುರ್ಗಿ:- ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆಯನ್ನ ಇದೀಗ CID ಶುರುಮಾಡಿದೆ. ಬೆಂಗಳೂರಿನಿಂದ ಅಧಿಕಾರಿಯೊಬ್ಬರು ತನಿಖೆಗಾಗಿ ಕಲಬುರಗಿಗೆ ಆಗಮಿಸಿದ್ದು ಮೊದಲು ಅಶೋಕ ನಗರ ಠಾಣೆಯಲ್ಲಿ ದಾಖಲಾಗಿರುವ ಕೇಸನ್ನ ಕೈಗೆತ್ತಿಕೊಂಡಿದ್ದಾರೆ. ಸರ್ಕಾರದ ಆದೇಶದ ಬಳಿಕ ಎಲ್ಲ ದಾಖಲೆಗಳನ್ನ ಸ್ಥಳೀಯ ಪೋಲೀಸರು CID ಗೆ ಹಸ್ತಾಂತರ ಮಾಡಿದ್ದಾರೆ.. ಈ ಹಿಂದೆ ನಡೆದ ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದ ಕಲಬುರಗಿಯ CID ಅಧಿಕಾರಿಯೊಬ್ರು ಬೆಂಗಳೂರಿನ ತನಿಖಾಧಿಕಾರಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.ಹೀಗಾಗಿ ತನಿಖೆ ಮತ್ತಷ್ಟು ವೇಗ ಪಡೆಯಲಿದೆ..

Read More

ಬೇಸಿಗೆಕಾಲ ಕಳೆದು ಮಳೆಗಾಲ ಶುರುವಾಗುತ್ತಿದೆ.ಮಳೆಗಾಲದಲ್ಲಿ ನಮ್ಮ ಆರೋಗ್ಯದ ಜೊತೆಗೆ ಚರ್ಮದ ಆರೈಕೆಯ ಕಡೆಗೂ ಗಮನಕೊಂಡಬೇಕಾಗುತ್ತದೆ. ಮಳೆಗಾಲ ಇರುವ ಕಾರಣ ನಾವು ಸ್ವಲ್ಪ ಹೆಚ್ಚಾಗಿ ಸ್ಕೀನ್ ಕೇರ್ ಮಾಡಲೇಬೇಕಾಗುತ್ತದೆ. ಹೌದು,ಎಲ್ಲಾ ಋತುಮಾನದಲ್ಲಿಯೂ ಚರ್ಮದ  ಹೊಳಪು ಕಾಪಾಡಿಕೊಂಡು ಆರೈಕೆ ಮಾಡುವುದು ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಬರುವಂತಹ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಮಾತ್ರ ನಮ್ಮನ್ನು ಕಾಡುವುದಿಲ್ಲ. ಕೆಲವು ಚರ್ಮ ಸಮಸ್ಯೆಗಳು ಸಹಾ ಹೆಚ್ಚಾಗುತ್ತದೆ. ಹಾಗಿದ್ರೆ ನಮ್ಮ ತ್ವಚೆಯ ಹಾರೈಕೆ ಹೇಗೆ ಮಾಡೋದು ಅನುವುದರ ಕುರಿತ ಟಿಪ್ಸ್ ಇಲ್ಲಿದೆ. ನಮ್ಮ ಚರ್ಮವನ್ನೂ ಕಾಪಾಡಿಕೊಳ್ಳಲು ಚರ್ಮದ ಮೇಲೆ ಏನೆಲ್ಲಾ ಲೇಪನ ಮಾಡುತ್ತೀವಿ ಅನ್ನುವುದರ ಜೊತೆಗೆ ದೇಹಕ್ಕೆ ಏನೆಲ್ಲಾ ಪೌಷ್ಠಿಕಾಂಶಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವುದರ ಮೇಲೂ ನಮ್ಮ ಚರ್ಮದ ಸೌದರ್ಯ ವೃದ್ಧಿ ಅವಲಂಬಿತವಾಗುತ್ತದೆ. ನೀರನ್ನ ಹೆಚ್ಚಾಗಿ ಸೇವನೆ ಮಾಡಬೇಕು. ಇದರ ಜೊತೆಗೆ ಕೆಲವೊಂದಿಷ್ಟು ಮನೆಮದ್ದನ್ನು ಮಾಡಿಕೊಳ್ಳಬೇಕು. ಒಂದು ಸ್ಪೂನ್ ಟಮೋಟೋ ಜ್ಯೋಸ್​ಗೆ​ ಜೇನುತುಪ್ಪವನ್ನು ಮಿಶ್ರಣ ಮಾಡಿ ಹುಬ್ಬು ಮತ್ತು ಕೂದಲು ತಾಕಿಸದೆ ಮುಖಕ್ಕೆ ಹಚ್ಚಿ ಒಣಗಿದ ನಂತರ ಮುಖ ತೊಳೆಯಿರಿ. ವಾರದಲ್ಲಿ …

Read More

ಹಾಸನ: ನನಗಂತೂ ಅಸಮಾಧಾನವಿಲ್ಲ ನಾನು ಪಕ್ಷದ ಜವಬ್ದಾರಿ ಕೇಳಿ ಪಡೆದವನಲ್ಲ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕ ಸಿಟಿ ರವಿ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಧರ್ಮದ ವಿರುದ್ಧ ಧರ್ಮದ ಜಯ ಆಗಬೇಕು ಅಸತ್ಯದ ವಿರುದ್ಧ ಸತ್ಯದ ಜಯ ಆಗಬೇಕು.  ಸನಾತನ ಧರ್ಮವೇ ಭಗವಂತನ ಕಾಣದೋ ಎಂದು ಹೇಳಿದರು. ರಾಮನಿಗೆ ಮತ್ತು ಪಾಂಡವರಿಗೂ ವನವಾಸ ತಪ್ಪಿಲ್ಲ ಇನ್ನೂ ಸಿ ಟಿ ರವಿ ಅವರಿಗಿಂತ ನಾನು ದೊಡ್ಡವನಾ? ಸ್ವರ್ಧೆಯೇ ಇಲ್ಲದಿದ್ದಾಗ ರೇಸಿನ ಪ್ರಶ್ನೆಯೇ ಇಲ್ಲ. ಇದೀಗಾ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಪಕ್ಷ ವಿಸ್ತರಿಸೋ ಕೆಲಸ ಆಗಬೇಕು. ಪಕ್ಷ ಜವಬ್ದಾರಿ ಕೊಟ್ಟಾಗ ಏನಾದ್ರು ಮಾತನಾಡಿದ್ರೆ ತಪ್ಪು ಸಂದೇಶ ರವಾನೆ ಆಗುತ್ತೆ. ನಮ್ಮ ಪಕ್ಷ ಗಟ್ಟಿಯಾಗಬೇಕು ಅಂತಾ ನಾನು ಬಯಸುವನು. ಅದು ಯಾರು ಮೂಲಕ ಆದರೂ ಸಂತೋಷ ಎಂದರು. ಪಕ್ಷ ಕಾಲ ಕಾಲಕ್ಕೆ ಅನುಭವ…

Read More