ರಾಂಚಿ: ವೇಗವಾಗಿ ಚಲಿಸುತ್ತಿದ್ದ ರೈಲೊಂದು (Train) ಹಠಾತ್ ಆಗಿ ನಿಂತ ಪರಿಣಾಮ ಇಬ್ಬರು ಪ್ರಯಾಣಿಕರು ಸಾವಿಗೀಡಾದ ಘಟನೆ ಜಾರ್ಖಂಡ್ (Jharkhand) ಪರ್ಸಾಬಾದ್ ಎಂಬಲ್ಲಿ ನಡೆದಿದೆ. ಪುರಿ-ನವದೆಹಲಿ ನಡುವೆ ಸಂಚರಿಸುವ ಪುರುಷೋತ್ತಮ್ ಎಕ್ಸ್ಪ್ರೆಸ್ ರೈಲಿಗೆ ವಿದ್ಯುತ್ ಸರಬರಾಜಾಗುವುದು ತಕ್ಷಣ ನಿಂತಿದೆ. ಈ ವೇಳೆ ವಿದ್ಯುತ್ ತಂತಿ ತುಂಡಾಗಿರುವುದು ಗಮನಕ್ಕೆ ಬಂದಿದ್ದು ಚಾಲಕ ಎಮರ್ಜನ್ಸಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ಸುಮಾರು 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ತಕ್ಷಣ ನಿಂತ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Kolar: ಹುಡುಗಿಗೆ ಮೆಸೇಜ್ ಕಳಿಸಿದ್ದೇ ಕೊಲೆಗೆ ಕಾರಣವಾಯ್ತಾ..? ಐಜಿಪಿ ರವಿಕಾಂತೇಗೌಡ ಹೇಳೋದೇನು?
ಅಪಘಾತದ (Accident) ನಂತರ ನಾಲ್ಕು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಪುರುಷೋತ್ತಮ್ ಎಕ್ಸ್ಪ್ರೆಸ್ ರೈಲನ್ನು ಅಪಘಾತ ಸ್ಥಳದಿಂದ ಡೀಸೆಲ್ ಎಂಜಿನ್ ಮೂಲಕ ಗೋಮೊಹ್ಗೆ ತರಲಾಯಿತು. ನಂತರ ಎಲೆಕ್ಟ್ರಿಕ್ ಎಂಜಿನ್ ಮೂಲಕ ದೆಹಲಿಗೆ ಕಳುಹಿಸಲಾಯಿತು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ತಂತಿ ತುಂಡಾಗಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.