Author: AIN Author

ಬೆಂಗಳೂರು:- ಪಟಾಕಿ ಸಂಬಂಧಿತ ಅವಘಡದಿಂದ ಬೆಂಗಳೂರಿನಲ್ಲಿ ಗಾಯಗೊಂಡವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಪೈಕಿ ಸರ್ಕಾರಿ ಆಸ್ಪತ್ರಗೆ 17 ಜನ ದಾಖಲಾಗಿದ್ದರೆ, 26 ಜನ ಖಾಸಗಿ ಆಸ್ಪತ್ರೆ ಬಾಗಿಲು ತಟ್ಟಿದ್ದಾರೆ. ದೀಪಾವಳಿಯ ಮೊದಲ ದಿನ ಅಂದರೆ ನರಕ ಚತುರ್ದಶಿಯಂದು ಮಕ್ಕಳು ಸೇರಿದಂತೆ 26 ಜನರು ಗಾಯಗೊಂಡಿದ್ದರು. ಇದೀಗ ದೀಪಾವಳಿ 2ನೇ ದಿನ ಅಮಾವಸ್ಯೆಯಂದು ಗಾಯಗೊಂಡವರ ಸಂಖ್ಯೆ 26ರಿಂದ 3ಕ್ಕೆ ಏರಿಕೆಯಾಗಿದೆ. ನಿನ್ನೆ(ಸೋಮವಾರ) ರಾಮಮೂರ್ತಿ ನಗರದ ಮೂರುವರೆ ವರ್ಷದ ಮಗುವಿಗೂ ಪಟಾಕಿಯಿಂದ ಗಂಭೀರ ಗಾಯವಾಗಿದೆ. ಸುರುಸುರು ಬತ್ತಿ ಹಚ್ಚುವಾಗ ಕಣ್ಣಿಗೆ ಕಿಡಿ ತಾಗಿದ್ದು, ಮಗುವಿಗೆ ಮೈನರ್‌ ಇಂಜುರಿಯಾಗಿದೆ. ಇನ್ನು ಶ್ರೀರಾಂಪುರದ ಯುವಕನೊಬ್ಬ ಏರಿಯಾದಲ್ಲಿ ನಡೆದುಕೊಂಡು ಹೋಗುತ್ತಿದ್ದ ಈ ವೇಳೆ ಯಾರೋ ಹಚ್ಚಿದ ಪಟಾಕಿ ಯುವಕನ ಕಣ್ಣಿಗೆ ಸಿಡಿದಿದೆ. ಇದರಿಂದ ಐಬಾಲ್‌ಗೆ ಗಂಭೀರ ಗಾಯ ಆಗಿದ್ದು, ಒಳಗಡೆ ರಕ್ತ ಹೆಪ್ಪುಗಟ್ಟಿದೆ. ಇದೇ ರೀತಿ ಬನ್ನೇರುಘಟ್ಟದ ವ್ಯಕ್ತಿಯ ಕಣ್ಣಿಗೆ ಲಕ್ಷ್ಮೀ ಪಟಾಕಿ ಸಿಡಿದು ಗಾಯವಾಗಿದೆ. ಸಂಜೆ 6 ರ ವರೆಗೆ ಮಾತ್ರ ಪಟಾಕಿ ಮಾರಾಟಕ್ಕೆ ಬಿಬಿಎಂಪಿ…

Read More

ಬೆಂಗಳೂರು: 2023ರ ಏಕದಿನ ವಿಶ್ವಕಪ್‌ (World Cup 2023) ಕ್ರಿಕೆಟ್‌ ಟೂರ್ನಿಯಲ್ಲಿ ಸೋಲಿಲ್ಲದ ಸರದಾರರಂತೆ ಅಜೇಯ ಓಟದಲ್ಲೇ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾ (Team India) ಪ್ರಸಕ್ತ ವರ್ಷದಲ್ಲಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಪರ್‌ ಸಂಡೇ ನಡೆದ ಲೀಗ್‌ ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ಸ್‌ಗಳು ಅಬ್ಬರಿಸಿ ಬೊಬ್ಬಿರಿದರು. ನೆದರ್ಲೆಂಡ್ಸ್‌ (Netherlands) ವಿರುದ್ಧ ಪಂದ್ಯದಲ್ಲಿ 410 ರನ್‌ ಬಾರಿಸಿದ ಭಾರತ ಎದುರಾಳಿ ತಂಡವನ್ನು 250 ರನ್‌ಗಳಿಗೆ ಕಟ್ಟಿಹಾಕಿ 160 ರನ್‌ಗಳ ಜಯ ಸಾಧಿಸಿತು. ಡಚ್ಚರ ವಿರುದ್ಧ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದ ಬಳಿಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರು, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರಿಂದ ʻಫೀಲ್ಡರ್‌ ಆಫ್‌ ದಿ ಮ್ಯಾಚ್‌ʼ (Fielder of the Match) ಪದಕ ಗಿಟ್ಟಿಸಿಕೊಂಡರು. ಇದೇ ವೇಳೆ ಕೆ.ಎಲ್‌ ರಾಹುಲ್‌ ಮತ್ತು ರವೀಂದ್ರ ಜಡೇಜಾ ಅವರ ಫೀಲ್ಡಿಂಗ್‌ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ…

Read More

ನವದೆಹಲಿ: ದೀಪಾವಳಿಗೆ (Deepavali) ಭಾರತದ ಕಂಪನಿಗಳು (India Companies) ಉದ್ಯೋಗಿಗಳಿಗೆ ಯಾಕೆ ದೀರ್ಘ ರಜೆ (Longer Festive Break) ನೀಡುವುದಿಲ್ಲ ಎಂದು ಎಡೆಲ್ವೀಸ್ (Edelweiss) ಮ್ಯೂಚುವಲ್‌ ಫಂಡ್‌ ಸಿಇಒ ರಾಧಿಕಾ ಗುಪ್ತಾ (Radhika Gupta) ಪ್ರಶ್ನೆ ಮಾಡಿದ್ದಾರೆ. ನಾನು ಪಾಶ್ಚಿಮಾತ್ಯ ದೇಶದಲ್ಲಿ ವಾಸಿಸುತ್ತಿದ್ದ ಎಲ್ಲಾ ವರ್ಷಗಳಲ್ಲಿ ರಜಾದಿನವು ದೀರ್ಘ ಮತ್ತು ವಿಸ್ತರಿಸಲ್ಪಟ್ಟಿತ್ತು. ಕ್ರಿಸ್ಮಸ್ (Christmas) ಡಿಸೆಂಬರ್ 15ರ ನಂತರ ಪ್ರಾರಂಭವಾದರೆ ಹೊಸ ವರ್ಷದವರೆಗೆ ಅದು ಮುಂದುವರೆಯುತ್ತಿತ್ತು. ಚೀನೀ ಹೊಸ ವರ್ಷವು ದೀರ್ಘ ರಜಾದಿನವನ್ನು ಹೊಂದಿದೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. https://twitter.com/iRadhikaGupta/status/1723249115486990791?ref_src=twsrc%5Etfw%7Ctwcamp%5Etweetembed%7Ctwterm%5E1723249115486990791%7Ctwgr%5Eb3b5c6b3f3860f72ee2dfdb67c2f860e1115ce29%7Ctwcon%5Es1_&ref_url=https%3A%2F%2Fpublictv.in%2Fedelweiss-ceo-radhika-gupta-proposes-extended-break-during-diwali-netizens-agree%2F ದುರದೃಷ್ಟವಶಾತ್ ಭಾರತ (India) ಕಾರ್ಪೊರೇಟ್ ಕಚೇರಿಗಳಲ್ಲಿ ದೀಪಾವಳಿ ರಜಾದಿನಗಳು ಸಾಮಾನ್ಯವಾಗಿ 1 ಅಥವಾ 2 ದಿನಗಳು ಮಾತ್ರ ಇದೆ. ಅದರಲ್ಲೂ ವಾರಾಂತ್ಯದಲ್ಲಿ ದೀಪಾವಳಿ ಬಂದಾಗ ಒಂದು ದಿನ ಮಾತ್ರ ರಜೆ ಇರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ನಮ್ಮಲ್ಲಿ ಅನೇಕರು ಹಬ್ಬದ ಸಮಯದಲ್ಲಿ ಕುಟುಂಬಗಳೊಂದಿಗೆ ಇರಲು ಬಯಸುತ್ತಾರೆ. ಒಂದು ದೇಶವಾಗಿ ದೀರ್ಘವಾದ ಹಬ್ಬ ಆಚರಿಸಲು ಒಂದು ವಾರದ ಅವಧಿಗೆ…

Read More

ಬೆಂಗಳೂರು:- ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ವಿಜಯೇಂದ್ರ ಫುಲ್ ಆಯಕ್ಟೀವ್ ಆಗಿದ್ದು, ದಿಗ್ಗಜ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ, ಸಲಹೆ, ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇದರ ಮಧ್ಯೆ ಟೆಂಪನ್ ರನ್​ ನಡೆಸಿದ್ದು, ಇಂದು ಮೂಡಣ ಬಾಗಿಲೆಂದು ಪ್ರಸಿದ್ದಿ ಪಡೆದಿರುವ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಕೋಲಾರದ ಗಡಿ ರಾಮಸಂದ್ರ ಬಳಿ ವಿಜಯೇಂದ್ರ ಅವರಿಗೆ ಸಂಸದ ಎಸ್.ಮುನಿಸ್ವಾಮಿ ಮತ್ತು ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಮಾಡಿಕೊಳ್ಳಲಿದ್ದಾರೆ. ಅಲ್ಲಿಂದ‌ ನೇರವಾಗಿ ಕುರುಡುಮಲೆ ವಿನಾಯಕ ದೇವಾಲಯಕ್ಕೆ‌ ಬೇಟಿ, 11 ಗಂಟೆಗೆ ಕುರುಡುಮಲೆ‌ ವಿನಾಯಕನಿಗೆ ಪೂಜೆ ಸಲ್ಲಿಸಿ ನಂತರ ಬೂತ್ ಮಟ್ಟದ ಅಧ್ಯಕ್ಷರ ಮನೆಗೆ‌ ಭೇಟಿ ನೀಡಲಿದ್ದಾರೆ. ಇನ್ನು ಇದೇ ವೇಳೆ ವಿಜಯೇಂದ್ರಗೆ ಸಂಸದರು ಸೇರಿದಂತೆ ಜಿಲ್ಲೆಯ ಎಲ್ಲಾ ಮಾಜಿ ಶಾಸಕರುಗಳು ಸಾಥ್ ನೀಡಲಿದ್ದಾರೆ. ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಸಹ ಯಾವುದೇ ಚುನಾವಣೆ, ರಾಜ್ಯಪ್ರವಾಸ ಮಾಡುವ ಮೊದಲು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ…

Read More

ದೆಹಲಿ: ದಾಖಲೆಗಳ ರೇಸ್‍ನಲ್ಲಿರುವ ಕೊಹ್ಲಿ (Virat Kohli) ವಿಚಾರವಾಗಿ ಹಗುರವಾಗಿ ಮಾತಾಡಿದ್ದ ಲಂಕಾ ನಾಯಕ ಕುಸಾಲ್ ಮೆಂಡಿಸ್ (Kusal Mendis), ಸಚಿನ್ (Sachin Tendulkar) ದಾಖಲೆ ಸರಿಗಟ್ಟಿದ ವಿಚಾರ ತಿಳಿದ ನಂತರ ಕೊಹ್ಲಿಯ ಕ್ಷಮೆಯಾಚಿಸಿದ್ದಾರೆ. ಕೊಹ್ಲಿ 49ನೇ ಶತಕ ಗಳಿಸಿದ್ದ ವಿಚಾರ ನನಗೆ ತಿಳಿದಿರಲಿಲ್ಲ. ಪತ್ರಕರ್ತರು ತಕ್ಷಣ ಕೇಳಿದಾಗ, ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ ಮತ್ತು ನನಗೆ ಪ್ರಶ್ನೆ ಅರ್ಥವಾಗಲಿಲ್ಲ. 49 ಶತಕಗಳನ್ನು ಗಳಿಸುವುದು ಸುಲಭವಲ್ಲ ಎಂದಿದ್ದೆ. ನಾನು ಹೇಳಿದ್ದು ತಪ್ಪು, ನಾನು ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಮೆಂಡಿಸ್ ಹೇಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಶ್ರೀಲಂಕಾದ ಪಂದ್ಯಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ, ಮೆಂಡಿಸ್ ಅವರನ್ನು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ಟೀಂ ಇಂಡಿಯಾ ಆಟಗಾರ ಕೊಹ್ಲಿಯನ್ನು ಅಭಿನಂದಿಸಲು ಬಯಸುತ್ತೀರಾ? ಎಂಬ ಪ್ರಶ್ನೆಗೆ ನಾನೇಕೆ ಅವರನ್ನು ಅಭಿನಂದಿಸಬೇಕು ಎಂದಿದ್ದರು. ಈಗ ಅವರು ನನ್ನ ಆ ಹೇಳಿಕೆಗಾಗಿ ವಿಷಾದಿಸುತ್ತೇನೆ. ನನಗೆ ಆ ಪ್ರಶ್ನೆ ಅರ್ಥವಾಗಿರಲಿಲ್ಲ ಎಂದಿದ್ದಾರೆ. ವಿಶ್ವಕಪ್ (World Cup) ಪಂದ್ಯಗಳಲ್ಲಿ ಲಂಕಾ ತಂಡದ ಕಳಪೆ ಪ್ರದರ್ಶನಕ್ಕಾಗಿ ತಂಡದ ಅಭಿಮಾನಿಗಳಲ್ಲಿ…

Read More

ಮುಂಜಾನೆ ಅಥವಾ ಸಂಜೆ ಟೀ ಬ್ರೇಕ್‌ನಲ್ಲಿ ಸವಿಯಲು ಕುರುಕಲು ತಿಂಡಿ ಇಲ್ಲವೆಂದರೆ ಏನೋ ಮಿಸ್ ಆದಂತೆ ಎನಿಸುತ್ತದೆ. ಪ್ರತಿ ಬಾರಿ ಅಂಗಡಿಗಳಿಂದ ಬಿಸ್ಕತ್ತು ಅಥವಾ ತಿಂಡಿಗಳನ್ನು ತರೋದಕ್ಕಿಂತ ನೀವೇ ನಿಮ್ಮ ಕೈಯಾರೆ ಮಾಡಿ ಚಹಾ ಜೊತೆ ಸವಿದರೆ ಅದರ ಅನುಭವ ವಿಭಿನ್ನ ಎನಿಸುತ್ತದೆ. ನೀವು ಕೂಡಾ ಗೋಡಂಬಿ ಬಟರ್ ಕುಕೀಸ್ ನಿಮ್ಮ ಕೈಯಾರೆ ಮಾಡಿ ಟೀ ಬ್ರೇಕ್‌ನಲ್ಲಿ ಆನಂದಿಸಿ. ಬೇಕಾಗುವ ಪದಾರ್ಥಗಳು: ಹುರಿದ ಗೋಡಂಬಿ – 2 ಕಪ್ ಬೆಚ್ಚಗಿನ ನೀರು – 2 ಕಪ್ ನೀರು – ಕಾಲು ಕಪ್ ತೆಂಗಿನ ಎಣ್ಣೆ – ಕಾಲು ಕಪ್ ಸಕ್ಕರೆ – ಅರ್ಧ ಕಪ್ ಮೊಟ್ಟೆ – 2 ಬೇಕಿಂಗ್ ಪೌಡರ್ – 1 ಟೀಸ್ಪೂನ್ ಚಾಕೋಚಿಪ್ಸ್ – 1 ಕಪ್ ಮಾಡುವ ವಿಧಾನ: * ಮೊದಲಿಗೆ ಹುರಿದ ಗೋಡಂಬಿಯನ್ನು ಬೆಚ್ಚಗಿನ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿ ಇಡಿ. * ಓವನ್ ಅನ್ನು ಪೂರ್ವಭಾವಿಯಾಗಿ ಕಾಯಿಸಿ ಬೇಕಿಂಗ್ ಶೀಟ್‌ಗೆ ಬಟರ್…

Read More

ಕಲಬುರಗಿ: -ನಾನಾ ಕಾರಣಕ್ಕಾಗಿ ಸತತ ಮೂರು ಬಾರಿ ಮುಂದೂಡಲಾಗಿದ್ದ ಕಲಬುರಗಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಇದೇ ತಿಂಗಳ 17 ಕ್ಕೆ ಫಿಕ್ಸ್ ಆಗಿದೆ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಿಗದಿಯಾಗಿದ್ದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತ್ರತ್ವದಲ್ಲಿ KDP ಮಿಟಿಂಗ್ ನಡೆಯಲಿದೆ. ಇಲಾಖೆಯವರು ದಾಖಲೆ ಸಮೇತ ಸಭೆಗೆ ಹಾಜರಿರಬೇಕು ಅಂತ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ..

Read More

ಬೆಂಗಳೂರು:- ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಬರ ಪರಿಹಾರ ಶೀಘ್ರವೇ ನೀಡಿ ಎಂದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಪ್ರಸಕ್ತ ವರ್ಷ ಶೇ.73ರಷ್ಟು ಮಳೆ ಕೊರತೆ ಉಂಟಾಗಿದ್ದು, ಅದರಿಂದಾಗಿ ರಾಜ್ಯದ 223 ತಾಲೂಕುಗಳು ಬರಕ್ಕೆ ತುತ್ತಾಗಿವೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಅದರಲ್ಲಿ ಸೆ. 22ರಂದು ರಾಜ್ಯ ಸರ್ಕಾರ 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿಯಿದ್ದು, ಎನ್‌ಡಿಆರ್‌ಎಫ್‌ ನಿಯಮಗಳಂತೆ ಬರ ಪರಿಹಾರ ನೀಡುವಂತೆ ಮನವಿ ಸಲ್ಲಿಸಿತ್ತು. ಇದಾದ ನಂತರ ಮಳೆಯ ಕೊರತೆ ತೀವ್ರಗೊಂಡು ಮತ್ತೆ ಉಳಿದ ತಾಲೂಕುಗಳಲ್ಲೂ ಬರದ ಪರಿಸ್ಥಿತಿ ಎದುರಾಗಿತ್ತು. ಅದರ ಬಗ್ಗೆಯೂ ಕೇಂದ್ರ ಸರ್ಕಾರಕ್ಕೆ ಹೊಸದಾಗಿ ಮನವಿ ಸಲ್ಲಿಸಲಾಗಿತ್ತು ಎಂದಿದ್ದಾರೆ. ಅದರ ಆಧಾರದಲ್ಲಿ ಕೇಂದ್ರ ಬರ ಅಧ್ಯಯನ ತಂಡವು ರಾಜ್ಯಕ್ಕೆ ಬಂದು ಅಕ್ಟೋಬರ್‌ 5ರಿಂದ 9ರವರೆಗೆ ಬರ ಪರಿಸ್ಥಿತಿಯನ್ನು ವೀಕ್ಷಿಸಿ ತೆರಳಿದೆ. ಆದರೆ ಈವರೆಗೆ ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳನ್ನೂ ಕೇಂದ್ರದ ತಂಡ ಈವರೆಗೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.…

Read More

ದೆಹಲಿ: ವಿಶ್ವಕಪ್‍ನಿಂದ (World Cup) ಹೊರ ನಡೆದ ಪಾಕ್ (Pakistan) ತಂಡ ಕೆಲವು ಬದಲಾವಣೆಗಳನ್ನು ಕೈಗೊಂಡರೆ ಭಾರತದಂತೆ (Team India) ಬಲಿಷ್ಠವಾಗಲಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಬಾಬರ್ ಅಜಂ, ಶಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್‍ನಂತಹ ಪ್ರತಿಭಾನ್ವಿತ ಆಟಗಾರರಿದ್ದಾರೆ. ಕೆಲವು ಸರಿಯಾದ ನಿರ್ಧಾರ ಹಾಗೂ ಬದಲಾವಣೆಗಳನ್ನು ಮಾಡಿಕೊಂಡರೆ ಪಾಕ್ ಉತ್ತಮವಾಗಿ ಆಡಲು ಸಾಧ್ಯವಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಹಿಂದೆಯೂ ಬಲಿಷ್ಠವಾಗಿತ್ತು. ಈಗಲೂ ಪ್ರತಿಭಾವಂತ ಆಟಗಾರರಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಭ್ಯಾಸ ಹಾಗೂ ಉತ್ತಮ ನಾಯಕತ್ವ ಗುಣಗಳು ಯಶಸ್ವಿಯಾಗಲು ಸಾಧ್ಯವಿದೆ. ಪಾಕ್ ಮತ್ತೆ ಉತ್ತಮವಾಗಿ ಕ್ರಿಕೆಟ್ ಆಡುವ ನಿರೀಕ್ಷೆ ಇದೆ. ಕೇವಲ ಐಪಿಎಲ್ ಆಡುವುದರಿಂದ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಕ್ರಮವಾದ ಅಭ್ಯಾಸದಿಂದ ಮಾತ್ರ ಯಶಸ್ವಿಯಾಗಿ ಪ್ರದರ್ಶನ ನೀಡಲು ಸಾಧ್ಯ ಎಂದಿದ್ದಾರೆ. ಹಣ ಸಂಪಾದನೆಗೆ ಮಾತ್ರ ಟಿ-20 ಪಂದ್ಯಗಳನ್ನು ಆಡಿ. ಉತ್ತಮ ಆಟಗಾರರು 4-5 ದಿನ ನಿರಂತರವಾಗಿ ಕ್ರಿಕೆಟ್ ಆಡಬೇಕು. ಭಾರತದಲ್ಲಿ ಕ್ರಿಕೆಟ್‍ಗೆ ಉತ್ತಮ…

Read More

ಚಾಮರಾಜನಗರ:- ಪವಾಡ ಪುರುಷ ಮಲೆಮಹದೇಶ್ವರಬೆಟ್ಟದಲ್ಲಿ ದೀಪಾವಳಿ ರಥೋತ್ಸವಕ್ಕೆ ಕ್ಷಣ ಗಣನೆ ಶುರುವಾಗಿದೆ. ಮಾದಪ್ಪನಬೆಟ್ಟಕ್ಕೆ ಭಕ್ತಸಾಗರ ಹರಿದು ಬಂದಿದೆ. ಕಳೆದ ಮೂರು ದಿನಗಳಿಂದಲೂ ಮಾದಪ್ಪನ ಸನ್ನಿಧಿಯಲ್ಲಿ ಭಾರೀ ಸಂಖ್ಯೆಯ ಭಕ್ತರು ತಂಗಿದ್ದು, ರಥೋತ್ಸವಕ್ಕೆ ಪಾಲ್ಗೊಳ್ಳಲು ಭಕ್ತಸಾಗರ ಹರಿದುಬಂದಿದೆ. ಲಕ್ಷಾಂತರ ಜನರಿಂದ ರಥೋತ್ಸವದಲ್ಲಿ ಪಾಲ್ಗೊಳ್ಳಲು ಕಾತುರರಾಗಿದ್ದಾರೆ. ಪವಾಡ ಪುರುಷ ನೆಲೆಸಿರುವ ಮಲೆಮಾದಪ್ಪನ ಸನ್ನಿದಿಯಲ್ಲಿ ದೀಪಾವಳಿ ರಥೊತ್ಸವ ನಡೆಯಲಿದ್ದು, ಭಕ್ತಾಧಿಗಳು ಕಾತುರರಾಗಿದ್ದಾರೆ.

Read More