ದಕ್ಷಿಣದ ಹೆಸರಾಂತ ತಾರೆ ಸಮಂತ್ ರುತ್ ಪ್ರಭು (Samant) ಕಾಲಿಗೆ ಚಕ್ರಕಟ್ಟಿಕೊಂಡು ದೇಶ ದೇಶಗಳನ್ನು ಸುತ್ತುತ್ತಿದ್ದಾರೆ. ಅಲ್ಲಿನ ಪ್ರವಾಸಿ ತಾಣಗಳು, ಸುಂದರ ಜಾಗಗಳಿಗೆ ಭೇಟಿ ನೀಡಿ, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ. ಇದೀಗ ಸಮಂತಾ ಭೂತಾನ್ (Bhutan) ಪ್ರವಾಸದಲ್ಲಿ ಇದ್ದಾರೆ. ಫ್ರೆಂಡ್ಸ್ ಜೊತೆ ಭೂತಾನ್ ಗೆ ಹೋಗಿರುವ ಸಮಂತಾ, ಅಲ್ಲಿ ಕಳೆದ ಕ್ಷಣಗಳನ್ನು ಫೋಟೋದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲೂ ಬಾತ್ ರೂಮ್ ನಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಮಲಗಿರುವ ಫೋಟೋ (Hot Photo) ವೈರಲ್ ಆಗಿದೆ ಮೊನ್ನೆಯಷ್ಟೇ ಅವರು ಮೈಯೋಸಿಟಿಸ್ ಟ್ರೀಟ್ ಮೆಂಟ್ ನ ಒಂದು ಭಾಗವಾಗಿರುವ ಕ್ರೈಯೊಥೆರಪಿಯನ್ನು ಪಡೆಯುತ್ತಿದ್ದ ಫೋಟೋವನ್ನು ಅವರು ಶೇರ್ ಮಾಡಿದ್ದರು. ಜೊತೆಗೆ ಎಷ್ಟೊಂದು ಕಷ್ಟದ ದಿನಗಳು ಎಂದೂ ಅವರು ಬರೆದುಕೊಂಡಿದ್ದರು. ಒಂದು ಕಡೆ ತಮಗಿರೋ ಕಾಯಿಲೆಗೆ ಟ್ರೀಟ್ ಮೆಂಟ್ ಪಡೆಯುತ್ತಾ, ಮತ್ತೊಂದು ಕಡೆ ಪ್ರವಾಸ ಮಾಡುತ್ತಾ, ಒಟ್ಟಿನಲ್ಲಿ ಖುಷಿಯ ದಿನಗಳನ್ನು ಕಳೆಯುತ್ತಿದ್ದಾರೆ ಸಮಂತಾ. ಒಂದು ಕಡೆ ಕಾಯಿಲೆ…
Author: AIN Author
ಸಲ್ಮಾನ್ ಖಾನ್ (Salman Khan) ನಟನೆಯ ‘ಟೈಗರ್ 3’ ಸಿನಿಮಾ ದೀಪಾವಳಿ ದಿನದಂದು ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಸಿನಿಮಾ ರಿಲೀಸ್ ಗೂ ಮುನ್ನ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಹಾಗಾಗಿ ಅಡ್ವಾನ್ಸ್ ಬುಕ್ಕಿಂಗ್ ನಲ್ಲೇ ದಾಖಲೆ ರೀತಿಯಲ್ಲಿ ಟಿಕೆಟ್ ಗಳು ಮಾರಾಟವಾಗಿದ್ದವು. ಜೊತೆಗೆ ಹಬ್ಬವೂ ಕೂಡಿ ಬಂದಿದ್ದರಿಂದ ಮೊದಲ ದಿನದ ಗಳಿಕೆ ಎಷ್ಟಾಗಿರಬಹುದು ಎನ್ನುವ ಚರ್ಚೆ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಬಾಲಿವುಡ್ ನ ಟ್ರೇಡ್ ಅನಾಲಿಸ್ಸ್ ಪ್ರಕಾರ ಫಸ್ಟ್ ಡೇ ಕಲೆಕ್ಷನ್ (Collection) ಬರೋಬ್ಬರಿ 44.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ತೆಲುಗಿನಲ್ಲಿ 1.15 ಕೋಟಿ ರೂಪಾಯಿ, ತಮಿಳಿನಲ್ಲಿ ಕೇವಲ 15 ಲಕ್ಷ ರೂಪಾಯಿ ಮತ್ತು ಹಿಂದಿಯಲ್ಲಿ ಬರೋಬ್ಬರಿ 43 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎಂದು ವರದಿಯಾಗಿದೆ. ಈವರೆಗೂ ಸಲ್ಮಾನ್ ಖಾನ್ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ಅನ್ನು ಟೈಗರ್ 3 ಬ್ರೇಕ್ ಮಾಡಿದೆ.
ಹುಬ್ಬಳ್ಳಿ: ನಾನು ರಾಜಸ್ಥಾನದಿಂದ ಬರುತ್ತಿದ್ದೇನೆ. ಛತ್ತೀಸಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಉಳಿದ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಭಾರೀ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಸುದ್ದಿಗಾರರ ಜೊತೆಗೆ ಮಾತನಾಡಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಭಾರೀ ಸುಳ್ಳು ಹೇಳಿದ್ದು ಜನರು ಭ್ರಮರನಿಸನಗೊಂಡಿದ್ದಾರೆ. ಕರ್ನಾಟಕದಲ್ಲಿಯೂ ಸಹ ಅದೇ ರೀತಿ ಮಾಡಿದ್ದಾರೆ. ನೀರಾವರಿ, ಕೃಷಿಗೆ ಭಾರೀ ಅನ್ಯಾಯ ಆಗಿದೆ. ರೈತರಿಗೆ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ. ಮೂಲಭೂತ ಸೌಕರ್ಯಗಳನ್ನು, ಅಗತ್ಯತೆಗಳನ್ನು ಈಡೇರಿಸುತ್ತಿಲ್ಲ. ಇದರೊಂದಿಗೆ ಒಂದು ಕಡೆ ಆರ್ಥಿಕ ಅಶಿಸ್ತು ಮತ್ತು ಪಕ್ಷದಲ್ಲಿ ಆಗುತ್ತಿರುವ ಆಂತರಿಕ ಕಚ್ಚಾಟದಿಂದ ಅಭಿವೃದ್ಧಿ ಕಾರ್ಯಕ್ರಮಗಳು ಸಂಪೂರ್ಣ ಕುಂಠಿತ ಆಗಿವೆ ಎಂದರು. https://ainlivenews.com/b-y-vijayendra-met-former-prime-minister-hd-deve-gowda/ ಐದು ಗ್ಯಾರಂಟಿಗಳ ಕಾಲದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ. ಸ್ವತಃ ಮುಖ್ಯಮಂತ್ರಿಗಳೆ ಸರ್ಕಾರದಲ್ಲಿ ಜಗಳ ಹಚ್ಚುತ್ತಿದ್ದು ಮೂರು ಜನ ಉಪ ಮುಖ್ಯಮಂತ್ರಿಗಳನ್ನ…
ಬೆಂಗಳೂರು:- ನಟ ದರ್ಶನ್ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ನೋಟಿಸ್ ಗೆ ಇನ್ನೂ ನಟ ದರ್ಶನ್ ಉತ್ತರ ನೀಡಿಲ್ಲ. ಮೂರು ದಿನಗಳ ಒಳಗಾಗಿ ಉತ್ತರಿಸುವಂತೆ ಪೊಲೀಸರು ನೋಟಿಸ್ ನಲ್ಲಿ ಸೂಚಿಸಿದ್ದರು. ಶುಕ್ರವಾರ ದರ್ಶನ್ ಗೆ ಆರ್ ಆರ್ ನಗರ ಠಾಣೆ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ನೋಟಿಸ್ ಜಾರಿ ಮಾಡಿ ಮೂರು ದಿನ ಕಳೆದರೂ ನೋಟಿಸ್ ಗೆ ದರ್ಶನ್ ಉತ್ತರಿಸಿಲ್ಲ. ಹೀಗಾಗಿ ಈ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮಕ್ಕೆ ಪೊಲೀಸರು ಚಿಂತನೆ ನಡೆಸಿದ್ದಾರೆ.
ಯಲಹಂಕ:- ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ಶಾಸಕ ಎಸ್.ಆರ್.ವಿಶ್ವನಾಥ್ ಬ್ಯಾಟ್ ಬೀಸಿದ್ದಾರೆ. ಈ ಸಂಬಂಧ ಯಲಹಂಕದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಕ್ಷ ಹುದ್ದೆಗೆ ವಿಜಯೇಂದ್ರ ನೇಮಕ ಹಿನ್ನಲೆ ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ. ಕೆಲವರು ಈ ವಿಷಯಾನ ದೊಡ್ಡದು ಮಾಡಲು ಹೊರಟಿದ್ದಾರೆ, ಬಿಜೆಪಿ ಕೇಡರ್ ಬೇಸಿಸ್ ಪಕ್ಷ. ಯಾಡಿಯೂರಪ್ಪರವರನ್ನ ನಾವು ಲಿಂಗಾಯಿತರೆಂದು ನೋಡಿದ್ವಾ..!? ಇಲ್ಲ. ಬಿಎಸ್ ವೈ ನಮ್ಮ ನೆಚ್ಚಿನ ರಾಜ್ಯದ ನಾಯಕರು. ನಮಗೆ ಭಾರತ ದೇಶ ಮುಖ್ಯ. ನಾವು ಜಿಲ್ಲೆ, ಪ್ರಾಂತ, ಜಾತಿ ಎಂದು ಪಕ್ಷ ಕಟ್ಟಿ ಬೆಳೆಸಿದವರಲ್ಲ, ಸಿ.ಟಿ.ರವಿ ರವರು ಪಕ್ಷದಲ್ಲಿ, ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿ ನಿರ್ವಹಿಸಿದವರು ಅವರು ಆ ರೀತಿ ಅಸಮಾಧಾನ ಹೊರಹಾಕಿರುವುದಿಲ್ಲ. ನಮಗೆ ಆಗದಿರುವವರು ಸಣ್ಣ ವಿಷಯಾನ ದೊಡ್ಡದು ಮಾಡ್ತಿದ್ದಾರೆ. ನಮ್ಮ ಯಾವ ನಾಯಕರಲ್ಲು ವಿಜಯೇಂದ್ರರವರ ಆಯ್ಕೆ ಬಗ್ಗೆ ಅಸಮಾಧನವಿಲ್ಲ. ರಾಜ್ಯಾದ್ಯಕ್ಷ ಹುದ್ದೆ ನಿರ್ವಹಿಸುವಷ್ಟು ಸಾಮರ್ಥ್ಯ ವಿಜಯೇಂದ್ರರವರಿಗಿದೆ ಎಂದು ಯಲಹಂಕದ ಹೊನ್ನೇನಹಳ್ಳಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗ: ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಮಾತನಾಡಿ, ವಿಜಯೇಂದ್ರಗೆ ನೀಡಿದ ಸ್ಥಾನಮಾನ ಕುಟುಂಬ ರಾಜಕಾರಣ ಅಲ್ಲ, ಅವರ ತಂದೆ ಮಾಜಿ ಸಿಎಂ ಯಡಿಯೂರಪ್ಪಗೆ ಸದ್ಯ ಸ್ಥಾನಮಾನ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕುಟುಂಬ ರಾಜಕಾರಣ ಎಂದು ವಿಜಯೇಂದ್ರ ಅವರ ಪದೋನ್ನತಿಗೆ ಪ್ರತಿಕ್ರಿಯೆ ನೋಡಿದೆ. ಕುಟುಂಬ ರಾಜಕಾರಣದ ಬಗ್ಗೆ ಟ್ವೀಟ್ ಮಾಡುವ ಅಧಿಕಾರ ಕಾಂಗ್ರೆಸ್ ಗೆ ಇದೆಯಾ ಎಂಬ ಪ್ರಶ್ನೆ ನನ್ನದು. ಯಾಕಂದ್ರೆ ಕುಟುಂಬ ರಾಜಕಾರಣದ ಯಡಿಯೂರಪ್ಪನವರು ಮಾಡ್ತಾರಾ ಎಂಬ ಅಂಶವನ್ನೇ ಕಾಯುತ್ತಿದ್ದರು. ಆದರೆ ಕಾಂಗ್ರೆಸ್ ಒಂದೇ ಕುಟುಂಬ ಹತ್ತಾರು ವರ್ಷ ಇಂದಿರಾಗಾಂಧಿ ಸೋನಿಯಾ ಗಾಂಧಿ ಆಡಳಿತ ನಡೆಸಿಕೊಂಡು ಬಂದಿದೆ. ಈತನಕ ಯಾರನ್ನೂ ಬಿಟ್ಟಿಲ್ಲ. https://ainlivenews.com/b-y-vijayendra-met-former-prime-minister-hd-deve-gowda/ ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಹಿಡಿತದಲ್ಲಿ ಇದೆ. ಆದರೆ ಭಾರತೀಯ ಜನತಾ ಪಕ್ಷದಲ್ಲಿ ಯಡಿಯೂರಪ್ಪನವರಿಗೆ ಈಗಾಗಲೇ ಯಾವುದೇ ಸ್ಥಾನಮಾನ ನೀಡಿಲ್ಲ. ಅವರು ಚುನಾಯಿತ ಪ್ರತಿನಿಧಿಯೂ ಅಲ್ಲ. ಹಾಗಾಗಿ ಕೇಂದ್ರದ ನಾಯಕರು ವಿಜಯೇಂದ್ರ…
ಮಧ್ಯಪ್ರದೇಶ: ಪಂಚರಾಜ್ಯ ಚುನಾವಣಾ ಕಣ ಕಾವೇರಿದೆ. ಮಧ್ಯಪ್ರದೇಶದಲ್ಲಿ ಹೇಗಾದರೂ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಬಿಜೆಪಿ ಮಹತ್ವದ ಘೋಷಣೆ ಮಾಡಿದೆ. ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ₹450ಗೆ ಅಡುಗೆ ಸಿಲಿಂಡರ್ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಇಂದೋರ್‌ನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಈ ಭರವಸೆ ನೀಡಿದ್ದಾರೆ. ಮಧ್ಯಪ್ರದೇಶ ರಾಜ್ಯ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 450 ರೂಪಾಯಿಗೆ ಸಿಲಿಂಡರ್ ಅನ್ನು ನೀಡಲು ಉದ್ದೇಶಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ, ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ ಎಂದಿದ್ದಾರೆ.
ಬೆಂಗಳೂರು:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇನ್ಮುಂದೆ ತ್ಯಾಜ್ಯ ವಿಲೇವಾರಿ ಶುಲ್ಕ ಪಡೆಯಲು ಮುಂದಾಗಿದ್ದು, ಈ ಸಂಬಂಧ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕರೆ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ನಾಗರಿಕರು ಪ್ರತಿ ತಿಂಗಳು 30 ರೂ. ಪಾವತಿಸಬೇಕು. ಈ ಪ್ರಸ್ತಾವಿತ ಯೋಜನೆ ವ್ಯಾಪ್ತಿಗೆ 46 ಲಕ್ಷ ಮನೆಗಳು ಬರುತ್ತವೆ. ಅಂದಾಜು 6.32 ಲಕ್ಷ ವಾಣಿಜ್ಯ ಕಟ್ಟಡಗಳು ಶುಲ್ಕದ ವ್ಯಾಪ್ತಿಗೆ ಬರಲಿದ್ದು, ತಿಂಗಳಿಗೆ ₹ 72.39 ಕೋಟಿ ಆದಾಯದ ನಿರೀಕ್ಷೆ ಇದೆ. ಮನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಮಾಸಿಕ ವಿದ್ಯುತ್ ಬಳಕೆಯ ಆಧಾರದ ಮೇಲೆ ಶುಲ್ಕ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಕಳೆದ ವಾರ ಶುಲ್ಕ ರಚನೆ ಅಂತಿಮಗೊಳಿಸಿ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಆಸ್ತಿಗೆ ತೆರಿಗೆ ಆಧರಿಸಿ ಶುಲ್ಕ ಸಂಗ್ರಹಿಸುವ ಬದಲಿಗೆ, ವಿದ್ಯುತ್ ಬಳಕೆ ಪ್ರಮಾಣ ಆಧರಿಸಿಯೇ ಶುಲ್ಕ ನಿಗದಿಸಲು ಬಿಬಿಎಂಪಿ ಮುಂದಾಗಿದೆ. ಬೆಸ್ಕಾಂ ಸಿಬ್ಬಂದಿ ನೆರವು…
ಬೆಂಗಳೂರು:- ಕರ್ನಾಟಕ ಸೇರಿ ಹಲವು ಮಹಾನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಆದರೆ ಈ ವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,700ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,760 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,300 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,540 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,175 ರುಪಾಯಿಯಲ್ಲಿ ಇದೆ. ವಿವಿಧ ನಗರಗದಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಬೆಂಗಳೂರು: 55,540 ರೂ, ಚೆನ್ನೈ: 56,990 ರೂ, ಮುಂಬೈ: 55,540 ರೂ,ದೆಹಲಿ: 55,690 ̧ರೂ ಕೋಲ್ಕತಾ: 55,540 ರೂ,ಕೇರಳ: 55,540 ರೂ,ಅಹ್ಮದಾಬಾದ್: 55,590 ̧ರೂ ಜೈಪುರ್: 55,690 ರೂ,ಲಕ್ನೋ: 55,690 ರೂಭುವನೇಶ್ವರ್: 55,540 ರೂಪಾಯಿ ಇದೆ.
ಬೆಂಗಳೂರು: ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಶತಕಗಳ ದಾಖಲೆ ಸರಿಗಟ್ಟಿದ್ದ ವಿರಾಟ್ ಕೊಹ್ಲಿ (Virat Kohli), ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ರೂ ಸಚಿನ್ (Sachin Tendulkar) ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ. ಲೀಗ್ ಸುತ್ತಿನ ಕೊನೆಯ ಪಂದ್ಯವು ಟೀಂ ಇಂಡಿಯಾ (Team India) ಅಭಿಮಾನಿಗಳ ಪಾಲಿಗೆ ರಸದೌತಣವಾಗಿತ್ತು. ಟಾಸ್ ಗೆದ್ದು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ ಬ್ಯಾಟರ್ಸ್, ನೆದರ್ಲೆಂಡ್ಸ್ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಅದರಲ್ಲೂ ಚೇಸ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿಯುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದ್ರೆ ಕೊಹ್ಲಿ ಅರ್ಧಶತಕ ದಾಖಲಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಡಚ್ಚರ ವಿರುದ್ಧ ಅರ್ಧಶತಕ ಸಿಡಿಸಿದ ಕೊಹ್ಲಿ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 7 ಬಾರಿ 50+ ರನ್ ಗಳಿಸಿದ ವಿಶೇಷ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ್ದ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು…