ಶಿವಮೊಗ್ಗ: ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಮಾತನಾಡಿ, ವಿಜಯೇಂದ್ರಗೆ ನೀಡಿದ ಸ್ಥಾನಮಾನ ಕುಟುಂಬ ರಾಜಕಾರಣ ಅಲ್ಲ, ಅವರ ತಂದೆ ಮಾಜಿ ಸಿಎಂ ಯಡಿಯೂರಪ್ಪಗೆ ಸದ್ಯ ಸ್ಥಾನಮಾನ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಕಾಂಗ್ರೆಸ್ ಕುಟುಂಬ ರಾಜಕಾರಣ ಎಂದು ವಿಜಯೇಂದ್ರ ಅವರ ಪದೋನ್ನತಿಗೆ ಪ್ರತಿಕ್ರಿಯೆ ನೋಡಿದೆ. ಕುಟುಂಬ ರಾಜಕಾರಣದ ಬಗ್ಗೆ ಟ್ವೀಟ್ ಮಾಡುವ ಅಧಿಕಾರ ಕಾಂಗ್ರೆಸ್ ಗೆ ಇದೆಯಾ ಎಂಬ ಪ್ರಶ್ನೆ ನನ್ನದು. ಯಾಕಂದ್ರೆ ಕುಟುಂಬ ರಾಜಕಾರಣದ ಯಡಿಯೂರಪ್ಪನವರು ಮಾಡ್ತಾರಾ ಎಂಬ ಅಂಶವನ್ನೇ ಕಾಯುತ್ತಿದ್ದರು. ಆದರೆ ಕಾಂಗ್ರೆಸ್ ಒಂದೇ ಕುಟುಂಬ ಹತ್ತಾರು ವರ್ಷ ಇಂದಿರಾಗಾಂಧಿ ಸೋನಿಯಾ ಗಾಂಧಿ ಆಡಳಿತ ನಡೆಸಿಕೊಂಡು ಬಂದಿದೆ. ಈತನಕ ಯಾರನ್ನೂ ಬಿಟ್ಟಿಲ್ಲ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಿ.ವೈ.ವಿಜಯೇಂದ್ರ!
ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಹಿಡಿತದಲ್ಲಿ ಇದೆ. ಆದರೆ ಭಾರತೀಯ ಜನತಾ ಪಕ್ಷದಲ್ಲಿ ಯಡಿಯೂರಪ್ಪನವರಿಗೆ ಈಗಾಗಲೇ ಯಾವುದೇ ಸ್ಥಾನಮಾನ ನೀಡಿಲ್ಲ. ಅವರು ಚುನಾಯಿತ ಪ್ರತಿನಿಧಿಯೂ ಅಲ್ಲ. ಹಾಗಾಗಿ ಕೇಂದ್ರದ ನಾಯಕರು ವಿಜಯೇಂದ್ರ ಅವರನ್ನ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಕುಟುಂಬ ರಾಜಕಾರಣಕ್ಕೆ ಯಾವತ್ತು ಬಿಜೆಪಿ ವಿರುದ್ಧ ಎಂದರು.