Author: AIN Author

ರಾಯ್ಪುರ:- ಅಧಿಕಾರಕ್ಕೆ ಬಂದರೆ ಛತ್ತೀಸ್‌ಗಢದಲ್ಲೂ ಗೃಹ ಲಕ್ಷ್ಮಿ ಯೋಜನೆ ಜಾರಿ ತರಲಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಮುಂಬರುವ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕದಂತೆಯೇ ಛತ್ತೀಸ್‌ಗಢದಲ್ಲಿಯೂ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು. ಛತ್ತೀಸ್‌ಗಢದಲ್ಲಿ 70 ವಿಧಾನಸಭಾ ಸ್ಥಾನಗಳಿಗೆ ಎರಡನೇ ಹಂತದ ಮತದಾನಕ್ಕೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಚುನಾವಣಾ ಕದನಕ್ಕೆ ದುಮುಕಿದ್ದಾರೆ. ರಾಜ್ಯದಲ್ಲಿ ತನ್ನ ‘ಗೃಹ ಲಕ್ಷ್ಮಿ ಯೋಜನೆ’ಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆ’ ಅನ್ನು ಛತ್ತೀಸ್‌ಗಢದಲ್ಲಿಯೂ ಜಾರಿಗೆ ತರಲಾಗುವುದು. ಈ ಯೋಜನೆ ಅಡಿ ವರ್ಷಕ್ಕೆ 15,000 ರೂ.ಗಳನ್ನು ಮಹಿಳೆಯರ ಖಾತೆಗಳಿಗೆ ಜಮೆ ಮಾಡಲಾಗುವುದು. ಇದರೊಂದಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್ 500 ರೂ. ಸಬ್ಸಿಡಿ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.

Read More

ನವದೆಹಲಿ:- ತಮ್ಮ ಸಾಮರ್ಥ್ಯದಿಂದ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ವಿಜಯೇಂದ್ರ ಅವರು ಪಕ್ಷದ ಆಸ್ತಿ. ವಿಜಯೇಂದ್ರರವರು ತಮ್ಮ ಸಾಮರ್ಥ್ಯದ ಮೂಲಕ ಈ ನಾಯಕತ್ವವನ್ನು ಗಳಿಸಿದ್ದಾರೆ. ಪಕ್ಷ ಸಂಘಟನೆಗೆ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದಲ್ಲದೆ, ಅವರ ಕಾರ್ಯನಿರ್ವಹಣೆಯಿಂದ ಬಿಜೆಪಿಗೆ ಲಾಭವಾಗಿದ್ದು, ಪಕ್ಷಕ್ಕೆ ತಾವು ದೊಡ್ಡ ಆಸ್ತಿ ಎಂದು ಅವರು ಸಾಬೀತುಪಡಿಸಿದ್ದಾರೆ. ಯುವ ನಾಯಕರಾಗಿರುವ ವಿಜಯೇಂದ್ರ ಅವರ ನೇಮಕವು, ಬಿಜೆಪಿಯು ಶ್ರಮಶೀಲ ಯುವಶಕ್ತಿಯನ್ನು ಗೌರವಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದರು. ನಾವು ಯಾರನ್ನೂ ಕಡೆಗಣಿಸುವುದಿಲ್ಲ. ವಿಷಯವು ತಂತ್ರವಾಗಿದೆ. ಯಾವ ತಂತ್ರವು ಉಪಯುಕ್ತವಾಗಿದೆ ಎಂಬುದನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಾವು ಎಲ್ಲಾ ಪ್ರಮುಖ ನಾಯಕರನ್ನು ಚುನಾವಣಾ ಪ್ರಚಾರದ ಮುಖ್ಯ ಭಾಗವಾಗಿ ಮಾಡುತ್ತೇವೆ. ನಮ್ಮ ರಾಜ್ಯದ ಎಲ್ಲಾ ದೊಡ್ಡ ನಾಯಕರ ಕಾರ್ಯಕ್ರಮಗಳನ್ನು ನೋಡಿ, ಅವರು ಎಲ್ಲೆಂದರಲ್ಲಿ ಹೋಗುತ್ತಿದ್ದಾರೆ, ತಮ್ಮನ್ನು ಮಾತ್ರವಲ್ಲದೆ ಇತರರನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಪಂಚರಾಜ್ಯ ಚುನಾವಣೆಗಳ ಬಗ್ಗೆಯೂ ಜೆಪಿ ನಡ್ಡಾ ಅವರನ್ನು…

Read More

ನಾಳೆ ಭಾರತ vs ನ್ಯೂಜಿಲೆಂಡ್​ ಸೆಮೀಸ್​ ಫೈಟ್​ ನಡೆಯಲಿದ್ದು, ನಕಲಿ ಟಿಕೆಟ್​ ಬಗ್ಗೆ ಅಭಿಮಾನಿಗಳು ಎಚ್ಚರ ವಹಿಸಬೇಕಾಗಿದ. ಕೋಲ್ಕತ್ತಾದಲ್ಲಿ ವಿಶ್ವಕಪ್​ ಪಂದ್ಯಗಳ ಟಿಕೆಟ್ ಅಕ್ರಮ ಮಾರಾಟ ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭಾರತ ಮತ್ತು ನ್ಯೂಜಿಲೆಂಡ್​ ನಡುವಣ ಹೈವೋಲ್ಟೇಜ್​ ಸೆಮೀಸ್​ ಪಂದ್ಯದ ಟಿಕೆಟ್ ಖರೀದಿಸುವಾಗ ಹೆಚ್ಚು ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ವಿಶ್ವಕಪ್​ನ ಮುಂದಿನ ಮೂರು ಪಂದ್ಯಗಳ ಟಿಕೆಟ್​ಗಳು ಮಾರಾಟವಾಗಿದೆ. ಮುಂಬೈ ಪೊಲೀಸ್ ಡಿಸಿಪಿ ಪ್ರವೀಣ್ ಮುಂಡೆ ವಿಶ್ವಕಪ್ ಟಿಕೆಟ್‌ಗಳ ಬ್ಲಾಕ್ ಮಾರ್ಕೆಟಿಂಗ್ ಬಗ್ಗೆ ಮಾತನಾಡಿದ್ದಾರೆ. ”ನವೆಂಬರ್ 2 ರಂದು ಭಾರತ ಮತ್ತು ಶ್ರೀಲಂಕಾ ಪಂದ್ಯದ ವೇಳೆ ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕೆಲವು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ ”ಎಂದು ಹೇಳಿದರು. “ನಾವು ಈಗಾಗಲೇ ಕೆಲವು ವ್ಯಕ್ತಿಗಳನ್ನು ಬ್ಲಾಕ್ ಮಾರ್ಕೆಟಿಂಗ್‌ ಆರೋಪದ ಮೇಲೆ ಬಂಧಿಸಿದ್ದೇವೆ. ಭಾರತ ಮತ್ತು ಶ್ರೀಲಂಕಾ ಪಂದ್ಯದ ಸಂದರ್ಭದಲ್ಲಿ, ನಾವು ಕ್ರೀಡಾಂಗಣದ ಹೊರಗೆ ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡಿದ ಕೆಲವು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದೇವೆ.…

Read More

ಹಳ್ಳಿ ಕಾರ್’​ ಎಂದೇ ಖ್ಯಾತರಾದ ವರ್ತೂರು ಸಂತೋಷ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ತಮ್ಮ ಕತ್ತಿನಲ್ಲಿ ಧರಿಸಿದ್ದ ಲಾಕೆಟ್​ ಹುಲಿ ಉಗುರು ಎಂಬ ವಿವಾದಕ್ಕೆ ಸಿಲುಕಿ ಬಿಗ್​ ಮನೆಯಿಂದ ರಾತ್ರೋ ರಾತ್ರಿ ಹೊರಬಂದಿದ್ದರು. ಆದಾದ ಬಳಿಕ ಇತ್ತೀಚೆಗೆ ಸುದೀಪ್​ ಮುಂದೆ ನಾನು ಮನೆಯಲ್ಲಿ ಉಳಿಯಲು ಇಷ್ಟಪಡಿಸುವುದಿಲ್ಲ, ಕಳಿಸಿಬಿಡಿ ಎಂದು ಹಠ ಮಾಡುವ ಮೂಲಕ ಸುದ್ದಿಯಾಗಿದ್ದರು. ಈಗ ಅವರ ಮದುವೆ ಕುರಿತಾದ ಒಂದು ವಿಡಿಯೋ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಏನಿದು ಮದುವೆ ಕಥೆ? ಬಿಗ್​ ಬಾಸ್​ ಮನೆಗೆ ವಿವಿಧ ಕ್ಷೇತ್ರಗಳಿಂದ ಬಂದಿರುವ ಸ್ಪರ್ಧಿಗಳ ಪೈಕಿ ರೈತಾಪಿ ವರ್ಗವನ್ನು ಪ್ರತಿನಿಧಿಸುವ ಒಬ್ಬ ಕೃಷಿಕನಾಗಿ ಎಂಟ್ರಿ ಕೊಟ್ಟ ವರ್ತೂರು ಸಂತೋಷ್​, ಮನೆಯಲ್ಲಿನ ಚಟುವಟಿಕೆಗಳಲ್ಲಿ ತಮ್ಮ ಪಾಲ್ಗೊಳ್ಳುವಿಕೆಯಿಂದ ಎಲ್ಲರ ಗಮನ ಸೆಳೆದಿದ್ದರು. ಜನಸಾಮಾನ್ಯರಿಂದ ಬಹುಮತಗಳನ್ನು ಪಡೆದು ವಾರಾಂತ್ಯದಲ್ಲಿ ಸೇಫ್​ ಆಗುತ್ತಿರುವ ವರ್ತೂರು ಸಂತೋಷ್​ ಮದುವೆಯಾಗಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.…

Read More

ಆದರ್ಶ ಪತ್ನಿ ಎಂದೂ ಕೇಳಿಬರುವುದು ಸಹಜವೇ. ಆದರೆ ಆದರ್ಶ ಪತಿ ಹೀಗಿರಬೇಕು ಎನ್ನುವ ಮಾತು ಕೇಳಿಬರುವುದು ಸ್ವಲ್ಪ ಕಮ್ಮಿಯೇ. ಹೆಣ್ಣಾದವಳು ತನ್ನ ಗಂಡನಲ್ಲಿ ಈ ರೀತಿಯ ಆದರ್ಶ ಗುಣಗಳು ಇರಬೇಕು ಎಂದು ಬಯಸುತ್ತಾಳೆ. ಆ ಸಂದರ್ಭದಲ್ಲಿ ಆಕೆಯ ಬಾಯಿಯಿಂದ ಆದರ್ಶ ಗಂಡ ಎನ್ನುವ ಶಬ್ದ ಬರುವುದು ಬಿಟ್ಟರೆ, ಸಾಮಾನ್ಯವಾಗಿ ಬುದ್ಧಿ ಮಾತು ಹೇಳುವಾಗ ಪತ್ನಿಯ ಆದರ್ಶದ ಬಗ್ಗೆಯೇ ಮಾತನಾಡುವುದು ತಲೆ ತಲಾಂತರಗಳಿಂದಲೂ ನಡೆದುಕೊಂಡು ಬಂದಿದೆ. ಇದರ ನಡುವೆಯೇ ಆದರ್ಶ ಗಂಡ ಹೀಗೆ ಇರಬೇಕು ಎಂದು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಗೀತಾದ ನಾಯಕ ಹೇಳಿಕೊಟ್ಟಿದ್ದು, ಅದರ ಪ್ರೊಮೋ ಸಕತ್​ ವೈರಲ್​ ಆಗುತ್ತಿದೆ. ನಿಜವಾಗಿಯೂ ಆದರ್ಶ ಗಂಡ ಹೀಗೆಯೇ ಇರಬೇಕು ಎನ್ನುತ್ತಿದ್ದಾರೆ ಮಹಿಳೆಯರು. ಅಷ್ಟಕ್ಕೂ ಈ ಸೀರಿಯಲ್ ಅತ್ತೆ-ಸೊಸೆಗೆ ಸಂಬಂಧಿಸಿದ ಕಥೆಯಾದರೂ ಗೀತಾ ಗಂಡನಿಗೂ ಪಾತ್ರದಲ್ಲಿ ಪ್ರಾಮುಖ್ಯತೆ ಇದೆ. ಮೂರು ಪಾತ್ರಗಳ ಸುತ್ತ ಸುತ್ತುತ್ತಿರುವ ಕಥೆ ಇದಾಗಿದೆ. ಇದೀಗ ಇಂಥದ್ದೊಂದು ಡೈಲಾಗ್​ ಇರುವ ಪ್ರೋಮೋ ರಿಲೀಸ್​ ಮಾಡಿರುವ ತಂಡ, ಪ್ರೇಕ್ಷಕರನ್ನು ತನ್ನತ್ತ…

Read More

ಬೆಂಗಳೂರು:- ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ನನಗೆ ಯಾರದ್ದೂ ವಿರೋಧ ಇಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತಮ್ಮ ಆಯ್ಕೆಗೆ ಯಾರ ವಿರೋಧವೂ ಇಲ್ಲ. ಭಾರತವನ್ನು ಶಕ್ತಿಶಾಲಿಯನ್ನಾಗಿಸಿ ಮುನ್ನಡೆಸಿಕೊಂಡು ಹೋಗುತ್ತಿರುವ ನೇಂದ್ರ ಮೋದಿ ಅವರು ಮೂರನೇ ಸಲಕ್ಕೆ ಪ್ರಧಾನಿಯಾಗಬೇಕು ಎಂದು ಗಣೇಶನಲ್ಲಿ ಪ್ರಾರ್ಥಿಸಿದ್ದೇನೆ, ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು. ರಾಜ್ಯದಲ್ಲಿ ಹಿರಿಯರಿದ್ದರೂ ನನಗೆ ಕೇಂದ್ರದ ವರಿಷ್ಠಾಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಎಲ್ಲರನ್ನೂ ವಿಶ್ಚಾಸಕ್ಕೆ ತೆಗೆದುಕೊಂಡು ಪಕ್ಷದ ಕೆಲಸ ಮಾಡಲಾಗುವುದು. ನನ್ನ ಆಯ್ಕೆ ಮೋದಿ, ಜೆ.ಪಿ.ನಡ್ಡಾ, ಅಮಿತ್ ಷಾ‌ ಅವರ ತೀರ್ಮಾನವಾಗಿದ್ದು ಇದಕ್ಕೆ ಯಾರ ವಿರೋಧವಿಲ್ಲ‌ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

Read More

ಬೆಂಗಳೂರು: ಪ್ರಸ್ತುತ ಕಾಲದಲ್ಲಿ ಸ್ಪರ್ಧೆ ಕೇವಲ ಶಾಲಾಮಟ್ಟದಲ್ಲಿ ಇಲ್ಲ, ಜಾಗತಿಕಮಟ್ಟದಲ್ಲಿದೆ. ಮಕ್ಕಳು ಜಾಗತಿಕವಾಗಿ ಯೋಚನೆ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕಿವಿಮಾತು ಹೇಳಿದರು. ನಗರದ ಗಾಂಧಿ ಭವನದಲ್ಲಿ ಜವಾಹರ್ ಬಾಲ್ ಮಂಚ್ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ದೇಶ, ಪ್ರಪಂಚ ವಿಶಾಲವಾಗಿದೆ, ಜ್ಞಾನವೂ ಹೆಚ್ಚು ವಿಸ್ತಾರಗೊಳ್ಳುತ್ತಿದೆ, ಅದಕ್ಕೆ ತಕ್ಕಂತೆ ಮಕ್ಕಳು ಸಹ ಜ್ಞಾನದಾಹಿಗಳಾಗಬೇಕು, ಈಗಿನ ಶಿಕ್ಷಕರು ಮಕ್ಕಳಿಗಿಂತ ಹೆಚ್ಚು ಕಲಿಯಬೇಕಾಗಿದೆ ಎಂದರು. ಇಡೀ ಪ್ರಪಂಚದಲ್ಲಿ ಅದೃಷ್ಟವಂತರು ಎಂದರೆ ಮಕ್ಕಳು. ಏಕೆಂದರೆ ಅವರ ಪೋಷಕರು ನಾವು ಕಷ್ಟಪಟ್ಟಂತೆ ಮಕ್ಕಳು ಪಡಬಾರದು ಎಂದು ಎಲ್ಲಾ ರೀತಿಯ ಸೌಕರ್ಯ ಮಾಡಿಕೊಡುತ್ತಾರೆ, ಅವರ ಕಷ್ಟಗಳಿಗೆ ನಾವು ಸಾಧನೆ ಮಾಡಿ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು. ನಾನು ಭರತನಾಟ್ಯ ಕಲಿಯಲು ಹೋಗಿದ್ದೆ ನಾನು ವಿದ್ಯಾರ್ಥಿಯಾಗಿದ್ದಾಗ ಎಲ್ಲಾ ಕೆಲಸಗಳು, ಸ್ಪರ್ಧೆಗಳಲ್ಲೂ ಆಸಕ್ತಿಯಿಂದ ಭಾಗವಹಿಸುತ್ತಿದ್ದೆ. ಶಾಲೆಯ ಬ್ಯಾಂಡ್‌ ತಂಡದಲ್ಲಿ ಬೇಸ್‌ ಡ್ರಮ್‌ ನುಡಿಸುತ್ತಿದೆ. ನಾನು ಮತ್ತು ನನ್ನ ಗೆಳೆಯನೊಬ್ಬ ಚಾಮರಾಜಪೇಟೆಯ ನೃತ್ಯಕಲಾ ನಿಕೇತನ ಎನ್ನುವ ಶಾಲೆಗೆ ಭರತನಾಟ್ಯ…

Read More

ವಯಸ್ಸಾದವರ ಅತ್ಯಂತ ಗಂಭೀರ ಸಮಸ್ಯೆಯೆಂದರೆ, ಜ್ಞಾಪಕ ಶಕ್ತಿ ನಷ್ಟ. ಆದರೆ, ಇಂದು ಯುವಕರಲ್ಲಿಯೂ ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು, ಮರೆತು ಹೋಗುವುದು ಸಾಮಾನ್ಯವಾಗಿದೆ. ಈ ಸರಳವಾದ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಬುದ್ಧಿವಂತಿಕೆ ಮತ್ತು ಸ್ಮರಣೆಯನ್ನು ಹೆಚ್ಚಿಸಬಹುದು. ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುವ ಸಲಹೆಗಳು 1. ವ್ಯಾಯಾಮ: ಏರೋಬಿಕ್ ವ್ಯಾಯಾಮ ಅಥವಾ ಮಧ್ಯಮ ವ್ಯಾಯಾಮವು ಹೃದಯದ ಆರೋಗ್ಯ ಮಾತ್ರವಲ್ಲದೆ, ಅದಕ್ಕಿಂತ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ವ್ಯಾಯಾಮವು ನಿಮ್ಮ ಮೆದುಳಿನ ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತವೆ. 2. ಆರೋಗ್ಯಕರ ತಿನ್ನುವ ಅಭ್ಯಾಸ: ನಟ್ಸ್​, ಸಾಲ್ಮನ್, ಧಾನ್ಯಗಳು, ಆಲಿವ್ ಎಣ್ಣೆ ಮತ್ತು ತಾಜಾ ಉತ್ಪನ್ನಗಳಂತಹ ಆರೋಗ್ಯಕರ ಆಹಾರಗಳನ್ನು ತಿನ್ನುವುದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ, ಈ ರೀತಿಯ ಆಹಾರವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹ ನೆರವಾಗುತ್ತದೆ. 3. ಮೆದುಳನ್ನು ಉತ್ತೇಜಿಸುವ ವ್ಯಾಯಾಮಗಳು: ಮೆದುಳನ್ನು ಉತ್ತೇಜಿಸುವ ವ್ಯಾಯಾಮಗಳು ನರ ಕೋಶಗಳ ನಡುವೆ ಹೊಸ ಸಂಪರ್ಕಗಳನ್ನು ಸೃಷ್ಟಿಸುತ್ತವೆ.…

Read More

ಇತ್ತೀಚಿನ ಅಧ್ಯಯನಗಳ ಪ್ರಕಾರ, ಬಾದಾಮಿಯ ನಿಯಮಿತ ಸೇವನೆಯಿಂದ ಮಧುಮೇಹ ಪೂರ್ವ ಹಂತದಲ್ಲಿರುವ ವ್ಯಕ್ತಿಳಿಗೆ ಮಧುಮೇಹ ಸಂಬಂಧಿತ ತೊಂದರೆಗಳು ಎದುರಾಗುವ ಸಾಧ್ಯತೆ ಕಡಿಮೆಗೊಳ್ಳುತ್ತದೆ. ವಿಶೇಷವಾಗಿ ಯುವ ಜನಾಂಗ ಈ ಅಭ್ಯಾಸದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ: ಕೊಂಚ ದುಬಾರಿ ಎಂಬ ಒಂದೇ ಅಂಶವನ್ನು ಬಿಟ್ಟರೆ ಬಾದಾಮಿ ತಿನ್ನದೇ ಇರಲು ಯಾವುದೇ ಕಾರಣ ಉಳಿಯುವುದಿಲ್ಲ. ಇದು ಅತ್ಯಂತ ಆರೋಗ್ಯಕರ ಅಹಾರವಾಗಿದೆ ಹಾಗೂ ನಿತ್ಯವೂ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಉತ್ತಮಗೊಳಿಸುವುದು, ಕೊಲೆಸ್ಟ್ರಾಲ್ ನಿಯಂತ್ರಣ, ಮೂಳೆಯ ಆರೋಗ್ಯ ವೃದ್ದಿಸುವುದು ಹಾಗೂ ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ಒದಗಿಸುವುದು ಈ ಪ್ರಯೋಜನಗಳಲ್ಲಿ ಕೆಲವು. ಕ್ಯಾಲೋರಿಗಳು: 161 ನಾರಿನ ಅಂಶ : 3.5 ಗ್ರಾಂ ಪ್ರೋಟೀನ್: 6 ಗ್ರಾಂ ಕಾರ್ಬೋಹೈಡ್ರೇಟುಗಳು : 2.5 ಗ್ರಾಂ ಕೊಬ್ಬು: 14 ಗ್ರಾಂ ನಿತ್ಯದ ಶಿಫಾರಸ್ಸು ಮಾಡಲ್ಪಟ್ಟ ಪ್ರಮಾಣದ 37% ವಿಟಮಿನ್ ಇ ನಿತ್ಯದ ಶಿಫಾರಸ್ಸು ಮಾಡಲ್ಪಟ್ಟ ಪ್ರಮಾಣದ 32% ಮೆಗ್ನೀಶಿಯಮ್ ಈ…

Read More

ನಕ್ಕಾಗ ಹಲ್ಲುಗಳು ಮುತ್ತಿನಂತೆ ಹೊಳೆದರೆ ನೋಡುಗರಿಗೆ ನಿಮ್ಮ ಮುಖ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಇಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ಹಲ್ಲುಗಳನ್ನು ಕೆಲವು ಸರಳ ವಿಧಾನ ಬಳಸಿ ಬೆಳ್ಳಗಾಗಿಸುವ ಟಿಪ್ಸ್ ನೀಡಿದ್ದೇವೆ ನೋಡಿ: ಅರಿಶಿಣ ನಿಮ್ಮ ಟೂತ್‌ಬ್ರೆಷ್‌ ಮೇಲೆ ಸ್ವಲ್ಪ ಅರಿಶಿಣ ಹಾಕಿ ಹಲ್ಲುಜ್ಜಿ, ನಂತರ ಪೇಸ್ಟ್‌ನಿಂದ ಹಲ್ಲು ತಿಕ್ಕಿದರೆ ಹಲ್ಲು ಬೆಳ್ಳಗಾಗುವುದು. ಸ್ಟ್ರಾಬೆರಿ ಹಾಗೂ ಅಡುಗೆ ಸೋಡಾ ಸ್ಟ್ರಾಬೆರಿ ಮೇಲೆ ಅಡುಗೆ ಸೋಡ ಚಿಮುಕಿಸಿ ಅದರಿಂದ ಹಲ್ಲು ತಿಕ್ಕಿದರೆ ಹಲ್ಲು ಬೆಳ್ಳಗಾಗುವುದು. ತುಳಸಿ ತುಳಸಿ ಎಲೆಯನ್ನು ಒಣಗಿಸಿ ಪುಡಿ ಮಾಡಿ, ಆ ಪುಡಿಯನ್ನು ಟೂತ್‌ಪೇಸ್ಟ್ ಜತೆ ಮಿಕ್ಸ್ ಮಾಡಿ ಹಚ್ಚುವುದರಿಂದ ಹಲ್ಲಿನಲ್ಲಿರುವ ಹಳದಿ ಬಣ್ಣವನ್ನು ಹೋಗಲಾಡಿಸಬಹುದು. ಎಣ್ಣೆಯಿಂದ ಬಾಯಿ ಮುಕ್ಕಳಿಸುವುದು ಆಯಿಲ್‌ ಪುಲ್ಲಿಂಗ್‌ ಅಥವಾ ಎಣ್ಣೆಯಿಂದ 5 ನಿಮಿಷ ಬಾಯಿ ಮುಕ್ಕಳಿಸಿ, ನಂತರ ತಣ್ಣೀರಿನಿಂದ ಬಾಯಿ ತೊಳೆಯಬೇಕು. ಈ ರೀತಿ ಮಾಡಿದರೆ ಹಲ್ಲಿನ ಆರೋಗ್ಯ ಹೆಚ್ಚುವುದು. ಬಾಳೆಹಣ್ಣಿನ ಸಿಪ್ಪೆ ಬಾಳೆ ಹಣ್ಣಿನ ಸಿಪ್ಪೆಯನ್ನು ಹಲ್ಲಿಗೆ ತಿಕ್ಕಿ, ನಂತರ ಟೂತ್‌ಪೇಸ್ಟ್‌ನಿಂದ ತಿಕ್ಕಿದರೆ ಬಿಳುಪು…

Read More