ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು. ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ಜನನ ಹಾಗೂ ಮರಣ ದೈವಾನುಗ್ರಹ ಹಾಗೆಯೇ ಮೂಲ ನಕ್ಷತ್ರದಲ್ಲಿ ಹೆಣ್ಣಾಗಲಿ ಗಂಡಾಗಲಿ ಜನನವಾದರೆ ಅವರವರ ಶಕ್ತಿ ಅನುಸಾರವಾಗಿ ದೋಷ ನಿವಾರಣೆ ಪೂಜಾ ಮಾಡಿಸಿಕೊಳ್ಳಬೇಕು. ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ದೋಷ ಅಂಟುವುದು ಎಂಬುದರ ಬಗ್ಗೆ ಮಾಹಿತಿ ನೋಡೋಣ. (1) ಮೂಲ ನಕ್ಷತ್ರದಲ್ಲಿ ಜನಿಸಿದರೆ ತಂದೆಗೆ ಸಮಸ್ಯೆಗೆ ಒಳಗಾಗುವ ಸಂಭವ. (2) ಮೂಲಾ ನಕ್ಷತ್ರದಲ್ಲಿ 4ನೇ ಚರಣದಲ್ಲಿ ಜನಿಸಿದರೆ ಯಾವುದೇ ದೋಷ ಇರುವುದಿಲ್ಲ. ಇದಕ್ಕಾಗಿ…
Author: AIN Author
“ತಮ್ಮ ಜನ್ಮ ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ” ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಜೀವನದಲ್ಲಿ ಒಂದೇ ಒಂದು ಸಾರಿ ಮದುವೆ ಆಗುತ್ತದೆ. ಮದುವೆ ಕ್ಷಣದಿಂದ ತುಂಬಾ ಉಲ್ಲಾಸ ಜೀವನ ಮಾಡುತ್ತೀರಿ, ನಂತರ ಎರಡು ವರ್ಷ ,ಮೂರು ವರ್ಷ ಕಳೆದು ಹೋಗುತ್ತದೆ. ನಂತರ ನಿಮಗೆ ಮಕ್ಕಳಿಲ್ಲದ ಸಂಕಟ ಪ್ರಾರಂಭವಾಗುತ್ತದೆ. ಆಗ ನೀವು ಆ ದೇವರು ದರ್ಶನ, ವೈದ್ಯರ ಭೇಟಿ ಮಾಡಲು ಪ್ರಾರಂಭಿಸುತ್ತೀರಿ. ವೈದ್ಯರು ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಸುತ್ತಾರೆ . ಅದರಲ್ಲಿ ಯಾವುದೇ ತರಹದ ನ್ಯೂನ್ಯತೆ ಕಾಣುವುದಿಲ್ಲ . ಎಲ್ಲ ನಿಮ್ಮ ಆರೋಗ್ಯ ಚೆನ್ನಾಗಿದೆ ಹೌಷಧಿ ತಗೊಳ್ಳಿ ಅಂತ ಸಲಹೆ ನೀಡುತ್ತಾರೆ. ಆದ್ರೂ ನಿರಾಶೆ ಆಗುವ ಸಾಧ್ಯತೆ. ಆಗ ತಮಗೆ ಸಹಾಯಸ್ತ ನೀಡುವುದು ದೈವ ಭಾಗ್ಯ ಅದೇ ಜನ್ಮಜಾತಕ ಅಥವಾ ಜನ್ಮ ಕುಂಡಲಿ. ತಮ್ಮ ಜನ್ಮಕುಂಡಲಿ ಪರೀಕ್ಷಿಸಬೇಕು. ಅದರಲ್ಲಿ ಲಗ್ನದಿಂದ ಪಂಚಮ ಸ್ಥಾನ ನೋಡಿ ಸರಿಯಾಗಿ ಪರೀಕ್ಷಿಸಬೇಕು.ಪಂಚಮ ಸ್ಥಾನಕ್ಕೆ ಯಾರು ಅಧಿಪತಿ ಇದ್ದಾನೆ ,ಶುಭಗ್ರಹಗಳು…
ಜನ್ಮ ಕುಂಡಲಿಯಲ್ಲಿ ( ಜಾತಕ )ಯಾವ ಮನೆಯಲ್ಲಿ ಶನಿ ಸ್ವಾಮಿಇದ್ದರೆ ವಿವಾಹ ವಿಳಂಬಕ್ಕೆ ಕಾರಣ ವಾಗುತ್ತದೆ? ಸೋಮಶೇಖರ್B.Sc ಜಾತಕ ಬರೆಯುವುದು, ಜಾತಕವಿಶ್ಲೇಷಣೆಗಾರರು ರಾಶಿಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಜನ್ಮ ಜಾತಕ ಅಥವಾ ಕುಂಡಲಿ ಲಗ್ನದಿಂದ ಅಂದರೆ ಕೇಂದ್ರದಿಂದ ಸಪ್ತಮ ಸ್ಥಾನ ಶನಿ ಸ್ವಾಮಿ ಇದ್ದರೆ ಮದುವೆ ವಿಳಂಬಕ್ಕೆ ಶನಿಸ್ವಾಮಿಯೇ ಕಾರಣವಾಗುತ್ತಾನೆ. ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ತಮ್ಮ ಮದುವೆ ತಡವಾಗಿ ಅಂದರೆ ಮೂವತ್ತರ ಪ್ರಾಯದ ಮೇಲೆ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ. ಶನಿ ಸ್ವಾಮಿಯು ನಿಮಗೇನಾದರೂ ಒಲಿದರೆ ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುತ್ತಾನೆ, ಆದರೆ ಒಲಿಯದೆ ಹೋದರೆ ತಮಗೆ ದುಃಖ ನೀಡುತ್ತಾನೆ, ಕರ್ಮ ಕಾರನ್ನು ಆಗಿರುತ್ತಾನೆ , ಅಲ್ಪ ಆಯಸ್ಸು ಮತ್ತು ಕಂಟಕನಾಗಿರುತ್ತಾನೆ. ಶನಿ ಸ್ವಾಮಿಗೆ ತುಲಾ ರಾಶಿಯ ಉಚ್ಚ ಸ್ಥಾನವಾಗಿದ್ದು. ಮೇಷರಾಶಿ ನೀಚಸ್ಥಾನ ವಾಗಿರುತ್ತದೆ .ಇಲ್ಲಿ ಮೇಷ ರಾಶಿಗೆ ಅಧಿಪತಿ ಕುಜ. ಕುಜ ಮತ್ತು ಶನಿ ಶತ್ರು ಗ್ರಹಗಳು. ಜ್ಯೋತಿಷ್ಯಶಾಸ್ತ್ರದ…
ಸೂರ್ಯೋದಯ: 06.18 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ತದಿಗೆ 12:34 PM ತನಕ ನಂತರ ಚೌತಿ ನಕ್ಷತ್ರ: ಇವತ್ತು ಜೇಷ್ಠ 03:01 AM ತನಕ ನಂತರ ಮೂಲ ಯೋಗ: ಇವತ್ತು ಸುಕರ್ಮಾ10:00 AM ತನಕ ನಂತರ ಧೃತಿ ಕರಣ: ಇವತ್ತು ತೈತಲೆ 01:13 AM ತನಕ ನಂತರ ಗರಜ 12:34 PM ತನಕ ನಂತರ ವಣಿಜ 11:51 PM ತನಕ ನಂತರ ವಿಷ್ಟಿ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 08.04 PM to 09.38 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:38 ನಿಂದ ಮ.12:23 ವರೆಗೂ ಮೇಷ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ತೊಂದರೆ ಎದುರಿಸಿವಿರಿ, ರಾಜಕಾರಣಿಗಳಿಗೆ ಪದವಿಗ್ರಹಣ,…
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವಕಪ್ ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ವಿರುದ್ಧ 70 ರನ್ ಗಳಿಂದ ಗೆಲುವು ದಾಖಲಿಸಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ, ವಿರಾಟ್ ಕೊಹ್ಲಿ, ಶ್ರೇಯಸ್ ಅವರ ಉತ್ತಮ ಇನ್ನಿಂಗ್ಸ್ ನಿಂದ 50 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 397 ರನ್ ಗಳಿಸಿ ಉತ್ತಮ ಟಾರ್ಗೆಟ್ ನೀಡಿತ್ತು. ಇದನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ, ಉತ್ತಮವಾಗಿಯೇ ಆರಂಭ ಮಾಡಿದರು ಕೂಡ ಭಾರತ ನೀಡಿದ ಗುರಿ ತಲುಪಲಾಗದೇ 48 ಓವರ್ ಗಳಲ್ಲಿ 10 ವಿಕೆಟ್ ಗಳ ನಷ್ಟಕ್ಕೆ 327 ರನ್ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಭಾರತ ತಂಡ 70 ರನ್ ಗಳಿಂದ ಗೆದ್ದು ಬೀಗಿದೆ. ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಆರಂಭ ಪಡೆಯಿತು. 50 ಓವರ್ ಗಳಲ್ಲಿ4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿ ಬೃಹತ್ ಗುರಿಯನ್ನು ಕೇನ್ ವಿಲಿಯಮ್ಸನ್ ಪಡೆಯ ಮುಂದಿಟ್ಟಿತು.…
ಬೆಂಗಳೂರು:- ಪೊಲೀಸರ ವರ್ಗಾವಣೆ ಪದೇ ಪದೇ ಅಸಾಧ್ಯ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪೊಲೀಸ್ ಇಲಾಖೆಯಲ್ಲಿ ಕೆಳಹಂತದ ಸಿಬ್ಬಂದಿಯನ್ನು ಪದೇಪದೆ ವರ್ಗಾವಣೆ ಮಾಡಲು ಅಸಾಧ್ಯ. ಅಪರಾಧ ಪ್ರಕರಣಗಳ ತನಿಖೆಗೆ ಅಡ್ಡಿಯಾಗಲಿದೆ ಎಂದರು. ಮೈಸೂರು ರಸ್ತೆ ಕುಂಬಳಗೂಡು ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಗೃಹ ಸಚಿವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಕ್ರಿಮಿನಲ್‌ಗಳ ಮೇಲೆ ನಿಗಾ ವಹಿಸುವುದು ಮತ್ತು ಅಪರಾಧ ಕೃತ್ಯಗಳ ತನಿಖೆಯಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಪದೇ ಪದೆ ವರ್ಗಾವಣೆ ಮಾಡಿದರೇ ತನಿಖೆಗೆ ಮತ್ತು ಅಪರಾಧ ಕೃತ್ಯಗಳ ಮೇಲೆ ನಿಗಾವಹಿಸಲು ಕಷ್ಟವಾಗಲಿದೆ. ಜತೆಗೆ ಜಿಲ್ಲಾವಾರು ವರ್ಗಾವಣೆಗೆ ನಿರ್ಬಂಧ ಇರುವುದು ಸಹ ಕಾರಣವಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು. ಪೊಲೀಸ್ ಠಾಣೆಗಳಿಗೆ ಬರುವ ನೊಂದ ಜನರಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕು. ಶಾಸಕ ಎಸ್.ಟಿ. ಸೋಮಶೇಖರ್ ಸಚಿವರಾಗಿದ್ದಾಗ ನೂತನ…
ಬೆಳಗಾವಿ:- ರೈತರಿಗೆ ಹೆಚ್ಚಿನ ಪರಿಹಾರಕ್ಕಾಗಿ ಹೊಸ ಪ್ರಸ್ತಾವ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ರೈತರ ಅಹವಾಲು ಆಲಿಸಿದ ನಂತರ ಅವರು ಮಾತನಾಡಿದರು. ‘ಪ್ರತಿ ಗುಂಟೆಗೆ ತಲಾ ₹10 ಲಕ್ಷದಂತೆ ಎಕರೆಗೆ ₹4 ಕೋಟಿ ಪರಿಹಾರ ನೀಡಬೇಕೆಂದು ರೈತರ ಬೇಡಿಕೆಯಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯಿಂದ ಪ್ರತ್ಯೇಕ ಪ್ರಸ್ತಾವ ಸಲ್ಲಿಸಬೇಕು’ ಎಂದು ನಿರ್ದೇಶನ ಕೊಟ್ಟರು. ‘ಅಧಿಕಾರಿಗಳಿಂದ ಹೊಸದಾಗಿ ಪ್ರಸ್ತಾವ ಪಡೆದು, ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ನಿಮಗೆ ಹೆಚ್ಚಿನ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ರೈತರಿಗೆ ಭರವಸೆ ನೀಡಿದರು. ‘ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ವೇಳೆ, ರೈತರಿಗೆ ಹೆಚ್ಚಿನ ಪರಿಹಾರ, ಉದ್ಯೋಗ ನೀಡುವುದಾಗಿ ಹಿಂದಿನ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರು ಭರವಸೆ ನೀಡಿದ್ದರು. ಈಗ ರೈತರಿಗೆ ಅನ್ಯಾಯವಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ರಾಮನಗರ:- ಬೆಳೆ ಪರಿಹಾರ ಆನ್ಲೈನ್ ಮೂಲಕವೇ ರೈತರಿಗೆ ತಲುಪಲಿದ್ದು, ಅವರ ಮಾಹಿತಿ ಬಿಟ್ಟುಹೋದರೆ ಮ್ಯಾನ್ಯುವಲ್ ಆಗಿ ಅವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳು ಉಡಾಫೆ ಬಿಟ್ಟು ಶೇ.100 ರಷ್ಟು ಎಲ್ಲಾ ರೈತರ ಬೆಳೆ ಸಮೀಕ್ಷೆಯ ಮಾಹಿತಿಯನ್ನು ಒಂದು ವಾರದಲ್ಲಿ ‘ಫ್ರೂಟ್ಸ್’ ತಂತ್ರಾಂಶದಲ್ಲಿ ನಮೂದಿಸಿ ಅವರಿಗೆ ನ್ಯಾಯಯುತ ಪರಿಹಾರ ತಲುಪಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. ರಾಮನಗರದಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ರಾಜ್ಯ ಈ ವರ್ಷ ಇತಿಹಾಸ ಕಾಣದ ಬರಕ್ಕೆ ತುತ್ತಾಗಿದೆ. ಮಳೆ ಇಲ್ಲದ ಕಾರಣ ರೈತರು ಪರಿತಪಿಸುವಂತಾಗಿದೆ. ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ. ಹೀಗಾಗಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಬೆಳೆ ಸಮೀಕ್ಷೆ ಅಗತ್ಯ” ಎಂದರು. ರಾಮನಗರದಲ್ಲಿ 242 ಗ್ರಾಮ ಆಡಳಿತ ಅಧಿಕಾರಿಗಳ ವೃತ್ತ ಇದೆ. ಆದರೆ, ಈವರೆಗೆ ಸಂಪೂರ್ಣ ಬೆಳೆ ಸಮೀಕ್ಷೆ ಆಗಿಲ್ಲ. ಪರಿಸ್ಥಿತಿ…
ಬೆಂಗಳೂರು:- ಡಿಸೆಂಬರ್ 4ರಿಂದ 15ರ ವರೆಗೆ ಒಟ್ಟು ಹತ್ತು ದಿನಗಳ ಕಾಲ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಒಟ್ಟು ಹತ್ತು ದಿನಗಳ ಕಾಲ ವಿಧಾನ ಮಂಡಲ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ. ಡಿ.4ರ ಬೆಳಗ್ಗೆ 11ಗಂಟೆಗೆ ಸದನ ಸಮಾವೇಶಗೊಳ್ಳಲಿದೆ. ಶನಿವಾರ ಮತ್ತು ರವಿವಾರ ಹೊರತುಪಡಿಸಿ ಒಟ್ಟು 10 ದಿನಗಳ ಕಾಲ ಅಧಿವೇಶನ ಕಲಾಪ ನಡೆಯಲಿದೆ. ಹದಿನಾರನೇ ವಿಧಾನಸಭೆಯ ಎರಡನೇ ಅಧಿವೇಶನ ನಡೆಯಲಿದೆ. ಹದಿನಾರನೇ ವಿಧಾನಸಭೆಯ ಎರಡನೇ ಅಧಿವೇಶನ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಜರುಗಲಿದೆ ಎಂದು ವಿಶಾಲಾಕ್ಷಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ: ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದ ಸನಾತನ ಧರ್ಮವನ್ನು ಕೈ ಬಿಡಬೇಕೆಂಬ ಬೇಡಿಕೆಯೊಂದಿಗೆ ನಾವು ಸನಾತನಿಗಳಲ್ಲ ಎಂಬ ಅಭಿಯಾನ ಆರಂಭಿಸಲಾಗಿದ್ದು, ರಾಜ್ಯದ ಎಲ್ಲ ಕಡೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವಿಶ್ವ ಬಹುಜನ ಧ್ವಜ ಹಾಗೂ ಸಂವಿಧಾನ ರಕ್ಷಾ ಸೇನಾ ಟ್ರಸ್ಟ್ ಅಧ್ಯಕ್ಷ ಸದಾನಂದ ತೇರದಾಳ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮುಂತಾದ ಆದರ್ಶಗಳಿಗೆ ಸನಾತನ ವಿರುದ್ಧವಾಗಿದೆ. ಸನಾತನ ಧರ್ಮವು ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ. ಅಸಮಾನತೆ ಪೋಷಿಸುವುದಲ್ಲದೆ ಅಸ್ಪಶ್ಯತೆಯಂತಹ ಸಾಮಾಜಿಕ ಅನಿಷ್ಟಗಳಿಗೆ ಜನ್ಮ ನೀಡುತ್ತದೆ ಎಂದರು. ಸಂಘಟನೆಯ ಬಾಪು ಹೆದ್ದೂರಶೆಟ್ಟಿ ಮಾತನಾಡಿ, ಸಂವಿಧಾನದ ಮೂಲ ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂಬರುವ ದಿನಗಳಲ್ಲಿ ಮೈಸೂರು ಹಾಗೂ ಮಂಗಳೂರು ಮತ್ತಿತರೆಡೆ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು. ಸಂವಿಧಾನ ಕೈಬಿಡಿ ಇಲ್ಲವೆ ಸನಾತನ ಕೈಬಿಡಿ ಎಂದು ಈಗಾಗಲೇ ಹುಬ್ಬಳ್ಳಿಯಲ್ಲಿ ನಾವು ಸನಾತನಿಗಳಲ್ಲ ಕಾರ್ಯಕ್ರಮ ನಡೆಸಲಾಗಿದೆ. ಅಲ್ಲದೆ ಬಲಿ ಚಕ್ರವರ್ತಿ ಸ್ಮರಣಾಂಜಲಿ ಸಮಾರಂಭ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ…