ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವಕಪ್ ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ವಿರುದ್ಧ 70 ರನ್ ಗಳಿಂದ ಗೆಲುವು ದಾಖಲಿಸಿದೆ.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ, ವಿರಾಟ್ ಕೊಹ್ಲಿ, ಶ್ರೇಯಸ್ ಅವರ ಉತ್ತಮ ಇನ್ನಿಂಗ್ಸ್ ನಿಂದ 50 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 397 ರನ್ ಗಳಿಸಿ ಉತ್ತಮ ಟಾರ್ಗೆಟ್ ನೀಡಿತ್ತು.
ಇದನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ, ಉತ್ತಮವಾಗಿಯೇ ಆರಂಭ ಮಾಡಿದರು ಕೂಡ ಭಾರತ ನೀಡಿದ ಗುರಿ ತಲುಪಲಾಗದೇ 48 ಓವರ್ ಗಳಲ್ಲಿ 10 ವಿಕೆಟ್ ಗಳ ನಷ್ಟಕ್ಕೆ 327 ರನ್ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಭಾರತ ತಂಡ 70 ರನ್ ಗಳಿಂದ ಗೆದ್ದು ಬೀಗಿದೆ.
ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಆರಂಭ ಪಡೆಯಿತು. 50 ಓವರ್ ಗಳಲ್ಲಿ4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿ ಬೃಹತ್ ಗುರಿಯನ್ನು ಕೇನ್ ವಿಲಿಯಮ್ಸನ್ ಪಡೆಯ ಮುಂದಿಟ್ಟಿತು. ಆರಂಭದಲ್ಲಿ ಅಬ್ಬರಿಸಿದ ನಾಯಕ ರೋಹಿತ್ ಶರ್ಮ29 ಎಸೆತಗಳಲ್ಲಿ 47 ರನ್ ಗಳಿಸಿ ನಿರ್ಗಮಿಸಿದರು. ಅವರು ತಲಾ 4 ಭರ್ಜರಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ್ದರು.
ಇನ್ನೊಂದು ಅತ್ಯಮೋಘ ಇನ್ನಿಂಗ್ಸ್ ಆಡಿದ ಶುಭ್ ಮನ್ ಗಿಲ್ 79 ರನ್ ಗಳಿಸಿದ್ದ ವೇಳೆ ಗಾಯಾಳಾಗಿ ನಿವೃತ್ತಿಯಾಗಿದ್ದು ಅಭಿಮಾನಿಗಳು ತೀವ್ರವಾಗಿ ನೊಂದುಕೊಳ್ಳಲು ಕಾರಣವಾಯಿತು.
ಒಟ್ಟಾರೆಯಾಗಿ ಭಾರತ ತಂಡವು ಆಡಿದ 10 ಪಂದ್ಯದಲ್ಲಿ 10 ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಅಜೇಯ ಆಟವನ್ನು ಮುಂದುವರಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ. ಏನೇ ಆಗಲಿ ಈ ಬಾರಿ ವಿಶ್ವಕಪ್ ನಮ್ಮದೇ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.