ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ, ಕಳೆದ 72 ದಿನಗಳಿಂದ ಧರಣಿ ನಡೆಸುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದ ರೈತ ಸಂಘಟನೆ, https://ainlivenews.com/joint_pain_suprem_ray_treatment_reiki/ ಸರ್ಕಾರಕ್ಕೆ ರೈತರ ಕೂಗು ಕೇಳಿಸುತ್ತಿಲ್ಲ, ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ರೈತರನ್ನು ರಕ್ಷಣೆ ಮಾಡದ ರಾಜ್ಯದ ಸಂಸದರು, ರಾಜೀನಾಮೆ ಕೊಡಲಿ. ಕೇಂದ್ರದಲ್ಲಿ ಕಾವೇರಿ ನೀರಿಗಾಗಿ ಧ್ವನಿ ಎತ್ತದ ಸಂಸದರ ಅವಶ್ಯಕತೆ ಇಲ್ಲ. ಸರ್ಕಾರ ಕೂಡಲೇ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ರೈತರು ಆಗ್ರಹಿಸಿದರು.
Author: AIN Author
ಮೈಸೂರು: ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಅಲಂಕರಿಸುತ್ತಿದ್ದಂತೆ ಆಕ್ಟಿವ್ ಆದ ಬೆಂಬಲಿಗರು ಪ್ರಮುಖ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕಾಗಿ ಹಾಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ರಾಜೇಂದ್ರ ಮತ್ತು ನಿಗಮ ಮಂಡಳಿ ಮಾಜಿ ಅಧ್ಯಕ್ಷ ಕೌಟಿಲ್ಯ ರಘು ಅವರ ನಡುವೆ ಪೈಪೋಟಿ ಆರಂಭವಾಗಿದೆ. ಇದೇ ರೀತಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಹುದ್ದೆಗಳಿಗೂ ಪೈಪೋಟಿ ಏರ್ಪಟ್ಟಿದೆ. ರಾಜ್ಯಾಧ್ಯಕ್ಷರ ಆಯ್ಕೆಯಾಗಿದ್ದು, https://ainlivenews.com/joint_pain_suprem_ray_treatment_reiki/ ಶೀಘ್ರದಲ್ಲೇ ಪದಾಧಿಕಾರಿಗಳ ನೇಮಕ ಕೂಡ ಆಗಲಿದೆ. ಸದ್ಯ ನಗರಧ್ಯಕ್ಷರಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿರುವ ಟಿ ಎಸ್ ಶ್ರೀವತ್ಸ ಸ್ಥಾನ ತುಂಬಲು ತೆರೆ ಮರೆಯಲ್ಲಿ ಹಲವರಿಂದ ಪೈಪೋಟಿ ನಡೆಯುತ್ತಿದೆ. ಒಟ್ಟಾರೆಯಾಗಿ, ಮೈಸೂರು ಜಿಲ್ಲೆಯಲ್ಲಿ ಪ್ರತ್ಯೇಕ ಅಭಿಮಾನಿಗಳ ಪಡೆಯನ್ನೇ ಹೊಂದಿರುವ ವಿಜಯೇಂದ್ರ ಅವರು ತಮ್ಮ ತಂಡದೊಂದಿಗೆ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಮಾಲ್ ನಡೆಸಲು ತಯಾರಿ ನಡೆಸುತ್ತಿದ್ದಾರೆ.
ಬಿಗ್‌ಬಾಸ್ ಕನ್ನಡ ಈ ಸೀಸನ್ ಆರಂಭದಿಂದಲೂ ಒಂದು ಮನ ಮೂರು ದೇಹ ಅನ್ನುವಂತಿದ್ದವರು ಸಂಗೀತಾ-ಕಾರ್ತಿಕ್ ಮತ್ತು ತನಿಷಾ. ಹಲವು ಸಂಕಷ್ಟದ ಸಂದರ್ಭಗಳಲ್ಲಿಯೂ ಮೂವರೂ ಒಬ್ಬರಿಗೊಬ್ಬರು ಹೆಗಲೆಣೆಯಾಗಿ ನಿಂತುಕೊಂಡಿದ್ದರು. ಪ್ರತಿಸ್ಪರ್ಧಿಗಳನ್ನು ಒಟ್ಟಾಗಿ ಎದುರಿಸಿದ್ದರು. ಸಂಗೀತಾ ಜೈಲಿಗೆ ಹೋದ ಸಂದರ್ಭದಲ್ಲಂತೂ ಕಾರ್ತಿಕ್, ‘ನಾವು ಮೂರು ಜನರೂ ಈ ಮನೆಗೆ ಬಂದ ದಿನದಿಂದಲೂ ಒಟ್ಟಿಗಿದ್ದೇವೆ. ಮುಂದೆಯೂ ಒಟ್ಟಿಗಿರುತ್ತೇವೆ. ಫ್ರೆಂಡ್‌ಗೆ ತೊಂದರೆಯಾದಾಗ ಅವರನ್ನುಬೆಂಬಲಿಸುವುದು ನನ್ನ ಕರ್ತವ್ಯ. ಅವರ ಜೊತೆ ನಾನು ನಿಂತೇ ನಿಲ್ಲುತ್ತೇನೆ’ ಎಂದು ಗಟ್ಟಿಯಾಗಿ ಹೇಳಿದ್ದರು. ಆದರೆ ಈಗ ಈ ಮೂವರ ಫ್ರೆಂಡ್‌ಷಿಪ್ ಗಾಳಿಪಟದ ಸೂತ್ರ ಹರಿದಂತಿದೆ. ಇದರ ಸೂಚನೆ JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸ್ಪಷ್ಟವಾಗಿಯೇ ಜಾಹೀರಾಗಿದೆ. ನಿನ್ನೆಯ ಎಲಿಮಿನೇಷನ್‌ನ ಲೂಡೋ ಟಾಸ್ಕ್‌ನಲ್ಲಿ ಒಂದು ಹಂತದಲ್ಲಿ ಕಾರ್ತಿಕ್ ಮತ್ತು ತನಿಷಾಗೆ ಎದುರಾಳಿ ತಂಡದ ಒಬ್ಬರನ್ನು ಸೇವ್ ಮಾಡುವ ಅವಕಾಶ ಸಿಕ್ಕಿತ್ತು. ಅವರು ವರ್ತೂರು ಸಂತೋಷ್ ಅವರ ಜೊತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಎದುರಾಳಿ ತಂಡದಲ್ಲಿದ್ದ ಸಂಗೀತಾ, ತನ್ನನ್ನೇ ಸೇವ್ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆದದ್ದೇ…
ಬೆಂಗಳೂರು: ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. @INCKarnataka ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ. ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, “ನಾನು ಹೇಳಿದವರಷ್ಟನ್ನೇ ಮಾಡಿ” ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ?? ಅಥವಾ…
ಮೆರಿಲೆಂಡ್: ಮನೆ ನವೀಕರಣ ವೇಳೆ 1955ರಲ್ಲಿ ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆಯಾಗಿದೆ. ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆಯಲ್ಲಿ ಹೆಚ್ಚಿನ ವಿಶೇಷಗಳಿಲ್ಲ. ಆದರೆ ಅಡಗಿಸಿಟ್ಟ ಕತೆ ರೋಚಕವಾಗಿದೆ. ಒಂದೇ ಒಂದು ಬಿಯರ್ ಬಾಟಲನ್ನು ಮನೆಯ ಗೋಡೆ ನಡುವೆ ಸಣ್ಮ ರಂದ್ರ ಮಾಡಿ ಸುರಕ್ಷಿತವಾಗಿ ಇಡಲಾಗಿದೆ. ನವೀಕರಣ ವೇಳೆ ಬಿಯರ್ ತುಂಬಿದ ಬಾಟಲ್ ಪತ್ತೆಯಾಗಿದೆ. ನಾಜೂಕಾಗಿ ತೆಗೆದು ನೋಡಿದರೆ ಈ ಬಿಯರ್ ಬಾಟಲ್ ಮೇಲೆ ಸಂದೇಶ ಒಂದನ್ನು ಬರೆಯಲಾಗಿದೆ. ಈ ಬಿಯರ್ ಬಾಟಲನ್ನು ಪ್ಲಂಬರ್ ಆದ ನಾನು ಅಡಗಿಸಿಟ್ಟಿದ್ದೇನೆ ಅನ್ನೋ ಸಂದೇಶ ಇದಾಗಿತ್ತು. ಪ್ಲಂಬರ್ ಯಾವ ಕಾರಣಕ್ಕೆ ಅಡಗಿಸಿಟ್ಟ ಅನ್ನೋ ಮಾಹಿತಿ ಲಭ್ಯವಿಲ್ಲ. ಆದರೆ ಬಿಯರ್ ಬಾಟಲಿಗೆ ಸೀಮಿತ ಅವಧಿವರೆಗೆ ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಹೀಗಾಗಿ ಮಂದಿನ ಪೀಳಿಗೆ ಇದನ್ನು ಪತ್ತೆ ಹಚ್ಚಿ ಸಂಭ್ರಮಿಸಲಿ ಅನ್ನೋ ಕಾರಣ ಇದರ ಹಿಂದೆ ಇಲ್ಲ. ಇನ್ನು ಬಿಯರ್ ಬಾಟಲ್‌ನ್ನು ಮನೆಯಲ್ಲಿನ ಸಂಭ್ರಮದ ಕ್ಷಣಕ್ಕಾಗಿ ತೆಗಿದಿಟ್ಟ ಕಾರಣವೂ ಇಲ್ಲಿಲ್ಲ. ಪ್ಲಂಬರ್ ತನ್ನ ಕೆಲಸ ಮಾಡುವಾಗ ಅಥವಾ ಬಳಿಕ ತೆಗೆದಿಟ್ಟ…
ತುಮಕೂರು:- ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಭಾರತ ಮತ್ತು ನ್ಯೂಜಿಲೆಂಡ್ ತಂಡದ ಸೆಮಿ ಫೈನಲ್ ಪಂದ್ಯವನ್ನು ಮದುವೆ ಮಂಟಪದಲ್ಲಿ ವಧು ವರರು ವೀಕ್ಷಿಸಿದ್ದಾರೆ. ವಧು ವರರಿಂದ ಮದುವೆ ಮಂಟಪದಲ್ಲಿ ಇಂಡೋ – ಕಿವೀಸ್ ಸೆಮಿ ಫೈನಲ್ ವೀಕ್ಷಣೆ ಮಾಡಲಾಗಿದೆ. ಆರತಕ್ಷತೆಗೆ ಬರುವ ಸಂಬಂದಿಕರು, ಸ್ನೇಹಿತರಿಗಾಗಿ ಎಲ್‌ಈಡಿ ಮೂಲಕ ಪಂದ್ಯವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಪಾವಗಡದ ಎಸ್ ಎಸ್ ಕೆ ಕಲ್ಯಾಣ ಮಂಟಪದಲ್ಲಿ ಕ್ರಿಕೇಟ್ ಪ್ರೇಮಿಗಳ ಮದುವೆ ನಡೆದಿದೆ. ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯಕ್ಕಾಗಿ ಎಲ್‌ಈಡಿಗಳ ಅಳವಡಿಸಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಸೌಂದರ್ಯ, ಕಾರ್ತಿಕ್ ಮದುವೆಯಲ್ಲಿ ಸೆಮಿ ಫೈನಲ್ ಪಂದ್ಯ ವಿಕ್ಷಣೆ ಮಾಡಲಾಗಿದೆ. ಆರ್ಕೇಸ್ಟ್ರಾ ಜೊತೆ ಮ್ಯಾಚ್ ನೋಡಲು ಎಲ್‌ಈಡಿ ವ್ಯವಸ್ಥೆ ಮಾಡಲಾಗಿತ್ತು. ಮದುವೆ ಆರತಕ್ಷತೆಯಲ್ಲಿ ಭರ್ಜರಿ ಊಟದ ಜೊತೆ ಪಂದ್ಯ ವೀಕ್ಷಣೆಯ ಭಾಗ್ಯ ದೊರೆತಿದೆ. ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆ ಮದುವೆ ಮಂಟಪದಲ್ಲಿ ಸಂಭ್ರಮಾಚರಣೆ ನಡೆದಿದೆ.
ಮುಂಬೈ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಕ್ರಿಕೆಟ್ ದೇವರ ಹಲವು ದಾಖಲೆಗಳನ್ನು ಈಗಾಗಲೇ ಮುರಿದಿದ್ದ ವಿರಾಟ್ ಕೊಹ್ಲಿ, ಇದೀಗ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿದಿದ್ದಾರೆ. ಇದರ ಬೆನ್ನಲ್ಲೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ದಾಖಲೆ ಮುರಿದ ವಿರಾಟ್ ಕೊಹ್ಲಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ನನ್ನ ದಾಖಲೆ ಮುರಿದಿರುವುದಕ್ಕೆ ಖುಷಿಯಾಗಿದೆ. ಅದರಲ್ಲೂ ವಿಶೇಷವಾಗಿ ಭಾರತೀಯನೇ ನನ್ನ ದಾಖಲೆ ಮುರಿದಿರುವುದರಿಂದ ನನಗೆ ಸಂತೋಷ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಗೆ ಸಚಿನ್ ತೆಂಡೂಲ್ಕರ್ ಭಾವನಾತ್ಮಕ ಸಂದೇಶ “ಭಾರತ ತಂಡದ ಡ್ರೆಸ್ಸಿಂಗ್ ಕೊಠಡಿಯಲ್ಲಿ ನಾನು ನಿಮ್ಮನ್ನು ಮೊದಲ ಬಾರಿ ಭೇಟಿಯಾಗಿದ್ದೆ. ನನ್ನ ಪಾದವನ್ನು ಮುಟ್ಟುವಂತೆ ಸಹ ಆಟಗಾರರು ನಿಮ್ಮ ಬಳಿ ಫ್ರಾಂಕ್ ಮಾಡಿದ್ದರು. ಆ ದಿನ ನನ್ನ ನಗುವನ್ನು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ತದ ನಂತರ ತಮ್ಮ ಆಟದ ಮೇಲಿನ ಉತ್ಸಾಹ ಮತ್ತು…
ವಿಜಯಪುರ: ‘ನಾವು ದಲಿತರು, ನಮಗಾಗಿ ಯಾರೂ ಕೈ ಎತ್ತಿಲ್ಲ. ನಾವು ದಲಿತರಾಗಿದ್ದರೆ ಯಾವುದೇ ರೀತಿಯ ಬೆಳವಣಿಗೆ ಸಾಧ್ಯವಿಲ್ಲ’ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಈ ಮೂಲಕ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಹೈಕಮಾಂಡ್ ನಿರ್ಧಾರಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ದಲಿತರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಸೆಂಬ್ಲಿಯಲ್ಲೂ ನೋಡಿದ್ದೇವೆ, ಲೋಕಸಭೆಯಲ್ಲೂ ನೋಡಿದ್ದೇವೆ. ಅಸೆಂಬ್ಲಿಯಲ್ಲಿ ದೊಡ್ಡದೊಡ್ಡ ಗೌಡರು, ಸಾಹುಕಾರರುಗಳು ಬಂದರು. ಅವರಿಗೆ, ಅವರ ಪರವಾಗಿ ಕೈ ಎತ್ತುತ್ತಲೇ ಇದ್ದೇವೆ. ಕಳೆದ 75 ವರ್ಷಗಳಿಂದ ನಾವು ಕೈ ಎತ್ತಿಕೊಂಡು ಬಂದಿದ್ದೇವೆ. ನಾವು ದಲಿತರು, ನಮಗಾಗಿ ಈ ಜೀವನದಲ್ಲಿ ಯಾರೂ ಕೈ ಎತ್ತಿಲ್ಲ. ಇದು ಬಹಳ ದುಃಖದ ಸಂಗತಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. https://ainlivenews.com/are-we-stupid-to-believe-hd-kumaraswamys-words-dcm-question/ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನೇಮಕ ನಾವಂತೂ ಮಾಡಿಲ್ಲ. ಪಕ್ಷದ ಹಿರಿಯರು ಯಾವ ಯಾವುದೋ ಕಾರಣಕ್ಕೆ ಮಾಡಿದ್ದಾರೆ. ಬಹಳ ಯೋಚಿಸಿ, ಮಾಜಿ…
ಮುಂಬೈ: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮಾರಕ ದಾಳಿ ಮುಂದುವರಿಸಿರುವ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ (ನವೆಂಬರ್ 15) ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 57ಕ್ಕೆ7 ವಿಕೆಟ್ ಪಡೆದು ರೋಹಿತ್ ಶರ್ಮಾ ಪಡೆಗೆ 70 ರನ್ ಗಳ ಗೆಲುವು ತಂದುಕೊಟ್ಟಿದ್ದಾರೆ. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಶಮಿ, ಟೀಮ್ ಇಂಡಿಯಾ ಫೈನಲ್ ಹಂತ ತಲುಪಲು ಮಹತ್ತರ ಕಾಣಿಕೆ ನೀಡಿದ್ದಾರೆ. ಜಹೀರ್ ಖಾನ್ ದಾಖಲೆ ಮುರಿದ ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಕೇವಲ 6 ಪಂದ್ಯಗಳಲ್ಲೇ 23 ವಿಕೆಟ್ ಪಡೆದ ಶಮಿ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಮ್ ಇಂಡಿಯಾದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಹಿರಿಯ ವೇಗಿ ಜಹೀರ್ ಖಾನ್ 21 ವಿಕೆಟ್ ಪಡೆದು ಗಮನ ಸೆಳೆದಿದ್ದರು.
ತುಮಕೂರು:-ತುಮಕೂರಿನ ಸರಸ್ವತಿಪುರಂನಲ್ಲಿ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ಗಿಡ ಪತ್ತೆಯಾಗಿದೆ. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ. 17ನೇ ವಾರ್ಡ್ ನ ಸರಸ್ವತಿಪುರಂ 5 ಕ್ರಾಸ್ ನಲ್ಲಿರುವ ಖಾಲಿ ನಿವೇಶನದಲ್ಲಿ ಗಾಂಜಾ ಬೆಳೆಯಲಾಗಿತ್ತು. ಗಿಡದಲ್ಲಿ ಗಾಂಜಾ ಸೊಪ್ಪು ಕಿತ್ತುಕೊಂಡು ಹುಡುಗರು ಹೋಗುತ್ತಿದ್ದರು. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಭೇಟಿ ಕೊಟ್ಟು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ನಿವೇಶನದ ಮಾಲೀಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದು, ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.