ಮೆರಿಲೆಂಡ್: ಮನೆ ನವೀಕರಣ ವೇಳೆ 1955ರಲ್ಲಿ ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆಯಾಗಿದೆ. ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆಯಲ್ಲಿ ಹೆಚ್ಚಿನ ವಿಶೇಷಗಳಿಲ್ಲ. ಆದರೆ ಅಡಗಿಸಿಟ್ಟ ಕತೆ ರೋಚಕವಾಗಿದೆ. ಒಂದೇ ಒಂದು ಬಿಯರ್ ಬಾಟಲನ್ನು ಮನೆಯ ಗೋಡೆ ನಡುವೆ ಸಣ್ಮ ರಂದ್ರ ಮಾಡಿ ಸುರಕ್ಷಿತವಾಗಿ ಇಡಲಾಗಿದೆ. ನವೀಕರಣ ವೇಳೆ ಬಿಯರ್ ತುಂಬಿದ ಬಾಟಲ್ ಪತ್ತೆಯಾಗಿದೆ. ನಾಜೂಕಾಗಿ ತೆಗೆದು ನೋಡಿದರೆ ಈ ಬಿಯರ್ ಬಾಟಲ್ ಮೇಲೆ ಸಂದೇಶ ಒಂದನ್ನು ಬರೆಯಲಾಗಿದೆ. ಈ ಬಿಯರ್ ಬಾಟಲನ್ನು ಪ್ಲಂಬರ್ ಆದ ನಾನು ಅಡಗಿಸಿಟ್ಟಿದ್ದೇನೆ ಅನ್ನೋ ಸಂದೇಶ ಇದಾಗಿತ್ತು.
ಇಲ್ಲಿ ಪ್ಲಂಬರ್ ಬಿಯರ್ ಕುಡಿದು ಕೆಲಸ ಮಾಡಿದ್ದಾನೋ? ಅಥವಾ ಸುಮ್ಮನೆ ಅಡಿಗಿಸಿಟ್ಟನೋ ಅನ್ನೋದು ಸ್ಪಷ್ಟವಾಗಿಲ್ಲ. ಈ ಕತೆಯನ್ನು ಸಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದು ಗಂಥರ್ ಬಿಯರ್ ಬಾಟಲ್. 1900ರಲ್ಲಿ ಗಂಥರ್ ಬಿಯರ್ ಬ್ರಿವರೇಜ್ ಕಂಪನಿ ಆರಂಭಗೊಂಡಿತು. ಇದು ಅಮೆರಿಕದ ಎರಡನೇ ಅತೀ ದೊಡ್ಡ ಬ್ರಿವರರೇಜ್ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬೆನ್ನಲ್ಲೇ ಹಲವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)