Author: AIN Author

ಮೈಸೂರು: ಸಿಎಂ ಸಿದ್ದರಾಮಯ್ಯನವರ (CM Siddaramaiah) ಸರ್ಕಾರದಲ್ಲಿ ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ, ವೈಎಸ್‌ಟಿ (YST) ಸಂಗ್ರಹಿಸುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೇ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಂದೆಯ ಜೊತೆ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಯತೀಂದ್ರ ಅವರು ವರುಣ (Varuna) ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ಅವರು ತಂದೆಗೆ ಕರೆ ಮಾಡಿದ್ದಾರೆ. ಯಾವುದೋ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ನಾನು ನೀಡಿದ ಲಿಸ್ಟ್‌ನದ್ದು ಮಾತ್ರ ಮಾಡಿ ಎಂದು ಸಾರ್ವಜನಿಕರ ಮುಂದೆಯೇ ತಾನು ನೀಡಿದ ಪಟ್ಟಿಯ ಬಗ್ಗೆ ಮಾತುಕತೆ ಮಾಡಿದ್ದಾರೆ. ಆರಂಭದಲ್ಲಿ ಅಪ್ಪ ಹೇಳಿ ಅಂತಾ ಯತೀಂದ್ರ ಸಿದ್ದರಾಮಯ್ಯ ಮಾತು ಶುರುಮಾಡಿದ್ದಾರೆ. ಈ ವೇಳೆ “ವಿವೇಕಾನಂದ ಯಾರು?” ಎಂದು ಸಿಎಂ ಪ್ರಶ್ನೆ ಕೇಳಿದ್ದಾರೆ. ಆಗ ಯತೀಂದ್ರ, ಆ ಮಹದೇವ ಅವರಿಗೆ‌ ಪೋನ್ ನೀಡುವಂತೆ ಸಿಎಂಗೆ ಹೇಳುತ್ತಾರೆ. https://ainlivenews.com/joint_pain_suprem_ray_treatment_reiki/…

Read More

ಬೆಂಗಳೂರು: ತೆರಿಗೆ ವಂಚನೆ  ಹಿನ್ನೆಲೆ ಬೆಂಗಳೂರಿನ  ಫುಡ್ ಇಂಡಸ್ಟ್ರಿ ಮೇಲೆ ಆದಾಯ ತೆರಿಗೆ ಇಲಾಖೆ   ದಾಳಿ  ನಡೆಸಿದೆ. ರಾಜಾಜಿನಗರ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡ್ರೈ ಫ್ರೂಟ್ಸ್ ವ್ಯಾಪಾರಿಗಳ ಅಂಗಡಿ ಹಾಗೂ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಇತ್ತೀಚಿಗೆ ಗುತ್ತಿಗೆದಾರರು, ಜ್ಯುವೆಲ್ಲರಿ ಮಾಲೀಕರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿತ್ತು. ಇದೀಗ ಫುಡ್ ಇಂಡಸ್ಟ್ರಿ ಮೇಲೆ ಐಟಿ ಕಣ್ಣಿಟ್ಟಿದೆ. ಡ್ರೈಫ್ರೂಟ್ಸ್ ಕಾರ್ಖಾನೆ ಹಾಗೂ ಸ್ಟೋರ್‌ಗಳ ಮೇಲೆ ಐಟಿ ದಾಳಿ ನಡೆಸಿದ್ದು, ಒಟ್ಟು ನಗರದ ಎರಡು ಕಡೆ ದಾಳಿ ಮಾಡಿದೆ ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್ ಹಾಗೂ ಬಿವಿಕೆ ಅಯ್ಯಂಗಾರ್ ರಸ್ತೆ ಬಳಿ ದಾಳಿ ನಡೆಸಿದ್ದಾರೆ. ಪಿಎಸ್ ಆಗ್ರೋ ಫುಡ್ ಎಲ್‌ಎಲ್‌ಪಿ ಕಾರ್ಖಾನೆ ಹಾಗೂ ಮಾಣಕ್ ಮೇವಾ ಡ್ರೈಫ್ರೂಟ್ಸ್ ಸ್ಟೋರ್ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು:  ನಾನು ನೀಡಿದ ಲಿಸ್ಟ್​​ನದ್ದು ಮಾತ್ರ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ಯತೀಂದ್ರ ಸಿದ್ದರಾಮಯ್ಯ ಸೂಚಿಸಿರುವ ವಿಡಿಯೋ ವೈರಲ್ ಆಗಿದೆ. https://ainlivenews.com/jds-tweet-vacancy-in-congress-govt-shameless-govt-hdk-sparks/ ಈ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ. ಡಾ.ಯತೀಂದ್ರ ಒಬ್ಬ ಮಾಜಿ ಎಂಎಲ್‌ಎ, ಖಾಲಿ ಮನುಷ್ಯ ಅಲ್ಲ. ಸಿದ್ದರಾಮಯ್ಯ ವರುಣದಲ್ಲಿ ಸ್ಪರ್ಧಿಸಿದ್ದರಿಂದ ಅವರು ನಿಲ್ಲಲು ಆಗಿಲ್ಲ. ಮೈಸೂರು ಜಿಲ್ಲೆ, ಪಕ್ಷದಲ್ಲಿ ಡಾ.ಯತೀಂದ್ರ ಪ್ರಮುಖ ನಾಯಕ. ಮಾಜಿ ಶಾಸಕರು ಕೆಲಸ ಮಾಡುವುದನ್ನು ತಪ್ಪು ಅನ್ನೋಕೆ ಆಗುತ್ತಾ? ವಿಡಿಯೋದಲ್ಲಿ ಯಾವ ವಿಚಾರದ ಬಗ್ಗೆ ಅವರು ಹೇಳಿದರೋ ಗೊತ್ತಿಲ್ಲ. ಯಾರು ಆ ವಿಡಿಯೋ ಕಟ್ ಆ್ಯಂಡ್ ಪೇಸ್ಟ್ ಮಾಡಿದರೋ ಗೊತ್ತಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ಕಟ್ ಆ್ಯಂಡ್​ ಪೇಸ್ಟ್​ ಮಾಡುತ್ತಾರೆ. ಮಾತಾಡಿದ ರೀತಿ ಬೇರೆ ಇರುತ್ತೆ, ತೋರಿಸುವುದೇ ಬೇರೆ ಇರುತ್ತದೆ. ಯತೀಂದ್ರ ಸಾರ್ವಜನಿಕ ಸೇವೆಯಲ್ಲಿ‌ ಇರೋದು ಅಪರಾಧವಲ್ಲ. ವರುಣ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಲಿ ಬಿಡಿ, ತಪ್ಪೇನಿದೆ? ಕಾಂಗ್ರೆಸ್ ಮುಖಂಡರು ಕೆಲ ಸಮಸ್ಯೆ…

Read More

ಧಾರವಾಡ: ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆಗೆ ಯಾವುದೇ ಸಮಸ್ಯೆಯಿಲ್ಲ. ಯೋಜನೆ ಯಶಸ್ಸಿಗೆ ಹಣಕಾಶಿನ ತೊಂದರೆ ಇಲ್ಲ. ತಾಂತ್ರಿಕ ಸಮಸ್ಯೆ ಇದೆ ಅದನ್ನು ಈಗಾಗಲೇ ಫೈಂಡೌಟ್ ಮಾಡಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಧಾರವಾಡದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಹಣವನ್ನು ತೆಗೆದು ಇಟ್ಟಿದೆ. ನಾವು ಯಾವುದೇ ಅಭಿವೃದ್ಧಿ ಕೆಲಸ ತಡೆ ಮಾಡಿಲ್ಲ. ಗೃಹ ಲಕ್ಷ್ಮೀ ಯೋಜನೆಗೆ ಹಣಕಾಸಿನ ತೊಂದರೆ ಇದೆ ಅನ್ನುವುದು ಸುಳ್ಳು. ಗೃಹ ಲಕ್ಷ್ಮೀಯಲ್ಲಿ ಈಗಾಗಲೇ 1 ಕೋಟಿ 9 ಲಕ್ಷ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗಿದೆ. ಇನ್ನೂ 5 ರಿಂದ 6 ಲಕ್ಷ ಜನ ಉಳಿದುಕೊಂಡಿದ್ದಾರೆ. ಅವರದ್ದು ಸಹ ಇನ್ನೂ 15 ದಿನಗಳಲ್ಲಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. https://ainlivenews.com/joint_pain_suprem_ray_treatment_reiki/ ಗೃಹಲಕ್ಷ್ಮೀ ಒಂದೇ ಅಲ್ಲ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ತೆಗೆದಿಟ್ಟಿದ್ದಾರೆ.…

Read More

ಲಕ್ನೋ: ದೆಹಲಿ-ದರ್ಭಾಂಗ (Delhi-Darbhanga Train) ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಇಟಾವಾ ಬಳಿ 02570 ದೆಹಲಿ-ದರ್ಬಂಗಾ ಕ್ಲೋನ್ ಸ್ಪೆಷಲ್‌ನ ಎಸ್1 (ಸ್ಲೀಪರ್) ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ರೈಲು ಸರಾಯ್ ಭೋಪಾಟ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಹೊಗೆ ಕಾಣಿಸಿಕೊಂಡು ಈ ಅವಘಡ ಸಂಭವಿಸಿತು. https://ainlivenews.com/joint_pain_suprem_ray_treatment_reiki/ ಕೋಚ್‌ಗಳಲ್ಲಿ ಒಂದಕ್ಕೆ ಭಾರಿ ಬೆಂಕಿ ಆವರಿಸಿದ ವೇಳೆ ಪ್ರಯಾಣಿಕರು ಮತ್ತು ಅಧಿಕಾರಿಗಳು ಸುತ್ತಲೂ ನಿಂತಿದ್ದರು. ಈ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಛತ್ ಹಬ್ಬದ ಕಾರಣ ಬಿಹಾರಕ್ಕೆ ಹೋಗುವ ಎಲ್ಲಾ ರೈಲುಗಳು ತುಂಬಿ ತುಳುಕುತ್ತಿವೆ. ಗಾಯಗೊಂಡವರನ್ನು ಇಟಾವಾದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ, ಕಳೆದ 72 ದಿನಗಳಿಂದ ಧರಣಿ ನಡೆಸುತ್ತಿದೆ.  ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದ ರೈತ ಸಂಘಟನೆ, https://ainlivenews.com/joint_pain_suprem_ray_treatment_reiki/ ಸರ್ಕಾರಕ್ಕೆ ರೈತರ ಕೂಗು ಕೇಳಿಸುತ್ತಿಲ್ಲ, ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ರೈತರನ್ನು ರಕ್ಷಣೆ ಮಾಡದ ರಾಜ್ಯದ ಸಂಸದರು, ರಾಜೀನಾಮೆ ಕೊಡಲಿ. ಕೇಂದ್ರದಲ್ಲಿ ಕಾವೇರಿ ನೀರಿಗಾಗಿ ಧ್ವನಿ ಎತ್ತದ ಸಂಸದರ ಅವಶ್ಯಕತೆ ಇಲ್ಲ‌. ಸರ್ಕಾರ ಕೂಡಲೇ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ರೈತರು ಆಗ್ರಹಿಸಿದರು.

Read More

ಮೈಸೂರು: ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಅಲಂಕರಿಸುತ್ತಿದ್ದಂತೆ ಆಕ್ಟಿವ್ ಆದ ಬೆಂಬಲಿಗರು ಪ್ರಮುಖ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕಾಗಿ ಹಾಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ರಾಜೇಂದ್ರ ಮತ್ತು ನಿಗಮ ಮಂಡಳಿ ಮಾಜಿ ಅಧ್ಯಕ್ಷ ಕೌಟಿಲ್ಯ ರಘು ಅವರ ನಡುವೆ ಪೈಪೋಟಿ ಆರಂಭವಾಗಿದೆ. ಇದೇ ರೀತಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಹುದ್ದೆಗಳಿಗೂ ಪೈಪೋಟಿ ಏರ್ಪಟ್ಟಿದೆ. ರಾಜ್ಯಾಧ್ಯಕ್ಷರ ಆಯ್ಕೆಯಾಗಿದ್ದು, https://ainlivenews.com/joint_pain_suprem_ray_treatment_reiki/ ಶೀಘ್ರದಲ್ಲೇ ಪದಾಧಿಕಾರಿಗಳ ನೇಮಕ ಕೂಡ ಆಗಲಿದೆ. ಸದ್ಯ ನಗರಧ್ಯಕ್ಷರಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿರುವ ಟಿ ಎಸ್ ಶ್ರೀವತ್ಸ ಸ್ಥಾನ ತುಂಬಲು ತೆರೆ ಮರೆಯಲ್ಲಿ ಹಲವರಿಂದ ಪೈಪೋಟಿ ನಡೆಯುತ್ತಿದೆ. ಒಟ್ಟಾರೆಯಾಗಿ, ಮೈಸೂರು ಜಿಲ್ಲೆಯಲ್ಲಿ ಪ್ರತ್ಯೇಕ ಅಭಿಮಾನಿಗಳ ಪಡೆಯನ್ನೇ ಹೊಂದಿರುವ ವಿಜಯೇಂದ್ರ ಅವರು ತಮ್ಮ ತಂಡದೊಂದಿಗೆ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಮಾಲ್ ನಡೆಸಲು ತಯಾರಿ ನಡೆಸುತ್ತಿದ್ದಾರೆ.

Read More

ಬಿಗ್‌ಬಾಸ್‌ ಕನ್ನಡ ಈ ಸೀಸನ್‌ ಆರಂಭದಿಂದಲೂ ಒಂದು ಮನ ಮೂರು ದೇಹ ಅನ್ನುವಂತಿದ್ದವರು ಸಂಗೀತಾ-ಕಾರ್ತಿಕ್ ಮತ್ತು ತನಿಷಾ. ಹಲವು ಸಂಕಷ್ಟದ ಸಂದರ್ಭಗಳಲ್ಲಿಯೂ ಮೂವರೂ ಒಬ್ಬರಿಗೊಬ್ಬರು ಹೆಗಲೆಣೆಯಾಗಿ ನಿಂತುಕೊಂಡಿದ್ದರು. ಪ್ರತಿಸ್ಪರ್ಧಿಗಳನ್ನು ಒಟ್ಟಾಗಿ ಎದುರಿಸಿದ್ದರು. ಸಂಗೀತಾ ಜೈಲಿಗೆ ಹೋದ ಸಂದರ್ಭದಲ್ಲಂತೂ ಕಾರ್ತಿಕ್, ‘ನಾವು ಮೂರು ಜನರೂ ಈ ಮನೆಗೆ ಬಂದ ದಿನದಿಂದಲೂ ಒಟ್ಟಿಗಿದ್ದೇವೆ. ಮುಂದೆಯೂ ಒಟ್ಟಿಗಿರುತ್ತೇವೆ. ಫ್ರೆಂಡ್‌ಗೆ ತೊಂದರೆಯಾದಾಗ ಅವರನ್ನುಬೆಂಬಲಿಸುವುದು ನನ್ನ ಕರ್ತವ್ಯ. ಅವರ ಜೊತೆ ನಾನು ನಿಂತೇ ನಿಲ್ಲುತ್ತೇನೆ’ ಎಂದು ಗಟ್ಟಿಯಾಗಿ ಹೇಳಿದ್ದರು. ಆದರೆ ಈಗ ಈ ಮೂವರ ಫ್ರೆಂಡ್‌ಷಿಪ್‌ ಗಾಳಿಪಟದ ಸೂತ್ರ ಹರಿದಂತಿದೆ. ಇದರ ಸೂಚನೆ JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸ್ಪಷ್ಟವಾಗಿಯೇ ಜಾಹೀರಾಗಿದೆ. ನಿನ್ನೆಯ ಎಲಿಮಿನೇಷನ್‌ನ ಲೂಡೋ ಟಾಸ್ಕ್‌ನಲ್ಲಿ ಒಂದು ಹಂತದಲ್ಲಿ ಕಾರ್ತಿಕ್ ಮತ್ತು ತನಿಷಾಗೆ ಎದುರಾಳಿ ತಂಡದ ಒಬ್ಬರನ್ನು ಸೇವ್ ಮಾಡುವ ಅವಕಾಶ ಸಿಕ್ಕಿತ್ತು. ಅವರು ವರ್ತೂರು ಸಂತೋಷ್ ಅವರ ಜೊತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಎದುರಾಳಿ ತಂಡದಲ್ಲಿದ್ದ ಸಂಗೀತಾ, ತನ್ನನ್ನೇ ಸೇವ್ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆದದ್ದೇ…

Read More

ಬೆಂಗಳೂರು:  ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. @INCKarnataka ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ. ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, “ನಾನು ಹೇಳಿದವರಷ್ಟನ್ನೇ ಮಾಡಿ” ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ?? ಅಥವಾ…

Read More

ಮೆರಿಲೆಂಡ್: ಮನೆ ನವೀಕರಣ ವೇಳೆ 1955ರಲ್ಲಿ ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆಯಾಗಿದೆ. ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆಯಲ್ಲಿ ಹೆಚ್ಚಿನ ವಿಶೇಷಗಳಿಲ್ಲ. ಆದರೆ ಅಡಗಿಸಿಟ್ಟ ಕತೆ ರೋಚಕವಾಗಿದೆ.  ಒಂದೇ ಒಂದು ಬಿಯರ್ ಬಾಟಲನ್ನು ಮನೆಯ ಗೋಡೆ ನಡುವೆ ಸಣ್ಮ ರಂದ್ರ ಮಾಡಿ ಸುರಕ್ಷಿತವಾಗಿ ಇಡಲಾಗಿದೆ. ನವೀಕರಣ ವೇಳೆ ಬಿಯರ್ ತುಂಬಿದ ಬಾಟಲ್ ಪತ್ತೆಯಾಗಿದೆ. ನಾಜೂಕಾಗಿ ತೆಗೆದು ನೋಡಿದರೆ ಈ ಬಿಯರ್ ಬಾಟಲ್ ಮೇಲೆ ಸಂದೇಶ ಒಂದನ್ನು ಬರೆಯಲಾಗಿದೆ. ಈ ಬಿಯರ್ ಬಾಟಲನ್ನು ಪ್ಲಂಬರ್ ಆದ ನಾನು ಅಡಗಿಸಿಟ್ಟಿದ್ದೇನೆ ಅನ್ನೋ ಸಂದೇಶ ಇದಾಗಿತ್ತು.  ಪ್ಲಂಬರ್ ಯಾವ ಕಾರಣಕ್ಕೆ ಅಡಗಿಸಿಟ್ಟ ಅನ್ನೋ ಮಾಹಿತಿ ಲಭ್ಯವಿಲ್ಲ. ಆದರೆ ಬಿಯರ್ ಬಾಟಲಿಗೆ ಸೀಮಿತ ಅವಧಿವರೆಗೆ ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಹೀಗಾಗಿ ಮಂದಿನ ಪೀಳಿಗೆ ಇದನ್ನು ಪತ್ತೆ ಹಚ್ಚಿ ಸಂಭ್ರಮಿಸಲಿ ಅನ್ನೋ ಕಾರಣ ಇದರ ಹಿಂದೆ ಇಲ್ಲ. ಇನ್ನು ಬಿಯರ್ ಬಾಟಲ್‌ನ್ನು ಮನೆಯಲ್ಲಿನ ಸಂಭ್ರಮದ ಕ್ಷಣಕ್ಕಾಗಿ ತೆಗಿದಿಟ್ಟ ಕಾರಣವೂ ಇಲ್ಲಿಲ್ಲ. ಪ್ಲಂಬರ್ ತನ್ನ ಕೆಲಸ ಮಾಡುವಾಗ ಅಥವಾ ಬಳಿಕ ತೆಗೆದಿಟ್ಟ…

Read More