ಪಟ್ನಾ: ಮಾಜಿ ಸೈನಿಕನನ್ನು (Ex Soldier) ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಗ್ರಾಮಸ್ಥರು ಬಡಿದು ಹತ್ಯೆಗೈದ ಘಟನೆ ಬಿಹಾರದ (Bihar) ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. ಮತ್ತೋರ್ವ ದಾಳಿಕೋರನ ಮೇಲೂ ಗ್ರಾಮಸ್ಥರು ಹಲ್ಲೆ ನಡೆಸಿದ್ದು ಆತ ತೀವ್ರ ಅಸ್ವಸ್ಥಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಾಜಿ ಸೈನಿಕನನ್ನು ಬಿಜೇಂದ್ರ ಸಿಂಗ್ (55) ಎಂದು ಗುರುತಿಸಲಾಗಿದೆ. ಗುಂಪಿನಿಂದ ಹತ್ಯೆಗೀಡಾದ ಇಬ್ಬರು ದಾಳಿಕೋರರನ್ನು ಮಿಥಿಲೇಶ್ ಕುಮಾರ್ (23) ಮತ್ತು ಆದಿತ್ಯ ಕುಮಾರ್ (25) ಎಂದು ಗುರುತಿಸಲಾಗಿದೆ. ಗಾಯಗೊಂಡವನನ್ನು ಅಜೀತ್ ಕುಮಾರ್ ಎಂದು ಗುರುತಿಸಲಾಗಿದೆ. https://ainlivenews.com/joint_pain_suprem_ray_treatment_reiki/ ಬೈಕ್‍ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ನಿವೃತ್ತ ಸೇನಾ ಯೋಧನ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮೂವರು ದಾಳಿಕೋರರನ್ನು ಹಿಂಬಾಲಿಸಿ ಹಿಡಿದಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗ್ರಾಮಸ್ಥರು ದಾಳಿಕೋರರನ್ನು ಹಿಡಿದಾಗ ಗುಂಡು ಹಾರಿಸಲಾಗಿದ್ದು, ಅಂಕಿತ್ ಕುಮಾರ್ ಎಂಬಾತ ಗಾಯಗೊಂಡಿದ್ದಾನೆ. ಮಾಜಿ ಸೈನಿಕನ ಹತ್ಯೆಯ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ತನಿಖೆಗೆ…
Author: AIN Author
ರಾಮನಗರ: ”ನಾನು ಕಾಂಗ್ರೆಸ್ ಪರ ಮಾತನಾಡಿಲ್ಲ. ನಾನು ಬಿಜೆಪಿ ನಾಯಕರ ಜತೆಯಲ್ಲಿದ್ದೇನೆ. ಆದರೆ, ರಾಷ್ಟ್ರೀಯ ನಾಯಕರು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ, ನಾನು ಅಸಮಾಧಾನ ಸ್ಫೋಟ ಮಾಡಬೇಕಾಯಿತು,” ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕ್ಷೇತ್ರದ ಅಭಿವೃದ್ಧಿಗಾಗಿ ಸಿಎಂ, ಡಿಸಿಎಂ ಭೇಟಿ ಮಾಡುತ್ತೇನೆ. ಆದರೆ, ಕೆಲವು ನಾಯಕರು ‘ಹೋಗಲಿ ಬಿಡ್ರಿ ಅವ್ನು’ ಅಂತ ಏಕವಚನದಲ್ಲಿ ಮಾತನಾಡಿದ್ದಾರೆ. ಏಕವಚನದಲ್ಲಿ ಮಾತನಾಡಿಸಿಕೊಳ್ಳುವ ರೀತಿಯಲಿ ನಾನು ಬೆಳೆದಿಲ್ಲ. ಈ ಕ್ಷೇತ್ರದಲ್ಲಿ6 ಬಾರಿ ಸ್ಪರ್ಧೆ ಮಾಡಿದ್ದೇನೆ. ಮತದಾರರು ನಾಲ್ಕು ಬಾರಿ ಗೆಲ್ಲಿಸಿ, 2 ಬಾರಿ ಸೋಲಿಸಿದ್ದಾರೆ. ಇವನ್ಯಾರೋ ಲೀಡರ್ ಬಂದು ಏಕವಚನದಲ್ಲಿ ಹೋಗಿ ಅಂದ್ರೆ ಆಗಲ್ಲ. ಅವರಪ್ಪನ ರೀತಿ ಮಾತನಾಡುವ ಶಕ್ತಿಯನ್ನು ದೇವರು ನನಗೂ ಕೊಟ್ಟಿದ್ದಾನೆ,” ಎಂದು ವಾಗ್ದಾಳಿ ನಡೆಸಿದರು. ‘ಕ್ಷೇತ್ರದ ಜನತೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಗೆಲ್ಲಿಸಿದ್ದಾರೆ. ಇದನ್ನು ಬಿಟ್ಟು ಯಾವನ್ನೋ ಟಾರ್ಗೆಟ್ ಮಾಡಿ ಮಾತನಾಡು ಅಂತ ಗೆಲ್ಲಿಸಿಲ್ಲ. https://ainlivenews.com/joint_pain_suprem_ray_treatment_reiki/ 20 ವರ್ಷ ಕಾಂಗ್ರೆಸ್‌ನಲ್ಲಿದ್ದು, ಬಿಜೆಪಿಗೆ ಬಂದೆ. ಒಂದು ಸಣ್ಣ ತಪ್ಪನ್ನೂ ಬಿಜೆಪಿ…
ಈ ಜಗತ್ತು ಹೆಚ್ಚು ಆಧುನಿಕವಾಗಿ ಬದಲಾಗ್ತಾ ಇದ್ದ ಹಾಗೆ ಮಾನವನ ಆಹಾರ ಪದ್ಧತಿಯಲ್ಲಿ ಕೂಡ ಹೆಚ್ಚು ಬದಲಾವಣೆಗಳು ಕಂಡು ಬರ್ತಾ ಇದೆ. ಅದ್ರಲ್ಲೂ ಪ್ರಮುಖವಾಗಿ ಇತ್ತರೀಚೆಗಿನ ದಿನಗಳಲ್ಲಿ ಆಹಾರಕ್ಕೆ ಬಳಸಲಾಗುವ ರಾಸಾಯನಿಕಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಲಭ್ಯವಾಗ್ತಾ ಇದ್ದ, ಇದು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನ ಬೀರೋದಕ್ಕೆ ಶುರು ಮಾಡಿದೆ. ಇಂತಹ ಆಹಾರ ಸೇವನೆಯನ್ನು ಮಕ್ಕಳು ಮಾಡುವುದರಿಂದ ಅವರ ಮೇಲೂ ಕೆಟ್ಟ ಪರಿಣಾಮ ಬಿರುತ್ತದೆ. ಅದ್ರಲ್ಲೂ ಮಕ್ಕಳಿಗೆ ಕಾಫಿ ಟೀ ಅಂದ್ರೆ ತುಂಬನೇ ಇಷ್ಟ… ಆರೋಗ್ಯ ಕೂಡ ಅಷ್ಟೇ ತೊಂದರೆ. ಕಾಫಿ ಪುಡಿಗಳಿಗೆ ಬೆರೆಸಕಲಾಗುವ ಕೊಕೊ ಪೌಡರ್, ಚಕೋ ಪೌಡರ್ಗಳು ಮಾನವನ ಆರೋಗ್ಯವನ್ನ ಸಂಫೂರ್ಣವಾಗಿ ಹದಗಡಿಸುತ್ತಿದೆ. ಇನ್ನು ಟೀಗಳಲ್ಲಿರುವ ಕ್ಯಾಟಚಿನ್ಸ್ (catechins), ಹಾಗು ಆ್ಯಂಟಿಆಕ್ಸಿಡೆಂಟ್ ಕೂಡ ಅಷ್ಟೊಂದು ಉತ್ತಮವಲ್ಲ, ಆದ್ರೂ ಕೂಡ ಟೀ ಸಾಕಷ್ಟು ಜನರ ಆರೋಗ್ಯ ಟೀ ಕಾಫಿಯ ಸೇವನೆಯಿಂದಲೇ ಹಾಳಗುತ್ತಿದೆ.ನ ಇನ್ನೂ ಮಕ್ಕಳು ಸೇವನೆ ಮಾಡುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆಗಿದ್ದರೆ ಕಾಫೀ ಟೀ ಕುಡುಯುವುದರಿಂದ…
ಇಂಟರ್‌ನೆಟ್ ದೈತ್ಯ ಕಂಪನಿ ಗೂಗಲ್ ತನ್ನ ಬಳಕೆದಾರರ ಸುರಕ್ಷತೆ ಮತ್ತು ಭದ್ರತೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಸಾಧ್ಯವಾದಷ್ಟು ಯಾವ ದೋಷಗಳೂ ಇಲ್ಲದೆ ಬಳಕೆದಾರರು ನಿರಾತಂಕವಾಗಿ ಬಳಸಬಹುದಾದ ವ್ಯವಸ್ಥೆಗಳನ್ನು ಗೂಗಲ್ ಸದಾ ಪರಿಚಯಿಸುತ್ತಲೇ ಇರುತ್ತದೆ. ಗೂಗಲ್‌ನ ಇಂತಹ ಇತ್ತೀಚಿನ ಪ್ರಯತ್ನಗಳಲ್ಲಿ ಡಾರ್ಕ್ ವೆಬ್ ರಿಪೋರ್ಟ್ ಕೂಡಾ ಒಂದು. ಇದು ಖಾತೆಗಳಿಗೆ ಹೆಚ್ಚುವರಿ ಭದ್ರತಾ ಪದರವನ್ನು ಸೇರಿಸುತ್ತದೆ. ಏನಿದು ಡಾರ್ಕ್ ವೆಬ್ ರಿಪೋರ್ಟ್ ವೈಶಿಷ್ಟ್ಯ…? ಡಾರ್ಕ್ ವೆಬ್ ರಿಪೋರ್ಟ್ ಬಳಕೆದಾರರ ಖಾತೆಗಳಿಗೆ ಸಂಬಂಧಿಸಿದ ಸಂಭಾವ್ಯ ಕನ್ನ ಅಥವಾ ಡೇಟಾ ಉಲ್ಲಂಘನೆ ಉದ್ದೇಶದಿಂದ ಕಾರ್ಯನಿರ್ವಹಿಸುವ ಡಾರ್ಕ್ ವೆಬ್ ಅನ್ನು ಸ್ಕಾನ್ ಮಾಡುವ ವೈಶಿಷ್ಟ್ಯವಾಗಿದೆ. ಅಲ್ಲದೆ, ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆಯೇ ಎಂಬುದನ್ನೂ ಇದು ಪರಿಶೀಲನೆ ನಡೆಸುತ್ತದೆ. Google ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡಿ ಈಗ, ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಡಾರ್ಕ್ ವೆಬ್ ವರದಿ ಆಯ್ಕೆಯನ್ನು ಆಯ್ಕೆಮಾಡಿ ನಂತರ,…
ನಟ ರಕ್ಷಿತ್ ಶೆಟ್ಟಿ (Rakshit Shetty) ಇದೀಗ ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾಕಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಸಮಯದಲ್ಲಿ ಕಾಂತಾರ 2 ಚಿತ್ರದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಕಾಂತಾರ 2 ಸಿನಿಮಾದಲ್ಲಿ ನೀವು ನಟಿಸುತ್ತೀರಾ? ಎಂದು ಕೇಳಲಾದ ಪ್ರಶ್ನೆಗೆ, ರಿಷಬ್ ಶೆಟ್ಟಿ ಅವಕಾಶ ಕೊಟ್ಟರೆ ಖಂಡಿತಾ ನಟಿಸ್ತೀನಿ ಎಂದು ಹೇಳುವ ಮೂಲಕ ತಮ್ಮ ಗೆಳೆತನದ ಕುರುಹುವನ್ನು ಸಾಬೀತು ಪಡಿಸಿದ್ದಾರೆ. ರಿಷಬ್ ಶೆಟ್ಟಿ (Rishabh Shetty), ಮೊನ್ನೆಯಷ್ಟೇ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ಇನ್ಮುಂದೆ ನನ್ನನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆಯಬೇಡಿ. ನಾನು ಬರೋದಿಲ್ಲ. ಕಾಂತಾರ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುತ್ತೇನೆ’ ಎಂದಿದ್ದರು. ಅಲ್ಲಿಗೆ ಅತೀ ಶೀಘ್ರದಲ್ಲೇ ಸಿನಿಮಾ ಟೀಮ್ ಚಿತ್ರೀಕರಣಕ್ಕೆ ಹೊರಡಲಿದೆ ಎನ್ನುವ ಸೂಚನೆ ಸಿಕ್ಕಿತ್ತು. ಇದೀಗ ಮತ್ತೊಂದ ಮಾಹಿತಿ ಹೊರ ಬಿದ್ದಿದ್ದು, ರಿಷಬ್ ಈ ಸಿನಿಮಾಗಾಗಿ ತಮ್ಮ ಲುಕ್ ಅನ್ನೇ ಬದಲಾಯಿಸಿಕೊಂಡಿದ್ದಾರೆ. ದೀಪಾವಳಿ ದಿನದಂದು ಫ್ಯಾಮಿಲಿ ಜೊತೆಗಿನ ಫೋಟೋ ಹಂಚಿಕೊಂಡಿರುವ ರಿಷಬ್, ಆ ಫೋಟೋಗಳಲ್ಲಿ ಅವರು…
ಇತ್ತೀಚೆಗೆ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಸಂಬಂಧಿಸಿ ಡೀಪ್ ಫೇಕ್ ವಿಡಿಯೋಗಳು ಯೂಟ್ಯೂಬ್ ತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಯೂಟೂಬರ್ಗಳಿಗೆ, ಯೂಟ್ಯೂಬ್ ಕೆಲವು ನಿಯಮಗಳನ್ನು ಜಾರಿಗೆ ತರಲಿದ್ದು ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಯೂಟ್ಯೂಬ್ ನಲ್ಲಿ ಬಳಕೆ ಮಾಡಲಾದ ವೀಡಿಯೋ ಮತ್ತು ಫೋಟೋಗಳನ್ನು ಕೃತಕ ಬುದ್ದಿಮತ್ತೆ (ಡೀಪ್ ಫೇಕ್) ನಿಂದ ತಯಾರಿಸಿದ್ದರೇ ಅಂತವುಗಳಿಗೆ ಡಿಸ್ಕ್ಲೇಮರ್ ಹಾಕುವುದು ಕಡ್ಡಾಯ ಎಂದು ಹೇಳಿದೆ. ಇಲ್ಲದಿದ್ದರೇ ದಂಡ ಹಾಕುವುದಾಗಿ ಎಚ್ಚರಿಕೆ ಎಂದು ಹೇಳಿದೆ. ವೀಡಿಯೋಗಳ ದುರ್ಬಳಕೆಯಾಗುವ ಸಾಧ್ಯತೆ ಗಮದಲ್ಲಿಟ್ಟುಕೊಂಡು ಇಂಥದಕ್ಕೆ ಕಡಿವಾಣ ಹಾಕಲು ಸೂಚನೆ ನೀಡಿದೆ. ಒಂದು ವೇಳೆ ಎಐ ಬಳಸಿದ್ದರೂ ಅದನ್ನು ಬಹಿರಂಗಪಡಿಸದಿದ್ದರೇ ಅಂತಹ ವೀಡಿಯೋಗಳನ್ನು ಡಿಲೀಟ್ ಮಾಡಿ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಸಿದೆ. ಈ ನಿಯಮಗಳು 2024 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಮುಂಗಾರಿನಲ್ಲಿ ವಾಡಿಕೆಯಂತೆ ಮಳೆ ಸುರಿಯದೇ ಕಬ್ಬಿನ ಇಳುವರಿ ಕುಸಿದಿದ್ದು, ಕೈ ತುಂಬಾ ಆದಾಯದ ನಿರೀಕ್ಷೆಯಲ್ಲಿದ್ದ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಹೊಸಪೇಟೆ ತಾಲೂಕು ಸೇರಿ ಜಿಲ್ಲೆಯಲ್ಲಿ ಅಂದಾಜು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಬೆಲ್ಲದರಾಜ, ಜೈಭೀಮ್ ಸೇರಿ 517 ತಳಿಯ ಕಬ್ಬು ಬೆಳೆಯಲಾಗಿದೆ. ಆದರೆ ಈ ಬಾರಿ ಮಳೆಯಾಗದೇ ಕಬ್ಬಿನ ಬೆಳೆಗಳಿಗೆ ನಾನಾ ರೀತಿಯ ರೋಗಗಳು ಅಂಟಿಕೊಂಡರೆ, ಇನ್ನೊಂದೆಡೆ ಸಮರ್ಪಕ ನೀರು ಹರಿಯದೇ ಬೆಳವಣಿಗೆಯಲ್ಲಿ ಕುಂಠಿತ ಕಂಡಿದೆ. ಈ ಬಾರಿ ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಕಳೆದ ಬಾರಿಗಿಂತ ಅರ್ಧದಷ್ಟು ಇಳುವರಿ ಬಾರದೇ ರೈತ ವ್ಯಥೆಪಡುವಂತಾಗಿದೆ. ಸಾಮಾನ್ಯವಾಗಿ ಒಬ್ಬ ರೈತ ಒಂದು ಎಕರೆ ಕಬ್ಬಿನ ಬೆಳೆಗೆ 40 ರಿಂದ 50 ಸಾವಿರ ರೂ. ಖರ್ಚು ಮಾಡುತ್ತಾನೆ. ಬೆಲ್ಲದರಾಜ ಕಬ್ಬು ಒಂದು ಎಕರೆಗೆ 40 ರಿಂದ 60 ಟನ್‌ವರೆಗೆ ಬೆಳೆಯಲಾಗುತ್ತದೆ. ಜೈ ಭೀಮ್ 30 ರಿಂದ 45 ಟನ್ ಬೆಳೆಯಲಾಗುತ್ತದೆ. 517 ತಳಿಯ ಕಬ್ಬು 60 ರಿಂದ 100 ಟನ್ ಬೆಳೆದ…
ವಿಜಯಪುರ:- ಲೋಕಸಭೆಗೆ ಯಡಿಯೂರಪ್ಪ ಉಪಯೋಗಿಸಲು ವಿಜಯೇಂದ್ರಗೆ ಪಟ್ಟ ಕೊಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಉಪಯೋಗಿಸಬೇಕು ಎಂಬ ಕಾರಣದಿಂದ ಈ ನೇಮಕ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದ ನಾಯಕರಿಗೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಲಿಂಗಾಯತ ಮತಗಳು ಬಿಜೆಪಿ ಕೈಬಿಟ್ಟು, ಕೇವಲ ಹದಿನೇಳು ಲಿಂಗಾಯತ ಶಾಸಕರ ಸೀಟು ಪಡೆದುಕೊಳ್ಳುವಂತಾಗಿದೆ ಎಂಬುದು ಈಗ ಅವರ ಹೈಕಮಾಂಡ್ ಅರಿವಿಗೆ ಬಂದಿದೆ. ಈ ಕಾರಣದಿಂದ ಈಗ ಅನಿವಾರ್ಯವಾಗಿ ಯಡಿಯೂರಪ್ಪನವರನ್ನು ಲೋಕಸಭೆ ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ವಿಜಯೇಂದ್ರ ನೇಮಕ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಮೋದಿ ಮತ್ತು ಅಮಿತ್ ಶಾ ಅವರದ್ದಿದೆ. ಈಗ ತಮ್ಮ ಬುಡಕ್ಕೆ ಬೆಂಕಿ ಹತ್ತಿರೋದರಿಂದ ಯಡಿಯೂರಪ್ಪ ಅವರನ್ನು…
ದರ್ಶನ್ (Darshan) ನಟನೆಯ ‘ಬೃಂದಾವನ’ (Brundavana) ಸಿನಿಮಾದಲ್ಲಿ ನಟಿಸಿದ್ದ ಕಾರ್ತಿಕಾ ನಾಯರ್ (Karthika Nair) ಇದೀಗ ತಮ್ಮ ಭಾವಿ ಪತಿಯನ್ನು ಪರಿಚಯಿಸಿದ್ದಾರೆ. ರೊಮ್ಯಾಂಟಿಕ್ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ನಟಿ ಸಿಹಿಸುದ್ದಿ ಕೊಟ್ಟಿದ್ದಾರೆ. ಹಿರಿಯ ನಟಿ ರಾಧಾ ನಾಯರ್ ಅವರ ಪುತ್ರಿ ಕಾರ್ತಿಕಾ ನಾಯರ್, ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕಳೆದ ತಿಂಗಳು ರೋಹಿತ್ ಮೆನನ್ ಜೊತೆ ಎಂಗೇಜ್‌ಮೆಂಟ್ ನಡೆದಿದೆ. ಇದೀಗ ಭಾವಿ ಪತಿ ರೋಹಿತ್‌ರನ್ನ ನಟಿ ಪರಿಚಯಿಸಿದ್ದಾರೆ. ಇನ್ನೂ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಿಮ್ಮನ್ನು ಭೇಟಿಯಾಗಿರೋದು ನನ್ನ ಅದೃಷ್ಟ. ನಿಮ್ಮನ್ನು ಇಷ್ಟಪಡೋದು ಮ್ಯಾಜಿಕ್. ಹೊಸ ಹೆಜ್ಜೆಗೆ ಕೌಂಟ್‌ಡೌನ್ ಶುರುವಾಗಿದೆ ಎಂದು ನಟಿ ಸಂತಸದಿಂದ ಬರೆದುಕೊಂಡಿದ್ದಾರೆ. ನಟಿಯ ರೊಮ್ಯಾಂಟಿಕ್ ಫೋಟೋ ನೋಡಿ ಅಭಿಮಾನಿಗಳು ಶುಭಹಾರೈಸಿದ್ದಾರೆ.
ಕೆಲವೊಂದು ಖಾಯಿಲೆಗಳು ಮನುಷ್ಯನಿಗೆ ಜೀವ ಹಿಂಡುವಂತೆ ಮಾಡುತ್ತದೆ ಅದರಲ್ಲಿ ಕುರ (ಕುರು, ಕೀವುಗುಳ್ಳೆ) ಮುಖ್ಯವಾದ ಖಾಯಿಲೆ ಅಂದರೆ ತಪ್ಪಾಗೋದಿಲ್ಲ. ಕುರ ಅನ್ನೋ ರೋಗ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಈ ಕುರಕ್ಕೆ ಆಂಗ್ಲ ಭಾಷೆಯಲ್ಲಿ Butt Acne ಎಂದು ಕರೆಯುತ್ತಾರೆ. ಈ ಕುರ ಒಮ್ಮೆ ನಮ್ಮ ದೇಹದಲ್ಲಿ ಬಂದರೆ ಸಾಕು ಕೂರೋದಕ್ಕೂ ಆಗೋಲ್ಲ ನಿಲ್ಲೋದಕ್ಕೂ ಆಗೋಲ್ಲ ಆ ರೀತಿಯಾಗಿ ನೋವನ್ನುಂಟು ಮಾಡುತ್ತದೆ. ಈ ಕುರ ರೋಗ (ಕೀವುಗುಳ್ಳೆ) ಯಾಕೆ ಬರುತ್ತೆ? ಇದಕ್ಕೆ ಕಾರಣ ಏನು? ಅನ್ನೋದನ್ನ ನಾವು ನಿಮಗೆ ತಿಳಿಸಿಕೊಡ್ತೀವಿ ಜೊತೆಗೆ ಈ ಕುರಕ್ಕೆ ಮನೆಯಲ್ಲೇ ಸಿಗುವಂತಹ ಪದಾರ್ಥಗಳನ್ನ ಬಳಸಿ ವಾಸಿಮಾಡಿಕೊಳ್ಳಬಹುದು ಅದು ಹೇಗೆ ಅನ್ನೋದನ್ನ ನಾವು ನಿಮಗೆ ಹೇಳ್ತೀವಿ ಕುರ ಆಗೋದಕ್ಕೆ ಕಾರಣ ಏನು..? ಕುರು ಸಾಮಾನ್ಯವಾಗಿ ದೇಹದಲ್ಲಿ ಎಲ್ಲಿ ಅತೀ ಹೆಚ್ಚು ಕೊಬ್ಬಿನ ಅಂಶ ಇರುತ್ತೋ ಅಲ್ಲಿ ಕಂಡು ಬರುತ್ತದೆ. ಇದಕ್ಕೆ ಕಾರಣ ಏನು ಅಂದ್ರೆ ರಕ್ತ ಕೆಟ್ಟಿದ್ದರೆ, ರಕ್ತದಲ್ಲಿನ ಇನ್ಫೆಕ್ಷನ್ನಿಂದ, ದೇಹದಲ್ಲಿ ಪಿತ್ತ ಅತಿಯಾದಾಗ, ದೇಹದಲ್ಲಿ ಉಷ್ಣಾಂಶ…