ಇಂಟರ್ನೆಟ್ ದೈತ್ಯ ಕಂಪನಿ ಗೂಗಲ್ ತನ್ನ ಬಳಕೆದಾರರ ಸುರಕ್ಷತೆ ಮತ್ತು ಭದ್ರತೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಸಾಧ್ಯವಾದಷ್ಟು ಯಾವ ದೋಷಗಳೂ ಇಲ್ಲದೆ ಬಳಕೆದಾರರು ನಿರಾತಂಕವಾಗಿ ಬಳಸಬಹುದಾದ ವ್ಯವಸ್ಥೆಗಳನ್ನು ಗೂಗಲ್ ಸದಾ ಪರಿಚಯಿಸುತ್ತಲೇ ಇರುತ್ತದೆ. ಗೂಗಲ್ನ ಇಂತಹ ಇತ್ತೀಚಿನ ಪ್ರಯತ್ನಗಳಲ್ಲಿ ಡಾರ್ಕ್ ವೆಬ್ ರಿಪೋರ್ಟ್ ಕೂಡಾ ಒಂದು. ಇದು ಖಾತೆಗಳಿಗೆ ಹೆಚ್ಚುವರಿ ಭದ್ರತಾ ಪದರವನ್ನು ಸೇರಿಸುತ್ತದೆ.
ಏನಿದು ಡಾರ್ಕ್ ವೆಬ್ ರಿಪೋರ್ಟ್ ವೈಶಿಷ್ಟ್ಯ…?
ಡಾರ್ಕ್ ವೆಬ್ ರಿಪೋರ್ಟ್ ಬಳಕೆದಾರರ ಖಾತೆಗಳಿಗೆ ಸಂಬಂಧಿಸಿದ ಸಂಭಾವ್ಯ ಕನ್ನ ಅಥವಾ ಡೇಟಾ ಉಲ್ಲಂಘನೆ ಉದ್ದೇಶದಿಂದ ಕಾರ್ಯನಿರ್ವಹಿಸುವ ಡಾರ್ಕ್ ವೆಬ್ ಅನ್ನು ಸ್ಕಾನ್ ಮಾಡುವ ವೈಶಿಷ್ಟ್ಯವಾಗಿದೆ. ಅಲ್ಲದೆ, ಇಮೇಲ್ ವಿಳಾಸ ಮತ್ತು ಪಾಸ್ವರ್ಡ್ ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿ ಆನ್ಲೈನ್ನಲ್ಲಿ ಸೋರಿಕೆಯಾಗಿದೆಯೇ ಎಂಬುದನ್ನೂ ಇದು ಪರಿಶೀಲನೆ ನಡೆಸುತ್ತದೆ.

- Google ಅಪ್ಲಿಕೇಶನ್ನ ಇತ್ತೀಚಿನ ಆವೃತ್ತಿಯನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಿ
- ಈಗ, ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಡಾರ್ಕ್ ವೆಬ್ ವರದಿ ಆಯ್ಕೆಯನ್ನು ಆಯ್ಕೆಮಾಡಿ
- ನಂತರ, ಮುಂದಿನ ಪುಟದಲ್ಲಿ, `ರನ್ ಸ್ಕ್ಯಾನ್ ಬಟನ್’ ಅನ್ನು ಟ್ಯಾಪ್ ಮಾಡಿ
- ಸ್ಕ್ಯಾನ್ ಪ್ರಕ್ರಿಯೆ ಪೂರ್ಣಗೊಳ್ಳುವುದನ್ನು ನಿರೀಕ್ಷಿಸಿ ಮತ್ತು ನಂತರ ಫಲಿತಾಂಶವನ್ನು ಪರಿಶೀಲಿಸಿ

