ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ14 ವರ್ಷದ ರಾಮ ಎಂಬ ಹೆಸರಿನ ಸಿಂಹ ಸಾವನ್ನಪ್ಪಿದೆ. ಸಿಂಹವು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಅಲ್ಲದೆ, ಪಶುವೈದ್ಯರು ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದಿದ್ದಾರೆ. https://ainlivenews.com/joint_pain_suprem_ray_treatment_reiki/ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಬಿಬಿಎಂಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 14 ವರ್ಷದ ಸಿಂಹ ಸಾವನ್ನಪ್ಪಿದೆ. ಸಿಂಹಕ್ಕೆ ಬುಧವಾರ ಸಂಜೆ ವಾಂತಿ ಸಂಬಂಧಿತ ಲಕ್ಷಣಗಳನ್ನು ಕಾಣಿಸಿಕೊಂಡಿದೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಗುರುವಾರ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ
Author: AIN Author
ಮಂಗಳೂರು: ಮಾಜಿ ಜೆಡಿಎಸ್ ಶಾಸಕರ ಸೇರ್ಪಡೆಗೆ ಸಚಿವ ಕೆ.ಎನ್ ರಾಜಣ್ಣ ಅಸಮಧಾನ ವಿಚಾರ ‘ವಿರೋಧ ಅಂತಾ ನಾನು ಹೇಳಿಲ್ಲ. ಅಸಮಾಧಾನ ಇದ್ದೆ ಇರುತ್ತೆ ಎಂದು ಮಂಗಳೂರಿನಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು. ಒಂದು ಮನೆಯಲ್ಲಿ ಅಸಮಾಧಾನ ಇರಲ್ವಾ?, ಆದ್ರೆ, ಪಕ್ಷಕ್ಕೆ ಮಾರಕವಾಗುವ ರೀತಿಯ ಅಸಮಾಧಾನ ಅಲ್ಲ. ಸಾತ್ವಿಕ ವಿರೋಧ ಅಷ್ಟೇ ಎಂದರು. https://ainlivenews.com/what-happens-if-tea-coffee-is-given-to-children/
ಬೆಂಗಳೂರು: ಯಾವುದೇ ವ್ಯಕ್ತಿಗಳು, ಸಂಘಟನೆಗಳು ಕಾನೂನು ವಿರುದ್ಧ ನಡೆದುಕೊಂಡರೆ ಕ್ರಮ ಅನಿವಾರ್ಯ ಎಂದು ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ ಕೊಟ್ಟಿದ್ದಾರೆ. ಬಜರಂಗದಳದ (Bajarang Dal) ಕಾರ್ಯಕರ್ತರಿಗೆ ಗಡಿಪಾರಿಗೆ ನೋಟಿಸ್ (Deportation Notice) ನೀಡಿರುವ ವಿಚಾರವಾಗಿ ಪೇಜಾವರ ಶ್ರೀ, ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಹೊರತುಪಡಿಸಿ ಪೊಲೀಸ್ ಇಲಾಖೆ ಯಾವ ಕೆಲಸ ಮಾಡಲ್ಲ. ಬಜರಂಗದಳ ಆಗಲಿ ಯಾವುದೇ ಸಂಘ ಸಂಸ್ಥೆಗಳು ಆಗಲಿ, ವೈಯಕ್ತಿಕವಾಗಿ ಕಾನೂನು ಪ್ರಕಾರ ಏನೇ ಮಾಡಿದರೂ ನಮ್ಮ ಸರ್ಕಾರ ಅವರ ಜೊತೆ ಇರುತ್ತೆ. ಕಾನೂನಿನ ವಿರುದ್ಧವಾಗಿ ಕೆಲಸ ಮಾಡಿದರೆ ಏನು ಮಾಡಬೇಕು? ಪೊಲೀಸ್ ಇಲಾಖೆ ಇರೋದು ಕಾನೂನು ಹಾಗೂ ಶಾಂತಿ ಕಾಪಾಡಲು. ಆ ದೃಷ್ಟಿಯಲ್ಲಿ ಪೊಲೀಸ್ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗಡಿಪಾರು ನೋಟಿಸ್ ಅನ್ನು ಸಮರ್ಥನೆ ಮಾಡಿಕೊಂಡರು. https://ainlivenews.com/joint_pain_suprem_ray_treatment_reiki/ ಯಾರನ್ನೋ ಹತ್ತಿಕ್ಕಬೇಕು ಅಥವಾ ರಾಜಕೀಯ ದುರುದ್ದೇಶಕ್ಕೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಪೊಲೀಸರು ಮಾಡಲ್ಲ. ನಮ್ಮ ಸರ್ಕಾರ ಜನ ಸಮುದಾಯಕ್ಕೆ, ರಾಜ್ಯದ ಜನರಿಗೆ ಶಾಂತಿ…
ಕಲಘಟಗಿ: ಗ್ರಾಮೀಣ ಭಾಗದಲ್ಲಿ ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಜಿ.ನಂಜನಗೌಡ ತಿಳಿಸಿದರು. ಕಾರ್ಯಕ್ರಮದ ತೊಡಗಿಕೊಂಡಿರುವ ಕೆ ಸಿ ಸಿ ಬ್ಯಾಂಕಿನ ನಿರ್ದೇಶಕರಾಗಿರುವ ಮಂಜುನಾಥ್ ಮುರಳ್ಳಿ ಕರೆ ನೀಡಿದರು ಈ ಸಂದರ್ಭದಲ್ಲಿ ಬೆಳಗಾವಿ ವಲಯದ ಜಂಟಿ ನಿಬಂಧಕರಾದ ಸುರೇಶ್ ಗೌಡ ಪಾಟೀಲ್, ಸಹಕಾರಿ ಕ್ಷೇತ್ರಗಳ ನಿರ್ದೇಶಕರಾದ ಮಲ್ಲಿಕಾರ್ಜುನ ಹೊರಕೇರಿ, ಕೆಸಿಸಿ ಬ್ಯಾಂಕಿನ ಮುಖ್ಯಾಧಿಕಾರಿ ಕೆ.ಮುನಿಯಪ್ಪ ಮತ್ತು ಸಚಿವ ಸಂತೋಷ್ ಲಾಡ್ ಅವರ ಆಪ್ತ ಸಹಾಯಕರಾದ ಸೋಮಶೇಖರ್ ಬೆನ್ನುರ್, ಹರಿಶಂಕರ್ ಮಠದ್, ಹಾಗೂ ಬಾಳು ಖಾನಾಪುರ ಉಪಸ್ಥಿತರಿದ್ದರು. ವರದಿ ಮಾರುತಿ ಲಮಾಣಿ
ಬೆಂಗಳೂರು: ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಾಗಿ ಅರ್ಜಿ ಸಲ್ಲಿಸಲು ನ. 17 ಕೊನೇ ದಿನ ಎಂದು ತಿಳಿಸಲಾಗಿತ್ತು. ಇದುವರೆಗೆ ಪ್ರತಿ ಬಾರಿ ಪೊಲೀಸರು ಹಿಡಿದಾಗಲೂ 500 ರೂಪಾಯಿಂದ 1 ಸಾವಿರ ರೂಪಾಯಿ ವರೆಗೆ ದಂಡ ಕಟ್ಟಬೇಕಿತ್ತು. ಆದರೆ, ಈಗ ಆ ತಲೆಬಿಸಿ ಸದ್ಯದ ಮಟ್ಟಿಗೆ ತಪ್ಪಿದೆ. ಸರ್ಕಾರ ಸದ್ಯದ ಗಡುವನ್ನು ವಿಸ್ತರಣೆ ಮಾಡಿದ್ದು, ಫೆಬ್ರವರಿ 17ರವರೆಗೂ ಕಾಲಾವಕಾಶ ನೀಡಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗಸ್ಟ್ 17ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ಆ.18ರಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.
ಬೆಂಗಳೂರು ಗ್ರಾಮಾಂತರ: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ, ಸರಕು ಸಾಗಣೆ ವಾಹನಗಳ ತಡೆರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್ನ ಮೊದಲ ಹಂತದ ದೊಡ್ಡಬಳ್ಳಾಪುರ-ಹೊಸಕೋಟೆ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. https://ainlivenews.com/joint_pain_suprem_ray_treatment_reiki/ ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಆರಂಭಗೊಂಡು ಹೊಸಕೋಟೆ ವರೆಗಿನ ನಾಲ್ಕು ಪಥ ರಸ್ತೆಯ 47 ಕಿ.ಮಿ.ನಿಂದ 76.150 ಕಿ.ಮಿ ವರೆಗೆ ಬಳಕೆದಾರರಿಗೆ ನಲ್ಲೂರು ದೇವನಹಳ್ಳಿ ಸುಂಕ ವಸೂಲಾತಿ ಕೇಂದ್ರದಲ್ಲಿ ಇಂದಿನಿಂದ ಶುಲ್ಕ ಸಂಗ್ರಹ ಮಾಡಲಾಗುತ್ತದೆ. ಇದು 2024ರ ಮಾರ್ಚ್31 ರವರೆಗೆ ಜಾರಿಯಲ್ಲಿರಲಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು: ಉತ್ತರ ಕರ್ನಾಟಕದವರಿಗೆ ವಿಪಕ್ಷ ಸ್ಥಾನ ನೀಡಬೇಕು. ಎಲ್ಲವೂ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಬೇಕಾ? ಎಂದು ವಿಪಕ್ಷನ ಆಯ್ಕೆ ವಿಷಯದಲ್ಲಿ ಧ್ವನಿ ಎತ್ತಿದ್ದಾರೆ. https://ainlivenews.com/joint_pain_suprem_ray_treatment_reiki/ ರಾಜ್ಯ ಬಿಜೆಪಿಗೆ ಹೊಸ ಸಾರಥಿ ನೇಮಕವಾಗುತ್ತಿದ್ದಂತೆಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ಒಂದು ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗಬಾರದು. ಇಂದಿನ ಶಾಸಕಾಂಗ ಸಭೆಯಲ್ಲಿ ನಾನು ನನ್ನ ವಾದ ಮಂಡಿಸುತ್ತೇನೆ. ನಾನು ಉತ್ತರ ಕರ್ನಾಟಕ, ಹಿಂದುತ್ವ ಹಿನ್ನೆಲೆಯ ನಾಯಕ. ಜೀ ಹುಜೂರ್ ಎನ್ನುವ ಸಂಸ್ಕೃತಿ ನಮ್ಮದಲ್ಲ. ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ನಲ್ಲಿ ಹಲವಾರು ರೀತಿಯ ವಂಚನೆ ನಡೀತಾ ಇರುತ್ತೆ ಆದರೆ ಇಲ್ಲೊಂದು ಗ್ಯಾಂಗ್ ನಿಮ್ಮನ್ನ ವಂಚಿಸುವ ರೀತಿ ಬೇರೆ ಜೀರೋ ಅಕೌಂಟ್ ನೆಪದಲ್ಲಿ ನಿಮಗೆ ಹಣದ ನೀಡಿ ಅಕೌಂಟ್ ಓಪನ್ ಮಾಡಿಸ್ತಾರೆ. ಸಾವಿರ ರೂಪಾಯಿ ಆಸೆಗೆ ಅಮಾಯಕರು ಬಲೆಗೆ ಬೀಳ್ತಾರೆ ಬೇನಾಮಿ ಬ್ಯಾಂಕ್ ಖಾತೆ ಓಪನ್ ಮಾಡಿ ಕೋಟಿ ಕೋಟಿ ವಹಿವಾಟುಮಾಡಿ ಹಣ ಲೂಟಿ ಮಾಡ್ತಾರೆ ಈರೀತಿ ಖತರ್ನಾಕ್ ಗ್ಯಾಂಗ್ ಒಂದನ್ನು ಸಿಸಿಬಿ ಸೈಬರ್ ವಿಂಗ್ ಪೊಲೀಸ್ ಭೇದಿಸಿದ್ದಾರೆ… ಹಾಗಾದ್ರೆ ಇವರು ಹೇಗೆ ವಂಚನೆ ಮಾಡುತ್ತಿದ್ದರು ಅಂತ ಈ ಸ್ಟೋರಿ ನೋಡಿ.. https://ainlivenews.com/joint_pain_suprem_ray_treatment_reiki/ ಅಮಾಯಕರಿಗೆ ಐದು ಹತ್ತು ಸಾವಿರದ ಆಸೆ ತೋರಿಸಿ ಬ್ಯಾಂಕ್ ಖಾತೆ ಓಪನ್ ಮಾಡಿ ಬೇನಾಮಿ ಹಣ ವರ್ಗಾವಣೆ ಮಾಡ್ತಿದ್ದ ಜಾಲ. ಅಮಾಯಕರ ಬಳಿ ಆಧಾರ್, ಪಾನ್ ಪಡೆದು ಬ್ಯಾಂಕ್ ಅಪ್ಲಿಕೇಷನ್ ಫಾರ್ಮ್ ಗೆ ಸೈನ್ ಮಾಡಿಸಿಕೊಳ್ಳೋ ಈ ದಂಧೆಕೋರರು ಅಮಾಯಾಕರ ಹೆಸ್ರಲ್ಲಿ ಬ್ಯಾಂಕ್ ಖಾತೆ ತೆರೆಯುತ್ತಾರೆ. ಹೀಗೆ ಬ್ಯಾಂಕ್ ಖಾತೆ ಓಪನ್ ಮಾಡಲು ಪ್ರತಿ ಅಕೌಂಟ್ ಗೂ…
ಬೆಂಗಳೂರು: ತೆಲೆಂಗಾಣ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. https://ainlivenews.com/joint_pain_suprem_ray_treatment_reiki/ ಸದನದ ಗೌರವ, ಸಭಾಧ್ಯಕ್ಷರ ಗೌರವ ಉಳಿಯಬೇಕಾದರೇ ಜಮೀರ್ ಕ್ಷಮೆ ಕೇಳಲಿ. ಯುಟಿ ಖಾದರ್ ಅವರು ಕಾಂಗ್ರೆಸ್ ಸ್ಪೀಕರ್ ಅಲ್ಲ, 224 ಶಾಸಕರಿಗೆ ರಕ್ಷಣೆ ಕೊಡುವವರು. ಅವರನ್ನು ಒಂದು ಧರ್ಮದ ಸೋಂಕಿಗೆ ಒಳಪಡಿಸುವುದು ಸರಿಯಲ್ಲ. ಚೈಲ್ಡಿಷ್ಗಳನ್ನು ಇಟ್ಟುಕೊಂಡು ಸದನದ ಗೌರವ ಉಳಿಸಲು ಆಗುತ್ತಾ? ಎಂದು ತಿರುಗೇಟು ನೀಡಿದರು. ತೆಲಂಗಾಣದಲ್ಲಿ ಚುನಾವಣಾ ಭಾಷಣದ ವೇಳೆ ಸಚಿವ ಜಮೀರ್ ಅಹಮದ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮುಸ್ಲಿಂ ಸ್ಪೀಕರ್ ಯುಟಿ ಖಾದರ್‌ಗೆ ಈಗ ಬಿಜೆಪಿಯವರೂ ನಮಸ್ಕರಿಸುತ್ತಾರೆನ್ನುವ ಮೂಲಕ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.
ಮೈಸೂರು: ನಾನು ರೈತ ಸಂಘದ ಹೋರಾಟಗಾರನಾಗಿದ್ದೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಹೋರಾಟಕ್ಕೆ ಆಸ್ಪದ ನೀಡದೆ ಬಂಧನ ಮಾಡಿಸಿದ್ದು, ಇವರಿಗೆ ಶೋಭೆ ತರುವಂತದ್ದಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನವೆಂಬರ್ 9ರಂದು ಸಿಎಂ ಸಿದ್ದರಾಮಯ್ಯನವರ ಮನೆ ಮುಂದೆ ಕಬ್ಬು ಬೆಳೆಗಾರ ರೈತರು ಧರಣಿ ನಡೆಸಲು ಆಸ್ಪದ ನೀಡದೆ ಬಂಧನ ಮಾಡಿದ ಪೊಲೀಸ್ ವರ್ತನೆ ಖಂಡನೀಯ, ಮುಖ್ಯಮಂತ್ರಿಗಳ ಮುಂದಿನ ಮೈಸೂರು ಪ್ರವಾಸದ ವೇಳೆ ರೈತ ಮುಖಂಡರ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನುತ್ ರವರು ಬಂದಿತರಾಗಿದ್ದ ಚಳುವಳಿ ನಿರತರ ರೈತರ ಬಳಿ ಬಂದು ಭರವಸೆ ನೀಡಿದ್ದಾರೆ. https://ainlivenews.com/what-happens-if-tea-coffee-is-given-to-children/ ಮುಖ್ಯಮಂತ್ರಿಗಳ ಕ್ಷೇತ್ರದ ಸಮಸ್ಯೆಯಾಗಿರುವ ಕಾರಣ ಸಮಸ್ಯೆ ಬಗೆಹರಿಸಲು ಜಿಲ್ಲಾ ಮಂತ್ರಿಗಳು ವಿಶೇಷ ಗಮನಹರಿಸಬೇಕು. ನಿರ್ಲಕ್ಷ್ಯ ಮಾಡಿದರೆ ರೈತರ ಗಂಭೀರ ಹೋರಾಟ ಎದುರಿಸಬೇಕಾಗುತ್ತದೆ ಎಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.