ಬೆಂಗಳೂರು ನಲ್ಲಿ ಹಲವಾರು ರೀತಿಯ ವಂಚನೆ ನಡೀತಾ ಇರುತ್ತೆ ಆದರೆ ಇಲ್ಲೊಂದು ಗ್ಯಾಂಗ್ ನಿಮ್ಮನ್ನ ವಂಚಿಸುವ ರೀತಿ ಬೇರೆ ಜೀರೋ ಅಕೌಂಟ್ ನೆಪದಲ್ಲಿ ನಿಮಗೆ ಹಣದ ನೀಡಿ ಅಕೌಂಟ್ ಓಪನ್ ಮಾಡಿಸ್ತಾರೆ. ಸಾವಿರ ರೂಪಾಯಿ ಆಸೆಗೆ ಅಮಾಯಕರು ಬಲೆಗೆ ಬೀಳ್ತಾರೆ ಬೇನಾಮಿ ಬ್ಯಾಂಕ್ ಖಾತೆ ಓಪನ್ ಮಾಡಿ ಕೋಟಿ ಕೋಟಿ ವಹಿವಾಟುಮಾಡಿ ಹಣ ಲೂಟಿ ಮಾಡ್ತಾರೆ ಈರೀತಿ ಖತರ್ನಾಕ್ ಗ್ಯಾಂಗ್ ಒಂದನ್ನು ಸಿಸಿಬಿ ಸೈಬರ್ ವಿಂಗ್ ಪೊಲೀಸ್ ಭೇದಿಸಿದ್ದಾರೆ… ಹಾಗಾದ್ರೆ ಇವರು ಹೇಗೆ ವಂಚನೆ ಮಾಡುತ್ತಿದ್ದರು ಅಂತ ಈ ಸ್ಟೋರಿ ನೋಡಿ..
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಅಮಾಯಕರಿಗೆ ಐದು ಹತ್ತು ಸಾವಿರದ ಆಸೆ ತೋರಿಸಿ ಬ್ಯಾಂಕ್ ಖಾತೆ ಓಪನ್ ಮಾಡಿ ಬೇನಾಮಿ ಹಣ ವರ್ಗಾವಣೆ ಮಾಡ್ತಿದ್ದ ಜಾಲ. ಅಮಾಯಕರ ಬಳಿ ಆಧಾರ್, ಪಾನ್ ಪಡೆದು ಬ್ಯಾಂಕ್ ಅಪ್ಲಿಕೇಷನ್ ಫಾರ್ಮ್ ಗೆ ಸೈನ್ ಮಾಡಿಸಿಕೊಳ್ಳೋ ಈ ದಂಧೆಕೋರರು ಅಮಾಯಾಕರ ಹೆಸ್ರಲ್ಲಿ ಬ್ಯಾಂಕ್ ಖಾತೆ ತೆರೆಯುತ್ತಾರೆ. ಹೀಗೆ ಬ್ಯಾಂಕ್ ಖಾತೆ ಓಪನ್ ಮಾಡಲು ಪ್ರತಿ ಅಕೌಂಟ್ ಗೂ ಹೊಸ ಸಿಮ್ ಬಳಸಿ ಖಾತೆ ಓಪನ್ ಮಾಡಿಸ್ತಾರೆ. ಈ ಖಾತೆ ಓಪನ್ ಆದ್ರೂ ಅಮಾಯಕರಿಗೆ ಈ ಖಾತೆ ನಂಬರ್ ಆಗ್ಲಿ ತಮ್ಮ ಖಾತೆ ನಿರ್ವಹಣೆ ಆಗಲಿ ಖಾತೆದಾರರ ಗಮನಕ್ಕೆ ಇರೋದಿಲ್ಲ. ಆದ್ರೆ ಇವರ ಹೆಸ್ರಲ್ಲಿ ಬೇನಾಮಿ ಆಸಾಮಿಗಳು ಕೋಟಿ ಕೋಟಿ ಹಣ ವರ್ಗಾವಣೆ ಮಾಡಿ ಹಣ ಲೂಟಿ ಮಾಡ್ತಿದ ಗ್ಯಾಂಗ್ ನ ಸಿಸಿಬಿಯ ಸೈಬರ್ ವಿಂಗ್ ಪೊಲೀಸ್ರು ಪ್ರಕರಣವಮ್ನ ಭೇದಿಸಿದ್ದಾರೆ.
ಇನ್ನೂ ಈ ಜಾಲ ಬೆನ್ನತ್ತಿದ ಸಿಸಿಬಿ ಸೈಬರ್ ಪೊಲೀಸ್ರಿಗೆ ಕೇರಳ ಹಾಗೂ ಕರ್ನಾಟಕ ಮೂಲದ ಐವರು ಆರೋಪಿಗಳು ಲಾಕ್ ಆಗಿದ್ದಾರೆ. ಆರೋಪಿಗಳು ನಿರ್ವಹಣೆ ಮಾಡ್ತಿದ್ದ ಸುಮಾರು 150ಕ್ಕೂ ಹೆಚ್ಚು ಖಾತೆಗಳಿ ಪತ್ತೆಯಾಗಿದ್ದು, ಈ ಖಾತೆಗಳಲ್ಲಿ ಕೋಟ್ಯಾಂತ ವಹಿವಾಟಾಗಿರೋ ಸಾಧ್ಯತೆಯಿದೆ. ಇನ್ನೂ 150 ಖಾತೆಗಳ ವಿವರವನ್ನ ಸೈಬರ್ ಪೊಲೀಸ್ರು ಪಡೆಯಲು ಮುಂದಾಗಿದ್ದಾರೆ.
ಇನ್ನೂ ತನಿಖೆಯಲ್ಲಿ ದೇಶವೇ ಬೆಚ್ಚಿ ಬೀಳೋ ಸಂಗತಿ ಪತ್ತೆಯಾಗಿದೆ. ಇಲ್ಲಿ ಸೆರೆ ಸಿಕ್ಕ ಐವರು ಆರೋಪಿಗಳ ಮೇಲೆ
ವಿದೇಶದಲ್ಲಿ ಕುಳಿತು ಬೇನಾಮಿ ಅಕೌಂಟ್ ನಿರ್ವಹಣೆ ಮಾಡ್ತರೋ ಬಗ್ಗೆ ಮಾಹಿತಿ ಸೈಬರ್ ಪೊಲೀಸ್ರಿಗೆ ಸಿಕ್ಕಿದೇ
ಈ ಕಿಂಗ್ ಪಿನ್ ದುಬೈನಲ್ಲಿ ಕುಳಿತು ಬೇನಾಮಿ ಖಾತೆ ಓಪನ್ ಮಾಡಲು ಸೂಚನೆ ನೀಡ್ತಿದ್ನಂತೆ.
ಬೈಟ್: ದಯಾನಂದ ಪೊಲೀಸ್ ಆಯುಕ್ತರು ಬೆಂಗಳೂರು ನಗರ
ಇನ್ನು ಖಾತೆಗಳ ಕೆವೈಸಿ ಆದ ನಂತರ ಈ ಕಿಂಗ್ ಪಿನ್ ಶತ್ರು ರಾಷ್ಟ್ರಗಳು ಸೇರಿದಂತೆ ಇನ್ನಿತರ ರಾಷ್ಟ್ರಗಳಿಗೆ ಈ ಖಾತೆ ವಿವರ ನೀಡಿ ಹಣ ವಹಿವಾಟು ನಡೆಸಿರೋ ಶಂಕೆ ಇದೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸ್ರು ತನಿಖೆ ನಡೆಸಿದರೇ….