ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಅದರ ಮಹತ್ವ ಇರುವುದು, ಖುಶಿ ಸಿಗುವುದು ಯಾವಾಗ ಎಂದರೆ ನಾವೇ ಆಕಾಶ ಬುಟ್ಟಿ ಮಾಡಿ ಮನೆ ಮುಂದೆ ತೂಗು ಬಿಟ್ಟಾಗ. ಈ ಹಿನ್ನೆಲೆಯಲ್ಲಿ ಸುನಿಧಿ ಕಲಾ ಸೌರಭ ಸಂಸ್ಥೆಯು ಅನಂತ ಪ್ರೇರಣಾ ಕೇಂದ್ರದ ಸಹಯೋಗದೊಂದಿಗೆ ಆಕಾಶ ಬುಟ್ಟಿ ತಯಾರಿಸುವ ವಿಧಾನವನ್ನು ಕಲಿಸುವ ಶಿಬಿರ ಹಮ್ಮಿಕೊಂಡಿದೆ. ನವೆಂಬರ್ 7ರಿಂದ 9ರ ವರೆಗೆ ನಿತ್ಯ ಸಂಜೆ 4ಕ್ಕೆ ಆಕಾಶಬುಟ್ಟಿ ತಯಾರಿಕೆ ಕಲಿಸಿಕೊಡಲಾಗುವುದು. ಇಲ್ಲಿಯ ವಿಜಯನಗರ ಕೆಂಪಣ್ಣನವರ ಕಲ್ಯಾಣ ಮಂಟಪ ಪಕ್ಕದ ಅನಂತ ಪ್ರೇರಣಾ ಕೇಂದ್ರದ ಸಭಾಂಗಣದಲ್ಲಿ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೀಣಾ ಅಠವಲೆ ಅವರನ್ನು ಸಂಪಕಿರ್ಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಸುಭಾಸ ನರೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: AIN Author
ಬೆಂಗಳೂರು;- ರಾಜಧಾನಿ ಬೆಂಗಳೂರಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಕಲ್ಲು ಕ್ವಾರಿಯನ್ನು ಸ್ಥಗಿತಗೊಳಿಸಿದ್ದಕ್ಕೆ ಡಿಡಿ ಪ್ರತಿಮಾ ಕೊಲೆ ಶಂಕೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಹುಣಸಮಾರನಹಳ್ಳಿಯಲ್ಲಿ ಕ್ವಾರಿ ಸ್ಥಗಿತಗೊಳಿಸಿದ್ರು. ಅಕ್ರಮ ಗಣಿಗಾರಿಕೆ ಸಂಬಂಧ ಉಪ ನಿರ್ದೇಶಕಿ ಪ್ರತಿಮಾ ವರದಿ ನೀಡಿದ್ದರು. ಗ್ರಾಮದ ಸರ್ವೆ ನಂಬರ್ 177, 179ರಲ್ಲಿ 4 ಎಕರೆ ಜಾಗದಲ್ಲಿ ದೂರು ಬಂದಿತ್ತು. ದೂರಿನ ಅನ್ವಯ ಅಧಿಕಾರಿಗಳು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದರು. ಲೈಸೆನ್ಸ್ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ಕಲ್ಲು ಬಂಡೆಗಳನ್ನ ಅಕ್ರಮವಾಗಿ ಬ್ಲಾಸ್ಟ್ ಮಾಡುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿ ಪ್ರತಿಮಾ ಇದನ್ನು ನಿಲ್ಲಿಸಿದ್ದರು. ನಾಲ್ಕು ಎಕರೆ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಕಲ್ಲು ಕ್ವಾರಿಯನ್ನ ನಿಲ್ಲಿಸಿದ್ದಕ್ಕೆ ಮರ್ಡರ್ ಶಂಕೆ ವ್ಯಕ್ತವಾಗಿದೆ.
ಜಡೇಜಾ ಸ್ಪಿನ್ ಮೋಡಿಗೆ ಸೌತ್ ಆಫ್ರಿಕಾ ಉಡೀಸ್ ಆಗಿದೆ. ವಿಶ್ವಕಪ್ 2023ರ ಟೂರ್ನಿಯಲ್ಲಿ ಭಾರತ 8ನೇ ಗೆಲುವು ದಾಖಲಿಸಿದೆ. ಸೌತ್ ಆಫ್ರಿಕಾ ವಿರುದ್ಧವೂ ಭಾರತ ಮಾರಕ ಬೌಲಿಂಗ್ ದಾಳಿ ಸಂಘಟಿಸಿದೆ. ಇದರ ಪರಿಣಾಮ ಸೌತ್ ಆಫ್ರಿಕಾ 83 ರನ್ಗೆ ಆಲೌಟ್ ಆಗಿದೆ. ಟೀಂ ಇಂಡಿಯಾ 243 ರನ್ ಗೆಲುವು ದಾಖಲಿಸಿದೆ. ಲೀಗ್ ಹಂತದ 8 ಪಂದ್ಯ ಗೆದ್ದಿರುವ ಭಾರತ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಹುಟ್ಟುಹಬ್ಬದ ದಿನವೇ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ಭಾರತ 327 ರನ್ ಟಾರ್ಗೆಟ್ ನೀಡಿತ್ತು. ಸೌತ್ ಆಫ್ರಿಕಾ ಬ್ಯಾಟಿಂಗ್ ಸ್ಟ್ರೆಂಥ್ ಚೆನ್ನಾಗಿದೆ. ಆದರೆ ಭಾರತದ ಬಲಿಷ್ಠ ಬೌಲಿಂಗ್ ಪಡೆ ಹರಿಣಗಳಿಗೆ ಅವಕಾಶವೇ ನೀಡಲಿಲ್ಲ. ಎರಡನೇ ಓವರ್ನಿಂದಲೇ ವಿಕೆಟ್ ಬೇಟೆ ಆರಂಭಗೊಂಡಿತು. ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು ವಿಶ್ವಕಪ್ ಟೂರ್ನಿಯಲ್ಲಿ ನಿರಾಸೆ ಮೂಡಿಸಿದ ನಾಯಕ ತೆಂಬಾ ಬವುಮಾ ಭಾರತ ವಿರುದ್ಧವೂ ನೆಲೆ ಕಂಡಕೊಳ್ಳಲಿಲ್ಲ. ಇದಕ್ಕೆ…
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 5 ವಿಕೆಟ್ ಗಳ ನಷ್ಟಕ್ಕೆ 326 ರನ್ ಗಳ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ಸೌತ್ ಆಫ್ರಿಕಾ ಬ್ಯಾಟರ್ ಗಳು ಭಾರತ ತಂಡದ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಗಿದ್ದಾರೆ. ಸೌತ್ ಆಫ್ರಿಕಾವನ್ನು 27 ಓವರ್ ಗಳಲ್ಲಿ (27.1) 10 ವಿಕೆಟ್ ಪಡೆದು ಕೇವಲ 83 ರನ್ ಗಳಿಗೆ ಆಲೌಟ್ ಮಾಡಿ ಭಾರತ ತಂಡ ಅಜಯ ಆಟ ಮುಂದುವರಿಸಿದೆ.
ಕೋಲ್ಕತಾ;- ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ತನ್ನ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ ಅವರಿಗೆ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ. ವಿರಾಟ್ ಚೆನ್ನಾಗಿ ಆಡಿದ್ದೀರಿ.. 49 ರಿಂದ 50 ಕ್ಕೆ ಹೋಗಲು ನನಗೆ 365 ದಿನಗಳು ಬೇಕಾಯಿತು. ನೀವು 49 ರಿಂದ 50 ಕ್ಕೆ ಹೋಗಿ ಮುಂದಿನ ಕೆಲವು ದಿನಗಳಲ್ಲಿ ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ.ಅಭಿನಂದನೆಗಳು!!’ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮುನ್ನ’ವಿರಾಟ್, ನಿಮ್ಮ ಉತ್ಸಾಹ ಮತ್ತು ಪ್ರದರ್ಶನಗಳಿಂದ ನೀವು ಹೃದಯಗಳನ್ನು ಗೆಲ್ಲುತ್ತಲೇ ಇರಿ. ನಿಮ್ಮ ಮುಂದೆ ಉತ್ತಮ ವರ್ಷವಿರಲಿ ಎಂದು ಹಾರೈಸುತ್ತೇನೆ’ ಎಂದು ಜನ್ಮದಿನದ ಶುಭಾಶಯಗಳನ್ನು ಕೋರಿದ್ದರು.
ಕೋಲಾರ;- ಕಾಂಗ್ರೆಸ್ ಸರ್ಕಾರ ಬಂದಿರೋದ್ರಿಂದ ರಾಜ್ಯಕ್ಕೆ ಬರ ಬಂದಿದೆ ಎಂದು ಸಂಸದ ಮುನಿಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈ ಸರ್ಕಾರದ ಕಾಲ್ಗುಣ ಹೇಗಿದೆ ಅಂದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯಕ್ಕೆ ಬರ ಬಂತು. ಸುಳ್ಳು ಭರವಸೆ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಅಧಿಕಾರ ಸಿಕ್ಕ ಬಳಿಕ ರೈತರನ್ನು ನಿರ್ಲಕ್ಷ್ಯ ಮಾಡಲಾಯಿತು. ರಾಜ್ಯಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರಗಾಲ ತೀವ್ರವಾಗಿದೆ ಈವರೆಗೆ ಯಾವ ರೈತರಿಗೂ ಪರಿಹಾರ ಇರಲಿ, ಕನಿಷ್ಟ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಅಧಿಕಾರಕ್ಕೆ ಬರ್ತಿದ್ದಂತೆ ಕಮಿಷನ್, ಲೂಟಿ ಹೊಡೆಯುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ನೂರಾರು ಕೋಟಿ ಹಣ ಸರ್ಕಾರಿ ಮನೆಯಲ್ಲಿ ಸಿಕ್ಕಿದೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ ಇವರ ಸರ್ಕಾರ ಏನು ಮಾಡುತ್ತಿದೆ. ಹೊಸ ಸರ್ಕಾರ ಬಂದ ಮೇಲೆ ಜಿಲ್ಲೆಗೆ ಏನು ತಂದಿದ್ದಾರೆ ಹೇಳಲಿ? ಕೋಲಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತರಿಗೂ ಮೋಸ, ಇತ್ತ ದಲಿತರಿಗೂ ಮೊಸ ಮಾಡುತ್ತಿರುವ ಸರ್ಕಾರ ಇದು. ಇಂಥ ಸರ್ಕಾರ…
ಹಾವೇರಿ;- ಸಿಎಂ, ಸಚಿವರು ಇರುವಷ್ಟು ದಿನ ಲೂಟಿ ಹೊಡೆಯೋಣ ಅಂತ ನಿರ್ಧರಿಸಿದ್ದಾರೆ ಎಂದು ಮಾಜಿ ಸಚಿವ KS ಈಶ್ವರಪ್ಪ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಶಾಸಕರಿಗೆ ಅನುದಾನ ನೀಡುತ್ತಿಲ್ಲ. ರಸ್ತೆ ಗುಂಡಿಗಳಿಗೆ ಒಂದು ಬುಟ್ಟಿ ಮಣ್ಣು ಹಾಕಿಲ್ಲ. ಎಲ್ಲ ಸಚಿವರು ಇರುವಷ್ಟು ದಿನ ಲೂಟಿ ಹೊಡೆಯೋಣ ಅಂತ ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಅವರ ಮಗನದ್ದು ಇದರಲ್ಲಿ ಸಿಂಹ ಪಾಲಿದೆ’ ಎಂದರು. ಕಾಂಗ್ರೆಸ್ನಲ್ಲಿ ಒಳಜಗಳ ತಾರಕಕ್ಕೇರಿದ್ದು, ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇರಲು ಸಾಧ್ಯವೇ ಇಲ್ಲ. ಎಷ್ಟು ದಿನ ಇರುತ್ತೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು. ಡಿ.ಕೆ. ಶಿವಕುಮಾರ್ ವಿರುದ್ಧ ಗುತ್ತಿಗೆದಾರರ ಸಂಘದ ಕೆಂಪಣ್ಣ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಈ ಹಿಂದೆ ನನ್ನ ಮೇಲೆ ಆರೋಪ ಬಂದಾಗಲೂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಅಂತಹ ಹೇಳಿದ್ದೆ. ಡಿಕೆಶಿ ಹೆಸರಲ್ಲಿ ಎಂಜಿನಿಯರ್ ಪ್ರಹ್ಲಾದ್ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ…
ಚಂಡೀಗಢ;- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ನರೇಂದ್ರ ಮೋದಿ ಸರ್ಕಾರದ ಹೋರಾಟ ಕೇವಲ ಒಂದು ನಾಟಕ ಎಂದರು. ಯಾರಾದರೂ ದೊಡ್ಡ ಪಾಪ ಅಥವಾ ಅಪರಾಧ ಮಾಡಿ ಬಿಜೆಪಿಗೆ ಸೇರಿದರೆ, ಕೇಂದ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆ ವ್ಯಕ್ತಿಯನ್ನು ಮುಟ್ಟಲು ಎಂದಿಗೂ ಧೈರ್ಯ ಮಾಡಿಲ್ಲ ಬಿಜೆಪಿ ಆರೋಪಿಸಿದ ವ್ಯಕ್ತಿ ಪಕ್ಷಕ್ಕೆ ಸೇರಿದ ನಂತರ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ’ ಎಂದು ದೂರಿದ್ದಾರೆ. ಯಾರು ಭ್ರಷ್ಟರು?. ಇ.ಡಿ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದವರಲ್ಲ. ಬದಲಿಗೆ ಇ.ಡಿಗೆ ಹೆದರಿ ಬಿಜೆಪಿ ಸೇರಿದವರೇ ನಿಜವಾದ ಅರ್ಥದಲ್ಲಿ ಭ್ರಷ್ಟರು. ಇ.ಡಿಯಿಂದ ಸಿಕ್ಕಿಬಿದ್ದರೂ, ಬಿಜೆಪಿಗೆ ಸೇರದವರು ಕಟು ಪ್ರಾಮಾಣಿಕರು. ಏಕೆಂದರೆ ಇಂದು ಅಥವಾ ನಾಳೆ ತಾವು ಹೊರಬರುತ್ತೇವೆ ಎಂದು ಅವರಿಗೆ ತಿಳಿದಿದೆ. ಆದರೆ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ತಮ್ಮನ್ನು ಬಂಧಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ ಮತ್ತು ತಕ್ಷಣವೇ ಬಿಜೆಪಿ ಸೇರಬೇಕಾಗುತ್ತದೆ ಎಂದು ತಿಳಿದಿದೆ…
ಕೋಲಾರ;- ಭೀಕರ ಬರದಿಂದ 3 ತಿಂಗಳಲ್ಲಿ 250 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ನವಂಬರ್ನಲ್ಲಿಯೇ ಬರದ ಭೀಕರತೆ ಅನುಭವಕ್ಕೆ ಬರುತ್ತಿದೆ. ಇನ್ನು ಮುಂದಿನ ದಿನಗಳ ಬಗ್ಗೆ ಭಯ ಕಾಡುತ್ತಿದೆ. ಈಗ ರೈತರ ನೆರವಿಗೆ ಬರಬೇಕಾದ್ದು ಸರ್ಕಾರದ ಕರ್ತವ್ಯ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಮನೆಯ ಪೀಠೋಪಕರಣ ಖರೀದಿಗೆ 3 ಕೋಟಿ ರೂ. ಖರ್ಚು ಮಾಡಿದ್ದಾರೆ. 2013 ರಿಂದ 2018ರವರಗೆ 4,256 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇವರೇ ಹೇಳುತ್ತಾರೆ. ಈಗ ಮೂರು ತಿಂಗಳ ಅವಧಿಯಲ್ಲಿ 250 ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ತಾಳ ತಪ್ಪಿದೆ. ನಾವು ಇವರ ಸರ್ಕಾರ 5 ವರ್ಷ ಇರುತ್ತದೆ ಎಂದುಕೊಂಡಿದ್ದೇವು. ಆದರೆ, ಸರ್ಕಾರ ತಾಳ ತಪ್ಪಿರೋದು ಸ್ಪಷ್ಟವಾಗುತ್ತಿದೆ. ನಮ್ಮಸರ್ಕಾರ ಇದ್ದಾಗ 7 ಗಂಟೆ ತ್ರೀ ಫೇಸ್ ವಿದ್ಯತ್ ನೀಡಿದ್ದೆವು. ಆದರೆ,…
ಇಂದು ನಡೆದ ವಿಶ್ವಕಪ್ 2023 ಟೂರ್ನಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯ ಶತಕದಾಟದ ನೆರವಿನೊಂದಿಗೆ ದ.ಆಫ್ರಿಕಾಗೆ ಭಾರತ 327 ರನ್ಗಳ ಗುರಿ ನೀಡಿದೆ. ತಮ್ಮ ಹುಟ್ಟುಹಬ್ಬದ ದಿನದಂದೇ ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಶತಕದ ಸಿಹಿ ಕೊಟ್ಟರು. ಭಾರತ ತಂಡ 50 ಓವರ್ಗಳಿಗೆ 5 ವಿಕೆಟ್ ನಷ್ಟಕ್ಕೆ 326 ರನ್ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಇನ್ನಿಂಗ್ಸ್ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನಡೆಸಿದ ರೋಹಿತ್ ಶರ್ಮಾ 24 ಬಾಲ್ಗಳಿಗೆ 40 ರನ್ ಗಳಿಸಿ (6 ಫೋರ್, 2 ಸಿಕ್ಸರ್) ಗಳಿಸಿ ಅರ್ಧಶತಕ ವಂಚಿತರಾದರು. ಆದರೂ ತಂಡಕ್ಕೆ ಉತ್ತಮ ಆರಂಭಕ್ಕೆ ನೆರವಾದರು. ನಂತರ ಭರವಸೆ ಮೂಡಿಸಿದ್ದ ಗಿಲ್ ಮತ್ತು ಕಿಂಗ್ ಕೊಹ್ಲಿ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಗಿಲ್ 22 ರನ್ ಗಳಿಸಿ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು. ಈ ವೇಳೆ ಕೊಹ್ಲಿ…