Author: AIN Author

ಕಲುಬುರಗಿ: KEA ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ಇಂಜಿನಿಯರ್ ರುದ್ರಗೌಡನ 17 ಹಾಲ್ಟಿಕೇಟ್ ಗಿರಾಕಿಗಳಿಗೆ ಕಾದಿದ್ಯಾ ಸಂಕಷ್ಟ ಅನ್ನೋ ವಿಷ್ಯ ಹರಿದಾಡ್ತಿದೆ.. ಅಕ್ರಮ ಪ್ರಕರಣದ ತನಿಖೆ ಮಾಡ್ತಿರೋ CID ಇಂತಹ ಮೂಲವನ್ನೇ ಇದೀಗ ಕೆದಕುತ್ತಿದೆ.. ಅಥಣಿಯಲ್ಲಿ ನೀರಾವರಿ ಇಂಜಿನಿಯರ್ ಆಗಿರೋ ಜೇವರ್ಗಿ ಮೂಲದ ರುದ್ರಗೌಡನ ಬಂಧನದ ನಂತ್ರ ಆರೋಪಿ ಬಳಿ 17 ಹಾಲ್ಟಿಕೇಟ್ ಪತ್ತೆ ಮಾಡಿತ್ತು.. ಪತ್ತೆಯಾದ ಆ 17 ಗಿರಾಕಿಗಳಿಗೂ ರುದ್ರಗೌಡನಿಗೂ ಏನ್ ವ್ಯವಹಾರ ಎಷ್ಟರ ವ್ಯವಹಾರ ಅನ್ನೋ ಮಾಹಿತಿ ಹೊರಹಾಕಲು ಮುಂದಾಗಿದೆ CID ಟೀಂ. ಹೀಗಾಗಿ ರುದ್ರಗೌಡ ಬಾಯ್ಬಿಡೋ ಅಂಶಗಳ ಮೇಲೆ ಆ 17 ಗಿರಾಕಿಗಳ ಇತಿಹಾಸ ಗೊತ್ತಾಗಲಿದೆ ಅಂತ ಹೇಳಲಾಗ್ತಿದೆ..

Read More

ಮಂಡ್ಯ: ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಇಬ್ಬರೂ ಅನಿವಾರ್ಯವಾಗಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಆ ಸಮಯದಲ್ಲೇ ವಿಜಯೇಂದ್ರ ಅವರಿಗೆ ಉತ್ತಮ ಸ್ಥಾನ ಕೊಡಬೇಕಿತ್ತು. ಕೊಡಲಿಲ್ಲ. ಬಿಜೆಪಿ ಪ್ರಯೋಗಗಳು ನೆಲಕಚ್ಚಿದವು. ಬಿಜೆಪಿಯೊಳಗೆ ಮನಸ್ಸುಗಳೆಲ್ಲಾ ಒಡೆದುಹೋಗಿವೆ. ಅವರೀಗ ಗೊಂದಲದಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ವಿರೋಧ ಪಕ್ಷದ ನಾಯಕರು ಅವರಿಗೆ ಸಿಕ್ಕಿಲ್ಲ.  ಈಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲಿಗೆ ಯಡಿಯೂರಪ್ಪ ಮತ್ತು ಅವರ ಕುಟುಂಬ ಬಿಜೆಪಿಗೆ ಅನಿವಾರ್ಯವಾಗಿದೆ ಎಂದು ಕುಟುಕಿದರು. https://ainlivenews.com/what-happens-if-tea-coffee-is-given-to-children/ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದು ಕಷ್ಟವಿದೆ. ಅವರೇನು ಪ್ರೀತಿಯಿಂದ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸಿಲ್ಲ. ಅನಿವಾರ್ಯದಿಂದ ಮಾಡಿದ್ದಾರೆ ಅಷ್ಟೆ. ಕುಮಾರಸ್ವಾಮಿ ಅವರೂ ಪ್ರೀತಿಯಿಂದ ಬಿಜೆಪಿಗೆ ಹೋಗಿಲ್ಲ. ಅನಿವಾರ್ಯವಾಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಬಿಜೆಪಿ ಕಷ್ಟ ನೋಡಿ ಅಯ್ಯೋ ಪಾಪ ಎನಿಸುತ್ತಿದೆ. ಬಿಜೆಪಿಯೊಳಗೆ ಮನಸ್ತಾಪ ದೊಡ್ಡ…

Read More

ಬೆಂಗಳೂರಲ್ಲಿ  ಜಿಲ್ಲಾ ಅಂಗನವಾಡಿ‌ ಕಾರ್ಯಕರ್ತೆಯರಿಂದ ಪ್ರತಿಭಟನೆಗೆ ಕರೆ ನೀಡಲಾಗಿದ್ದು  ನವೆಂಬರ್ 20ರಿಂದ ಫ್ರಿಡಂ ಪ್ರಾರ್ಕ್‌ನಲ್ಲಿ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್‌ನಿಂದ‌ ಪ್ರತಿಭಟನೆಗೆ ಕರೆ ನೀಡಿದ್ದು  ಅಂಗನವಾಡಿಗಳಲ್ಲಿ ಖಾಲಿ ಇರುವ ಸಹಾಯಕಿ ಹುದ್ದೆ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ https://ainlivenews.com/increase-the-number-of-injured-increase-in-the-incessant-fireworks-in-bangalore/ ಬೆಂಗಳೂರು ನಗರ ಜಿಲ್ಲೆಯಲ್ಲಿ 2877ಅಂಗನವಾಡಿಗಳಿದೆ ಒಟ್ಟು 430ಕಾರ್ಯಕರ್ತೆಯರ ಹುದ್ದೆ 1198 ಸಹಾಯಕಿಯರ ಹುದ್ದೆ‌‌ ಖಾಲಿ ಇದೆ ಬಹುತೇಕ‌ ಅಂಗನವಾಡಿಗಳಲ್ಲಿ ಸಹಾಯಕಿಯರಿಲ್ಲದೇ ಕಾರ್ಯಕರ್ತೆಯರು ಪರದಾಡುವಂತಾಗಿದೆ ಹುದ್ದೆ ಭರ್ತಿಗೆ 5-3-2023 ಪ್ರಕಟಣೆ ಹೊರಡಿಸಿ ಅರ್ಜಿಯನ್ನ ಸ್ವಿಕರಿಸಲಾಗಿದೆ ಅರ್ಜಿ ಸ್ವೀಕರಿಸಿದ್ದು ಬಿಟ್ಟರೆ ಉಳಿದಂತೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿಲ್ಲ ಕಳೆದ ನಾಲ್ಕು ವರ್ಷಗಳಿಂದ ಸಹಾಯಕಿಯರಿಲ್ಲದೇ ಕಾರ್ಯಕರ್ತೆಯರು ಪರದಾಡುವಂತಾಗಿದೆ ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್‌ನಿಂದ‌ ಪ್ರತಿಭಟನೆಗೆ ಕರೆ ನೀಡಲಾಗಿದೆ.

Read More

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲೆಂದೇ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರನ್ನು ಎರಡು ಬಾರಿ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಅವರನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಬೆಂಕಿ ಹತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ವಿಜಯೇಂದ್ರ ನೇಮಕ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. https://ainlivenews.com/what-happens-if-tea-coffee-is-given-to-children/ ಇಷ್ಟಕ್ಕೂ ಇದು ವಿಜಯೇಂದ್ರ ಮೇಲಿನ ಪ್ರೀತಿಯಲ್ಲ. ಬದಲಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಚೆನ್ನಾಗಿ ಬಳಸಿಕೊಳ್ಳಬೇಕು ಎಂಬ ದೂರದೃಷ್ಟಿಯಿಂದ ನೇಮಕ ಮಾಡಿದ್ದಾರೆ. ಚುನಾವಣೆ ನಂತರ ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ವಿಜಯೇಂದ್ರ ಹಠಾವೋ ನಡೆಯಲಿದೆ ಎಂದರು.

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಮತ್ತೆ ಟ್ವೀಟ್​ ವಾರ್ ಶುರುಮಾಡಿದ್ದು ಬಾಯಿ ತೆರೆದರೆ ಭಗವದ್ಗೀತೆ, ನಾಲಗೆ ಮೇಲೆ ನೈತಿಕತೆಯ ನಾಟ್ಯ. ಮಾತಿನಲ್ಲೂ ಮೌಲ್ಯಗಳದ್ದೇ ಮಥನ, ಕೊನೆಗೆ, ಝಣ ಝಣ ಕಾಂಚಾಣ ಎಂದು ಕಿಡಿ ಕಾರಿದ್ದಾರೆ https://x.com/hd_kumaraswamy/status/1725707813580931489?s=20 ಸಾಮಾಜಿಕ ತಾಲತಾಣ ತಮ್ಮ  ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ. ಥೂ.. ನಾಚಿಕೆ ಆಗಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್​​ ಮೂಲಕ ವಾಗ್ದಾಳಿ ಮಾಡಿದ್ದಾರೆ. https://x.com/hd_kumaraswamy/status/1725707815732605108?s=20 ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ… ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು. ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು ಸರಕಾರ! ವಿಸ್ಮಯಗಳ ಆಗರ…

Read More

ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ದ ಕೆರೆ ಕಬಳಿಕೆ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ. ಬೆಂಗಳೂರಿನ ದಾಸರಹಳ್ಳಿ ಮಾಕಳಿ ಗ್ರಾಮದಲ್ಲಿ 3.5 ಎಕರೆ  ಕೆರೆ ಜಾಗ ಒತ್ತುವರಿ  ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕೋಟ್ಯಾಂತರ ರೂ ಬೆಲೆ ಬಾಳುವ ಕೆರೆ ಭೂಮಿ ಒತ್ತುವರಿ ಮಾಡಿರುವ ಬಗ್ಗೆ ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದು  ನಾಗಮಂಗಲದಲ್ಲಿ ಈ ಬಗ್ಗೆ ಗಂಭೀರ ಆರೋಪ ಮಾಡಿ ಸರ್ಕಾರದಿಂದ ತನಿಖೆಗೆ ಆಗ್ರಹಿಸಿದ್ದಾರೆ. ಕುಮಾರಸ್ವಾಮಿಯವರು ಮಾಡದ ತಪ್ಪಿಗೆ  ಕಾಂಗ್ರೆಸ್ ನವರು ಕಳ್ಳನ ಪೋಸ್ಟರ್ ಅಂಟಿಸಿದ್ರು ಇದೀಗ ಕೆರೆಯನ್ನೆ ಕಬಳಿಸಿರೋ ಈ ನಾಯಕನ ಬಗ್ಗೆ ಕ್ರಮಕ್ಕೆ ಸುರೇಶ್ ಗೌಡ ಆಗ್ರಹ. ಕೆರೆ ಜಾಗದಲ್ಲಿ ವೇರ್ ಹೌಸ್ ನಿರ್ಮಿಸಿ ಕೋಟ್ಯಾಂತರ ರೂ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡರಿಂದ ತೀವ್ರವಾದ ಕಿಡಿ. ಕೆರೆ ಕಬಳಿಕೆ ಮಾಡಿರುವ   ಚಲುವರಾಯಸ್ವಾಮಿ  ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ  ಕೆರೆ ಕಳ್ಳ ಪೋಸ್ಟರ್ ವೈರಲ್‌ ಸುದ್ದಿ ಭಾರೀ ಚರ್ಚೆಯಾಗಿದ್ದು ಇದಕ್ಕೆ ಸಚಿವರೇ  ಉತ್ತರಿಸಬೇಕಾಗಿದೆ.

Read More

ಬೆಂಗಳೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಸಾಗಿಸಲು ಯತ್ನಿಸಿದ ಸುಮಾರು 1.ಕೆ.ಜಿ. ಚಿನ್ನ ವಶ 58.39.805 ಬೆಲೆಯ ಚಿನ್ನ ವಶ ಬ್ಯಾಂಕಾಕ್ ನಿಂದ ಬರ್ತಿದ್ದ ಮೂರು ಜನ ಗಂಡಸರು, ಚಿನ್ನದ ಚೈನ್ ಕಟ್ ಪೀಸಸ್ ನ ಒಳ ಉಡುಪುಗಳಲ್ಲಿ‌ ಬಚ್ಚಿಟ್ಟು ಸಾಗಿಸಲು ಯತ್ನಿಸಿದ ಖದೀಮರು ಕೊಲಂಬೋ ದಿಂದ ಬಂದ ಇಬ್ಬರು ಹೆಂಗಸರ ಪರಿಶೀಲನೆ ವೇಳೆ ಅಕ್ರಮ ಚಿನ್ನ ಸಾಗಾಟ ಪತ್ತೆ 16-11-23ರಂದು ಕಾರ್ಯಾಚರಣೆ ನಡೆಸಿ ಅಕ್ರಮ ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು.. ಕಸ್ಟಮ್ಸ್ ಅಧಿಕಾರಿಗಳು ಮಸ್ಕಟ್ ನಿಂದ ಬಂದ ಚಿನ್ನದ ಕಳ್ಳನನ್ನ ವಶಕ್ಕೆ ಪಡೆದಿದ್ದಾರೆ ಈತ ಸಹ 1.113 ಗ್ರಾಂ ಚಿನ್ನದ ಕಳ್ಳಸಾಗಾಟಕ್ಕೆ ಯತ್ನಿಸಿದ್ದ ಈತ ಎದೆ ಬಟ್ಟೆಯ ಪೌಚ್ ಮೂಲಕ ಚಿನ್ನದ ಕಳ್ಳಸಾಗಾಟಕ್ಕೆ‌‌ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ 68 ಲಕ್ಷ 18ಸಾವಿರ ಬೆಲೆಯ ಚಿನ್ನ ವಶಕ್ಕೆ ಪಡೆದಿದ್ದಾರೆ.

Read More

ನವದೆಹಲಿ: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ತಂದೆ ಮೊಬೈಲ್​​ನಲ್ಲಿ ನಡೆಸಿದ ಸಂಭಾಷಣೆ ವಿವಾದಕ್ಕೆ ಕಾರಣವಾಗಿದೆ. 48 ಸೆಕೆಂಡ್​​ನ ಈ ವಿಡಿಯೋ ಸಾಕಷ್ಟು ವೈರಲ್​​ ಆಗುತ್ತಿದ್ದು, ಸರ್ಕಾರವನ್ನು ಹಣಿಯಲು ವಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರು, ಅಧಿಕಾರಿಗಳ ವರ್ಗಾವಣೆ ಕುರಿತಂತೆ ಮಾತನಾಡುತ್ತಿದ್ದಾರೆ ಎನ್ನಲಾದ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ‘ಸಿದ್ದರಾಮಯ್ಯ ಸರ್ಕಾರದ ರಿಮೋಟ್‌ ಅವರ ಮಗ ಯತೀಂದ್ರ ಅವರ ಕೈಲಿದೆ’ ಎಂದು ಕೇಂದ್ರ ಸಚಿವ ಹಾಗೂ ಕರ್ನಾಟಕದ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ. https://ainlivenews.com/what-happens-if-tea-coffee-is-given-to-children/ ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಕಾಂಗ್ರೆಸ್‌ನ ಯುಪಿಎ ಸರ್ಕಾರದ ಅವಧಿಯಲ್ಲಿ ರಿಮೋಟ್ ಕಂಟ್ರೋಲ್ ಸೋನಿಯಾ ಗಾಂಧಿ ಮತ್ತವರ ಮಗ ರಾಹುಲ್ ಗಾಂಧಿಯವರ ಕೈಯಲ್ಲಿತ್ತು. ಹಾಗಾಗಿ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ನ ರಿಮೋಟ್ ಕಂಟ್ರೋಲ್ ಸಿದ್ದರಾಮಯ್ಯನವರ ಮಗನ ಕೈಯಲ್ಲಿದೆ’ ಎಂದು ಅವರು ಕುಟುಕಿದ್ದಾರೆ.

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  ದೀಪಾವಳಿ ಹಬ್ಬದ ಹಿನ್ನಲೆ ಪಟಾಕಿ ಸಿಡಿಸಿ  ಗಾಯಗೊಂಡವರ ಸಂಖ್ಯೆ  ಪ್ರತಿವರ್ಷಕ್ಕಿಂತ  ಈ ಬಾರಿ  ಹೆಚ್ಚಳವಾಗಿದೆ ಅದರಲ್ಲೂ ಮಕ್ಕಳೆ ಸಂಖ್ಯೆನೆ ಆಧಿಕವಾಗಿದೆ… ಬೆಂಗಳೂರಿನ ಮಿಂಟೋ ,ಶಂಕರ್ ಮತ್ತು ನಾರಾಯಣ ಕಣ್ಣಿನ ಆಸ್ಪತ್ರೆಯಲ್ಲಿ ಇದುವರೆಗೂ 125ಕ್ಕೊ ಹೆಚ್ಚು ಕೇಸ್ ಗಳು ದಾಖಲಾಗಿವೆ. ಅದರಲ್ಲಿ ಮಿಂಟೋ ಅಸ್ಪತ್ರೆ ಒಂದರಲ್ಲೆ 36 ಕೇಸ್ ಪತ್ತೆಯಾಗಿದ್ದು ಅದರಲ್ಲಿ ಬಹುತೇಕ ಮಕ್ಕಳ ಸಂಖ್ಯೆನೆ ಆಧಿಕವಾಗಿದೆ ಅಂತ ಮಿಂಟೋ ಅಸ್ಪತ್ರೆ ನಿರ್ಧೇಶಕ  ನಾಗರಾಜ್ ತಿಳಿಸಿದರು. ಇನ್ನೂ   ನಾರಾಯಣ ನೇತ್ರಾಲಯದಲ್ಲಿ ಇದುವರೆಗೂ ಒಟ್ಟು 51ಕ್ಕೊ ಕೇಸ್  ಗಳು ದಾಖಲಾಗಿದ್ದರೆ ಶಂಕರ್ ಅಸ್ಪತ್ರೆಯಲ್ಲಿ  42 ಕ್ಕೊ ಹೆಚ್ಚು ಕೇಸ್ ಗಳು  ದಾಖಲಾಗಿವೆ. ಇದರಲ್ಲಿ ಮೂವರಿಗೆ ಸಂಪೂರ್ಣ  ಕಣ್ಣಿನದೃಷ್ಟಿ ಕಳೆದುಕೊಂಡಿದ್ದಾರೆ   .5 ಜನರಿಗೆ ಭಾಗಶಹ ದೃಷ್ಠಿದೋಷ ಉಂಟಾಗಿದೆ. ಇನ್ನ 45 ಮಂದಿಗೆ ಗಂಭೀರ ಗಾಯಗಳಾಗಿವೆ. ಇನ್ನು ಮಂಡ್ಯದ ಮಳವಳ್ಳಿಯ 6ನೇ ತರಗತಿ ಯುವಕ ಚೇತನ್ ತಮ್ಮ ಮನೆ ಸಮೀಪದ ದೇವಸ್ಥಾನದಲ್ಲಿ ಇತರ ಸ್ನೇಹಿತರೊಂದಿಗೆ ಸುರ್ ಸುರ್ ಪಟಾಕಿ ಹಾರಿಸುವಾಗ ಎರಡು…

Read More

ಚಿಕ್ಕಮಗಳೂರು: ಭ್ರಷ್ಟಾಚಾರದ ಆರೋಪಗಳ ಸುರಿಮಳೆಗೈದು ಪೇಸಿಎಮ್​, 40 ಪರ್ಸೆಂಟ್ ಪೋಸ್ಟರ್​ ಸೇರಿದಂತೆ ಹಲವು ಪೋಸ್ಟರ್​ಗಳನ್ನು ಅಂಟಿಸಿದ ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರು. ಪೋಸ್ಟರ್ ಅಂಟಿಸಿ ಚುನಾವಣೆಯಲ್ಲಿ ಲಾಭ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಇದೀಗ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ವಾರ್ ಆರಂಭಿಸಿದ್ದಾರೆ. ಇಬ್ಬರ ನಡುವಿನ ಕಚ್ಚಾಟದಿಂದ ಮಾತ್ರ ಜನ ಬೇಸತ್ತು ಹೋಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಜನ ಒಲಿಯುತ್ತಾರೆ ನೋಡಬೇಕು!

Read More