ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ದ ಕೆರೆ ಕಬಳಿಕೆ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ. ಬೆಂಗಳೂರಿನ ದಾಸರಹಳ್ಳಿ ಮಾಕಳಿ ಗ್ರಾಮದಲ್ಲಿ 3.5 ಎಕರೆ  ಕೆರೆ ಜಾಗ ಒತ್ತುವರಿ  ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಕೋಟ್ಯಾಂತರ ರೂ ಬೆಲೆ ಬಾಳುವ ಕೆರೆ ಭೂಮಿ ಒತ್ತುವರಿ ಮಾಡಿರುವ ಬಗ್ಗೆ ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದು  ನಾಗಮಂಗಲದಲ್ಲಿ ಈ ಬಗ್ಗೆ ಗಂಭೀರ ಆರೋಪ ಮಾಡಿ ಸರ್ಕಾರದಿಂದ ತನಿಖೆಗೆ ಆಗ್ರಹಿಸಿದ್ದಾರೆ.

ಕುಮಾರಸ್ವಾಮಿಯವರು ಮಾಡದ ತಪ್ಪಿಗೆ  ಕಾಂಗ್ರೆಸ್ ನವರು ಕಳ್ಳನ ಪೋಸ್ಟರ್ ಅಂಟಿಸಿದ್ರು ಇದೀಗ ಕೆರೆಯನ್ನೆ ಕಬಳಿಸಿರೋ ಈ ನಾಯಕನ ಬಗ್ಗೆ ಕ್ರಮಕ್ಕೆ ಸುರೇಶ್ ಗೌಡ ಆಗ್ರಹ.

ಕೆರೆ ಜಾಗದಲ್ಲಿ ವೇರ್ ಹೌಸ್ ನಿರ್ಮಿಸಿ ಕೋಟ್ಯಾಂತರ ರೂ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡರಿಂದ ತೀವ್ರವಾದ ಕಿಡಿ.

ಕೆರೆ ಕಬಳಿಕೆ ಮಾಡಿರುವ   ಚಲುವರಾಯಸ್ವಾಮಿ  ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ  ಕೆರೆ ಕಳ್ಳ ಪೋಸ್ಟರ್ ವೈರಲ್‌ ಸುದ್ದಿ ಭಾರೀ ಚರ್ಚೆಯಾಗಿದ್ದು ಇದಕ್ಕೆ ಸಚಿವರೇ  ಉತ್ತರಿಸಬೇಕಾಗಿದೆ.

Share.