Author: AIN Author

ವಿಜಯಪುರ:- ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಕ್ರಾಸ್ ಮಾಡಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಕ್ರಾಸ್ ಮಾಡುವುದಿಲ್ಲ. ರಾಜ್ಯದಲ್ಲಿ ಅವರದೇ ಸರ್ಕಾರ ಇದೆ. ಆದರೂ ಒಂದಿಬ್ಬರು ಆಯ್ಕೆಯಾಗಬಹುದು ಅಷ್ಟೇ. ಜನರಿಗೆ ಕಾಂಗ್ರೆಸ್ ಮೋಸದ ಬಗ್ಗೆ ಅರಿವಾಗಿದೆ ಎಂದರು. ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಸಂಪೂರ್ಣ ಕಡಿಮೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಧೃಡಸಂಕಲ್ಪ ಮಾಡಬೇಕು. ಇದು ಕೇವಲ ಒಬ್ಬರಿಂದ ಆಗುವ ಕೆಲಸವಲ್ಲ, ಇದೊಂದು ಸಾಮೂಹಿಕ ಪ್ರಯತ್ನ. ಎಲ್ಲ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ದುಡಿಯಬೇಕು. ರಾಜ್ಯದಿಂದ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು. ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ಸಹ ಹಿರಿಯ ರಾಜಕೀಯ ಧುರೀಣರು, ಲಕ್ಷಾಂತರ ಕಾರ್ಯಕರ್ತರ ಪ್ರೀತಿಯನ್ನು ಸಂಪಾದಿಸಿದ್ದಾರೆ ಎಂದರು.

Read More

ಜೇನುತುಪ್ಪ ಮತ್ತು ತುಪ್ಪವನ್ನು ಮಿಕ್ಸ್ ಮಾಡಿ ತಿಂದರೆ ಏನಾಗುತ್ತದೆ ಎಂಬುವುದು ಹಲವರಿಗೆ ತಿಳಿದಿಲ್ಲ. ಇವೆರಡರಲ್ಲಿಯೂ ಔಷಧೀಯ ಗುಣಗಳಿವೆ. ಹಾಗಾಗಿ ಇವೆರಡನ್ನು ಮನೆಮದ್ದುಗಳಲ್ಲಿ ಹೆಚ್ಚು ಬಳಸುತ್ತಾರೆ. ತುಪ್ಪ ರುಚಿಯಾಗಿದ್ದರೆ ಜೇನುತುಪ್ಪ ಸಿಹಿ ಗುಣವನ್ನು ಹೊಂದಿದೆ. ಆದರೆ ಇವೆರಡನ್ನು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ತಜ್ಞರು ತಿಳಿಸಿದ ಪ್ರಕಾರ ತುಪ್ಪ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿದಾಗ ವಿಷಕಾರಿ ಅಂಶ ಉತ್ಪತ್ತಿಯಾಗುತ್ತದೆ. ಇದು ವೇಗವಾಗಿ ದೇಹವನ್ನು ಹರಡುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆಯಂತೆ. ತುಪ್ಪ ಜೇನುತುಪ್ಪವನ್ನು ಬೆರೆಸಿದಾಗ ಕ್ಲೋಸ್ಟ್ರಿಡಿಯಂ ಬೊಟುಲಿನಂ ಎಂಬ ಅಂಶ ಉತ್ಪತ್ತಿಯಾಗುತ್ತದೆ. ಇದು ಒಂದು ರೀತಿಯ ಬ್ಯಾಕ್ಟೀರಿಯಾವಾಗಿದ್ದು, ಇದು ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾದಾಗ ಅಪಾಯಕಾರಿ ಜೀವಾಣುಗಳನ್ನು ಉತ್ಪಾದಿಸುತ್ತದೆ. ಇದು ಹೊಟ್ಟೆನೋವು, ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎನ್ನಲಾಗಿದೆ.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಬ್ರ್ಯಾಂಡ್ ಅನ್ನು ಹೆಚ್ಚಿಸುವ ಸಲುವಾಗಿ ಬಿ.ಎಲ್.ಆರ್ ಹಬ್ಬ ಆಚರಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಬೆಂಗಳೂರು ಹಬ್ಬ’ ಆಚರಣೆಗೆ ಪಾಲಿಕೆ ಸಹಕಾರ ನೀಡುವ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿ, ಸರ್ಕಾರದ ಘನತೆ ಹಾಗೂ ಬೆಂಗಳೂರಿನ ಬ್ರ್ಯಾಂಡ್ ಅನ್ನು ಹೆಚ್ಚಿಸುವ ಸಲುವಾಗಿ ಹಬ್ಬ ಆಚರಿಸಲಾಗುತ್ತಿದೆ ಎಂದರು. 2024ರಿಂದ ಆಯಾ ಋತುವಿಗೆ ತಕ್ಕಂತೆ ಹಬ್ಬಗಳನ್ನು ಆಚರಿಸಲಾಗುತ್ತದೆ. ಬೆಂಗಳೂರು ಹಬ್ಬಕ್ಕೆ ಪ್ರಮುಖ ಸ್ಥಳ, ಜಂಕ್ಷನ್‌ಗಳು, ಮೇಲ್ಸೇತುವೆ, ಉದ್ಯಾನಗಳು, ಮಾರುಕಟ್ಟೆಗಳನ್ನು ಗುರುತಿಸಿ ಸ್ವಚ್ಚತಾ ಕಾರ್ಯ ಕೈಗೊಳ್ಳಬೇಕು. ಪಾರಂಪರಿಕ ಕಟ್ಟಡಗಳು ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳ ಮೇಲೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲು ಸೂಚಿಸಿದರು. ‘ಬೆಂಗಳೂರು ಹಬ್ಬ’ದ ನಿರ್ದೇಶಕ ರವಿಚಂದರ್ ಮಾತನಾಡಿ, ‘ಅನ್ ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್ ವತಿಯಿಂದ ಡಿ.1ರಿಂದ 11ರವರೆಗೆ ‘ಅನ್ ಬಾಕ್ಸಿಂಗ್ ಬಿ.ಎಲ್.ಆರ್ ಹಬ್ಬ’ ಆಚರಿಸಲಾಗುತ್ತಿದೆ. 12 ವರ್ಗಗಳಾಗಿ ವಿಂಗಡಿಸಿ, 45 ಮಾದರಿಗಳಲ್ಲಿ ಆಚರಣೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

Read More

ಭಾರತ-ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಉಭಯ ತಂಡದ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಜರ್ನಿ, ಭಾರತದ ಪ್ರದರ್ಶನ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಈ ವಿಶ್ವಕಪ್ ಟೂರ್ನಿಯನ್ನು ರಾಹುಲ್ ದ್ರಾವಿಡ್‌ಗಾಗಿ ಗೆಲ್ಲಬೇಕು ಎಂದಿದ್ದಾರೆ. ರಾಹುಲ್ ದ್ರಾವಿಡ್ 2003ರ ವಿಶ್ವಕಪ್ ಫೈನಲ್ ಆಡಿದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರತಿನಿಧಿಸುವುದೇ ಅತೀ ದೊಡ್ಡ ಅವಕಾಶ ಎಂದು ರಾಹುಲ್ ಪದೇ ಪದೇ ಹೇಳುತ್ತಿದ್ದರು ಎಂದು ರೋಹಿತ್ ಹೇಳಿದ್ದಾರೆ. ಇದೀಗ ರಾಹುಲ್ ದ್ರಾವಿಡ್‌ಗೆ ಟ್ರೋಫಿ ನೀಡಲು ತಂಡ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ರೋಹಿತ್ ಹೇಳಿದ್ದಾರೆ. ರೋಹಿತ್ ಶರ್ಮಾ ಮಾತಿಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2011ರ ವಿಶ್ವಕಪ್ ಟೂರ್ನಿ ಸಚಿನ್ ತೆಂಡೂಲ್ಕರ್‌ಗಾಗಿ ಗೆಲ್ಲಲಾಗಿತ್ತು. ಇದೀಗ ದ್ರಾವಿಡ್‌ಗಾಗಿ ಈ ಟೂರ್ನಿ. ಗುರುವಿಗೆ, ಟೀಂ ಇಂಡಿಯಾದ ವಾಲ್ ಎಂದೇ ಖ್ಯಾತಿಗೊಂಡ ದ್ರಾವಿಡ್‌ಗೆ ಅತೀ…

Read More

ಬೆಂಗಳೂರು:- ಗೇಲಿ ಮಾಡಿದ್ದಕ್ಕೆ ಸ್ನೇಹಿತನ ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಜಗದೇವ್ ಹಾಗೂ ಚಂದನ್ ಕುಮಾರ್ ಬಂಧಿತರು. ಇಬ್ಬರು ಸೇರಿಕೊಂಡು ಲಕ್ಷ್ಮಣ್ ಅವರನ್ನು ಕೊಂದು ಪರಾರಿಯಾಗಿದ್ದರು. ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು. ‘ಲಕ್ಷ್ಮಣ್ ಹಾಗೂ ಆರೋಪಿಗಳು, ಉತ್ತರ ಭಾರತದವರು. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಮೂವರೂ ಕೂಲಿ ಕೆಲಸ ಮಾಡುತ್ತಿದ್ದರು. ಒಂದೇ ಕಡೆ ವಾಸವಿದ್ದರು. ಆಗಾಗ ಮದ್ಯದ ಪಾರ್ಟಿ ಮಾಡುತ್ತಿದ್ದರು’ ಎಂದು ತಿಳಿಸಿದರು. ಲಕ್ಷ್ಮಣ್ ಹಾಗೂ ಆರೋಪಿಗಳು, ನ. 16ರಂದು ರಾತ್ರಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದ ಲಕ್ಷ್ಮಣ್ ಗೇಲಿ ಮಾಡಿದ್ದ. ಇದೇ ವಿಚಾರವಾಗಿ ಗಲಾಟೆ ಶುರುವಾಗಿತ್ತು’ ಎಂದು ಪೊಲೀಸರು ಹೇಳಿದರು. ‘ಲಕ್ಷ್ಮಣ್ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಅವರನ್ನು ಮನೆಯಿಂದ ಹೊರಗೆ ಎಳೆದು ತಂದಿದ್ದರು. ನಂತರ, ಕ್ಯಾಸಲಹಳ್ಳಿ ಬಳಿಯ ನಾರಾಯಣ ಪಿಯು ಕಾಲೇಜ್‌ನ ಹಿಂಭಾಗದಲ್ಲಿರುವ ಭೈರತಿ ಬಸವರಾಜ್‌ ಅವರಿಗೆ ಸೇರಿದ್ದ ಜಮೀನಿಗೆ…

Read More

ಬೆಂಗಳೂರು:- ಶೀಘ್ರವೇ 545 ಪಿಎಸ್​ಐ ಹುದ್ದೆಗಳ ಪರೀಕ್ಷೆ ನಡೆಯಲಿದೆ ಎಂದು ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೆಇಎ ಸಂಸ್ಥೆಯಿಂದ ಪಿಎಸ್​ಐ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದ್ದೇವೆ. ಆದೇಶ ಬಂದಿದೆ. ಇಂಡಿಪೆಂಡೆಂಟ್ ಏಜೆಸ್ಸಿಯಿಂದ ಆಗಲಿದೆ. 545 ಪಿಎಸ್​ಐ ಹುದ್ದೆಗಳ ಪರೀಕ್ಷೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದಷ್ಟು ಬೇಗನೆ ಪರೀಕ್ಷೆ ಆಗಲಿದೆ ಎಂದು ಹೇಳಿದ್ದಾರೆ. ಪಿಎಸ್‌ಐ ಕೇಸ್ ಮಾತ್ರವಲ್ಲದೆ ಅವರು ಅನೇಕ ಕೇಸ್‌ಗಳಲ್ಲಿಯೂ ಸಹ ಇದ್ದಾರೆ ಎನ್ನುವ ಮಾಹಿತಿ‌ ಇದೆ. ಹೀಗಾಗಿ ಎಲ್ಲಾ‌‌ ವಿಚಾರಗಳನ್ನು ಬಹಿರಂಗ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ತನಿಖೆ ಮಾಡುವುದಕ್ಕೆ ಆದೇಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಆರ್​.ಅಶೋಕ್ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಅದು ಬಿಜೆಪಿ ಆಂತರಿಕ ವಿಚಾರ, ಹೀಗಾಗಿ ಅದು ನಮಗೆ ಮುಖ್ಯವಲ್ಲ. ವಿಪಕ್ಷ ನಾಯಕರಾದವರು ಎಚ್ಚರಿಸಿಬಹುದು, ಸಲಹೆ ಕೊಡಬಹುದು. ಅದು ವಿಪಕ್ಷ ನಾಯಕ ಅಶೋಕ್​ ಮತ್ತು ಅವರ ಪಕ್ಷದವರಿಗೆ ಬಿಟ್ಟಿದ್ದು. ವಿಪಕ್ಷ ನಾಯಕರಾದ ಆರ್​.ಅಶೋಕ್​ಗೆ ನಾನು…

Read More

ಬೆಂಗಳೂರು: ನೌಕರರ ಕನ್ನಡ ಸಂಘದ ವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಡಾ. ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ: ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ ಪಾಲಿಕೆ ನೌಕರರ ಕನ್ನಡ ಸಂಘದ ವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ/ಸಾಧಕಿಯರಿಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಆಡಳಿತಗಾರರಾದ ರಾಕೇಶ್ ಸಿಂಗ್ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಚಾಲನೆ ನೀಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ: ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷರಾದ ಪಾಲನೇತ್ರ, ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷರಾದ ಗುರುದತ್ತ, ಚಲನಚಿತ್ರರಂಗದ ಸುಂದರ್ ರಾಜ್, ಶಿವಕುಮಾರ್, ರಿಷಿಗೌಡ, ಪ್ರೇಮಗೌಡ, ಕು.ರಕ್ಷಾ ಅಪೂರ್ವ, ಪ್ರತಿಭಾ, ಶ್ರೀಮತಿ ರಕ್ಷಾ, ರವರು ಮತ್ತು ಪತ್ರಿಕಾರಂಗದಲ್ಲಿ ರಕ್ಷಾ , ಮಾಲತೇಶ್, ವಸಂತ್ ಕುಮಾರ್, ಸ್ಮಿತಾ ರಂಗನಾಥ್, ಶೀತಲ್ ಶೆಟ್ಟಿ, ಮಂಜುನಾಥ್, ಅಲ್ಲಾವುದ್ದಿನ್, ಪುರುಷೋತ್ತಮ್, ಕೊಂಡಯ್ಯ,ಪುಟ್ಟರಾಜು,…

Read More

ಬಿಗ್ ಬಾಸ್ ಕನ್ನಡ 10 ಸೀಸನ್ ನ ಸ್ಪರ್ಧಿಗಳ ಮೇಲೆ ಕಿಚ್ಚ ಸುದೀಪ್ ಅಸಮಾಧಾನ ಹೊರ ಹಾಕಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ಯಾಕೋ ಸ್ಪರ್ಧಿಗಳ ವರ್ತನೆ, ಕೇಸು ಅಂತಲೇ ಸುದ್ದಿಯಾಗುತ್ತಿದೆ. ಈ ನಡುವೆ ಈ ವಾರ ಕಿಚ್ಚ ಸುದೀಪ್ ಸ್ಪರ್ಧಿಗಳ ಮೇಲೆ ಅಸಮಾಧಾನ ಬಹಿರಂಗವಾಗಿಯೇ ಹೊರಹಾಕಿದ್ದಾರೆ ಕಿಚ್ಚ ಸುದೀಪ್ ಸಾಮಾನ್ಯವಾಗಿ ಶನಿವಾರ ವಾರದ ಇಡೀ ಕತೆ ಮಾತನಾಡಿ ಭಾನುವಾರ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಆಗಿರುವುದಾಗಿ ಘೋಷಿಸುತ್ತಾರೆ. ಆದರೆ ಈ ವಾರ ಶನಿವಾರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗುತ್ತಿದ್ದಾರೆ. ಇದರ ನಡುವೆ ಆರಂಭದಿಂದಲೇ ಸುದೀಪ್ ಸ್ಪರ್ಧಿಗಳ ಜೊತೆ ಅಸಮಾಧಾನದಿಂದಲೇ ಮಾತನಾಡುತ್ತಿರುವ ಪ್ರೋಮೋ ಪ್ರಕಟವಾಗಿದೆ. ಹೀಗಾಗಿ ಮನೆಯ ಸದಸ್ಯರ ವರ್ತನೆಗಳು, ಇತ್ತೀಚೆಗಿನ ಕೆಲವು ವಿವಾದಗಳಿಂದ ಸುದೀಪ್ ಗೆ ಈ ಬಾರಿಯ ಬಿಗ್ ಬಾಸ್ ಸಾಕೆನ್ನಿಸಿದೆಯೇ ಎಂಬ ಅನುಮಾನ ಮೂಡಿದೆ. ಇತ್ತೀಚೆಗಷ್ಟೇ ವರ್ತೂರು ಸಂತೋಷ್ ವಿರುದ್ಧ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಅದರ ನಡುವೆ ಮಹಿಳಾ ಸ್ಪರ್ಧಿಗಳ…

Read More

ದಾವಣಗೆರೆ:- ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಜಮೀರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದಿಂದ ಜಮೀರ್ ಅಹ್ಮದ್ ವಜಾಗೆ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ. ಜಮೀರ್ ನೀವು ರಾಜ್ಯದ ಸಚಿವರಾ, ಕೇವಲ ಅಲ್ಪ ಸಂಖ್ಯಾತರ ಸಚಿವರಾ..? ಈ ಬಗ್ಗೆ ಸಚಿವ ಜಮೀರ್ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಮುಲಾಜಿಲ್ಲದೇ ಅವರನ್ನ ವಜಾ ಮಾಡಬೇಕು. ಸ್ಪೀಕರ್ ಸ್ಥಾನಕ್ಕೆ ಜಮೀರ್ ಅಹ್ಮದ್ ಅವಮಾನ ಮಾಡಿದ್ದಾರೆ. ಅಲ್ಪ ಸಂಖ್ಯಾತರ ಒಲೈಕೆಗಾಗಿ ಪ್ರಚಾರದಲ್ಲಿ ಹೇಳಿಕೆ ನೀಡಿದ್ದಾರೆ. ಯು ಟಿ ಖಾದರ್ ಗೆ ಸಿಎಂ ಸೇರಿ ಎಲ್ಲರು ಸಭಾಧ್ಯಕ್ಷರೆ ಅಂತ ಸಂಬೋಧಿಸುತ್ತಾರೆ. ಸಾಬರೇ ಅಂತ ತಲೆ ಬಾಗುತ್ತಾರಾ ಅವರಿಗೆ …? ಅದು ಸಾಂವಿಧಾನಿಕ ಹುದ್ದೆ ಅದಕ್ಕೆ ಗೌರವವಿದೆ. ನೀವು ಅದನ್ನ ರಾಜಕೀಯವಾಗಿ ದುರುಪಯೋಗ ಮಾಡಿಕೊಂಡಿದ್ದೀರಿ. ಹಿಂದೆ ಡಿಜೆ ಹಳ್ಳಿ – ಕೆ ಜೆ ಹಳ್ಳಿ ಕೇಸ್ ಲ್ಲಿ ಕೂಡ ಜಮೀರ್ ವಿವಾಧಾತ್ಮಕ…

Read More

ಬೆಳಗಾವಿ:- ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪೂರ‌ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ನಡುರಸ್ತೆಯಲ್ಲೇ NWKRTC ಹೊತ್ತಿ ಉರಿದ ಘಟನೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಭಾರಿ ದುರಂತ ತಪ್ಪಿದೆ. ಬಸ್​ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂಬ ಮಾಹಿತಿ ಸಿಕ್ಕಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅಪಾಯ ಆಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ. ಇನ್ನು ದುರ್ಘಟನೆ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ NWKRTC ಅಧಿಕಾರಿಗಳು ದೌಡಾಯಿಸಿದ್ದು, ಬಸ್‌ಗೆ ಹೇಗೆ ಬೆಂಕಿ ತಗುಲಿತು ಎಂಬ ಬಗ್ಗೆ ಪರಿಶೀಲಿಸುತ್ತಿದ್ದಾರೆ.

Read More