ದಾವಣಗೆರೆ:- ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಜಮೀರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದಿಂದ ಜಮೀರ್ ಅಹ್ಮದ್ ವಜಾಗೆ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ. ಜಮೀರ್ ನೀವು ರಾಜ್ಯದ ಸಚಿವರಾ, ಕೇವಲ ಅಲ್ಪ ಸಂಖ್ಯಾತರ ಸಚಿವರಾ..? ಈ ಬಗ್ಗೆ ಸಚಿವ ಜಮೀರ್ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಮುಲಾಜಿಲ್ಲದೇ ಅವರನ್ನ ವಜಾ ಮಾಡಬೇಕು. ಸ್ಪೀಕರ್ ಸ್ಥಾನಕ್ಕೆ ಜಮೀರ್ ಅಹ್ಮದ್ ಅವಮಾನ ಮಾಡಿದ್ದಾರೆ. ಅಲ್ಪ ಸಂಖ್ಯಾತರ ಒಲೈಕೆಗಾಗಿ ಪ್ರಚಾರದಲ್ಲಿ ಹೇಳಿಕೆ ನೀಡಿದ್ದಾರೆ.

ಯು ಟಿ ಖಾದರ್ ಗೆ ಸಿಎಂ ಸೇರಿ ಎಲ್ಲರು ಸಭಾಧ್ಯಕ್ಷರೆ ಅಂತ ಸಂಬೋಧಿಸುತ್ತಾರೆ. ಸಾಬರೇ ಅಂತ ತಲೆ ಬಾಗುತ್ತಾರಾ ಅವರಿಗೆ …?
ಅದು ಸಾಂವಿಧಾನಿಕ ಹುದ್ದೆ ಅದಕ್ಕೆ ಗೌರವವಿದೆ. ನೀವು ಅದನ್ನ ರಾಜಕೀಯವಾಗಿ ದುರುಪಯೋಗ ಮಾಡಿಕೊಂಡಿದ್ದೀರಿ. ಹಿಂದೆ ಡಿಜೆ ಹಳ್ಳಿ – ಕೆ ಜೆ ಹಳ್ಳಿ ಕೇಸ್ ಲ್ಲಿ ಕೂಡ ಜಮೀರ್ ವಿವಾಧಾತ್ಮಕ ಹೇಳಿಕೆ ನೀಡಿದ್ದರು. ಅವರು ನಿರಂತರವಾಗಿ ವಿವಾಧಾತ್ಮಕ ಹೇಳಿಕೆ ನೀಡುತ್ತಾರೆ.
ಒಂದು ವರ್ಗ ಓಲೈಕೆ ಮಾಡಲು ಹೇಳಿಕೆ ನೀಡಲಾಗುತ್ತಿದೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಟೀ ಮಾರಿಕೊಂಡು ಜೀವನ ಮಾಡುತ್ತೇನೆಂಬ ಯತ್ನಾಳ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಆಯ್ಕೆಯನ್ನ ಪಕ್ಷಾತೀತವಾಗಿ ಸ್ವಾಗತ ಮಾಡಲಾಗಿದೆ. ಯತ್ನಾಳ ಜೊತೆ ಹಿರಿಯರು ಮಾತನಾಡುವುದಾಗಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಾವೆಲ್ಲರು ಒಟ್ಟಾಗಿ ಹೋಗುವುದು ಒಳ್ಳೆಯದು. ಈ ನಾನೇನಾದರು ಮಾತಾಡಿದ್ರೆ ಯಡಿಯೂರಪ್ಪ ಹೇಳಿದ್ದಾರೆ ಅಂತಾರೆ. ಯಡಿಯೂರಪ್ಪ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಕೇಂದ್ರ ನಾಯಕರ ನೇಮಕವನ್ನ ನಾವು ಸ್ವಾಗತಿಸಬೇಕು. ವಿಪಕ್ಷ ನಾಯಕ ಅಶೋಕ್ ಆಯ್ಕೆಯಿಂದ ಕಾಂಗ್ರೆಸ್ ಗೆ ದೊಡ್ಡ ಹೊಡೆತ. ಇಬ್ಬರು ಯುವ ನಾಯಕರು ಬಿಜೆಪಿ ಜೋಡೆತ್ತಾಗಿದ್ದಾರೆ. ಇಡೀ ರಾಜ್ಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪಕ್ಷದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಎಲ್ಲ ಸರಿಯಾಗತ್ತೆ. ಮುಂದಿನ ಲೋಕಸಭೆ ಚುನಾವಣೆ ಗೆಲ್ಲುತ್ತೇವೆ. ಎಲ್ಲಿ ಕಳೆದು ಹೋಗಿದ್ದೇವೆ, ಮತ್ತೆ ವಾಪಸ್ ಪಡೆಯುತ್ತೇವೆ. ಅಧ್ಯಕ್ಷರಾದ ಬಳಿಕ ವಿಜಯೇಂದ್ರ ಎಲ್ಲ ಮಠಗಳ ಆಶೀರ್ವಾದ ಬೇಡುತ್ತಿದ್ದಾರೆ. ಮಠಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ಹಿರಿಯರ ಮಾರ್ಗದರ್ಶನ ಆಶೀರ್ವಾದ ಪಡೆಯುತ್ತಿದ್ದಾರೆ. ಮುಂದಿನ ಜಿಪಂ, ತಾಪಂ ಚುನಾವಣೆ ಸವಾಲಾಗಿ ಸ್ವೀಕಾರ ಮಾಡಿದ್ದಾರೆ.
ವಿಜಯೇಂದ್ರನಿಂದ ಬಿಜೆಪಿಗೆ ಆನೆ ಬಲ ಬಂದಿದೆ. ಯಡಿಯೂರಪ್ಪ ಮಗ ಅಂತ ಅವರಿಗೆ ಅಧ್ಯಕ್ಷ ಸ್ಥಾನ ನೀಡಿಲ್ಲ. ಅವರಿಗೆ ಸಂಘ ಪರಿವಾರ, ಬಿಜೆಪಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ಧಾರೆ. ಸಂಘಟನೆ ಸಾಮರ್ಥ್ಯ ನೋಡಿ ಕೊಟ್ಟಿದ್ದಾರೆ ಎಂದರು.

