Author: AIN Author

ಬೆಂಗಳೂರು: ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಬೆಂಗಳೂರು ಸೇರಿದಂತೆ ವಿವಿಧ‌ ಜಿಲ್ಲೆಯಲ್ಲಿ  ಗುಡುಗು ಸಹಿ ಧಾರಾಕಾರ ಮಳೆಯಾಗಿದ್ದು, ಕಚೇರಿಯಿಂದ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಹಾಗೆ ಬೈಕ್ ಸವಾರರು ಅಲ್ಲಲ್ಲಿ ಫ್ಲೈಓವರ್ ಕೆಳಗೆ ಆಶ್ರಯ ಪಡೆದಿದ್ದಾರೆ. ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೇಟ್, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಎಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಸರ್ಜಾಪುರ, ಮಾರತ್ಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ. ನಗರದಲ್ಲಿ ಬಿಸಲಿನ ತಾಪಮಾನ ಏರಿಕೆ ಹಿನ್ನೆಲೆ ಬೇಸತ್ತಿದ್ದ ಜನರು ಬೆಂಗಳೂರಿನಲ್ಲಿ ಮಳೆ ಕಂಡು ಸಂತಸಗೊಂಡಿದ್ದಾರೆ. ಆದರೆ ಜೋರಾಗಿ ಸುರಿಯುತ್ತಿರುವ ಗಾಳಿ ಮಳೆಗೆ ವಾಹನ ಸವಾರರು ಅಸ್ತವ್ಯಸ್ತರಾಗಿದ್ದಾರೆ.

Read More

ಬೆಂಗಳೂರು : ಪರೀಕ್ಷೆಗಾಗಿ ತಾಳಿ ತೆಗೆಸಿದವರು ನೀವು.. ತಾಳಿ ತೆಗೆಯೋದು ವಿಧವೆ ಮಾತ್ರ.. ನಿಮಗೆ ನಾಚಿಕೆ ಆಗಲ್ವಾ? ಇದು ಯಾವ ಸಂಸ್ಕೃತಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತವರೂರು ಕಲಬುರ್ಗಿಯಲ್ಲಿ ನಡೆದ ಘಟನೆ ವಿರುದ್ಧ ಬಿಜೆಪಿ ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಮನೆಯಲ್ಲಿ ತಾಳಿ ತೆಗೆಸುತ್ತೀರಾ? ನಿಮ್ಮ ಮನೆಯಲ್ಲಿ ಹೀಗೆ ಮಾಡೋಕೆ ಆಗತ್ತಾ? ತಾಳಿ, ಉಂಗುರ ತೆಗೆಸಿದದವರ ಮೇಲೆ ಕ್ರಮ ಆಗಬೇಕು. ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ತಾಳಿ ತೆಗೆಸಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಹೆಣ್ಣುಮಕ್ಕಳಿಗೆ ಅವಮಾನ ಮಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಯೋಜನೆಗಳಿಗೆ ಹಣ ನೀಡಲಿದೆ. ನಾವು ಎಲ್ಲೂ ಅನುದಾನ ನಿಲ್ಲಿಸಿಲ್ಲ. ರಾಜ್ಯ, ಕೇಂದ್ರದ ಷೇರಿನ ಹಣ ಕೊಡ್ತಿದ್ದೇವೆ. ವಿದ್ಯಾರ್ಥಿ ವೇತನದ ಸಮಸ್ಯೆಯಿಲ್ಲ. ಸ್ಕ್ಯೂಟಿನಿ ಮಾಡುವುದು ವಿಳಂಬವಾಗ್ತಿದೆ. 395 ಕೋಟಿ ರೂಪಾಯಿ ಹಣವನ್ನ ಇದಕ್ಕೆ ನೀಡಲಾಗ್ತಿದೆ ಎಂದು ಹೇಳಿದರು.

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರ ದಿವಾಳಿಯಾಗುವುದು ಖಚಿತ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೆ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ ಎಂದು ಕುಟುಕಿದ್ದಾರೆ. ಹೈ ಬಿಪಿ, ಹೈ ಶುಗರ್ ಕಾರಣದಿಂದ ಡಿ.ಕೆ ಶಿವಕುಮಾರ್ ಜಾಮೀನು ಪಡೆದು ಹೊರಗಿದ್ದಾರೆ. ಆರೋಗ್ಯ ಸರಿಹೋದ ಬಳಿಕ ಮತ್ತೆ ತಿಹಾರ್ ಜೈಲಿಗೆ ಹೋಗುತ್ತಾರೆ. ಆ ನಿಟ್ಟಿನಲ್ಲಿ ವಕೀಲರ ತಂಡ ದೆಹಲಿಗೆ ಹೋಗಿದೆ. ವಕೀಲರ ತಂಡ ಯಾವ ಫ್ಲೈಟ್‌ನಲ್ಲಿ ಹೋಗಿದ್ದಾರೆ ಎಂಬುದನ್ನು ಡಿಸಿಎಂ ಹೇಳಬೇಕು ಎಂದು ಯತ್ನಾಳ್ ಹೊಸ ಬಾಂಬ್ ಸಿಡಿದ್ದಾರೆ.

Read More

ಬೆಂಗಳೂರು: ಹಬ್ಬ ಬಂತು ಅಂದರೆ ಖಾಸಗಿ ಬಸ್ಗಳಿಂದ ಹಗಲು ದರೋಡೆ ಶುರುವಾಗುತ್ತೆ. ಸಾಲು ಸಾಲು ರಜೆ ಅಂತ ಗೊತ್ತಾದ್ರೆ ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ಸುಲಿಗೆ ಶುರುವಾಗುತ್ತೆ. ದೀಪಾವಳಿಗೆ ಅಂತ ಮನೆ ಕಡೆ ಹೊಗಲು ಸಿದ್ದವಾಗಿರೋರಿಗೆ ಶಾಕ್ ಎದುರಾಗಿದೆ.. ಪ್ರವೈಟ್ ಬಸ್ನಲ್ಲಿ ಟಿಕೆಟ್ ಬುಕ್ ಮಾಡಲು ಹೋದವರು ಡಬಲ್, ತ್ರಿಬಲ್ ರೇಟ್ ಕೊಡಬೇಕಿದೆ. ಹಬ್ಬ, ಸಾಲು ಸಾಲು ರಜೆ ಬಂದ್ರೆ ಸಾಕು ಖಾಸಗಿ ಬಸ್ ಗಳ ಸುಲಿಗೆ ಶುರುವಾಗುತ್ತೆ. ಕಣ್ಣುಮುಂದೆ ಸಿಕ್ಕಾಪಟ್ಟೆ ಪ್ರಯಾಣಿಕರಿಂದ ಸುಲಿಗೆ ನಡೆಯುತ್ತಿದ್ರೂ ಸಾರಿಗೆ ಇಲಾಖೆ ಮಾತ್ರ ತಲೆನೇಕೆಡಿಸಿಕೊಳ್ಳಲ್ಲ.ಪ್ರತಿ ಹಬ್ಬ ಹರಿದಿನದ ವೇಳೆ ಹೆಸರಿಗೆ ಮಾತ್ರ ಖಾಸಗಿ ಬಸ್ ಗಳ ಮೇಲೆ ದಾಳಿ ಮಾಡೋ ಇಲಾಖೆ ಶಾಶ್ವತವಾಗಿ ಏರಿಕೆಗೆ ಕಡಿವಾಣ ಹಾಕಲು ಪ್ರಯತ್ನ ನಡೆಯುತ್ತಿಲ್ಲ.ಇದೀಗ ದೀಪಾವಳಿ ಬರುತ್ತಿದ್ದು, ಇದನ್ನ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಯರಬಿರ್ರಿ ಟಿಕೆಟ್ ದರವನ್ನ ಹೆಚ್ಚಸಿದ್ದಾರೆ. .ಹೌದು ದೀಪಾವಳಿ ಹೀಗೆ ಹಬ್ಬಗಳ ಸೀಜನ್ ಬಂತು ಅಂದರೆ ಖಾಸಗಿ ಬಸ್…

Read More

ಯಾದಗಿರಿ: KEA ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ 9 ಜನ ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಹೌದು  ಯಾದಗಿರಿಯಲ್ಲಿ ಕೆಇಎ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 16 ಮಂದಿಯನ್ನು ಬಂಧಿಸಲಾಗಿತ್ತು, ಈ ಪೈಕಿ 9 ಮಂದಿಯನ್ನು ಸಿಜೆಎಂ ನ್ಯಾಯಾಧೀಶರ ಅನುಮತಿ ಮೇರೆಗೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಗಳು ಕೆಇಎ ಪರೀಕ್ಷೆಯಲ್ಲಿ ಬ್ಲೂ ಟೂತ್ ಬಳಸಿ ಪರೀಕ್ಷೆ ಬರೆದಿದ್ದರು. ಕೆಇಎಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಮಾಡಿದ ಆರೋಪದ ಮೇಲೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟು 16 ಜನರನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ವಶದಲ್ಲಿದ್ದ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಯಾದಗಿರಿ ನಗರದ ಐದು ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ಪರೀಕ್ಷೆಯಾಗಿದ್ದು, ಹೊರಗಿದ್ದು ಪರೀಕ್ಷೆ ಬರೆಯಲು ಸಹಾಯ ಮಾಡಿದ 7 ಜನರು ಇನ್ನು ನ್ಯಾಯಾಂಗ ಬಂಧನದಲ್ಲಿದ್ದಾರೆ..

Read More

ಬೆಂಗಳೂರು: ಬ್ರೇಕ್‌ಫಾಸ್ಟ್ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆಯೇ ಆಗಿಲ್ಲ. ಯಾರೆಲ್ಲಾ ಬರ್ತಾರೋ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ತೇವೆ. ನಾವು ಯಾವುದೇ ಆಪರೇಷನ್‌ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗೆ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು, ನಾಯಕತ್ವವನ್ನು ಬೆಂಬಲಿಸಿ ಬರುವವರನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತದೆ ಎಂದರು. ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಆಪರೇಷನ್ ಹಸ್ತ ಕೈಗೊಳ್ಳುತ್ತಿದೆ ಎಂಬ ಆರೋಪದ ಬಗ್ಗೆ ಉತ್ತರಿಸುತ್ತಾ, ಆಪರೇಷನ್ ಹಸ್ತ ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ ನಿಂದ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದರು. ಈಗಿನ ಮುಖ್ಯಮಂತ್ರಿಗಳು ಎಷ್ಟು ಅವಧಿಗೆ ಮುಖ್ಯಮಂತ್ರಿಗಳಾಗಿ ಉಳಿಯಲಿದ್ದಾರೆ ಎಂಬ ಪ್ರಧಾನಿಯವರ ರಾಜಕೀಯ ಭಾಷಣದಲ್ಲಿನ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕೇವಲ ಆರೋಪ ಮಾಡಬೇಕೆಂಬ ಉದ್ದೇಶದಿಂದ ಆರೋಪ ಮಾಡಲಾಗುತ್ತಿದ್ದು, ಇವೆಲ್ಲವೂ ಸುಳ್ಳಿನ ಕಂತೆ ಎಂದರು. ಮಧ್ಯಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕವನ್ನೇ ಗುರಿ ಮಾಡಿ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಪ್ರಚಾರ ಮಾಡಿದಲ್ಲೆಲ್ಲಾ…

Read More

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನವೆಂಬರ್ 12ರವರೆಗೂ ಅತಿ ಹೆಚ್ಚು ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ. https://ainlivenews.com/are-all-those-in-the-congress-party-going-to-be-the-chief-minister/ ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು ಹಾಗೂ ಕೋಲಾರದಲ್ಲಿಯೂ ಭಾರೀ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲಿ ಮಳೆಯಾಗಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ

Read More

ಬೆಂಗಳೂರು: ಕಾಂಗ್ರೆಸ್​ ಪಕ್ಷದಲ್ಲಿ ಇರುವವರೆಲ್ಲ ಮುಖ್ಯಮಂತ್ರಿ ಆಗುವವರೇ? ನಾನು ಸಿಎಂ, ನಾನು ಸಿಎಂ ಎಂದು 224 ಜನರೂ ಹೇಳುತ್ತಿದ್ದಾರೆ ಎಂದು  ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಈಶ್ವರಪ್ಪ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾತನಾಡಿದ ಅವರು, ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಡದ ಪ್ರಿಯಾಂಕ್ ಸಿಎಂ ಅಂತಿದ್ದಾರೆ. ಇನ್ನು ಪ್ರಿಯಾಂಕ್​ ಖರ್ಗೆ ತಂದೆ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಮಲ್ಲಿಕಾರ್ಜುನ ಖರ್ಗೆಯನ್ನೇ ಸಿಎಂ ಆಗಲು ಬಿಟ್ಟಿಲ್ಲ, ಇವರನ್ನು ಬಿಡ್ತಾರಾ? ಎಂದು ಹೇಳಿದರು. ಹಾಗೆ ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ರೇಸ್​ನಲ್ಲಿದ್ದಾರೆ ಅಂತಾರೆ. ಡಾ.ಜಿ.ಪರಮೇಶ್ವರ್​ ಮುಖ್ಯಮಂತ್ರಿಯಾಗಲಿ ಎಂದು ರಾಜಣ್ಣ ಹೇಳ್ತಾರೆ. ಪರಮೇಶ್ವರ್​​ ದೇವರು ಅನುಗ್ರಹ ಇದ್ರೆ ಸಿಎಂ ಆಗ್ತೇನೆ ಅಂತಾ ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದರು.

Read More

ಕರುನಾಡ ಅಂಗಳದಲ್ಲಿ ಕನ್ನಡ ರಾಜ್ಯೋತ್ಸವದ ಜೊತೆಗೆ `ಟಗರು ಪಲ್ಯ’ ವಿಜಯೋತ್ಸವವೂ ಜೋರಾಗಿದೆ. ಡಾಲಿ ಧನಂಜಯ್ ಬಂಡವಾಳ ಹೂಡಿ ನಿರ್ಮಿಸಿದ `ಟಗರು ಪಲ್ಯ’ ಸಿನಿಮಾವನ್ನು ಕನ್ನಡಿಗರು ಕೈ ಹಿಡಿದಿದ್ದಾರೆ. ಬಡವರು ಮಕ್ಕಳು ಬೆಳಿಬೇಕು ಎನ್ನುವ ಮನೋಭಾವ ಇಟ್ಕೊಂಡಿರುವ ಅರಸೀಕೆರೆಯ ಅರಸ ಸಿನಿಮಾಗೆ ಬಹುಪರಾಕ್ ಹಾಕಿದ್ದಾರೆ. ವಿಶೇಷ ಅಂದರೆ ನಾಟಿ ಸ್ಟೈಲ್ನಮಲ್ಲಿ ತಯಾರಾಗಿ ಥಿಯೇಟರ್ಗೆ ಬಂದ ಟಗರು ಪಲ್ಯ ಕನ್ನಡ ಕಲಾಭಿಮಾನಿಗಳಿಗೆ ರುಚಿಕೊಟ್ಟಿದೆ. ಗಂಧದಗುಡಿಯಲ್ಲಿ ಘಮ್ಮೆಂದ ಟಗರು ಪಲ್ಯಕ್ಕೆ ಈಗ ಅಕ್ಕ-ಪಕ್ಕದ ರಾಜ್ಯದಿಂದಲೂ ಬೇಡಿಕೆ ಸೃಷ್ಟಿಯಾಗಿದೆ. ಜಾಲಿರೆಡ್ಡಿಯಣ್ಣ ಟಗರು ಪಲ್ಯ ರೈಟ್ಸ್ ನಮಗೆ ಕೊಡಣ್ಣ ಅಂತ ಕ್ಯೂ ನಿಲ್ಲುವಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದಕ್ಕೆಲ್ಲಾ ಕಾರಣ ನಮ್ ಕನ್ನಡಿಗರು ಎನ್ನುವ ಡಾಲಿ ಧನಂಜಯ್, ಕರುನಾಡ ಅಂಗಳದಲ್ಲಿ ವಿಜಯಯಾತ್ರೆ ಆರಂಭಿಸಿದ್ದಾರೆ. ಕೈ ಹಿಡಿದವರಿಗೆ ಎರಡು ಕೈ ಎತ್ತಿ ಮುಗಿಯೋಕೆ ಮುತ್ತಿನ ಪಲ್ಲಕ್ಕಿ ಏರಿ ಹೊರಡಲು ತಯಾರಾಗುತ್ತಿದ್ದಾರೆ. ಶ್ರೀ ಆದಿಶಕ್ತಿ ಶಿವನಸಮುದ್ರ ಶಿಂಷಾಮಾರಮ್ಮದೇವಿ ದೇವಸ್ಥಾನದಿಂದ `ಟಗರು ಪಲ್ಯ’ ವಿಜಯಯಾತ್ರೆ ಆರಂಭಿಸಿದ್ದಾರೆ. ಕೊಳ್ಳೆಗಾಲ, ಮಳವಳ್ಳಿ, ಬೆಳಕವಾಡಿ, ಮಂಡ್ಯ,…

Read More

ಬೆಂಗಳೂರು: ನಾಳೆ ಹಾಸನಾಂಬ ದೇವಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ನಾಳೆ ಬೆಳಗ್ಗೆ 11ಕ್ಕೆ ಬೆಂಗಳೂರಿನಿಂದ ಹಾಸನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಸಿದ್ದರಾಮಯ್ಯ ಮಧ್ಯಾಹ್ನ 12.30ಕ್ಕೆ ಹಾಸನಾಂಬೆ ದರ್ಶನ ಪಡೆಯಲಿದ್ದಾರೆ. ಹಾಸನಾಂಬೆ ದೇವಿ ದರ್ಶನ ಪಡೆಯಲು 4ನೇ ದಿನವೂ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಮುಂಜಾನೆ 5 ಗಂಟೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಇಂದು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 15ರಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಇಂದು ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಮುಸ್ಲಿಂ ಕುಟುಂಬವೊಂದು ಹಾಸನಾಂಬೆ ‌ದರ್ಶನಕ್ಕೆ ಬಂದಿದೆ. ಸರತಿ ಸಾಲಿನಲ್ಲಿ‌ ನಿಂತು ಹಜೀರ ಎಂಬ ಮಹಿಳೆ ಕುಟುಂಬ ತಾಯಿಯ ದರ್ಶನ ಪಡೆದಿದ್ದಾರೆ. ದೇವನೊಬ್ಬ ನಾಮ ಹಲವು ಎಂಬ ಸಂದೇಶ ಸಾರಿದ್ದಾರೆ. ಹಾಸನಾಂಬೆ ಮೇಲೆ ನಮಗೆ ನಂಬಿಕೆ ಇದೆ. ತುಂಬ ವರ್ಷಗಳಿಂದ ದೇವರ ದರ್ಶನಕ್ಕೆ ಬರಬೇಕು ಎಂದುಕೊಂಡಿದ್ದು ಈ ಬಾರಿ ದರ್ಶನಕ್ಕೆ ಬರುವ ಅವಕಾಶ ಸಿಕ್ಕಿದೆ…

Read More