Author: AIN Author

ಬೆಂಗಳೂರು:- ಕೆಲ ದಿನಗಳಿಂದ ಇಳಿಕೆಯಾಗುತ್ತಲೇ ಇದ್ದ ಚಿನ್ನದ ದರ ಇದ್ದಕ್ಕಿದಂತೆ ದುಪ್ಪಟ್ಟು ಏರಿಕೆಯಾಗಿದೆ. ಬೆಳ್ಳಿ ದರ ತುಸು ಇಳಿಕೆಯಾಗಿದೆ. ಆದರೆ ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆ ಸ್ವಲ್ವವೇ ಸ್ವಲ್ಪ ಕಡಿಮೆಯಾಗಿದೆ. ಇಂದು ಚಿನ್ನ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿಯೋಣ ಬನ್ನಿ.. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇತರ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ. 22 ಕ್ಯಾರೆಟ್‌ ಚಿನ್ನದ ದರ 1 gram: ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,555 ರೂ. ಆಗಿದೆ. ನಿನ್ನೆ 5,600 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 45 ರೂ. ಇಳಿಕೆಯಾಗಿದೆ. 8 gram: ಇಂದಿನ 8 ಗ್ರಾಂ ಚಿನ್ನದ ಬೆಲೆ 44,440 ರೂ ಇದೆ. ನಿನ್ನೆ 44,800 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 360 ರೂ. ಕಡಿಮೆಯಾಗಿದೆ. 10 gram: ಹತ್ತು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 55,550 ರೂ. ನೀಡಬೇಕು. ನಿನ್ನೆ 56,000 ರೂ…

Read More

ಮಾಸ್ಕೋ: ಪ್ರೇಯಸಿ (Lover) ಮೇಲೆ ಅತ್ಯಾಚಾರಗೈದು, 111 ಬಾರಿ ಚಾಕುವಿನಿಂದ ಇರಿದು ಕೊಂದಿದ್ದ ಪ್ರೇಮಿಯೊಬ್ಬನನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಕ್ಷಮಿಸಿ ಬಿಡುಗಡೆ ಮಾಡಿಸಿದ್ದಾರೆ. ಯುವಕನು ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಗೆ (Russia Military) ಸೇರಿ ಹೋರಾಟ ಮಾಡಲು ನಿರ್ಧರಿಸಿದ ನಂತರ ವ್ಲಾಡಿಮಿರ್ ಪುಟಿನ್, ಆತನ ಅಪರಾಧವನ್ನ ಕ್ಷಮಿಸಿದ್ದಾರೆ. ವ್ಲಾಡಿಸ್ಲಾವ್‌ ಕಾನ್ಯುಸ್‌ ಎಂಬಾತ ತನ್ನ ಪ್ರೇಯಸಿ ಪೆಖ್ಟೆಲೆವಾ (Vera Pekhteleva) ಎಂಬಾಕೆಯನ್ನು ಕ್ರೂರವಾಗಿ ಕೊಂದು 17 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಆತ ಸೇನೆಗೆ ಸೇರಲು ಬಯಸಿದ್ದರಿಂದ ಶಿಕ್ಷೆ ಅವಧಿಗೆ ಒಂದು ವರ್ಷ ಮುಂಚಿತವಾಗಿಯೇ ಅಪರಾಧಿಯನ್ನ ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಕ್ಯಾನ್ಸನ್‌ ತನ್ನ ಗೆಳತಿಗೆ ಸತತ ಮೂರುವರೆ ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಿದ್ದ. ಅಷ್ಟು ಸಾಲದ್ದಕ್ಕೆ 111 ಬಾರಿ ಚಾಕುವಿನಿಂದ ಇರಿದಿದ್ದ, ನಂತ್ರ ಕೇಬಲ್‌ ವಯರ್‌ನಿಂದ ಕತ್ತು ಹಿಸುಕಿ ಕೊಂದಿದ್ದ. ಆಕೆಯ ಚೀರಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಲು ಸಾಕಷ್ಟು ಬಾರಿ ಕರೆ ಮಾಡಿದ್ದರು.…

Read More

ಬೆಂಗಳೂರು: ರಾಜ್ಯದಲ್ಲಿ 100 ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಹಾಗೂ 200 ಕೋಟಿ‌ ರೂ ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ನೀಡಿದ್ದು ಶೀಘ್ರ ಅನುಷ್ಠಾನ ಗೊಳಿಸಲಾಗುವುದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವರ ಮಲ್ಲನಾಯಕನಹಳ್ಳಿಯಲ್ಲಿ ನಡೆದ ಜಲಾನಯನ ಮೇಳ ಹಾಗೂ ಫಲಾನುಭವಿಗಳಿಗೆ ಬೃಹತ್ ಪ್ರಮಾಣದಲ್ಲಿ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 223 ತಾಲ್ಲೂಕಿನಲ್ಲಿ ಬರ ಇದೆ .17000 ಕೋಟಿ ರೂ ಪರಿಹಾರ ಕೋರಿದ್ದೇವೆ . ಕೇಂದ್ರದಿಂದ ಈ ವರೆಗೂ ಯಾವುದೇ ನೆರವು ,ಪೂರಕ ಸ್ಪಂದನೆ ದೊರೆತಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು. ರಾಜ್ಯ ಸರ್ಕಾರ ರೈತರ ಪರ 1500 ಕೋಟಿ ವಿಮೆ ಹಣ ಪಾವತಿ‌‌ ಮಾಡಿದೆ.230 ಕೋಟಿ ವಿಮೆ ರೈತರಿಗೆ ಈಗಾಗಲೇ ಪಾವತಿಯಾಗಿದೆ ಎಂದು ಅವರು ಮಾಹಿತಿ ನೀಡಿದರು ರಾಜ್ಯ ಸರ್ಕಾರ ಜನಪರ ಯೋಜನೆ ಅನುಷ್ಠಾನ ಮಾಡುತ್ತಿದೆ.ಅಧಿಕಾರಕ್ಕೆ ಬಂದ ಕೂಡಲೆ ನಾಲ್ಕು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ…

Read More

ಬೆಂಗಳೂರು:- ಶನಿವಾರ ನಗರದ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಹೂ-ಹಣ್ಣು, ದೀಪಗಳು ಹಾಗೂ ಆಕಾಶಬುಟ್ಟಿಗಳ ಖರೀದಿ ಬಿರುಸಾಗಿ ಸಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬಂತು. ಕೆ.ಆರ್. ಮಾರುಕಟ್ಟೆ, ಯಶವಂತಪುರ, ಮಲ್ಲೇ ಶ್ವರ, ಬಸವನಗುಡಿ, ಮಡಿವಾಳ, ಮಾಗಡಿ ರಸ್ತೆ, ವಿಜಯನಗರ ಸೇರಿ ನಗರದ ನಾನಾ ಭಾಗಗಳ ಪ್ರಮುಖ ಮಾರುಕಟ್ಟೆಗಳಲ್ಲಿ ಜನದಟ್ಟಣೆಯಿಂದ ವಾಹನಸವಾರರು ಪರದಾಡುವಂತಾಯಿತು. ಪೂಜೆಗೆ ಬೇಕಾದ ಹೂವು, ಹಣ್ಣು, ಬೂದುಗುಂಬಳ, ಬಾಳೆಕಂದು, ಅಂಗಡಿಗಳಲ್ಲಿ ಜನರು ಖರೀದಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಆಯುಧಪೂಜೆ ಹಾಗೂ ವಿಜಯದಶಮಿಯಂದು ವಾಹನ ಹಾಗೂ ಅಂಗಡಿ ಮಳಿಗೆಗಳು, ಕಾರ್ಖಾನೆಗಳಲ್ಲಿ ಪೂಜೆ ಮಾಡಿದರೆ, ಹಲವರು ದೀಪಾವಳಿಯಲ್ಲಿ ಮಾಡುತ್ತಾರೆ. ಹಾಗಾಗಿ ಅಂಗಡಿಗಳಲ್ಲಿ ಸಿಹಿತಿನಿಸುಗಳ ಖರೀದಿಯೂ ಹೆಚ್ಚಿತ್ತು. ಹೂ ಬೆಳೆಗಾರರಿಗೆ ಸಂಕಷ್ಟ: ಈ ಬಾರಿ ತರಕಾರಿ ಬೆಳೆಗಾರರೆಲ್ಲ ಹೂವಿನ ಬೆಳೆಯತ್ತ ವಾಲಿದ್ದರಿಂದ ಯಥೇಚ್ಚ ಪ್ರಮಾಣದ ಹೂವು ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಹೂವಿನ ಬೆಲೆ ಸಗಟು ದರದಲ್ಲಿ ಇಳಿಕೆಯಾಗಿದೆ. ಸಗಟು ದರದಲ್ಲಿ ಸೇವಂತಿಗೆ ಕೆ.ಜಿ. ಹೂವಿಗೆ ಕೇವಲ 30-50 ರೂ. ಇದೆ. ಉಳಿದಂತೆ ಕನಕಾಂಬರ, ಮಲ್ಲಿಗೆ,…

Read More

2023ರ ಏಕದಿನ ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗಳ ಸೋಲು ಕಂಡಿದೆ. ಈ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಯುವ ವೇಗಿ ನವೀನ್ ಉಲ್ ಹಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹಷ್ಮತ್‌ಉಲ್ಲಾ ಶಾಹಿದಿ ಸಾರಥ್ಯದ ಅಫಘಾನಿಸ್ತಾನ ಅಜ್ಮತ್ ಉಲ್ಲಾ ಒಮರ್ಜಾಯ್ ಅವರ 97 ರನ್ ಗಳಿಂದ 244 ರನ್ ಗಳಿಸಿದ್ದರು. ಈ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ರಾಸ್ಸೆ ವಾನ್ ಡೆರ್ ದುಸೆನ್ (76* ರನ್) ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ಗಳ ಗೆಲುವು ಸಾಧಿಸಿತು. ಅಫಘಾನಿಸ್ತಾನ ಪರ ರಶೀದ್ ಖಾನ್ (37ಕ್ಕೆ2) ಹಾಗೂ ಮೊಹಮ್ಮದ್ ನಬಿ (35ಕ್ಕೆ2) ಉತ್ತಮ ಬೌಲಿಂಗ್ ಸಂಯೋಜನೆ ತೋರಿದರೂ ಅಫ್ಘಾನ್ ಸೋಲಿನೊಂದಿಗೆ ವಿಶ್ವಕಪ್ ಪಯಣ ಮುಗಿಸಿದೆ. ಪಂದ್ಯದಲ್ಲಿ ನವೀನ್…

Read More

ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ . ಆದರೆ ನಿಮಗೆ ಗೊತ್ತಾ, ಭಾರತದ ಈ 2 ಸ್ಥಳಗಳಲ್ಲಿ ದೀಪಾವಳಿಯನ್ನು ಆಚರಿಸುವುದಿಲ್ಲ. ಆಶ್ಚರ್ಯ ಹಾಗೂ ಅಚ್ಚರಿಯಾಗಬಹುದು . ದೀಪಾವಳಿಯನ್ನು ಭಾರತದ ಕೇರಳ ರಾಜ್ಯದಲ್ಲಿ ಮತ್ತು ಕರ್ನಾಟಕದ ಮೇಲುಕೋಟೆಯಲ್ಲಿ ಆಚರಿಸುವುದಿಲ್ಲ.ಕಾರಣವೇನಿರಬಹುದು ಅಂತೀರಾ ಇಲ್ಲಿದೆ ಡಿಟೇಲ್ಸ್! ಕೇರಳ ರಾಜ್ಯದಲ್ಲಿ ದೀಪಾವಳಿ ಹಬ್ಬ ಆಚರಿಸದೇ ಇರಲು ಕಾರಣವಿದೆ. ಅದೇನೆಂದರೆ, ಕೇರಳದ ರಾಜ ಮಹಾಬಲಿ ದೀಪಾವಳಿಯ ದಿನದಂದು ನಿಧನರಾದರು ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ…

Read More

ಬೆಂಗಳೂರು:- ಕಾಂಗ್ರೆಸ್​ನ ಬೆದರಿಕೆ ತಂತ್ರಗಳಿಗೆ ನಮ್ಮ ಕಾರ್ಯಕರ್ತರು ಹೆದರಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅಧಿಕಾರದ ಬಲದಿಂದ ಕಾಂಗ್ರೆಸ್ ಪಕ್ಷ ಏನೇ ತಂತ್ರ, ಕುತಂತ್ರ ಮಾಡಲಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್​ನ ಕೇಸ್, ಬೆದರಿಕೆ ತಂತ್ರಗಳಿಗೆ ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ. ಹೋರಾಟದಿಂದ ಹಿಂದೆ ಸರಿದ ಉದಾಹರಣೆಗಳಿಲ್ಲವೆಂದರು. ಕಾಂಗ್ರೆಸ್ ಅಬ್ಬರವನ್ನು ಮೀರಿ ನಮ್ಮ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡಲಿದ್ದೇವೆ ಎಂದು ಹೇಳಿದರು. ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿ ದೀಪಾವಳಿ ಶುಭಾಶಯ ಕೋರಿರುವೆ. ರಾಜ್ಯದ 58,282 ಬೂತ್​ಗಳಲ್ಲಿ ಪಕ್ಷದ ಸಂಘಟನೆಗೆ ಬಲಪಡಿಸಲಾಗುವುದು. ಪ್ರತಿ ಬೂತ್ ಅಧ್ಯಕ್ಷ, ಪೇಜ್ ಪ್ರಮುಖ ಪಕ್ಷದ ಜೀವಾಳ ಎಂಬುದು ಹಿಂದಿನ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪರಿಕಲ್ಪನೆ ಹಾಗೂ ಚಿಂತನೆಯಾಗಿದೆ ಎಂದರು. ಪಕ್ಷದ ರಾಷ್ಟ್ರೀಯ ನಾಯಕರು ಬೂತ್…

Read More

ಇಂದು ಭಾರತ ಕೊನೆಯ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ಇದು 13ನೇ ವಿಶ್ವಕಪ್‌ ಪಂದ್ಯಾವಳಿಯ ಕೊನೆಯ ಲೀಗ್‌ ಮುಖಾಮುಖಿಯೂ ಹೌದು. ಇದಕ್ಕೆ ಸಾಕ್ಷಿಯಾಗಲಿರುವ ಅಂಗಳ ಉದ್ಯಾನನಗರಿಯ “ಎಂ. ಚಿನ್ನಸ್ವಾಮಿ ಸ್ಟೇಡಿಯಂ. ಫ‌ಲಿತಾಂಶಕ್ಕೆ ಸಂಬಂಧಿಸಿದಂತೆ ಇಲ್ಲಿ ವಿಪರೀತ ನಿರೀಕ್ಷೆಗಳೇನಿಲ್ಲ. ಆದರೆ ಟೀಮ್‌ ಇಂಡಿಯಾ ಎಲ್ಲ 9 ಪಂದ್ಯಗಳನ್ನು ಗೆದ್ದು ಅಜೇಯ ಅಭಿ ಯಾನ ಕಾಯ್ದುಕೊಂಡು ಬರಬೇಕು ಎನ್ನುವುದು ಅಭಿಮಾನಿಗಳ ನಂಬಿಕೆ. ಸಾಮಾನ್ಯ ತಂಡವಾಗಿದ್ದರೂ ಒಂದೆ ರಡು ಅಚ್ಚರಿಯ ಫ‌ಲಿತಾಂಶವನ್ನು ದಾಖಲಿ ಸಿರುವ ನೆದರ್ಲೆಂಡ್ಸ್‌ ವಿರುದ್ಧ ಬಲಿಷ್ಠ ಭಾರತ ಮೇಲುಗೈ ಸಾಧಿಸದೇ ಇರಲು ಕಾರಣಗಳೇ ಇಲ್ಲ. ಆದರೂ ಎಷ್ಟೆಷ್ಟೋ ದೊಡ್ಡ ತಂಡಗಳನ್ನು ಬಡಿದುರುಳಿಸಿ ಇಲ್ಲಿಯ ತನಕ ಬಂದಿರುವ ರೋಹಿತ್‌ ಪಡೆ ಕೊನೆಯಲ್ಲಿ ಆಘಾತಕಾರಿ ಫ‌ಲಿತಾಂಶವನ್ನು ಕಾಣಬಾರದಲ್ಲ. ಹೀಗಾಗಿ ಈ ಪಂದ್ಯವನ್ನೂ ಹಿಂದಿನಂತೆ ಅತ್ಯಂತ ಗಂಭೀರವಾಗಿಯೇ ಆಡಿ ಭರ್ಜರಿ ಗೆಲುವನ್ನು ಸಾಧಿಸುವುದು ಟೀಮ್‌ ಇಂಡಿಯಾದ ಗುರಿ ಆಗಬೇಕು, ಮತ್ತು ಆಗಿರುತ್ತದೆ ಕೂಡ. “ಓವರ್‌ ಕಾನ್ಫಿಡೆನ್ಸ್‌’ಗೆ ಇಲ್ಲಿ ಜಾಗ ಇರಕೂಡದು. ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ…

Read More

ಆಂದ್ರಪ್ರದೇಶ: ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಚಂದ್ರಶೇಖರ್ ರಾವ್ ತಮ್ಮ ಬಳಿ ಇರುವ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದಾರೆ. ತಮ್ಮ ಬಳಿ 58.92 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಚಂದ್ರಶೇಖರ್ ರಾವ್ ಘೋಷಿಸಿಕೊಂಡಿದ್ದಾರೆ. ಸಿಎಂ ಆಗಿರುವ ಕೆಸಿಆರ್ ಸ್ವಂತದ ಕಾರು, ಕೃಷಿ ಭೂಮಿಯನ್ನು ಹೊಂದಿಲ್ಲ. ಆದರೆ, ಪ್ರಮಾಣಪತ್ರದಲ್ಲಿ ತಾವು ಕೃಷಿಕರು ಎಂದು ನಮೂದಿಸಿರುವುದು ವಿಚಿತ್ರವಾಗಿದೆ.  ಬಿಆರ್‌ಎಸ್ ನಾಯಕ ಕೆಸಿಆರ್ ಗಜ್ವೆಲ್ ಮತ್ತು ಕಮ್ಮಾರೆಡ್ಡಿ ಎರಡೂ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು. https://ainlivenews.com/great-job-opportunity-in-hindustan-aeronautics-limited-posting-in-bangalore/ 2018 ರ ಚುನಾವಣೆಯಲ್ಲಿ ಕೆಸಿಆರ್ ಬಳಿ 22 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇತ್ತು. ಈ ಹಿಂದೆಯೂ ತಮ್ಮ ಬಳಿ ಸ್ವಂತ ಕಾರು ಇಲ್ಲವೆಂದು ಘೋಷಿಸಿದ್ದರು. ಆದರೆ 2015 ರಲ್ಲಿ ಸಿಎಂ ಬೆಂಗಾವಲು ಪಡೆಯಲ್ಲಿ ನಾಲ್ಕು ಟೊಯಾಟಾ ಲ್ಯಾಂಡ್ ಕ್ರೂಸರ್ ಕಾರು ಇತ್ತು. ತಮ್ಮದು ಹಿಂದೂ ಅವಿಭಜಿತ ಕುಟುಂಬ ಎಂದು ಘೋಷಿಸಿರುವ ಕೆಸಿಆರ್,…

Read More

ಸಾಮಾನ್ಯವಾಗಿ ಎಲ್ಲರೂ ‘ಫ್ರೈಡ್ ರೈಸ್’ ತಿನ್ನುತ್ತಿರುತ್ತಾರೆ. ಆದರೆ ‘ಚಿಕನ್ ಫ್ರೈಡ್ ರೈಸ್’ ಎನ್ನುವ ರೆಸಿಪಿ ಇದೆ ಎಂದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಅದಕ್ಕೆ ಇಂದು ನಿಮ್ಮ ಮನೆಯಲ್ಲಿಯೇ ಸಿಂಪಲ್ ಆಗಿ ಹೇಗೆ ಈ ರೆಸಿಪಿ ಟ್ರೈ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ಬೇಕಾಗಿರುವ ಪದಾರ್ಥಗಳು: * ಆಲಿವ್ ಎಣ್ಣೆ – 2 ಟೀಸ್ಪೂನ್ * ಕಟ್ ಮಾಡಿದ ಚಿಕನ್ – 2 ಕಪ್ * ಕರಿಮೆಣಸು – 2 ಟೀಸ್ಪೂನ್ * ಎಳ್ಳಿನ ಎಣ್ಣೆ – 2 ಟೀಸ್ಪೂನ್ * ಕಟ್ ಮಾಡಿದ ಈರುಳ್ಳಿ – 1 ಕಪ್ * ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್ * ಲವಂಗ – 1 ಟೀಸ್ಪೂನ್ * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್ * ಬೇಯಿಸಿದ ಅಕ್ಕಿ – 3 ಕಪ್ * ನೆನೆಸಿಟ್ಟ ಬಟಾಣಿ – ಅರ್ಧ ಕಪ್ * ಮೊಟ್ಟೆಗಳು – 2 * ಸೋಯಾ…

Read More