ಗದಗ: ನ.24 ರಿಂದ ಡಿ. 3ರ ವರೆಗೆ ಗದಗನಲ್ಲಿ ಕೊಪ್ಪಳದ ಅಭಿನವ ಗವಿಸಿಧ್ದೇಶ್ವರ ಸ್ವಾಮೀಜಿಗಳಿಂದ ಆಧ್ಯಾತ್ಮ ಪ್ರವಚನ ನಡೆಯಲಿದೆ ಎಂದು ಗದುಗಿನ ಪತ್ರಿಕಾಭವನದಲ್ಲಿ ಮಾಜಿ ಶಾಸಕ ಡಿ ಆರ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಹೇಳಿದರು. ಪ್ರತಿನಿತ್ಯ ಸಂಜೆ 6 ರಿಂದ 7 ಘಂಟೆಯವರೆಗೆ ಆಧ್ಯಾತ್ಮ ಪ್ರವಚನ ನಡೆಯಲಿದ್ದು, ಗದಗ ನಗರದ ವಿದ್ಯಾದಾನ ಸಮಿತಿ ಶಾಲೆ ಮೈದಾನದಲ್ಲಿ ಪ್ರವಚನ ಆಯೋಜನೆ ಮಾಡಲಾಗಿದೆ.
ಉದ್ಘಾಟನಾ ಕಾರ್ಯಕ್ರಮಗಳಲ್ಲಿ ವಿವಿಧ ಮಠಾಧಿಶರ ಸಾನಿಧ್ಯ ವಹಿಸಲಿದ್ದು, ಜೊತೆಗೆ ಗದಗ ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿ ಸದ್ಭಾವನಾ ಪಾದಯಾತ್ರೆ ನಡೆಯಲಿದೆ. ಸತ್ಸಂಗದಿಂದ ನಮ್ಮ ಬದುಕು, ಕೌಟುಂಬಿಕ ಬದುಕು ಸಾಧ್ಯ, ಮನಸ್ಸನ್ನು ಕೂಡಿಸೋ ಕೆಲಸ ಇಂದಿನ ದಿನಗಳಲ್ಲಿ ಅವಶ್ಯಕವಾಗಿದ್ದು, ಉತ್ತಮ ವಾತಾವರಣ ನಿರ್ಮಾಣಕ್ಕೆ ಆಧ್ಯಾತ್ಮ ಪ್ರವಚನಗಳಿಂದ ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಡಿ ಆರ್ ಪಾಟೀಲ್ ಹೇಳಿದರು.