Author: AIN Author

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿ ಆಗಲಿದೆ. ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದು ಈಗಾಗಲೇ ಸೆಮಿ ಫೈನಲ್​ಗೇರಿರುವ ಟೀಮ್ ಇಂಡಿಯಾಕ್ಕೆ ಇದೊಂದು ಔಪಚಾರಿಕ ಪಂದ್ಯ. ಇಂದಿನ ಭಾರತ-ನೆದರ್ಲೆಂಡ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುತ್ತಾ ಎಂಬುದನ್ನು ನೋಡುವುದಾದರೆ, ಬೆಂಗಳೂರಿನಲ್ಲಿ ಇಂದು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷಿಸಲಾಗಿದೆ. ಹವಾಮಾನ ವರದಿಯ ಪ್ರಕಾರ ಯಾವುದೇ ಮಳೆಯ ಸೂಚನೆ ಇಲ್ಲ. ಮೋಡ ಕವಿದ ವಾತಾವರಣ ಇರಬಹುದು. ಇಂದು ಬೆಂಗಳೂರಿನಲ್ಲಿ ಶೇ. 71 ರಷ್ಟು ಮೋಡ ಕವಿದ ವಾತಾವರಣ ಇರಲಿದೆ. ಶೇ. 3 ರಷ್ಟು ಮಳೆಯ ಸಂಭವ ಇದೆಯಷ್ಟೆ. ಸಂಜೆಯ ವೇಳೆಗೆ ತಾಪಮಾನವು 12 ಡಿಗ್ರಿ ಸೆಲ್ಸಿಯಸ್​ಗೆ ಬರಲಿದೆ. ಆರ್ದ್ರತೆಯು ಶೇ. 66 ರಷ್ಟು ಇರಬಹುದು ಎನ್ನಲಾಗಿದೆ. ಒಟ್ಟಾರೆ ಭಾರತ-ನೆದರ್ಲೆಂಡ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇಲ್ಲ. ಟೂರ್ನಿಯಿಂದ ಹೊರಬಿದ್ದರೂ ಇಂದಿನ ಪಂದ್ಯ ನೆದರ್ಲೆಂಡ್ಸ್ ತಂಡಕ್ಕೆ ಮುಖ್ಯವಾಗಿದೆ. ಚಾಂಪಿಯನ್ಸ್ ಟ್ರೋಫಿ 2025…

Read More

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ, ಕಡಿಮೆ ಬೆಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಶ್ರೇಣಿಯನ್ನು ಪಡೆಯುತ್ತಿದೆ, ಅದರ ಅದ್ಭುತ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ, ಭಾರತೀಯರು ಈಗ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ಕಾರಣಕ್ಕಾಗಿ, ಅದರ ಬೇಡಿಕೆಯು ಸಾಕಷ್ಟು ಹೆಚ್ಚಾಗಿದೆ. ಬೇಡಿಕೆಯೊಂದಿಗೆ, ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಅನೇಕ ಜನರು ಅವುಗಳನ್ನು ಖರೀದಿಸಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ಶ್ರೇಣಿಯಲ್ಲಿ, ಬಹು ವೈಶಿಷ್ಟ್ಯಗಳೊಂದಿಗೆ ಬರುವ ಹಲವು ಆಯ್ಕೆಗಳನ್ನು ನೀವು ಕಾಣಬಹುದು. BGauss C12i ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನಿಮಗೆ ತಿಳಿಸಲಾಗುವುದು, ಇದು ಬಜೆಟ್‌ನಲ್ಲಿಯೇ 135 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ನೀಡುತ್ತದೆ. ಇದರ ಉದ್ದ 1825 ಮಿಮೀ, ಅಗಲ 697 ಮಿಮೀ ಮತ್ತು ಎತ್ತರ 1150 ಮಿಮೀ. ಇದು 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆಯುತ್ತದೆ ಮತ್ತು ಇದರ ವೀಲ್ ಬೇಸ್ 1293 ಎಂಎಂ ಆಗಿದೆ. ಈ 110 ಕೆಜಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಲವಾರು ಬಣ್ಣಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಅದೇ ಸಮಯದಲ್ಲಿ, ಅದರ ನೋಟವು ತುಂಬಾ ಆಕರ್ಷಕವಾಗಿದೆ. ಇದು 2500…

Read More

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ವಿರೋಧಿಸಿ ಪಕ್ಷದಿಂದ ಹೊರಬಂದ ಒಕ್ಕಲಿಗ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುತ್ತಾ ಬಂದವರು, ನನ್ನನ್ನು ಸೋಲಿಸಲು ಆಗಲಿಲ್ಲ ಎಂಬ ಹತಾಶೆಯಿಂದ ಸುಖಾಸುಮ್ಮನೆ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಅವರು ಈ ಕೆಲಸ ಮುಂದುವರಿಸಿದರೆ ನಾನೂ ನನ್ನ ವರಸೆ ತೋರಿಸಬೇಕಾಗುತ್ತದೆ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕ ಎಚ್‌.ಡಿ.ರೇವಣ್ಣಗೆ ಎಚ್ಚರಿಕೆ ನೀಡಿದರು. ”ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ನನ್ನ ಹೆಸರು ಹೇಳುವುದಿಲ್ಲ, ಒಮ್ಮೆ ಅರಸೀಕೆರೆಯವನು ಅಂತಾರೆ, ನಾನೂ ಅವರನ್ನು ಚನ್ನಪಟ್ಟಣ ಶಾಸಕ ಅನ್ನಬಹುದು, ಆದರೆ ನಾನು ಹಾಗೆ ಮಾತನಾಡುವುದಿಲ್ಲ,”ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ”ನನಗೂ ನಮ್ಮಪ್ಪ ಹೆಸರು ಕಟ್ಟಿದ್ದಾನೆ, ನಾನು ಬಡ ರೈತನ ಮಗ. ನನ್ನ ಹೆಸರು ಹೇಳೋಕೆ ನಾಚಿಕೆಯಾದರೆ ಹೇಳಬೇಡಿ ಎಂದು ವಿಧಾನಸಭೆಯಲ್ಲೇ ಹೇಳಿದ್ದೆ. ಆದರೂ ಅದೇ ಪರಿಪಾಟ ಇನ್ನೂ ಮುಂದುವರಿಸಿದ್ದಾರೆ. https://ainlivenews.com/great-job-opportunity-in-hindustan-aeronautics-limited-posting-in-bangalore/ ಮಜ್ಜಿಗೆ ಮಾರುವವನು ಎಂದು ಹೊಸದಾಗಿ ಟೀಕಿಸಲು ಪ್ರಾರಂಭಿಸಿದ್ದಾರೆ. ಮಜ್ಜಿಗೆ ಏನು ಸ್ಮಗ್ಲಿಂಗ್‌ ಗೂಡ್ಸೇ,” ಎಂದು ಪ್ರಶ್ನಿಸಿದರು. ”ವಿದ್ಯಾರ್ಥಿಯಾಗಿ ಗಂಡಸಿ ಶಾಲೆಗೆ ಸೈಕಲ್‌ನಲ್ಲಿ ಬರುತ್ತಿದ್ದಾಗ…

Read More

ಬೆಂಗಳೂರು:- ಬಹುಮಹಡಿ ಕಟ್ಟಡದಿಂದ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಆರ್ ಆರ್ ನಗರದ ಹಲಗೇವಡೆರಹಳ್ಳಿಯಲ್ಲಿ ಜರುಗಿದೆ. ಶಿವಮೊಗ್ಗ ಮೂಲದ ಮದನ್ ಶೆಟ್ಟಿ (25) ಮೃತ ಯುವಕ. ತಾನು ವಾಸವಿದ್ದ ಕಟ್ಟಡದ ನಾಲ್ಕನೇ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ್ದಾನೆ. ಸ್ನೇಹಿತರ ನಡುವೆ ಗಲಾಟೆ ಬಳಿಕ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಸ್ನೇಹಿತನ ಫೋನ್ ನಂಬರ್ ಬರೆದಿಟ್ಟು ನಾಲ್ಕು ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಘಟನೆ ಜರುಗಿದೆ. ನಾಲ್ಕು ಅಂತಸ್ತಿನಿಂದ ಜಿಗಿದ ಬಿಲ್ಡಿಂಗ್ ನಲ್ಲೇ ಮದನ್ ಶೆಟ್ಟಿ ಬಾಡಿಗೆಗೆ ಇದ್ದ. ಮದನ್ ಜೊತೆ ತೇಜು ಹಾಗೂ ಇನ್ನೊಬ್ಬ ಸ್ನೇಹಿತ ಬಾಡಿಗೆ ಇದ್ದರು ಎನ್ನಲಾಗಿದೆ.. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲೇಶ್ವರಂ ಅರಣ್ಯ ಭವನ ಚಾಲಕನಾಗಿ ಮೃತ ಯುವಕ ಕೆಲಸ ನಿರ್ವಹಿಸ್ತಿದ್ದ. ಆರ್.ಆರ್.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ.

Read More

ನಟ ರಜನಿಕಾಂತ್ ಅವರು ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ನಟಿ ಕವಿತಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಯೂಟ್ಯೂಬ್ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಜನಿಕಾಂತ್ ಜೊತೆಗಿನ ಗಾಸಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರಜನಿಕಾಂತ್ ಅವರ ಜೊತೆ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸುತ್ತಿದ್ದಾಗ ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದವು. ಮೋಹನ್‌ ಬಾಬು ಜೊತೆ ಸಿನಿಮಾದಲ್ಲಿ ನಟಿಸುವಾಗ ಈ ವಿಷಯ ತಿಳಿಯಿತು. ಈ ಸುದ್ದಿ ತಿಳಿದು ಕೋಪಗೊಂಡು ಮೋಹನ್ ಬಾಬು ಅವರ ಸಿನಿ ಜರ್ನಿ ಮೇಲೆ ಪರಿಣಾಮ ಬೀರುತ್ತದೆ ಎಂದು ಶೂಟಿಂಗ್ ನಿಲ್ಲಿಸಿದೆ ಎಂದಿದ್ದಾರೆ. ರಜನಿಕಾಂತ್ ಜೊತೆ ನನ್ನ ಮದುವೆ ಆಗಿದೆ ಈ ರೀತಿ ಸುದ್ದಿ ಪ್ರಕಟಿಸಿದ್ದ ಪತ್ರಿಕಾ ಕಚೇರಿಗೆ ಹೋಗಿ ಜಗಳವಾಡಿದ್ದೆ. ಬಳಿಕ ಪತ್ರಿಕೆಯವರು ಸ್ಪಷ್ಟೀಕರಣ ನೀಡುವುದಾಗಿ ಹೇಳಿದ್ದರು. ಆ ಬಳಿಕವಷ್ಟೇ ಈ ವದಂತಿ ಅಂತ್ಯಗೊಂಡಿತ್ತು. ಆ ಸಂದರ್ಭದಲ್ಲಿ ನಟ ರಜನಿಕಾಂತ್ ಜೊತೆ ನನ್ನ ಮದುವೆ ಆಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು ಎಂದು ನಟಿ ಕವಿತಾ ಹೇಳಿಕೊಂಡಿದ್ದಾರೆ.

Read More

ಒಳ್ಳೆಯ ಹುಡುಗ ಪ್ರಥಮ್ (Pratham) ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ಫಸ್ಟ್ ನೈಟ್ ವಿತ್ ದೇವ’ (First Night with Deva) ಎಂದು ಹಸರಿಡಲಾಗಿದೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಮಿಸ್ ಇಂಡಿಯಾ ರನ್ನರ್ ಅಪ್ ಆಗಿರುವ ಮಾನ್ಯ ಸಿಂಗ್ (Manya Singh) ಎಂಟ್ರಿ ಕೊಡುತ್ತಿದ್ದಾರೆ. ನವೆಂಬರ್ 16ರಂದು ಈ ಸಿನಿಮಾಗೆ ಚಾಲನೆ ಸಿಗಲಿದೆ. ಪ್ರಥಮ್ ಡಬಲ್ ಸಂಭ್ರಮದಲ್ಲಿದ್ದಾರೆ. ಇದೇ ತಿಂಗಳು ಅವರ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ನಡುವೆ ಹೊಸ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಕ್ಯಾಚಿ ಟೈಟಲ್ ನಿಂದಾಗಿ ಸಿನಿಮಾ ಗಮನ ಸೆಳೆಯುತ್ತಿದೆ. ಈ ಹಿಂದೆ ಕರ್ನಾಟಕದ ಅಳಿಯ ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಿದ್ದ ಪ್ರಥಮ್, ಇದೀಗ ಫಸ್ಟ್ ನೈಟ್ ಗೆ ಸಿದ್ಧವಾಗಿದ್ದಾರೆ. ಈ ಸಿನಿಮಾದ ಮೂಲಕ ಕನ್ನಡಕ್ಕೆ ಬರುತ್ತಿರುವ ಮಾನ್ಯ ಈ ಹಿಂದೆ ಫೆಮಿನಾ ಮಿಸ್ ಇಂಡಿಯಾದಲ್ಲಿ ಭಾಗಿಯಾಗಿದ್ದರು. ತಂದೆ ಆಟೋ ರಿಕ್ಷಾ ಚಾಲಕ ಎನ್ನುವ ಕಾರಣಕ್ಕಾಗಿ ಸಾಕಷ್ಟು ಸುದ್ದಿ ಆಗಿದ್ದರು. ಇದೀಗ ಕನ್ನಡ ಚಿತ್ರದ…

Read More

ಬೆಳಗಾವಿ:- ಬಿಜೆಪಿಯಲ್ಲಿ ಯಡಿಯೂರಪ್ಪಗೆ ಇದ್ದಷ್ಟು ಆಕರ್ಷಣೆ ಯಾರಿಗೂ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲವೆಂದು ಬಿಜೆಪಿ ವರಿಷ್ಠರು ನಿಯಮ ಮಾಡಿದ್ದಾರಾದರೂ ಈಗ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ. ಮೊದಲು ಕಾಂಗ್ರೆಸ್‌ ಟೀಕೆ ಮಾಡುತ್ತಿದ್ದರು. ಈಗ ಅವರ ಪಕ್ಷದಲ್ಲಿಯೂ ವರಿಷ್ಠರ ಮಕ್ಕಳು ಶಾಸಕರು, ವಿಧಾನ ಪರಿಷತ್ ಸದಸ್ಯರು ಆಗಿದ್ದಾರೆ ಎಂದ ಅವರು, ಯಡಿಯೂರಪ್ಪ ಮಗ ಎಂದಾಕ್ಷಣ ಎಲ್ಲರೂ ಅವರ ಹಿಂದೆ ಬರುವುದಿಲ್ಲ. ಅಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗಿದ್ದ ಆಕರ್ಷಣೆ ಯಾರಿಗೂ ಬರಲಾರದು. ಅದೇ ರೀತಿ ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಇನ್ನು ವಿಜಯೇಂದ್ರ ಅವರು ಕಲಿಯಬೇಕಾದದ್ದು ಬಹಳಷ್ಟಿದೆ. ಪಕ್ಷವೂ ಅವರನ್ನು ಸಾಕಷ್ಟು ಬಳಸಿಕೊಳ್ಳಬೇಕಿದೆ ಎಂದರಲ್ಲದೆ ವಿಜಯೇಂದ್ರ ನೇಮಕದಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ ಖಚಿತವಾಗಿ

Read More

ಇಸ್ಲಾಮಾಬಾದ್‌: ವಿಶ್ವಕಪ್‌ 2023 ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದೆ. ಭಾರತದಿಂದ ವಾಪಸಾದ ನಂತರ ಪಾಕಿಸ್ತಾನದ (Pakistan) ನಾಯಕ ಬಾಬರ್ ಅಜಂ (Babar Azam) ವೈಟ್ ಬಾಲ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ. ವಿಶ್ವಕಪ್‌ 2023ರ (World Cup 2023) ಟೂರ್ನಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಆಡಿದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ (New Zealand) 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಎದುರಿಸಲು ಸಾಧ್ಯವಾಗದ ಸವಾಲನ್ನೇ ಮುಂದಿಟ್ಟಿದೆ. ಒಂದು ವೇಳೆ ಕಿವೀಸ್‌ ಹಿಂದಿಕ್ಕೆ ಪಾಕ್‌ ಸೆಮಿಸ್‌ ಪ್ರವೇಶಿಸಲೇಬೇಕಾದರೆ ಪಾಕ್‌ ತಂಡ ಊಹಿಸಲು ಸಾಧ್ಯವಾಗಷ್ಟು ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ. ತಮ್ಮ ನಾಯಕತ್ವದ ಪಾಕಿಸ್ತಾನ ತಂಡ ವಿಶ್ವಕಪ್‌ ಸೆಮಿಸ್‌ನಿಂದ ಹೊರಬೀಳುವ ಭೀತಿಯಲ್ಲಿರುವ ಬಾಬರ್ ತನ್ನ ಭವಿಷ್ಯದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮಿಜ್ ರಾಜಾ ಹಾಗೂ ಅವರಿಗೆ ಹತ್ತಿರವಿರುವವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ನಾಯಕತ್ವದಲ್ಲಿ ಮುಂದುವರಿಯುವ ನಿರ್ಧಾರವು ಬಾಬರ್‌ಗೆ ಬಂದ…

Read More

ದೇಶದಲ್ಲಿ ಡೀಪ್‌ಫೇಕ್‌ (Deepfake) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ಅವರು ಡೀಪ್‌ಫೇಕ್‌ ವಿಡಿಯೋ ಸಂಚಲನ ಮೂಡಿಸಿತ್ತು. ಕತ್ರಿನಾ ಕೈಫ್ ಕೂಡ ಇದಕ್ಕೆ ತುತ್ತಾದರು. ಇದೀಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ (Sara Tendulkar) ಮತ್ತು ಕ್ರಿಕೆಟಿಗ (Cricket) ಶುಭಮನ್ ಗಿಲ್ (Shubman Gill) ಅವರ ಡೀಪ್‌ಫೇಕ್‌ ಫೋಟೋವೊಂದು ವೈರಲ್ ಆಗುತ್ತಿದೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಡೀಪ್‌ಫೇಕ್‌ ಮಾಡಿ ಇಬ್ಬರೂ ಡೇಟ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿಬಿಡಲಾಗುತ್ತಿದೆ. ಶುಭಮನ್ ಮತ್ತು ಸಾರಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತದೆ. ಇಬ್ಬರೂ ಬಹಿರಂಗವಾಗಿ ಈವರೆಗೂ ಆ ಕುರಿತು ಮಾತನಾಡಿಲ್ಲ. ಆದರೂ, ಅವರಿಬ್ಬರ ಜೊತೆಗಿನ ಫೋಟೋವನ್ನು ನಕಲು ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ (Deepfake) ಎಐ-ರಚಿಸಿದ ವೀಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದಾರೆ. ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು…

Read More

ಬೆಂಗಳೂರು: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಶತಕದ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿಗೆ (Virat Kohli) ಹೆಚ್ಚಿನ ಗೌರವ ಬೆಂಗಳೂರಿಗರು (Bengaluru) ನೀಡಬೇಕು. ಆರ್‌ಸಿಬಿಯ (RCB) ತಂಡದಲ್ಲೇ ಇರುವ ಕೊಹ್ಲಿಗೆ ಇನ್ನಷ್ಟು ಗೌರವವನ್ನು ನಮ್ಮ ಬಿಬಿಎಂಪಿ (BBMP), ಸರ್ಕಾರ ನೀಡಬೇಕು ಎಂದು ಪಾಲಿಕೆಗೆ ಮನವಿ ಬಂದಿದೆ. ವಿಶ್ವದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದೆ ತಡ, ಅವರ ಹೆಸರನ್ನು ಬೆಂಗಳೂರಿನ ಕೆಲ ರಸ್ತೆಗಳಿಗೆ ಇಡಬೇಕು ಎನ್ನುವ ಒತ್ತಾಯ ಮತ್ತೆ ಮುನ್ನೆಲೆಗೆ ಬಂದಿದೆ. ವಿರಾಟ್ ಕೊಹ್ಲಿ ಹಾಗೂ ನಮ್ಮ ಹೆಮ್ಮೆಯ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ (Dr.Puneeth Rajkumar) ಹೆಸರಿಡಲು ಪಾಲಿಕೆಗೆ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಈ ಇಬ್ಬರ ಹೆಸರನ್ನು ಎರಡು ಪ್ರತ್ಯೇಕ ರಸ್ತೆಗಳಿಗೆ ಇರಿಸುವ ಮೂಲಕ ಅಭಿಮಾನಿಗಳ ಆಶಯ ಈಡೇರಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು ಶಾಂತಿನಗರ ಬಸ್ ಟರ್ಮಿನಲ್ ಎದುರಿನ ರಸ್ತೆಗೆ ಡಾ. ಪುನೀತ್ ರಾಜ್‌ಕುಮಾರ್ ಅವರ…

Read More