ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ v/s ನೆದರ್ಲೆಂಡ್ ನಡುವೆ ವಿಶ್ವಕಪ್ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಅಂಕಪಟ್ಟಿಯಲ್ಲಿ ಭಾರತ ಈಗಾಗಲೇ ಅಗ್ರಸ್ಥಾನ ಕಾಯ್ದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ನೆದರ್ಲೆಂಡ್ ವಿರುದ್ಧದ ಪಂದ್ಯದ ಸೋಲು-ಗೆಲುವು ಭಾರತದ ಪಾಯಿಂಟ್ಸ್ ಪಟ್ಟಿಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಟೀಂ ಇಂಡಿಯಾ ಆಡುತ್ತಿರುವ ರೀತಿಯನ್ನು ನೋಡಿದರೆ, ನೆದರ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ತನ್ನ ಒಂಬತ್ತನೇ ಸತತ ಗೆಲುವು ದಾಖಲಿಸುವ ಮೂಲಕ ಅಭಿಮಾನಿಗಳಿಗೆ ದೀಪಾವಳಿಯ ಉಡುಗೊರೆ ನೀಡಲು ಪ್ರಯತ್ನಿಸಲಿದೆ. ವಾಸ್ತವವಾಗಿ ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು 12 ವರ್ಷಗಳ ನಂತರ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. 2011ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ಕೊನೆಯ ಬಾರಿ ಮುಖಾಮುಖಿಯಾಗಿದ್ದವು.
Author: AIN Author
ದಾವಣಗೆರೆ: ಖೇಣಿಗೆ ಇಟ್ಟಿದ್ದ ಅಡಿಕೆಯನ್ನ ಕಳ್ಳತನ ಮಾಡಿಕೊಂಡು ಹೋಗಿದ್ದ ಮೂವರು ಅಡಿಕೆ ಕಳ್ಳರನ್ನ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 12.50 ಲಕ್ಷ ಮೌಲ್ಯದ ಅಡಿಕೆ ಮತ್ತು ಒಂದು ಕಾರ್ ನ್ನ ಜಪ್ತಿ ಮಾಡಿದ್ದಾರೆ. ಕರೆಕಟ್ಟೆ ಗ್ರಾಮದ ಛತ್ರಪತಿ, ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಗ್ರಾಮದ ಧನಂಜಯ ನಾಯ್ಕ್ ಮತ್ತು ಗಿರೀಶ್ ಎಂಬುವರು ಬಂಧಿತರು. ಈ ಮೂವರು ವಡ್ನಾಳ ಗ್ರಾಮದ ಈಶ್ವರಪ್ಪ ಎಂಬುವರ ಅಡಿಕೆಯನ್ನ ಖೇಣಿಗೆ ಹಾಕಿದ್ದ ಸಂದರ್ಭದಲ್ಲಿ ಮೂವರು 6 ಕ್ವಿಂಟಲ್ ಅಡಿಕೆಯನ್ನ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು. ಬಳಿಕ ಈಶ್ವರಪ್ಪ ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ನೇತೃತ್ವದ ತಂಡ ಮೂವರು ಅಡಿಕೆ ಕಳ್ಳರನ್ನ ಬಂಧಿಸಿದೆ. ಮತ್ತೆ ವಿಚಾರಣೆ ನಡೆಸಿದಾಗ ಮೂವರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ 4 ಕೇಸ್ ಹಾಗೂ ಹೊಳೆಹಬ್ಬೂರು ಠಾಣೆಯಲ್ಲಿ 1 ಪ್ರಕರಣ ಇರುವುದು ಗೊತ್ತಾಗಿದೆ. ಒಟ್ಡು ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಂದ 12.50…
ಗದಗ: ದೀಪಾವಳಿಗೆ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆ ಖರೀದಿ ಬಲು ಜೋರಾಗಿದೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನಕೊಳ್ಳಲು ಜನರು ಮುಗಿಬಿದ್ದಾರೆ. ಇನ್ನು ಹಬ್ಬದ ಸಲುವಾಗಿ ಹಣ್ಣು, ಹೂವುಗಳ ಬೆಲೆ ಏರಿಕೆಯಾಗಿದೆ. ಮಾರು ಹೂವಿನ ಬೆಲೆ 50 ರೂ. ಆಗಿದೆ. ಇಂದು ನರಕ ಚತುರ್ದಶಿ, ಧನಲಕ್ಷ್ಮಿ ಪೂಜೆ , ಕೇದರೇಶ್ವರ ವೃತಕ್ಕೆ ಸಿದ್ಧತೆ ಹಿನ್ನೆಲೆಯಲ್ಲಿ ಗ್ರಾಹಕರು ಹೂ, ಹಣ್ಣುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಬೆಂಗಳೂರು: ಬೆಂಗಳೂರು : ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಸಂಭವಿಸಿದ್ದಲ್ಲಿ ಕಣ್ಣಿಗೆ, ಚರ್ಮಕ್ಕೆ ಹಾನಿಯಾಗುವುದನ್ನು ತಡೆಗಟ್ಟಲು ಆಸ್ಪತ್ರೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ. https://ainlivenews.com/people-should-not-be-fooled-by-trusting-guarantee-schemes-in-lok-sabha-elections-hdk/ ಹಾಗೆ ಚಿಣ್ಣರ ಬಾಳಲ್ಲಿ ಕತ್ತಲು ತಂದ ಬೆಳಕಿನ ಹಬ್ಬ ದೀಪಾವಳಿಯಾಗಿದ್ದು ಎಷ್ಟೇ ಜಾಗೃತಿ ಮೂಡಿಸಿದರೂ ದೀಪಾವಳಿ ವೇಳೆ ನಿಲ್ಲದ ಅನಾಹುತ ಉಂಟಾಗಿದೆ. ನಗರದಲ್ಲಿ ಪಟಾಕಿ ಸಿಡಿದು ಬಾಲಕರ ಕಣ್ಣಿಗೆ ಗಂಭೀರ ಗಾಯ ಉಂಟಾಗಿದೆ. ಹಬ್ಬ ದ ವೇಳೆ ನಿರ್ಲಕ್ಷ್ಯ ವಹಿದಕ್ಕೆ ಚಿಕ್ಕ ಬಾಲಕರ ಕಣ್ಣಿಗೆ ಗಾಯ ಬೆಂಕಿಯ ಕಿಡಿಯಿಂದ ರೆಪ್ಪೆ,ಸುತ್ತಲು ಚರ್ಮ ತಲೆ ಕೂದಲು ಸುಟ್ಟಿದೆ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ಯಲ್ಲಿ ಸದ್ಯ ಒಂದು ಪ್ರಕರಣಗಳು ದಾಖಲು ಬಾಲಕರ ಕಣ್ಣಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಚಿಕ್ಕಮಗಳೂರು: ಹಿಂದೆ ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಡಬ್ಬ ಹಿಡಿದು ರಸ್ತೆಗಿಳಿದು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದರು. ಅಂತಹಾ ಕಾಳಜಿ, ಬದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರುತ್ತಿಲ್ಲ. ಭಾಷಣಮಾಡುವುದು, ಕುಣಿಯುವುದರಲ್ಲಿಯೇ ಕಾಲವನ್ನ ದೂಡುತ್ತಿದ್ದಾರೆಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನ ಸಮರ್ಪಕವಾಗಿ ಎದುರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ರಾಜ್ಯದಲ್ಲಿ 30% ಕ್ಕಿಂತ ಕಡಿಮೆ ಮಳೆಯಾಗಿರುವ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಈಗಾಗಲೇ ಘೋಷಿಸಲಾಗಿದೆ. ಬರ ರಾಜ್ಯವನ್ನು ವ್ಯಾಪಕವಾಗಿ ಕಾಡುತ್ತಿದೆ. ಬೆಳೆ ನಷ್ಟವಾಗಿದೆ. ಮೇವಿನ ಅಭಾವ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಇದಕ್ಕೂ ಸರ್ಕಾರಕ್ಕೂ ಸಂಬಂಧಿವಿಲ್ಲವೆಂಬಂತೆ ಮುಖ್ಯಮಂತ್ರಿಗಳು ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಬರದ ನೈಜ ಸ್ಥಿತಿಯನ್ನ ಅರಿಯಲು ಬಿಜೆಪಿ (BJP) ರಾಜ್ಯ ಪ್ರವಾಸಕೈಗೊಂಡಿದೆ. ಬರದ ವರದಿಯನ್ನ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದರು.
ಬೆಂಗಳೂರು: ಕುಡಿದ ಮತ್ತಿನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ. ಗೆಳೆಯನಿಗೆ ಚಾಕು ಇರಿದು ನಾಟಕವಾಡಿದ್ದ ವ್ಯಕ್ತಿ ಬಂಧನವಾಗಿದ್ದು ಮಾದೇಶ್ ಬಂಧಿತ ಆರೋಪಿಯಾಗಿದ್ದಾನೆ. https://ainlivenews.com/this-week-drone-applauds-pratap-and-shouts-bhesh-to-the-game/ ಸ್ನೇಹಿತ ರಾಜಕುಮಾರ್ ಗೆ ಚಾಕು ಇರಿದಿದ್ದ ಆರೋಪಿಯಾಗಿದ್ದು ಇದೇ ತಿಂಗಳ 5ರಂದು ಕೆಂಗೇರಿಯಲ್ಲಿ ನಡೆದಿದ್ದ ಕೊಲೆಯಾಗಿದ್ದು ವೃತ್ತಿಯಲ್ಲಿ ಇಬ್ಬರು ಕ್ಯಾಬ್ ಚಾಲಕರಾಗಿದ್ದರು. ಎಣ್ಣೆ ಹೊಡೆಯಲೆಂದು ಮೀಟ್ ಆಗಿದ್ದ ಇಬ್ಬರು ಅಂಗಡಿಯಲ್ಲಿ ಎಣ್ಣೆ ಖರೀದಿಸಿ ನಿರ್ಜನ ಪ್ರದೇಶಕ್ಕೆ ತೆರಳಿ ಮದ್ಯ ಸೇವನೆ.. ಈ ವೇಳೆ ಶುರುವಾದ ಜಗಳದಲ್ಲಿ ಮಾತಿಗೆ ಮಾತು ಬೆಳೆದಿತ್ತು ಮಾದೇಶನ ಕುಟುಂಬ ಹಾಗೂ ಮಕ್ಕಳ ಬಗ್ಗೆ ನಿಂದಿಸಿದ್ದ ರಾಜಕುಮಾರ್.. ಈ ವೇಳೆ ತನ್ನ ಕಾರ್ ನಲ್ಲಿದ್ದ ಚಾಕುವಿನಿಂದ ಎದೆ ಭಾಗಕ್ಕೆ ಇರಿತ.. ಚಾಕುವಿನಿಂದ ಚುಚ್ಚಿ ತಾನೇ ಆಸ್ಪತ್ರೆಗೆ ಕರೆದೊಯ್ದ ಮಾದೇಶ್ ಈ ವೇಳೆ ಸಂಬಂಧಿಕರಿಗೆ ಯಾರೋ ಅಪರಿಚಿತರು ಕೃತ್ಯ ಎಸಗಿದ್ದಾಗಿ ಹೇಳಿದ್ದ ಆಸ್ಪತ್ರೆ ಬಳಿ ಆತನ ಸಾವಿನ ಸುದ್ದಿ ಏಳುತಿದ್ದಂತೆ ಪರಾರಿಯಾಗಿದ್ದ ಮಾದೇಶ.. ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೆಂಗೇರಿ…
ದೊಡ್ಮನೆಯಲ್ಲಿ ಮನೆಯಲ್ಲಿ (Bigg Boss Kannada 10) ಈಗಾಗಲೇ 5 ವಾರಗಳು ಕಳೆದಿವೆ. ಇಷ್ಟು ವಾರಗಳಲ್ಲಿ ಒಂದು ವಾರ ಮಾತ್ರ ಕಿಚ್ಚ ಸುದೀಪ್ ಅವರು ಬಳೆಗೆ ಚಪ್ಪಾಳೆ ನೀಡಿದ್ದರು. ಆದರೆ ಈಗ ವಾರ ಕಿಚ್ಚ ಸುದೀಪ್ ಅವರು ಡ್ರೋನ್ ಪ್ರತಾಪ್‌ಗೆ ಚಪ್ಪಾಳೆ ನೀಡಿದ್ದಾರೆ. ಪ್ರತಾಪ್ ಆಟಕ್ಕೆ ಭೇಷ್ ಎಂದಿದ್ದಾರೆ. ಬಿಗ್ ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಪ್ರತಾಪ್, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು. ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಅಂದು ಟ್ರೋಲ್ ಆಗಿದ್ದ, ಜೋಕರ್ ಆಗಿದ್ದ ಪ್ರತಾಪ್ ಇಂದು ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ, ಈಗ ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದಾರೆ. ಪ್ರತಾಪ್ ಅವರು ಟೀಂನಲ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಮುಂದಾಳತ್ವ ವಹಿಸಿದ್ದರ ಬಗ್ಗೆ ಸುದೀಪ್ (Sudeep) ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಮೂಲಕ ಈ ಶೋನಲ್ಲಿ ಮೊದಲ ಚಪ್ಪಾಳೆ ಸ್ಪರ್ಧಿಯಾಗಿ ಡ್ರೋನ್ ಪ್ರತಾಪ್ (Drone Prathap) ಅವರಿಗೆ ಸಲ್ಲಿದೆ. ಹೊರಗಡೆ ನನ್ನ ಕಳ್ಳ, ಸುಳ್ಳ ಅಂದವರು, ಹೀಯಾಳಿಸಿದವರು, ಈ ಮನೆಯಲ್ಲಿ ಆರಂಭದಲ್ಲಿ ಆದಂತಹ ಘಟನೆಗಳನ್ನು…
ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆಯ ಅಂಶಗಳಲ್ಲಿ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಬದುಕಿನ ಭಾಗ್ಯ ತೆರೆದಿದೆ ಎಂಬ ಭಜನೆ ಕೇಳುತ್ತಿದ್ದೇವೆ. ಇದಕ್ಕೆ ಜನ ಮರುಳಾಗಬಾರದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. https://ainlivenews.com/bjp-never-supports-family-politics-k-s-eshwarappa/ ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಗ್ಯಾರಂಟಿಗಳನ್ನು ಮಾಡೆಲ್ ಆಗಿ ಇಟ್ಟುಕೊಂಡು ಪಂಚರಾಜ್ಯ ಚುನಾವಣೆಯಲ್ಲಿ ಜಾರಿಗೆ ತರಲು ಮುಂದಾಗಿರುವುದನ್ನು ಗಮನಿಸಿದ್ದಾನೆ. ಆ ಯೋಜನೆಗಳು ಇಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಜಾರಿಯಾಗಿದೆ ಎಂಬುದನ್ನು ಜನರ ಗಮನಕ್ಕೆ ತರುತ್ತೇನೆ. 5 ರಾಜ್ಯಗಳ ಮತದಾರರು ಇದಕ್ಕೆ ಮರುಳಾಗಬಾರದು ಎಂದು ಅವರು ಹೇಳಿದ್ದಾರೆ ರಾಜ್ಯದಲ್ಲಿ ಒಬ್ಬರು ಟೆಂಪ್ರವರಿ ಮುಖ್ಯಮಂತ್ರಿ ಹಾಗೂ ಇನ್ಬೊಬ್ಬರು ಡುಪ್ಲಿಕೇಟ್ ಮುಖ್ಯಮಂತ್ರಿ ಇದ್ದಾರೆ. ಅವರು ತೆಲಂಗಾಣದಲ್ಲಿ ಗ್ಯಾರಂಟಿಗಳ ಬಗ್ಗೆ ಮಾತನಾಡಲು ಹೋಗಿ ತಮ್ಮ ಬೆನ್ನು ತಾವೇ ತಟ್ಟಿಕೊಂಡು ಮುಖಭಂಗಕ್ಕೆ ಒಳಗಾಗಿದ್ದಾರೆ. ಡುಪ್ಲಿಕೇಟ್ ಸಿಎಂ ತೆಲಂಗಾಣಲದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ 2 ಲಕ್ಷ ಉದ್ಯೋಗ ಸೃಷ್ಟಿ ಎಂದಿದ್ದಾರೆ. 2013 ರಲ್ಲಿ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿದ್ದಾಗ…
“ಕೆ.ಜಿ.ಎಫ್”, ” ಕಾಂತಾರ ” ದಂತಹ ವಿಶ್ವಪ್ರಸಿದ್ಧ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಬಹು ನಿರೀಕ್ಷಿತ ಚಿತ್ರ “ಸಲಾರ್”. ವಿಜಯ ಕಿರಗಂದೂರ್ ಅವರ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಖ್ಯಾತ ನಟ ಪ್ರಭಾಸ್ ನಾಯಕರಾಗಿ ನಟಿಸಿರುವ ” ಸಲಾರ್” ಚಿತ್ರ ಡಿಸೆಂಬರ್ 22 ರಂದು ಭಾರತದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾ ವಿತರಣೆಯನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಮಾಡುತ್ತಿದೆ. “ಕರುನಾಡಿನಾದ್ಯಂತ ವಿತರಣೆಯ ಹೊಣೆ ನಮ್ಮದು. ಅತ್ಯಮೋಘ ಅನುಭನ ನೀಡುವ ಭರವಸೆಯೊಂದಿಗೆ ನಿಮ್ಮ ಮುಂದೆ” ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ. ಹಲವು ವಿಶೇಷಗಳನ್ನೊಳಗೊಂಡಿರುವ “ಸಲಾರ್” ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಈವರೆಗೂ ನಿರ್ಮಿಸಿರುವ ಎಲ್ಲಾ ಚಿತ್ರಗಳು ಹೊಂಬಾಳೆ ಫಿಲಂಸ್ ಸಂಸ್ಥೆ ಕರ್ನಾಟಕದಲ್ಲಿ ವಿತರಣೆ ಮಾಡಿದೆ . ಬಹು ನಿರೀಕ್ಷಿತ “ಸಲಾರ್” ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆ distribution ಮಾಡಲಿದೆ
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಯಾರು ಹೆಚ್ಚಿಗೆ ಹಣ ಕೊಡುತ್ತಾರೆ ಅವರು ಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಯಾರು ಕೊಡಲ್ಲಾ ಅವರು ಮಂತ್ರಿಗಳಾಗುವುದಿಲ್ಲ. ಹೆಚ್ಚು ಹಣ ಕೊಟ್ಟು ಅವರು ಅಧಿಕಾರದಲ್ಲಿ ಇರುತ್ತಾರೆ. ಯಾವುದೆ ಪವರ್ ಶೇರಿಂಗ್ ಇಲ್ಲ. ಯಾರು ಹಣ ಕೊಡುತ್ತಾರೆ ಅವರು ಅಧಿಕಾರದಲ್ಲಿ ಇರುತ್ತಾರೆ. ಈಗಾಗಲೇ ಹೈಕಮಾಂಡ್ ಇದನ್ನೇ ಹೇಳಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು. https://ainlivenews.com/muhurta-fix-for-bjps-new-president-vijayendras-inauguration/ ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಗ್ಯಾರಂಟಿಗಳನ್ನು ಮಾಡೆಲ್ ಆಗಿ ಇಟ್ಟುಕೊಂಡು ಪಂಚರಾಜ್ಯ ಚುನಾವಣೆಯಲ್ಲಿ ಜಾರಿಗೆ ತರಲು ಮುಂದಾಗಿರುವುದನ್ನು ಗಮನಿಸಿದ್ದಾನೆ. ಆ ಯೋಜನೆಗಳು ಇಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಜಾರಿಯಾಗಿದೆ ಎಂಬುದನ್ನು ಜನರ ಗಮನಕ್ಕೆ ತರುತ್ತೇನೆ. 5 ರಾಜ್ಯಗಳ ಮತದಾರರು ಇದಕ್ಕೆ ಮರುಳಾಗಬಾರದು ಎಂದು ಅವರು ಹೇಳಿದ್ದಾರೆ.