Author: AIN Author

ಬೆಂಗಳೂರು: ಟೀಂ ಇಂಡಿಯಾ (Team India) ಬ್ಯಾಟರ್‌ಗಳ ಅಬ್ಬರಕ್ಕೆ ವಿಶ್ವದಾಖಲೆಗಳು ನುಚ್ಚುನೂರಾಗುತ್ತಿವೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI) ಭಾರತದ ಪರ 300ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದ ರೋಹಿತ್ ಶರ್ಮಾ (Rohit Sharma) ಇದೀಗ ಸಿಕ್ಸರ್‌ನಿಂದಲೇ ಮತ್ತೊಂದು ದಾಖಲೆ ಸಿಡಿಸಿದ್ದಾರೆ. ಭಾನುವಾರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ ನೊದಲು ಬ್ಯಾಟಿಂಗ್‌ ಮಾಡಿತು. ಆರಂಭದಿಂದಲೇ ಸಿಕ್ಸರ್‌, ಬೌಂಡರಿ ಅಬ್ಬರಿಸಿದ ರೋಹಿತ್‌ ಶರ್ಮಾ 54 ಎಸೆತಗಳಲ್ಲಿ 61 ರನ್ ಬಾರಿಸಿದರು. ಈ ವೇಳೆ 8 ಬೌಂಡರಿ, 4 ಸಿಕ್ಸರ್‌ಗಳನ್ನೂ ಸಿಡಿಸಿದರು. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ನಂ.1 ಬ್ಯಾಟರ್ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ

Read More

ಬೆಂಗಳೂರು: ಚಲಿಸುತ್ತಿದ್ದBMTC ಬಸ್ಸಿನಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅವಘಡ ತಪ್ಪಿದೆ. https://ainlivenews.com/what-kumaraswamy-knows-about-our-guarantee/ ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್​ನಲ್ಲಿ ಈ ಘಟನೆ ನಡೆದಿದ್ದು,ಕೂಡಲೇ ಚಾಲಕ ಸೋಮಶೇಖರ್ ಎಂಬುವವರು ಬಸ್ಸಿನಲ್ಲಿದ್ದ ಸಿಲಿಂಡರ್ ಬಳಿಸಿ ಬೆಂಕಿ ನಂದಿಸಿದ್ದಾರೆ.

Read More

ಬೆಂಗಳೂರು: ಸಾಲದಿಂದ ದೇಶ ದಿವಾಳಿಯಾಗಿದೆ ಎಂಬ ಸಿಎಂ ಹೇಳಿಕೆ ವಿಚಾರ ‘ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಸಿಎಂ ಸಿದ್ದರಾಮಯ್ಯಗೆ ಇಲ್ಲವೆಂದು ಹೆಚ್​ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.   https://ainlivenews.com/what-kumaraswamy-knows-about-our-guarantee/ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ನನ್ನ 20 ತಿಂಗಳ ಅವಧಿಯಲ್ಲಿ 3,500 ಕೋಟಿ ಸಾಲ ಮಾಡಿದ್ದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ 2 ಲಕ್ಷ 45 ಸಾವಿರ ಕೋಟಿ ಸಾಲ ಮಾಡಿತ್ತು. ಈಗ 5 ಲಕ್ಷ 71 ಸಾವಿರ ಕೋಟಿಗೂ ಅಧಿಕ ಸಾಲ ಇದೆ. ನಿಮಗೆ ಪ್ರಧಾನಿ ಮೋದಿ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಯಾರು ಹೆಚ್ಚಿಗೆ ಹಣ ಕೊಡುತ್ತಾರೆ ಅವರು ಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಯಾರು ಕೊಡಲ್ಲಾ ಅವರು ಮಂತ್ರಿಗಳಾಗುವುದಿಲ್ಲ. ಹೆಚ್ಚು ಹಣ ಕೊಟ್ಟು ಅವರು ಅಧಿಕಾರದಲ್ಲಿ ಇರುತ್ತಾರೆ. ಯಾವುದೆ ಪವರ್ ಶೇರಿಂಗ್ ಇಲ್ಲ. ಯಾರು ಹಣ ಕೊಡುತ್ತಾರೆ ಅವರು ಅಧಿಕಾರದಲ್ಲಿ ಇರುತ್ತಾರೆ. ಈಗಾಗಲೇ…

Read More

ಡೆಹ್ರಾಡೂನ್: ಸುರಂಗ ನಿರ್ಮಾಣ ಕಾರ್ಯದ ವೇಳೆ ಭೂಕುಸಿತ ಉಂಟಾಗಿ 36 ಕಾರ್ಮಿಕರು ಸಿಲುಕಿರುವ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದಿದೆ. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಣ್ಣಿನಡಿಗೆ ಸಿಲುಕಿರುವರ ರಕ್ಷಣೆಗಾಗಿ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಿ ಆಮ್ಲಜನಕ ಪೈಪ್‍ಗಳನ್ನು ಒಳಗೆ ಕಳುಹಿಸಲಾಗಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಕಾರ್ಯಾಚರಣೆ ಇನ್ನೂ 2-3 ದಿನಗಳ ಕಾಲ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾದಿಂದ ದಾಂಡಲ್‍ಗಾಂವ್‍ಗೆ ಸಂಪರ್ಕಿಸುವ ಸುರಂಗದಲ್ಲಿ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸುರಂಗದಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More

ಮೈಸೂರು: ಜೂನ್ ನಂತರ ಬಿವೈ ವಿಜಯೇಂದ್ರ ಅಧ್ಯಕ್ಷರಾಗಿ ಉಳಿಯಲ್ಲ. ಲಿಂಗಾಯತರು ಬಿಜೆಪಿ ಬಿಟ್ಟಿದ್ದಾರೆ ಅಂತ ಅಮಿತ್ ಶಾ ಮೋದಿ ಮಾಡಿರುವ ನಾಟಕ. ನಾಟಕದ ಸ್ಕ್ರೀಪ್ಟ್ ರಚನೆ ಮಾಡಿ ಅಧ್ಯಕ್ಷ ಸ್ಥಾನಕೊಟ್ಟಿದ್ದಾರೆ‌. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಜೂನ್ ನಂತರ ಬಿಜೆಪಿ ಅಧ್ಯಕ್ಷರಾಗಲು ಬಿಡಲ್ಲ. ಬಿವೈ ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷ. ಲಿಂಗಾಯತ ಸಮುದಾಯವನ್ನು ಸಮಾಧಾನ ಮಾಡಲು ಆಡಿರುವ ನಾಟಕ. ನಾಟಕವನ್ನ ನಂಬಿ ಲಿಂಗಾಯತರು ಯಾಮಾರಬೇಡಿ ಎಂದು ಕೆ.ಪಿ.ಸಿ.ಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.

Read More

ದೊಡ್ಮನೆ (Bigg Boss Kannada 10) ಆಟ 5ನೇ ವಾರ ಪೂರೈಸಿದೆ. ಕಳೆದ ವಾರ ಬಳೆ ಜಗಳ ಹೈಲೆಟ್‌ ಆಗಿದ್ರೆ, ಈ ವಾರ ಉಸ್ತುವಾರಿ ನಿರ್ಣಯ ಬೇಸರ ತರಿಸಿದೆ. ಇದರ ನಡುವೆ ಇಶಾನಿ (Eshani) ಅವರು ಸುದೀಪ್ (Sudeep) ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೈಕಲ್ (Michael) ಅವರು ಎಲ್ಲ ತಪ್ಪಿಗೆ ನಾನೇ ಕಾರಣ ಅಂತ ಹೇಳಿದ್ದಕ್ಕೆ ಬೇಸರ ಆಯ್ತು ಎಂದು ಈಶಾನಿ ಕಣ್ಣೀರು ಹಾಕಿದ್ದಾರೆ. ನನ್ನ ಹಳೇ ರಿಲೇಶನ್‌ಶಿಪ್‌ನಲ್ಲಿಯೂ ನಾನೇ ತಪ್ಪು ಮಾಡಿದೆ ಅಂತ ಬಾಯ್‌ಫ್ರೆಂಡ್ಸ್ ಹೇಳಿದ್ರು, ನನಗೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ಇಲ್ಲ ಎಂದು ಇಶಾನಿ ಕಣ್ಣೀರಿಟ್ಟಿದ್ದಾರೆ. ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಅಂತ ಈಶಾನಿ, ಮೈಕಲ್ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಆಟವೊಂದರಲ್ಲಿ ಇಶಾನಿ, ಮೈಕಲ್ ಎರಡು ತಂಡಗಳಿಗೆ ಉಸ್ತುವಾರಿಯಾಗಿದ್ದರು. ಈಶಾನಿ ಉಳಿಯಬೇಕು ಅಂತ ಮೈಕಲ್ ಅವರು ತಮ್ಮ ಟೀಂ ಬಿಟ್ಟು, ಇಶಾನಿ ಟೀಂಗೆ ಹೇಗೆ ಆಟ ಆಡಬೇಕು, ತಂತ್ರ ಮಾಡಬೇಕು ಅಂತ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೆ…

Read More

ಬೆಂಗಳೂರು: ಮೊದಲು ಡಿಸಿಎಂ ಡಿ.ಕೆ.ಶಿವಕುಮಾರ್‌  ಅವರು ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು ಆ ನಂತರ  ಮಾದ್ಯಮಗಳ ಜೊತೆ ಮಾತನಾಡಿದ ಅವರು,  ಗ್ಯಾರಂಟಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು. ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೆ ಏನು ಸಂಬಂಧ..?. ನಮ್ಮ ಗ್ಯಾರಂಟಿ ಬಗ್ಗೆ ಕುಮಾರಸ್ವಾಮಿಗೆ ಏನು ಗೊತ್ತಿದೆ?. ಅವರೇನು ಫಲಾನುಭವಿನಾ..?. ಅವರ ಪಂಚರತ್ನ ಯೋಜನೆ ಇಂಪ್ಲಿಮೆಂಟ್ ಮಾಡಲು ಆಗಲಿಲ್ಲ. ಜನರಿಗೆ ತಲುಪಿದೇಯೋ ಇಲ್ಲ ಅಂತ ಮತದಾರರ ಕೇಳಬೇಕು. ನಾನು ಚನ್ನಪಟ್ಟಣ ಮತದಾರರ ಜೊತೆ ನಾನೇ ಮಾತನಾಡಿದ್ದೇನೆ. ಅವರನ್ನು ಕೇಳಿದ್ರೆ ಕುಮಾರಸ್ವಾಮಿಗೆ ಗೊತ್ತಾಗುತ್ತೆ. 5% ಮಾತ್ರ ಗೃಹಲಕ್ಷ್ಮೀ ತೊಂದರೆ ಆಗಿದೆ ಎಂದರು. ಪಾಪ ಅವರು ಮಾತನಾಡುತ್ತಿದ್ದಾರೆ ಮಾತನಾಡಲಿ. ಬಡವರು, ಹೆಣ್ಣುಮಕ್ಕಳ ನೋವು ಗೊತ್ತಿಲ್ಲ. ಖುಷಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ. ದಸರಾಗೆ ಬಂದಿದ್ದ ಜನರು ನೋಡಿದ್ರೆ ಗೋತ್ತಾಗುತ್ತೆ. ಕುಮಾರಸ್ವಾಮಿ ಬಹಳ ಅಜೆರ್ಂಟ್ ಅಲ್ಲಿ ಇದ್ದಾರೆ. ಸುಮ್ಮನೆ ಸಚಿವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ವಿಜಯೇಂದ್ರ ಬಿಜೆಪಿ ರಾಜ್ಯಧ್ಯಕ್ಷರಾಗಿದ್ದಾರೆ. ವಿಜಯೇಂದ್ರಗೆ ಒಳ್ಳೆಯದಾಗಲಿ ಹಾಗೆಯೇ ಕುಮಾರಸ್ವಾಮಿಗೂ…

Read More

ಪ್ರಿಯಾಂಕಾ ಹುಟ್ಟುಹಬ್ಬಕ್ಕೆ ‘ಕ್ಯಾಪ್ಚಾರ್’ ತಂಡದಿಂದ ಬಿಗ್ ಸರ್ಪ್ರೈಸ್: ಡ್ರೋಣ್ ಮೂಲಕ ರಿವೀಲ್ ಆಯ್ತು ‘ಕ್ಯಾಪ್ಚರ್’ ಪೋಸ್ಟರ್ ವಿಭಿನ್ನವಾಗಿ ಪ್ರಿಯಾಂಕಾ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ ‘ಕ್ಯಾಪ್ಚರ್’ ತಂಡ: ಅಭಿಮಾನಿಗಳ ಜೊತೆ ರಿಯಲ್ ಸ್ಟಾರ್ ಪತ್ನಿಯ ಬರ್ತಡೇ ಸೆಲೆಬ್ರೇಶನ್ ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಇಂದು (ನವೆಂಬರ್ 12) ಹುಟ್ಟುಹಬ್ಬದ ಸಂಭ್ರಮ. ರಿಯಲ್ ಸ್ಟಾರ್ ಪತ್ನಿಗೆ ಅಭಿಮಾನಿಗಳಿಂದ ಶುಭಾಶಯಗಳು ಮಹಾಪೂರವೇ ಹರಿದು ಬರುತ್ತಿದ್ದು ಸಾಮಾಜಿಕ ಜಾಣತನದಲ್ಲಿ ಪೋಸ್ಟರ್ ಶೇರ್ ಮಾಡಿ ಸಂಭ್ರಮಿಸುತಿದ್ದಾರೆ. ಪ್ರಿಯಾಂಕಾ ಅವರು ಇಂದು ಅಭಿಮಾನಿಗಳು ಹಾಗೂ ಕುಟುಂಬದ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕ್ಯಾಪ್ಚರ್ ಸಿನಿಮಾತಂಡ ಪ್ರಿಯಾಂಕಾ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದರು. ವಿಭಿನ್ನವಾದ ಕೇಕ್ ತಯಾರಿಸಿದ್ದ ಕ್ಯಾಪ್ಚರ್ ತಂಡ ಪ್ರಿಯಾಂಕ ಅವರಿಗೆ ಬಿಗ್ ಸರ್ಪ್ರೈಸ್ ನೀಡಿದರು‌. ಇದೇ ಸಮಯದಲ್ಲಿ ಕ್ಯಾಪ್ಚರ್ ತಂಡದಿಂದ ಪ್ರಿಯಾಂಕ ಅವರ ಮತ್ತೊಂದು ಪೋಸ್ಟರ್ ಅನ್ನು ರಿಲೀಸ್ ಮಾಡಲಾಯಿತು. ಡ್ರೋನ್ ಮೂಲಕ ಚಿತ್ರದ 2ನೇ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಮತ್ತಷ್ಟು ವಿಭಿನ್ನವಾಗಿಸಿದರು. ಅದ್ದೂರಿಯಾಗಿ…

Read More

ತುಮಕೂರು: ಸಿದ್ಧಗಂಗಾ ಮಠಕ್ಕೆ ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು. ವಿಜಯೇಂದ್ರ ಅವರಿಗೆ ಯಲಹಂಕ ಶಾಸಕ ವಿಶ್ವನಾಥ್, ಸುರೇಶ್ ಗೌಡ, ಜ್ಯೋತಿ ಗಣೇಶ್, ಪ್ರೀತಂಗೌಡ ಸೇರಿ ಹಲವರು ಸಾಥ್ ನೀಡಿದರು. ಈ ವೇಳೆ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಬಿ.ವೈ.ವಿಜಯೇಂದ್ರ ಎಂದು ಘೋಷಣೆ ಕೂಗಿದರು. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/

Read More

ತುಮಕೂರು: ನಾನು ವಿಜಯೇಂದ್ರ ಎನ್ನುವುದಕ್ಕಿಂತ ಯುವಕರಿಗೆ ಅವಕಾಶ ಕೊಡಬೇಕು ಎಂದು ನನಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಬಿಜೆಪಿಯ ನೂತನ ಸಾರಥಿ ಬಿ.ವೈ ವಿಜಯೇಂದ್ರ (B.Y Vijayendra) ಹೇಳಿದ್ದಾರೆ. ತುಮಕೂರಿನ (Tumakuru) ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಬಿಜೆಪಿ (BJP) ಕಚೇರಿಯಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕು ಎನ್ನುವ ಕುರಿತಾಗಿ ಭಾರೀ ಚರ್ಚೆಗಳು ನಡೆದಿವೆ. ಅಂತಿಮವಾಗಿ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ನಮ್ಮ ಪಕ್ಷ ರಾಷ್ಟ್ರೀಯ ನಾಯಕರಿಗೆ ಕೊಡುವ ಗೌರವವನ್ನು ಬೂತ್ ಕಾರ್ಯಕರ್ತನಿಗೂ ಕೊಡುತ್ತದೆ.  ಇದು ಬಿಜೆಪಿಯ ಸಂಸ್ಕೃತಿಯಾಗಿದೆ ಎಂದಿದ್ದಾರೆ. ಇಡೀ ಜಗತ್ತೇ ನರೇಂದ್ರ ಮೋದಿ ಅವರನ್ನು ಮೆಚ್ಚಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಎಲ್ಲಾ ಹಿರಿಯರ ವಿಶ್ವಾಸದೊಂದಿಗೆ ಪಕ್ಷ ಮುನ್ನಡೆಸಬೇಕು. ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಪಕ್ಷ ಸಂಘಟನೆ ಮಾಡಿ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡ ಬೇಕಿದೆ. ಅತ್ಯಲ್ಪ ಕಾಲದಲ್ಲೇ ಜನಪ್ರಿಯತೆ ಕಳೆದುಕೊಂಡ ಸರ್ಕಾರ ಇದಾಗಿದೆ…

Read More