ಚಂಡೀಗಢ: ವಿಷಯುಕ್ತ ಮದ್ಯ ಸೇವಿಸಿ 19 ಮಂದಿ ಸಾವನ್ನಪ್ಪಿದ ಘಟನೆ ಹರಿಯಾಣದಲ್ಲಿ (Haryana) ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಮುಖಂಡ ಮತ್ತು ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕನ ಪುತ್ರರು ಸೇರಿದಂತೆ ಏಳು ಮಂದಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಯಮುನಾ ನಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಘಟನೆ ಬಳಿಕ ಪೊಲೀಸರು ದಾಳಿ ನಡೆಸಿ ಕಾರ್ಖಾನೆ ಒಂದರಲ್ಲಿ ತಯಾರಿಸಿದ್ದ 200 ಕ್ರೇಟ್ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಜನ ಸಾವಿಗೀಡಾದ ಪ್ರದೇಶಗಳಿಗೆ ಇದೇ ಮದ್ಯ ಸರಬರಾಜಾಗಿದೆ ಎಂಬುದು ಖಚಿತವಾಗಿದೆ. ದಾಳಿ ನಡೆಸಿದ ವೇಳೆ 14 ಖಾಲಿ ಡ್ರಮ್‍ಗಳು ಮತ್ತು ಅಕ್ರಮ ಮದ್ಯ ತಯಾರಿಸಲು ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಮದ್ಯ ದಂಧೆಕೋರರ ವಿರುದ್ಧ ದನಿ ಎತ್ತಲು ನಮಗೆ ಜೀವ ಭಯವಿದೆ ಎಂದು ಕೆಲವು ಗ್ರಾಮಸ್ಥರು ಮಾಹಿತಿ ನೀಡಲು ಹಿಂಜರಿದಿದ್ದಾರೆ. ಜನ ಸಾವಿಗೀಡಾದ ನಂತರ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ರಾಜಕೀಯ ಪಕ್ಷಗಳು…
Author: AIN Author
ವಾಷಿಂಗ್ಟನ್: ಅಮೆರಿಕದ (America) ಇಂಡಿಯಾನಾದಲ್ಲಿ ಫಿಟ್‌ನೆಸ್ ಸೆಂಟರ್‌ನಲ್ಲಿ (Fitness Center) ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ಮೂಲದ ವಿದ್ಯಾರ್ಥಿ (Indian Student) ವರುಣ್ ರಾಜ್ ಪುಚಾ (24) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಆತ ವ್ಯಾಸಂಗ ಮಾಡುತ್ತಿದ್ದ ವಿಶ್ವವಿದ್ಯಾಲಯ ತಿಳಿಸಿದೆ. ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವರುಣ್ (Varun Raj Pucha) ಅಕ್ಟೋಬರ್ 29 ರಂದು ಸಾರ್ವಜನಿಕ ಜಿಮ್‌ನಲ್ಲಿದ್ದಾಗ ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ (24) ಎಂಬಾತ ಆತನ ತಲೆಗೆ ಚಾಕುವಿನಿಂದ ಇರಿದಿದ್ದ. ಘಟನೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ವಿದ್ಯಾರ್ಥಿ ಅಗಲಿಕೆ ಬಳಿಕ ಮಾಹಿತಿ ನೀಡಿರುವ ವಾಲ್ಪರೈಸೊ ವಿಶ್ವವಿದ್ಯಾಲಯ, ವರುಣ್ ರಾಜ್ ಪುಚ್ಚಾ ಅಗಲಿಕೆ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಕ್ಯಾಂಪಸ್ ಸಮುದಾಯದ ಭಾಗವಾಗಿದ್ದ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಈ ನಷ್ಟಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಾವು ಅಗಲಿದ ವಿದ್ಯಾರ್ಥಿ ವರುಣ್‌ನ ಕುಟುಂಬ ಮತ್ತು ಸ್ನೇಹಿತರೊಂದಿಗಿದ್ದೇವೆ ಎಂದು ಹೇಳಿದೆ.
ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಇಂದು (ನವೆಂಬರ್ 12) ಹುಟ್ಟುಹಬ್ಬದ ಸಂಭ್ರಮ. ರಿಯಲ್ ಸ್ಟಾರ್ ಪತ್ನಿಗೆ ಅಭಿಮಾನಿಗಳಿಂದ ಶುಭಾಶಯಗಳು ಮಹಾಪೂರವೇ ಹರಿದು ಬರುತ್ತಿದ್ದು ಸಾಮಾಜಿಕ ಜಾಣತನದಲ್ಲಿ ಪೋಸ್ಟರ್ ಶೇರ್ ಮಾಡಿ ಸಂಭ್ರಮಿಸುತಿದ್ದಾರೆ. ಪ್ರಿಯಾಂಕಾ ಅವರು ಇಂದು ಅಭಿಮಾನಿಗಳು ಹಾಗೂ ಕುಟುಂಬದ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕ್ಯಾಪ್ಚರ್ ಸಿನಿಮಾತಂಡ ಪ್ರಿಯಾಂಕಾ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದರು. ವಿಭಿನ್ನವಾದ ಕೇಕ್ ತಯಾರಿಸಿದ್ದ ಕ್ಯಾಪ್ಚರ್ ತಂಡ ಪ್ರಿಯಾಂಕ ಅವರಿಗೆ ಬಿಗ್ ಸರ್ಪ್ರೈಸ್ ನೀಡಿದರು.
“ಸಜನಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, “ಗಾಳಿಪಟ” ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ನಟಿ ಶರ್ಮಿಳಾ ಮಾಂಡ್ರೆ ಈಗ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಶರ್ಮಿಳಾ ಮಾಂಡ್ರೆ ಹೊತ್ತಿಕೊಂಡಿದ್ದಾರೆ. ಈ ಹಿಂದೆ “ಮುಂದಿನ ನಿಲ್ದಾಣ” ಎಂಬ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಭಾರದ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಾನು ನಿರ್ದೇಶಿಸಿದ್ದ “ಮುಂದಿನ ನಿಲ್ದಾಣ” ಚಿತ್ರ ತೆರೆಕಂಡು ಎಲ್ಲರ ಮೆಚ್ಚುಗೆ ಗಳಿಸಿತು ಎಂದು ಮಾತನಾಡಿದ ನಿರ್ದೇಶಕ ವಿನಯ್ ಭಾರದ್ವಾಜ್, “ಸಿಲ ನೋಡಿಗಳಿಲ್” ಚಿತ್ರ ನನಗೆ ಸಿಗಲು “ಲೂಸಿಯಾ” ಪವನ್ ಕುಮಾರ್ ಕಾರಣ. ಅವರ ಮೂಲಕ ನನಗೆ ಶರ್ಮಿಳಾ ಮಾಂಡ್ರೆ ಅವರ ಪರಿಚಯವಾಯಿತು. ಮಲೇಷಿಯಾದಲ್ಲಿ ಖ್ಯಾತ ಆರ್ ಜೆ ಆಗಿ ಕಾರ್ಯನಿರ್ವಹಿಸುತ್ತಿರುವ “ಪುನ್ನಗೈ” ಪೂ ಗೀತಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಮೂರು ಪ್ರಮುಖ ಪಾತ್ರಗಳ ಸುತ್ತ ಈ ಚಿತ್ರದ…
ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ ಹಿನ್ನಲೆ ಬಿಜೆಪಿಯಲ್ಲಿ ಕರೆಂಟ್ ಪಾಸ್ ಆಗಿದ್ದು, ಹೊಸ ಹುಮ್ಮಸ್ಸು, ಸಂಚಲನ ಮೂಡಿದೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರಲ್ಲಿ ಯುಗಾದಿಗೆ ರಾಜ್ಯಾಧ್ಯಕ್ಷರಾಗಿ ಬಿಎಸ್ ವೈಗೆ ಬಂಪರ್ ಕೊಡುಗೆ ಸಿಕ್ಕಿತ್ತು. ದೀಪಾವಳಿಗೆ ಬಿವೈ ವಿಜಯೇಂದ್ರಗೆ ಬಂಪರ್ ಸಿಕ್ಕಿದೆ.. ವಿಜಯೇಂದ್ರ ಸಂಘಟನಾ ಚತುರ ಆದ್ದರಿಂದ ಎಲ್ಲರು ವಿಜಯೇಂದ್ರ ಒಳ್ಳೆಯ ಆಯ್ಕೆಯಾಗಿದೆ ಎಂದಿದ್ದಾರೆ.. ಚಿಕ್ಕ ವಯಸ್ಸಿನಲ್ಲಿ ಮಹತ್ತರ ಜವಾಬ್ದಾರಿ ಸಿಕ್ಕಿದೆ ಎಂದರು. ಕುಟುಂಬ ರಾಜಕಾರಣ ಎಂದು ಕಾಂಗ್ರೆಸ್‌ನ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡ್ತಾರೆ. ಅವರಿಗೆ ಟೀಕೆ ಮಾಡುವ ನೈತಿಕ ಹಕ್ಕು ಇಲ್ಲ.ನೆಹರೂರವರಿಂದ ಹಿಡಿದು ರಾಹುಲ್ ಗಾಂಧಿವರೆಗೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ವಿಜಯೇಂದ್ರ ಪಕ್ಷದಲ್ಲಿ ಹಲವು ಜವಾಬ್ದಾರಿ ವಹಿಸಿಕೊಂಡು ಬಂದಿದ್ದಾರೆ. ಬಿಜೆಪಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬಂದವರು. ಯಡಿಯೂರಪ್ಪ ಪುತ್ರ ಎಂದು ಅವರಿಗೆ ಕೊಟ್ಟಿಲ್ಲ, ಅವರ ಸಾಮರ್ಥ್ಯ ನೋಡಿ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಎಂದು ನಿಮಗೆ…
ವಿಜಯಪುರ: ಯುವಕರಿಗೆ ಪ್ರೋತ್ಸಾಹ ಕೊಡುತ್ತೆ ಎಂಬುದನ್ನು ಬಿಜೆಪಿ ತೋರಿಸಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಗೆ ಮಾಜಿ ಸಚಿವ ಗೋವಿಂದ ಕಾರಜೋಳ ಶುಭ ಕೋರಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಮ್ಮ ಪಕ್ಷ ಸರ್ಕಾರವನ್ನು ಕಳೆದುಕೊಂಡಿದೆ. ಹೀಗಾಗಿ ಪಕ್ಷದ ವರಿಷ್ಠರು ಅಳೆದು ತೂಗಿ ಯುವನಾಯಕ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಬಿಜೆಪಿ ಕೇಂದ್ರ ವರಿಷ್ಠರು ಲೆಕ್ಕಾಚಾರ ಮಾಡಿಯೆ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಸಕ್ರಿಯ ರಾಜಕೀಯದಲ್ಲಿರುವ ಆಕಾಂಕ್ಷಿಗಳು ಅವಕಾಶ ತಪ್ಪಿದ್ದಕ್ಕೆ ಸಹಜವಾಗಿ ಅಸಮಾಧಾನ ವ್ಯಕ್ತಪಡಿಸುವುದು ಸಹಜ ಪ್ರಕ್ರಿಯೆ ಎಂದು ಹೇಳಿದರು. ಮನೆಯಲ್ಲಿ ಅನುಭವಿ ತಂದೆ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ವಿಜಯೇಂದ್ರ ಎಲ್ಲ ಸಮುದಾಯದ ನಾಯಕರನ್ನು ಒಗ್ಗೂಡಿಸಿ ಕರೆದೊಯ್ಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2013 ರಲ್ಲಿ ಯಶಸ್ವಿಯಾಗಿದ್ದ ಸಿದ್ದರಾಮಯ್ಯ ತಮ್ಮದೇ ಸರ್ಕಾರವಿದ್ದರೂ 2018ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಕಾರಜೋಳ, ಆಯಾ ಕಾಲಘಟ್ಟದಲ್ಲಿ ಜನರ ಮನಸ್ಥಿತಿಯೂ ಬದಲಾಗುತ್ತದೆ.…
ರಾಜ್ಯದ ಬಿಜೆಪಿ ನೂತನ ಅಧ್ಯಕ್ಷರಾಗಿ ವಿಜಯೇಂದ್ರರ ನೇಮಕ ಕಾರ್ಯಕರ್ತರಿಗೆ ಉತ್ಸಾಹ ಇಮ್ಮಡಿಗೊಳಿಸಿದೆ. ಅಷ್ಟೇಅಲ್ಲ ಹೊಸ ಅಲೆ ಸೃಷ್ಟಿಸಿದೆ ಅಂತ ಬಿಜೆಪಿ ರಾಜ್ಯ ವಕ್ತಾರ ಹಾಗೂ ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ. ಪಕ್ಷವನ್ನು ವ್ಯಾಪಕವಾಗಿ ಸಂಘಟಿಸುವ ಅದರಲ್ಲೂ ಕ್ರಿಯಾಶೀಲತೆ ಉಳ್ಳವರನ್ನು ನೇಮಕ ಮಾಡಬೇಕು ಅನ್ನೋದು ಕಾರ್ಯಕರ್ತರ ಬಹುದಿನಗಳ ಬಯಕೆ ಆಗಿತ್ತು. ಪಕ್ಷದ ವರಿಷ್ಠ ಮಂಡಳಿ ಈ ಮೂಲಕ ಸಾಕಾರಗೊಳಿದೆಯಲ್ಲದೇ ಒಬ್ಬ ಸೂಕ್ತ ಯುವ ನಾಯಕನಿಗೆ ಅಧ್ಯಕ್ಷರನ್ನಾಗಿ ಗುರುತಿಸಿದ್ದು ಕೂಡ ಒಂದು ಆಶಾದಾಯಕ ಸಂಗತಿ ಎಂದು ಮಾಧ್ಯಮ ಹೇಳಿಕೆಯಲ್ಲಿ ತೆಲ್ಕೂರ್ ತಿಳಿಸಿದ್ದಾರೆ.
ಬಳ್ಳಾರಿ: ಬಳ್ಳಾರಿ ತಾಲೂಕಿನ ಡಿ.ಕಗ್ಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ 4 ಶಿಕ್ಷಕರಿಗೆ ಏಕಕಾಲದಲ್ಲಿ ವರ್ಗಾವಣೆಗೊಂಡ ಹಿನ್ನೆಲೆ, ಡಿಜೆ ಹಾಕಿ, ಬೆಳ್ಳಿ ರಥದಲ್ಲಿ ಮೈದಾನದಿಂದ ಡಿ.ಕಗ್ಗಲ್ ಗ್ರಾಮದ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮೆರವಣಿಗೆ ಮಾಡುವ ಮೂಲಕ ಅದ್ದೂರಿ ಬೀಳ್ಕೊಡುಗೆ ನೀಡಿದ್ದಾರೆ. ಏಕಕಾಲದಲ್ಲಿ ವರ್ಗಾವಣೆಗೊಂಡ ಒಂದೇ ಶಾಲೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ 4 ಶಿಕ್ಷಕರಿಗೆ ವಿಶೇಷ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಗಿದೆ. ಡಿ.ಕೆ.ವಿನಯ್, ರಾಘವ, ಸಾಗರ್, ಬಸಪ್ಪ ವರ್ಗಾವಣೆಗೊಂಡ ನಾಲ್ವರು ಶಿಕ್ಷಕರು. ಬಳ್ಳಾರಿ ತಾಲೂಕಿನ ಡಿ.ಕಗ್ಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಈ 4 ಶಿಕ್ಷಕರ ಬಿಳ್ಕೋಡಿಗೆ ಸಮಾರಂಭಕ್ಕೆ ಗ್ರಾಮದ ಜನರು ಪಾಲ್ಗೊಂಡು ಶಿಕ್ಷಕರಿಗೆ ಸನ್ಮಾನಿಸಿ ಸಂಭ್ರಮದಿಂದ ಬಿಳ್ಕೋಡಿಗೆ ಸಮಾರಂಭವನ್ನು ವಿದ್ಯಾರ್ಥಿಗಳ ಜೊತೆಗೂಡಿ ನೇರವೇರಿಸಿದರು.
ಹುಬ್ಬಳ್ಳಿ: ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದುಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಅವರು, https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ‘ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಗಡ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ರಾಜಸ್ಥಾನದ ಚುನಾವಣೆಯ ಉಸ್ತುವಾರಿ ಇದ್ದೆ. ಈ ಹಿನ್ನಲೆ ಮೂರು ರಾಜ್ಯಗಳಲ್ಲಿ ಪೂರ್ತಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದು ಪಂಚ ಗ್ಯಾರಂಟಿ ಯೋಜನೆಗಳು. ಇದನ್ನೆ ಪಂಚರಾಜ್ಯಗಳ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಳ್ಳೊಕೆ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಇದಕ್ಕೆ ಬ್ರೇಕ್ ಹಾಕೋದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ. ತೆಲಾಂಗಣದಲ್ಲಿ ಸಿಎಂ, ಡಿಸಿಎಂ ಪ್ರಚಾರ ಮಾಡಿದಕ್ಕೆ HDK ಟಾಂಕ್ ಕೊಟ್ಟಿದ್ದು ಡ್ಯೂಪ್ಲಿಕೇಟ್ ಸಿಎಂ ಅಂತ ಡಿಕೆಶಿಯನ್ನ ವ್ಯಂಗ್ಯವಾಡಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹ್ಯೂಬ್ಲೆಟ್ ವಾಚ್ ನ ಅಪ್ಡೇಟ್ ವರ್ಷನ್ ಬಾಂಬಗ ಸಿಡಿಸಿರೋದು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವಂತಿದೆ.. https://ainlivenews.com/hdk-sparks-the-cms-statement-that-the-country-is-bankrupt-due-to-debt/ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಮಾಜಿ ಸಿಎಂ ಕುಮಾರಸ್ವಾಮಿ ಒಂದಲ್ಲಾ ಒಂದು ಆರೋಪಗಳನ್ನ ಮಾಡ್ತಾ ಸರ್ಕಾರವನ್ನ ಇಕ್ಕಟಿಗೆ ಸಿಲುಕಿಸ್ತಿದ್ದಾರೆ. ವರ್ಗಾವಣೆ ದಂದೆಯನ್ನ ಸರ್ಕಾರದ ವಿರುದ್ದ ಹೋರಾಟ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಕುಮಾರಸ್ವಾಮಿ ಇದೀಗ ಗ್ಯಾರಂಟಿ ಯೋಜನೆಗಳನ್ನ ಸಮರ್ಪಕವಾಗಿ ಜಾರಿಗೆ ತರದೇ ಜನರನ್ನ ದಾರಿತಪ್ಪಿಸಿದ್ದಾರೆ ಅಂತಾ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸ್ತಿದ್ದಾರೆ. ಕರ್ನಾಟಕದ ಸಕ್ಸಸ್ ಮಂತ್ರ ಪಂಚ ಗ್ಯಾರಂಟಿ ಯೋಜನೆಗಳನ್ನೇ ಕಾಂಗ್ರೆಸ್…