Author: AIN Author

ಬೆಂಗಳೂರು:- ಕಾಡಂಚಿನ ಗ್ರಾಮಗಳಿಗೆ ಹಗಲು ಹೊತ್ತಿನಲ್ಲಿ ಮಾತ್ರ ತ್ರೀ ಫೇಸ್ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವ ಈಶ್ವರ್ ಖಂಡ್ರೆ ಅವರು ಸೂಚನೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯಾದ್ಯಂತ ಕಾಡಿನಂಚಿನಲ್ಲಿರುವ ಪ್ರದೇಶಗಳಿಗೆ ಆನೆ, ಹುಲಿ, ಚಿರತೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಬರುತ್ತಿರುವ ಹಿನ್ನೆಲೆ ಹೆಚ್ಚು ಪ್ರಾಣ ಹಾನಿ ಸಂಭವಿಸುತ್ತಿವೆ. ರಾತ್ರಿಯ ವೇಳೆ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಿದರೆ ರೈತರು ಪಂಪ್ ಸೆಟ್ ಆನ್ ಮತ್ತು ಆಫ್ ಮಾಡಲು ಜಮೀನುಗಳಿಗೆ ಸಂಚರಿಸುವ ಕಾರಣ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಬೆಳಗಿನ ಹೊತ್ತು ತ್ರೀ ಫೇಸ್ ವಿದ್ಯುತ್ ಪೂರೈಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಕಾಡಂಚಿನ ಗ್ರಾಮಗಳಿಗೆ ರಾತ್ರಿಯ ಹೊತ್ತು ತ್ರೀ ಫೇಸ್ ವಿದ್ಯುತ್ ಪೂರೈಸದಂತೆ ಇಂಧನ ಇಲಾಖೆಗೆ ನಿರ್ದೇಶನ ನೀಡುವಂತೆ ಇಂಧನ ಸಚಿವರಲ್ಲಿ ಕೋರಿದ್ದಾರೆ.

Read More

ಬೆಂಗಳೂರು:- ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಆಯ್ಕೆಯಿಂದ ಕಾಂಗ್ರೆಸ್​ಗೆ ನಡುಕ ಶುರುವಾಗಿದೆ ಎಂದು ಸಿ ಸಿ ಪಾಟೀಲ್ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು, ಸೂಕ್ತ ಸಂದರ್ಭದಲ್ಲಿ ಯೋಗ್ಯ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಬಿ ವೈ ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡುವ ಮುನ್ನವೇ ಕಾಂಗ್ರೆಸ್​ಗೆ ನಡುಕ ಶುರುವಾಗಿದೆ ಎಂದು ಕುಟುಂಬ ರಾಜಕಾರಣದ ಬಗ್ಗೆ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಸಿ ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯನ್ನೂ ಕಾಂಗ್ರೆಸ್ ಟೀಕೆ ಮಾಡಿದೆ. ಆದರೆ ನಮ್ಮ ಹೈಕಮಾಂಡ್ ಸೂಕ್ತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದೆ. ಕಾಂಗ್ರೆಸ್​ಗೆ ವಿಜಯೇಂದ್ರ ಹೆಸರು ಘೋಷಣೆಯಿಂದ ನಡುಕ ಶುರುವಾಗಿದೆ. ಇನ್ನೂ ವಿಜಯೇಂದ್ರ ಅಧಿಕಾರ ಸ್ವೀಕರಿಸಿಲ್ಲ, ಆಗಲೇ ಕಾಂಗ್ರೆಸ್​​ಗೆ ನಡುಕ ಉಂಟಾಗಿದೆ. ಹೀಗಾಗಿ ಕುಟುಂಬ ರಾಜಕಾರಣ ಅಂತ ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ಟಾಂಗ್ ನೀಡಿದ್ದಾರೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಆಂತರಿಕ ವಿಚಾರವಾಗಿದೆ, ವಿಜಯೇಂದ್ರ ಕಳೆದ ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಪಕ್ಷದ…

Read More

ನಾಗಮಂಗಲ:-ಬಿಎಸ್‌ವೈ ಇದ್ದಾಗ ಬಿಜೆಪಿಗಿದ್ದ ಶಕ್ತಿ ಈಗಂತೂ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಪಕ್ಷದ ಮಡಿಕೆ ಒಡೆದುಹೋಗಿದೆ. ಒಡೆದ ಮಡಿಕೆಗೆ ಎಷ್ಟು ನೀರು ತುಂಬಿದರೂ ಅದು ನಿಲ್ಲುವುದಿಲ್ಲ ಎಂದರು. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ ದಿನವೇ ಬಿಜೆಪಿ ಮಡಿಕೆ ಒಡೆದುಹೋಗಿದೆ. ವಿಜಯೇಂದ್ರ ಅವರನ್ನು ಮಂತ್ರಿ ಮಾಡುವಂತೆ ಕೇಳಿದಾಗಲೂ ಮಾಡಲಿಲ್ಲ. ಈಗ ಪರಿಸ್ಥಿತಿಯ ಅರಿವಾಗಿ ಅದಕ್ಕೆ ತೇಪೆ ಹಾಕೋಕೆ ಹೋಗಿದ್ದಾರೆ. ಏನೇ ಮಾಡಿದರೂ ಹಿಂದೆ ಯಡಿಯೂರಪ್ಪ ಇದ್ದಾಗ ಬಿಜೆಪಿಗೆ ಇದ್ದ ಶಕ್ತಿ ಯಾವುದೇ ಕಾರಣಕ್ಕೂ ಈಗ ಬರುವುದಿಲ್ಲ ಎಂದು ಖಡಕ್ಕಾಗಿ ನುಡಿದರು. ಯಡಿಯೂರಪ್ಪ ಇದ್ದ ಸಮಯದಲ್ಲೇ ಬಿಜೆಪಿ115 ಸ್ಥಾನ ದಾಟಲಿಲ್ಲ. ಇವಾಗ ಆ ಶಕ್ತಿ ಬರೋದೆ ಇಲ್ಲ. ವಿಜಯೇಂದ್ರ ಒಳ್ಳೆಯವನು. ಅವನ ಬಗ್ಗೆ ನನಗೆ ಗೌರವವಿದೆ. ವಿಜಯೇಂದ್ರ ನನ್ನ ಸ್ನೇಹಿತ‌. ಯಡಿಯೂರಪ್ಪನವರ‌ ಬಗ್ಗೆಯೂ ಗೌರವವಿದೆ ಎಂದರು. ಬಿಜೆಪಿಯಿಂದ ವಂಶ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ಇದ್ದೇ ಇದೆ. ಕುಮಾರಸ್ವಾಮಿ ವಂಶ ರಾಜಕಾರಣ ಮಾಡುತ್ತಿಲ್ಲವೇ. ಬಿಜೆಪಿ…

Read More

ಬೆಂಗಳೂರು:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಫೋಟೋಶೂಟ್ ಮಾಡುತ್ತಿದ್ದ ಯುವಕನನ್ನು ನಾಲ್ವರು ಯುವಕರು ಹತ್ಯೆ ಮಾಡಿದ ಘಟನೆ ಜರುಗಿದೆ. ಸೂರ್ಯ ಕೊಲೆಯಾದ ದುರ್ದೈವಿ. ದೀಪಾವಳಿ ಹಬ್ಬದ ಪ್ರಯುಕ್ತ ರಾಮೇಶ್ವರ ಗ್ರಾಮದ ಡಾಬಾದ ಸೀನರಿ ಹಾಕಲಾಗಿತ್ತು. ಇದರ ಮುಂದೆ ನಿಂತು ಸೂರ್ಯ ತನ್ನ ಸ್ನೇಹಿತರಿಂದ ಫೋಟೋ ತೆಗೆಸಿಕೊಳ್ಳುತ್ತಿದ್ದನು. ಈ ವೇಳೆ ನಾಲ್ವರು ಅಪರಿಚಿತ ಯುವಕರು ಬಂದು ಸೂರ್ಯನ ಜೊತೆ ಕಿರಿಕ್ ಮಾಡಿದ್ದಾರೆ. ಸೂರ್ಯನ ಬಳಿ ಇದ್ದ ಕ್ಯಾಮರಾ ಕಿತ್ತುಕೊಳ್ಳಲು ಯತ್ನಿಸಿದಾಗ ವಿರೋಧ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಸೂರ್ಯನನ್ನು ದುಷ್ಕರ್ಮಿಗಳು ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ದೊಡ್ಡಬೆಳವಂಗಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಮೆಂಟಲ್ ಹೆಲ್ತ್‌ ಅಂಡ್ ನ್ಯೂರೋ ಸೈನ್ಸಸ್), ಬೆಂಗಳೂರು, ಇಲ್ಲಿ ಖಾಲಿ ಇರುವ ನರ್ಸಿಂಗ್ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ 7th ಸಿಪಿಸಿ, ಪೇ ಮೆಟ್ರಿಕ್ಸ್‌ 2 ಪ್ರಕಾರ ರೂ.9300-34800 ವರೆಗೆ ವೇತನ ಶ್ರೇಣಿ ನೀಡಲಾಗುತ್ತದೆ. ಈ ಹುದ್ದೆಗಳು ಗ್ರೂಪ್‌ ಬಿ ಪೋಸ್ಟ್‌ಗಳಾಗಿವೆ. ಆಸಕ್ತರು ಇನ್ನಷ್ಟು ಮಾಹಿತಿಗಳನ್ನು ಕೆಳಗಿನಂತೆ ತಿಳಿದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ನೇಮಕಾತಿ ಪ್ರಾಧಿಕಾರ : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಹುದ್ದೆಯ ಹೆಸರು : ನರ್ಸಿಂಗ್ ಆಫೀಸರ್ ಹುದ್ದೆಗಳ ಸಂಖ್ಯೆ : 161 ವಿದ್ಯಾರ್ಹತೆ : ಬಿಎಸ್ಸಿ ಹಾನರ್ಸ್‌ ನರ್ಸಿಂಗ್ / ಬಿಎಸ್ಸಿ ನರ್ಸಿಂಗ್ ಅಥವಾ ಬಿಎಸ್ಸಿ / ಪೋಸ್ಟ್‌ ಬೇಸಿಕ್ ಬಿಎಸ್ಸಿ ನರ್ಸಿಂಗ್ ಪಾಸ್‌. ಜತೆಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ನರ್ಸಿಂಗ್ ಕೌನ್ಸಿಲ್ ನಲ್ಲಿ ರಿಜಿಸ್ಟ್ರೇಷನ್‌ ಪಡೆದಿರಬೇಕು. ಇತರೆ ಅರ್ಹತೆ : ಕನಿಷ್ಠ 50…

Read More

ಈಗಂತೂ ಮಳೆ ಎಡಬಿಡದೆ ಸುರಿಯುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ಗುಂಯ್‌ ಎಂದು ಸದ್ದು ಮಾಡುತ್ತಾ ಕಿಟಕಿಯ ಒಳಗೆ ನುಗ್ಗುತ್ತವೆ. ನಮಗೇ ಗೊತ್ತಿಲ್ಲದೆ ನಮ್ಮ ಚರ್ಮದ ಮೇಲೆ ಕುಳಿತು ರಕ್ತ ಹೀರಿ ಹಾರಿಹೋಗುತ್ತವೆ. ಇದರಿಂದಾಗಿ ಆ ಜಾಗದಲ್ಲಿ ಕೆಂಪು ಗುಳ್ಳೆ, ತುರಿಕೆ ಕಾಡುತ್ತದೆ. ಸೊಳ್ಳೆಕಚ್ಚಿದ ಜಾಗದಲ್ಲಿ ಇನ್ಫೆಕ್ಷನ್‌ ರೀತಿಯಲ್ಲಿ ಆಗಿ ಅಲ್ಲೇ ಗಾಯವೂ ಆಗಬಹುದು. ಅಲ್ಲದೆ ಸೊಳ್ಳೆ ಕಡಿತದಿಂದ ಮಲೇರಿಯಾದಂತಹ ರೋಗಗಳೂ ಬರಬಹುದು. ಹೀಗಾಗಿ ಸೊಳ್ಳೆ ಕಡಿತದ ಅಪಾಯವನ್ನು ಹೇಗೆ ತಪ್ಪಿಸಿಕೊಳ್ಳಬಹುದು ಎನ್ನುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್‌ ಪುದೀನಾ ಎಣ್ಣೆ ಪುದೀನಾ ಎಣ್ಣೆಯು ನೈಸರ್ಗಿಕ ಕೀಟನಾಶಕ ಮತ್ತು ಸೊಳ್ಳೆ ನಿವಾರಕವಾಗಿದೆ. ಒಂದು ಚಮಚ ಪುದೀನಾ ಎಣ್ಣೆಗೆ ಅರ್ಧ ಚಮಚ ಲಿಂಬು ರಸವನ್ನು ಸೇರಿಸಿ ಕೈ ಕಾಲುಗಳಿಗೆ ಹಚ್ಚಿಕೊಳ್ಳಿ. ಇದರಿಂದ ಸೊಳ್ಳೆಗಳು ಕಚ್ಚುವುದನ್ನು ತಡೆಯಬಹುದು. ಪುದೀನಾ ಎಣ್ಣೆಯು ಆಂಟಿಮೈಕ್ರೊಬಿಯಲ್ ಆಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಆಕಸ್ಮಾತ್‌ ಸೊಳ್ಳೆ ಕಡಿದಿದ್ದರೂ ಅದು ಸೋಂಕು ಉಂಟಾಗದಂತೆ ತಡೆಯುತ್ತದೆ. ​ದಾಲ್ಚಿನಿ ಎಣ್ಣೆ ದಾಲ್ಚಿನಿ ಎಣ್ಣೆಯನ್ನು ಸೊಳ್ಳೆ ಕಡಿತದಿಂದ…

Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅದೃಷ್ಟವಂತರು ( ಕುಬೇರರು) ಲಕ್ಷ್ಮಿ ಯೋಗ ಹೇಗೆ ಉಂಟಾಗುತ್ತದೆ? ಜನನ ದಿನಾಂಕ ಮತ್ತು ಸಮಯದ ಆಧಾರ ಮೇಲೆ ನಿಮ್ಮ ಜನ್ಮಜಾತಕ ಬರೆದು ಅದನ್ನು ಸರಿಯಾಗಿ ಪರೀಕ್ಷಿಸಿ ಈ ಕೆಳಕಂಡ ಮಾಹಿತಿಗಳು ಇದ್ದರೆ”ಲಕ್ಷ್ಮಿ ಯೋಗ” ಉಂಟಾಗುತ್ತದೆ. ರಾಶಿಚಕ್ರದ ಚಿಹ್ನೆಯು ಏರಿಕೆಯ ಸ್ಥಾನದಲ್ಲಿ ಯೋಗವನ್ನು ಪಡೆದುಕೊಂಡರೆ ಉತ್ತಮ ಅದೃಷ್ಟದಿಂದ ಕೂಡಿರುತ್ತದೆ. ಲಕ್ಷ್ಮಿ ದೇವಿಯು ತ್ರಿಕೋನ ಭಾವ ದೇವತೆ ಆಗಿರುತ್ತಾಳೆ. ಭಗವಾನ್ ವಿಷ್ಣು ಕೇಂದ್ರ ಭವನದ ದೇವರು. ಕೇಂದ್ರ ತ್ರಿಕೋನ ರಾಜ ಯೋಗದಲ್ಲಿ ಒಂತ್ತನೇ ಮನೆಯ ಅಧಿಪತಿ ಉದಾತ್ತನಾಗಿದ್ದರೆ ಉತ್ತಮ ಅದೃಷ್ಟವು ಪಡೆದುಕೊಳ್ಳುವವರು. ಈ ಯೋಗದಲ್ಲಿ ವಿವಿಧ ಮನೆಗಳಲ್ಲಿ ಗ್ರಹಗಳ ಸ್ಥಾನ ಹೇಗಿದೆ ಎನ್ನುವುದನ್ನು ಪರಿಗಣಿಸಿ, ಅದೃಷ್ಟದ ತೀರ್ಪು ತಿಳಿಸಲಾಗುವುದು. ಈ ಯೋಗ ಅಥವಾ ಕುಂಡಲಿಯ ಲೆಕ್ಕಾಚಾರವನ್ನು ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ತಿಳಿಯಬಹುದು. ಒಂಬತ್ತನೇ ಮನೆ ಅದು “ಭಾಗ್ಯಸ್ಥಾನ”. ಒಂಬತ್ತನೇ ಮನೆಯಲ್ಲಿ ತ್ರಿಕೋನ ಉಂಟಾದರೆ ಅದನ್ನು “ಶುಭ ಲಕ್ಷ್ಮಿ ಯೋಗ” ಎಂದು ಪರಿಗಣಿಸಲಾಗುತ್ತದೆ. ಈ ಯೋಗದಿಂದ ಸಂಪತ್ತಿನ ಆದಾಯ ಉಂಟಾಗುವುದು. ಐಷಾರಾಮಿ ಜೀವನ ನಡೆಸುವರು.…

Read More

ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು? ಕಂಕಣಬಲ ಕೂಡಿ ಬರಲು ಏನು ಮಾಡಬೇಕು? ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು. ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ. ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ. 2ನೇ ಮನೆಯ ಕುಟುಂಬ ಸ್ಥಾನ 4ನೇ ಮನೆ ಸುಖದ…

Read More

ಅಮವಾಸೆ ಸೂರ್ಯೋದಯ: 06.17 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಶ್ವಯುಜ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಅಮವಾಸ್ಯೆ 02:56 PM ತನಕ ನಂತರ ಪಾಡ್ಯ ನಕ್ಷತ್ರ: ಇವತ್ತು ಸ್ವಾತಿ 02:51 AM ತನಕ ನಂತರ ವಿಶಾಖ ಯೋಗ: ಇವತ್ತು ಸೌಭಾಗ್ಯ 03:23 PM ತನಕ ನಂತರ ಶೋಭಾನ ಕರಣ: ಇವತ್ತು ಚತುಷ್ಪಾದ 02:55 AM ತನಕ ನಂತರ ನಾಗವ 02:56 PM ತನಕ ನಂತರ ಕಿಂಸ್ತುಘ್ನ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ: 01:30 ನಿಂದ 03:00 ವರೆಗೂ ಅಮೃತಕಾಲ: 06.23 PM to 08.01 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:37 ನಿಂದ ಮ.12:22 ವರೆಗೂ .ಶ್ರೀ ಸೋಮಶೇಖರ್B.Sc ( ವಂಶಪಾರಂಪರಿತ) ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು. Mob.No.93534 88403 ಮೇಷ…

Read More

ಬಂಗಾರಪೇಟೆ:- ಸಿಎಂ ಸಿದ್ದರಾಮಯ್ಯ ಬುರುಡೆ ಬಿಟ್ಟು ಹೋಗಿದ್ದಾರೆ ಎಂದು ಸಂಸದ ಮುನಿಸ್ವಾಮಿ ಟೀಕೆ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೇ ಕೊಡಲು ಹಣವಿಲ್ಲ, ಇನ್ನು ಕೋಲಾರ ಜಿಲ್ಲೆಯ ಅಭಿವೃದ್ಧಿಗೆ 2 ಸಾವಿರ ಕೋಟಿ ರು.ಗಳನ್ನು ನೀಡಲಾಗಿದೆ ಎಂದರು. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರ ಸರ್ಕಾರದ ಖಜಾನೆ ಖಾಲಿಯಾಗಿದೆ. ಕಾಂಗ್ರೆಸ್‌ ಶಾಸಕರಿಗೆ ಕೇವಲ ಒಂದೆರಡು ಲಕ್ಷ ಅನುದಾನ ಕೊಡಲೂ ಸರ್ಕಾರದ ಬಳಿ ಹಣವಿಲ್ಲ. ಕೆಜಿಎಫ್ ಮತ್ತು ಬಂಗಾರಪೇಟೆ ಶಾಸಕರು ಹೇಳಿಕೊಟ್ಟಂತೆ ಅಂಕಿ ಅಂಶಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಯರಗೋಳ್ ಡ್ಯಾಂ ಉದ್ಘಾಟನೆ ಡ್ರಾಮಾ ಕಂಪನಿಯ ವೇದಿಕೆಯಾಗಿತ್ತು ಎಂದರು. ಯರಗೋಳ್ ಯೋಜನೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಅದು ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಧನೆ. ಮೊದಲು ಯೋಜನೆಗೆ ೧೫೦ಕೋಟಿ ಮಂಜೂರು ಮಾಡಿದ್ದೇ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಇದಕ್ಕೂ ಮೊದಲು ಯೋಜನೆಯ ಸರ್ವೆ ಮಾಡಲು ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಕೆ.ಶ್ರೀನಿವಾಸಗೌಡ, ಎಸ್.ರಾಜೇಂದ್ರನ್, ಕೃಷ್ಣಯ್ಯಶೆಟ್ಟಿ ತಲಾ 2 ಲಕ್ಷ…

Read More