ದೊಡ್ಮನೆಯ ಮನೆಯ (Bigg Boss Kannada 10) ಆಟ ರಂಗೇರಿದೆ. ಗೆಲ್ಲೋದ್ದಕ್ಕೆ ಏನು ಮಾಡೋಕು ಸೈ ಅಂತ ಸ್ಪರ್ಧಿಗಳು ರೆಡಿಯಾಗಿದ್ದಾರೆ. ಇದೀಗ ತನಿಷಾ ಬಳಿಕ ಮೈಕಲ್, ಕೂಡ ಸಂಗೀತಾ ಸಮಯ ಸಾಧಕಿ, ಅವಕಾಶವಾದಿ ಎಂದು ಕಿಡಿಕಾರಿದ್ದಾರೆ. ಸಂಗೀತಾ ಆಟಕ್ಕೆ ಮೈಕಲ್ ಫುಲ್ ರಾಂಗ್ ಆಗಿದ್ದಾರೆ.
ಈಗಾಗಲೇ ಎರಡು ತಂಡಗಳಾಗಿ ವಿಂಗಡಿಸಿರೋ ಬಿಗ್ ಬಾಸ್. ಈ ಬಾರಿ ಗಜಕೇಸರಿ ಮತ್ತು ಸಂಪತ್ತಿಗೆ ಸವಾಲ್ ಎರಡು ತಂಡದ ಜಟಾಪಟಿ ಜೋರಾಗಿದ್ದು, ಗಜಕೇಸರಿ ತಂಡದ ಲೀಡರ್ ಸಂಗೀತಾ ಟೀಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೂವುವನ್ನ ಎದುರಾಳಿ ತಂಡದಿಂದ ರಕ್ಷಿಸುವ ಟಾಸ್ಕ್ನಲ್ಲಿ ಸಂಗೀತಾ ಟೀಮ್ ಯಡವಟ್ಟು ಮಾಡಿದೆ. ಈ ವೇಳೆ, ತುಕಾಲಿ ಕಾಲಿಗೆ ಪೆಟ್ಟಾಗಿದೆ.
ಸಂಗೀತಾ ಸಮಯ ಸಾಧಕಿ (Opportunist) ಅಂತ ಹಿಂದೊಮ್ಮೆ ತನಿಷಾ ಕುಟುಕಿದ್ದರು. ವರ್ತೂರು ಸಂತೋಷ್ಗೆ 34 ಲಕ್ಷಕ್ಕೂ ಅಧಿಕ ವೋಟ್ಸ್ ಬಿದ್ದಿದೆ ಅಂತ ಬಹಿರಂಗವಾದ್ಮೇಲೆ,ಅವರ ಜೊತೆಗೆ ಸಂಗೀತಾ ಕ್ಲೋಸ್ ಆಗಿದ್ದನ್ನ ಕಂಡು ಸಂಗೀತಾ ಅವಕಾಶವಾದಿ ಎಂದು ಮೈಕಲ್ ಅಭಿಪ್ರಾಯ ಪಟ್ಟಿದ್ದರು. ಇದೀಗ ಚಟುವಟಿಕೆಯೊಂದರಲ್ಲಿ ಸಂಗೀತಾ ನಡೆದುಕೊಂಡ ರೀತಿ ಕಂಡು ಮೈಕಲ್ ಗುಡುಗಿದ್ದಾರೆ. ಸಂಗೀತಾ (Sangeetha Sringeri) ಅವಕಾಶವಾದಿ, ಸಮಯ ಸಾಧಕಿ ಅಂತ ಮೈಕಲ್ ಸಾರಿ ಸಾರಿ ಹೇಳಿದ್ದಾರೆ.
ಟಾಸ್ಕ್ ಮಧ್ಯೆ ತುಕಾಲಿ ಸಂತು ಅವರಿಗೆ ಬಿತ್ತು. ಈ ವೇಳೆ ಚಟುವಟಿಕೆಯನ್ನ ಹೋಲ್ಡ್ ಮಾಡಲಾಯಿತು. ಇದೇ ಸಮಯವನ್ನ ಬಳಸಿಕೊಂಡ ಸಂಗೀತಾ ಹೂಗಳು ಹಾಗೂ ಹೂಕಡ್ಡಿಯನ್ನ ತೆಗೆದುಕೊಂಡರು. ಅದನ್ನ ಗಮನಿಸಿ ಮೈಕಲ್ ಖಡಕ್ ಆಗಿ ಮಾತನಾಡಿದ್ದಾರೆ. ಈ ತರಹ ಆಟ ಆಡುವವರನ್ನ ನಾನು ನನ್ನ ಜೀವನದಲ್ಲಿಯೇ ಕಂಡಿಲ್ಲ ಎಂದು ಮೈಕಲ್ (Michael) ಬೇಸರ ವ್ಯಕ್ತಪಡಿಸಿದ್ದಾರೆ.