ಬೆಂಗಳೂರು:- ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ದೀಪಾವಳಿ ಗೀಫ್ಟ್ ಸಿಕ್ಕಿದ್ದು, ಪ್ರಕರಣದಿಂದ ಬಿಗ್ ರಿಲೀಫ್ ಸಿಕ್ಕಿದೆ. ಚುನಾವಣೆ ವೇಳೆ ಚುನಾವಣಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದರೆ ಎಂದು ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಪ್ರಕರಣದ ದೂರನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿ ಆದೇಶಿಸಿದೆ. ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿದ್ದ ಎಸ್.ಆನಂದ ಎಂಬುವವರು ಕುಮಾರಸ್ವಾಮಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಅವರ ದೂರನ್ನು ನ್ಯಾಯಾಲಯ ರದ್ದುಗೊಳಿಸುವ ಮೂಲಕ ಬಿಗ್ ರಿಲಿಫ್ ನೀಡಿದೆ. ಚುನಾವಣಾಧಿಕಾರಿಗಳಿಗೆ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಎರಡನೇ ಪತ್ನಿ ವಿವರಗಳನ್ನು ಮತ್ತು ಮಕ್ಕಳ ಮಾಹಿತಿಯನ್ನು ಚುನಾವಣಾ ಪ್ರಮಾಣದಲ್ಲಿ ಪತ್ರದಲ್ಲಿ ತಿಳಿಸಿಲ್ಲವೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
Author: AIN Author
ಬೆಳಗಾವಿ:- ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಧಿವೇಶನದ ವೇಳೆ ಚರ್ಚೆ ಮಾಡಲಾಗುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಸೆಂಬರ್ 4ರಿಂದ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ರಾಜ್ಯಮಟ್ಟದ ನಾಯಕರೆಲ್ಲ ಬೆಳಗಾವಿಯಲ್ಲೇ ಹಾಜರಿರುತ್ತಾರೆ. ಆಗ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಗೊಳಿಸುವ ಸಂಬಂಧ ಚರ್ಚಿಸಲಾಗುವುದು. 2024ರ ಜನವರಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದರೆ, ಅವರೂ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಬೆಳಗಾವಿ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಅಭ್ಯರ್ಥಿ ಮತ್ತು ಚಿಕ್ಕೋಡಿಯಿಂದ ಕುರುಬ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಿದ್ದೇವೆ. ಟಿಕೆಟ್ ಪಡೆಯಲು ಇಚ್ಛಿಸುವ ಅಭ್ಯರ್ಥಿ ತಮ್ಮ ಸಮುದಾಯದಲ್ಲಿ ಜನಪ್ರಿಯತೆ ಗಳಿಸಬೇಕು. ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವನ್ನೂ ಹೊಂದಿರಬೇಕು. ಈ ಅಂಶಗಳನ್ನು ಆಧರಿಸಿ ಟಿಕೆಟ್ ಕೊಡುತ್ತೇವೆ. ಪಕ್ಷದ ಹೈಕಮಾಂಡ್ ಅಭ್ಯರ್ಥಿಗಳನ್ನು ಘೋಷಿಸಲಿದೆ’ ಎಂದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವವರಿಂದ ಅರ್ಜಿ ಆಹ್ವಾನಿಸುತ್ತೇವೆ. ಬೇರೆ ರಾಜಕೀಯ ಪಕ್ಷಗಳಲ್ಲಿ ಇದ್ದವರು, ಕಾಂಗ್ರೆಸ್…
ಬೆಂಗಳೂರು:- ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ಹಿರಿಯ ನಾಯಕರು ಇಂದು ಭೇಟಿ ಮಾಡಿದ್ದಾರೆ. ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಬಿವೈ ವಿಜಯೇಂದ್ರ ಅವರನ್ನು ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಮಾಜಿ ಸಚಿವರಾದ ಸುರೇಶ್ ಕುಮಾರ್ ಹಾಗು ಗೋವಿಂದ ಕಾರಜೋಳ್ ಅವರು ವಿಜಯೇಂದ್ರ ಅವರನ್ನು ಅಭಿನಂದಿಸಿದರು ಕೆಲವು ಸಮಯ ಪಕ್ಷದ ಸಂಘಟನೆ ಕುರಿತು ವಿಜಯೇಂದ್ರ ಅವರು, ಹಿರಿಯರಿಂದ ಕೆಲವು ಸಲಹೆ ಸೂಚನೆ ಪಡೆದಿದ್ದಾರೆ.
ಬೆಂಗಳೂರು:- ಹುಡುಗಿಯರಿಗೆ ಬೆಂಗಳೂರು ಸೇಫ್ ಅಲ್ವಾ!? ಎನ್ನುವ ಪ್ರಶ್ನೆ ಇದೀಗ ಉದ್ಭವಿಸಿದೆ. ಏಕೆಂದರೆ ಬೆಂಗಳೂರಿನಲ್ಲಿ ನಡೆದಿರುವ ಘಟನೆಯಿಂದ ಈ ಪ್ರಶ್ನೆ ಸಹಜವಾಗಿ ಮೂಡಿದೆ. ದುಷ್ಕರ್ಮಿಯೋರ್ವ ನಡುರಸ್ತೆಯಲ್ಲೇ ಯುವತಿಯ ಬಟ್ಟೆ ಎಳೆದಾಡಿ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ನ.6 ರಂದು ಸೌತ್ ಎಂಡ್ ಸರ್ಕಲ್ ನ ಡಿಸಿಪಿ ಕಚೇರಿ ಎದುರು ಈ ಘಟನೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಯೋರ್ವ ಸೌತ್ ಎಂಡ್ ಸರ್ಕಲ್ ಬಳಿ ಯುವತಿಯ ಬಟ್ಟೆ ಎಳೆದು ಕಿರುಕುಳ ನೀಡಿ ಬಳಿಕ ಅಶ್ಲೀಲ ಪದಗಳಿಂದ ಬೈದಿದ್ದಾನೆ. ನಂತರ ಆರೋಪಿ ಯೂ ಟರ್ನ್ ತೆಗೆದುಕೊಂಡು ವಾಪಸ್ ಹೋಗಿದ್ದಾನೆ ಎಂದು ತಿಳಿದು ಬಂದಿದೆ. ರಾತ್ರಿ 10:40 ರ ವೇಳೆಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಯುವತಿ ಜಯನಗರ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಿಸಿದ್ದು, ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.
ಬೆಂಗಳೂರು:-ರಾಜಕೀಯ ಅಂದ್ರೇನೇ ಹೀಗೆ ಯಾರು ಯಾವಾಗ ಯಾವ ದಾಳ ಉರುಳಿಸುತ್ತಾರೆ ಅನ್ನೋದೇ ತಿಳಿಯೋದಿಲ್ಲ ಬೆಳಗಾಗುವುದರೊಳಗೆ ಶತ್ರುಗಳು ಮಿತ್ರರಾಗುತ್ತಾರೆ ಮಿತ್ರರು ಶತ್ರುಗಳಾಗುತ್ತಾರೆ ಅದೇ ರೀತಿ ಈ ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ವಲಸೆ ಹೋಗೋದು ಮತ್ತೆ ಸ್ವಪಕ್ಷದ ಕಡೆ ಮುಖ ಮಾಡೋದು ಎಲ್ಲವೂ ಮಾಮೂಲಿ ಈ ಲಿಸ್ಟ್ ಗೆ ಸೇರ್ತಾರಾ ದಾಸರಹಳ್ಳಿ ಮಾಜಿ ಶಾಸಕ ಆರ್ ಮಂಜುನಾಥ್ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ… 2023ರ ವಿಧಾನಸಭಾ ಚುನಾವಣೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಮಾಜಿ ಶಾಸಕ ಆರ್ ಮಂಜುನಾಥ್ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ ಎಂಬ ಚರ್ಚೆ ಕ್ಷೇತ್ರದಲ್ಲೆಡೆ ಜೋರಾಗಿದೆ ಅಂದ ಹಾಗೆ ಆರ್ ಮಂಜುನಾಥ್ ಮೂಲತಃ ಕಾಂಗ್ರೆಸ್ನವರು ಕಾಂಗ್ರೆಸ್ ನಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು ಪ್ರತಿಸ್ಪರ್ಧಿ ಮುನಿರಾಜು ವಿರುದ್ಧ ರೋಚಕ ಜಯ ಸಾಧಿಸಿ ದಾಸರಹಳ್ಳಿಯಲ್ಲಿ ಜೆಡಿಎಸ್ ಬಾವುಟ ಹಾರಿಸಿದ್ದ ಮಂಜುನಾಥ್…
ಬೆಂಗಳೂರು:- ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಸೋಮಣ್ಣ ಅವರಿಗೆ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಕಾಂಗ್ರೆಸ್ ಸೇರ್ತಾರಾ ಅನ್ನೋ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿವೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸಂದರ್ಭದಲ್ಲಿಯೂ ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಅದು ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ವಿ ಸೋಮಣ್ಣ ಇರುವ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಿಂದ ವೈರಲ್ ಆಗಿತ್ತು. ಇನ್ನೂ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದ ಹಿನ್ನಲೆ ಬೇಸರಗೊಂಡಿರುವ ಸೋಮಣ್ಣ ವಿಜಯೇಂದ್ರೆ ಹೆಸರು ಘೋಷಣೆ ಬಳಿಕ ಮೌನಕ್ಕೆ ಜಾರಿರುವ ನವೆಂಬರ್ 17ರಂದು ಸುದ್ದಿಗೋಷ್ಠಿ ನಡೆಸೋದಾಗಿ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಆಪರೇಷನ್ ಹಸ್ತದಡಿ ವಿ ಸೋಮಣ್ಣ ಅವರನ್ನು ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ಗೆ ಹಳೇ ಮೈಸೂರು ಭಾಗದಲ್ಲಿ ವೀರಶೈವ ಲಿಂಗಾಯತ ನಾಯಕರ ಕೊರತೆ ಇದೆ. ವಿ.ಸೋಮಣ್ಣ ಅವರನ್ನು ಕರೆತಂದು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು…
ಹೈದರಾಬಾದ್: ರಾಸಾಯನಿಕ ಸಂಗ್ರಹಿಸಿದ್ದ ಗೋಡೌನ್’ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಿಂದ (Fire Accident) ಆರು ಮಂದಿ ಸಾವಿಗೀಡಾದ ಘಟನೆ ತೆಲಂಗಾಣದ (Telangana) ನಾಂಪಲ್ಲಿಯಲ್ಲಿ ನಡೆದಿದೆ. ನಾಲ್ಕು ಅಂತಸ್ತಿನ ಕಟ್ಟಡದ ಮೊದಲನೇ ಮಹಡಿಯಲ್ಲಿ ರಾಸಾಯನಿಕಗಳನ್ನು ಸಂಗ್ರಹಿಸಲಾಗಿತ್ತು. ಅದೇ ಕಟ್ಟಡದ ನೆಲ ಮಾಳಿಗೆಯಲ್ಲಿ ಕಾರನ್ನು ರಿಪೇರಿ ಮಾಡಲಾಗುತ್ತಿತ್ತು. ಈ ವೇಳೆ ಕಿಡಿಗಳಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. https://ainlivenews.com/b-y-vijayendra-met-former-prime-minister-hd-deve-gowda/ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ. ಯಾವ ಕೆಮಿಕಲ್ಸ್‍ಗಳನ್ನು ಅಲ್ಲಿ ಸಂಗ್ರಹಿಸಲಾಗಿತ್ತು ಎಂಬುದು ತಿಳಿದು ಬಂದಿಲ್ಲ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೈದರಾಬಾದ್‍ನ ಕೇಂದ್ರ ವಲಯದ ಡಿಸಿಪಿ ವೆಂಕಟೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ; ದೀಪಾವಳಿ ಹಬ್ಬಕ್ಕೆ ಶಾಲೆಗೆ ರಜೆಯಿದೆ ಎಂದು ಹಬ್ಬದ ಊಟ ಮಾಡಿ ಅಕೆದಾಡಿ ಸಮಯ ಕಳೆಯುವ ಇಂದಿನ ಯುಗದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲ್ಲಂಬಿ ಗ್ರಾಮದ ಹಿರಿಯ ಜಾನಪದ ಕಲಾವಿದರಾದ ಸಿದ್ದಣ್ಣ ತಂಬೂರ ಶರಣಯ್ಯ ತಂಬೂರ ಮಲ್ಲಪ್ಪ ಹುಲಕೊಪ್ಪ ಕಲ್ಲಪ್ಪ ಬಿಸರಳ್ಳಿ ಶಿವಪ್ಪ ಬಿಸರಳ್ಳಿ ಶಿವಾನಂದ ಬಿಸರಳ್ಳಿ ಶಂಕ್ರಪ್ಪ ಬಿಸರಳ್ಳಿ ಬಸಪ್ಪ ಹರಿಜನ ಕಲ್ಮೇಶ ಹಾಗೂ ಹುಲ್ಲಂಬಿ ಗ್ರಾಮದ ಪ್ರಾಥಮಿಕ ಪ್ರೌಢ ಬಾಲಕರು ಶ್ರೀ, ಸಿದ್ಧಾರೂಢ ಭಜನಾ ಸಂಘದಡಿಯಲ್ಲಿ ಕೋಲಾಟ ಮೇಳದೊಂದಿಗೆ ಆಗಮಿಸಿ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿ ಕೈಲಾಸ ಮಂಟಪದ ಎದುರಿಗೆ ನೆರೆದ ನೂರಾರು ಭಕ್ತರೆದುರು ಹಿರಿಯ ಕಲಾವಿದರ ಜಾನಪದ ಹಾಡು ವಾದ್ಯ ಮೇಳಗಳೊಂದಿಗೆ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಲಾಟದೊಂದಿಗೆ ಕುಣಿದು ಕುಣಿದು ಕುಪ್ಪಳಿಸಿ ಜನ ಮನ ಸೂರೆಗೊಂಡರು.ಈ ಸಂದರ್ಭದಲ್ಲಿ ರಾಜ್ಯ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ. ಕಲಾವಿದರ ಕಲೆಗೆ ಮೆಚ್ವಿಗೆ ವ್ಯಕ್ತ ಪಡಿಸಿ ಬಾಲ ಕಲಾವಿದರನ್ನು ಶ್ಲಾಘಿಸಿದರು. ಕಲಾವಿದರು
ಬೆಂಗಳೂರು: ಗ್ಯಾರಂಟಿಗಳಿಗೂ ಕುಮಾರಸ್ವಾಮಿಗೂ ಏನು ಸಂಬಂಧ ಎಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತೀಕ್ಷ್ಣ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ʼಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. https://ainlivenews.com/government-provided-escort-vehicle-police-security/ ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿರುವ ಅವರು; ಜನರು ಆಡಳಿತ ಪಕ್ಷದಲ್ಲಿ ಕೂರಿಸಿದ್ದಾರೆ ಎಂದಷ್ಟಕ್ಕೇ ಇವರ ತಲೆ ನಿಲ್ಲುತ್ತಿಲ್ಲ. ಚಕ್ರ ತಿರುಗಲು ಶುರು ಮಾಡಿದೆ. ಅದು ಕೆಳಕ್ಕೆ ಬಂದೇ ಬರುತ್ತದೆ. ಸ್ವಲ್ಪ ಸಮಯ ಬೇಕಷ್ಟೇ, ಆಗ ತಿರುಗುವ ತಲೆ ತಾನಾಗಿಯೇ ನಿಲ್ಲುತ್ತದೆ ಎಂದು ಮಾರ್ಮಿಕವಾಗಿ ಚುಚ್ಚಿದ್ದಾರೆ. ಡೂಪ್ಲಿಕೇಟ್ ಸಿಎಂ (DCM) ಬಹಳ ಆವೇಶದಲ್ಲಿದ್ದಾರೆ. ಅತಿಯಾದ ಆವೇಶ ಆರೋಗ್ಯಕ್ಕೆ ಹಾನಿಕಾರಕ! ಈ ಎಚ್ಚರಿಕೆ ನೆನಪಿದ್ದರೆ ಕ್ಷೇಮ. ಹೆಚ್.ಡಿ.ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೂ ಏನು ಸಂಬಂಧ? ಎಂಬ ಆಣಿಮುತ್ತು ಉದುರಿಸಿದ್ದಾರೆ. ಅಧಿಕಾರದ ಪಿತ್ತ ನೆತ್ತಿಗೇರಿ ಮಿದುಳು ಕೆಲಸ ಮಾಡದಿದ್ದರೆ ನಾಲಿಗೆ ಹೀಗೆ ಮಾತನಾಡುತ್ತದೆ. ಅಚ್ಚರಿಯೇನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP President) ಆಯ್ಕೆಯಾಗಿರುವ ಶಿಕಾರಿಪುರದ ಶಾಸಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ (BY Vijayendra) ರಾಜ್ಯ ಸರ್ಕಾರ ಬೆಂಗಾವಲು ವಾಹನ ಮತ್ತು ಪೊಲೀಸ್ ಭದ್ರತೆ (Police Security) ಒದಗಿಸಿದೆ. https://ainlivenews.com/everyone-recognized-by-vijayendras-talent-sm-krishna/ ಭಾನುವಾರದಿಂದ ಮೂವರು ಪೊಲೀಸ್ ಸಿಬ್ಬಂದಿ ಇರುವ ಬೆಂಗಾವಲು ವಾಹನ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. ಪದಗ್ರಹಣ ಬಳಿಕ ಅಧಿಕೃತವಾಗಿ ಸಿಬ್ಬಂದಿ ಸಹಿತ ಬೆಂಗಾವಲು ವಾಹನವನ್ನು ಸರ್ಕಾರ ಒದಗಿಸಲಿದೆ. ಬುಧವಾರ ಪಕ್ಷದ ಕಚೇರಿಯಲ್ಲಿ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದ ವಿಜಯೇಂದ್ರ ಇಂದು ಬೆಳಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಹೋಗಿ ಆಶೀರ್ವಾದ ಪಡೆದರು. ನಂತರ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.