ಬೆಂಗಳೂರು:- ಅಪಘಾತದ ದೂರಿಗೆ ವಿಳಂಬ ಮಾಡಿದ ಸಾರಿಗೆ ನಿಗಮ, ಚಾಲಕ, ಕಂಡಕ್ಟರ್‌ಗೆ ₹17 ಲಕ್ಷ ದಂಡ ವಿಧಿಸಲಾಗಿದೆ. ಪರಿಹಾರವನ್ನು ಮೃತನ ಕುಟುಂಬಕ್ಕೆ ನೀಡಬೇಕೆಂದು ಹೈಕೋರ್ಟ್ ಆದೇಶಿಸಿದೆ. ಇದೇ ವೇಳೆ, ಬಸ್ ಪ್ರಯಾಣಿಕ ಅಪಘಾತಕ್ಕೆ ಗುರಿಯಾಗಿ ಗಾಯಗೊಂಡರೆ ಕೂಡಲೇ ಆತನಿಗೆ ವೈದ್ಯಕೀಯ ನೆರವು ಕಲ್ಪಿಸುವುದು ಮತ್ತು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡುವುದು ಬಸ್ ಚಾಲಕ ಮತ್ತು ನಿರ್ವಾಹಕನ ಕರ್ತವ್ಯ ಎಂದು ಹೇಳಿದೆ. ಪ್ರಯಾಣಿಕನೋರ್ವ ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಸೇರಿದ ಬಸ್‌ನಿಂದ ನಿಲ್ದಾಣದಲ್ಲಿ ಕಳಗೆ ಇಳಿಯುವಾಗ ಚಾಲಕ ದಿಢೀರ್ ಆಗಿ ಬಸ್ ಮುಂದಕ್ಕೆ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದ. ಘಟನೆ ಸಂಬಂಧ ದೂರು ನೀಡಲು ನಾಲ್ಕು ದಿನಗಳ ಕಾಲ ವಿಳಂಬ ಮಾಡಿದ ಹಾಗೂ ಬಸ್ ಮುಂದೆ ಚಲಾಯಿಸುವಲ್ಲಿ ಚಾಲಕ ಹಾಗೂ ನಿರ್ವಾಹಕ ತೋರಿದ ನಿರ್ಲಕ್ಷ್ಯ, ಕರ್ತವ್ಯ ಲೋಪವನ್ನು ಪರಿಗಣಿಸಿದ ಹೈಕೋರ್ಟ್ ಈ ಆದೇಶ ಮಾಡಿದೆ. ಅಲ್ಲದೆ, ಮೃತಪಟ್ಟ ಪ್ರಯಾಣಿಕನ ಕುಟುಂಬಕ್ಕೆ ಶೇ.6ರಷ್ಟು…
Author: AIN Author
ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಪ್ರಯುಕ್ತ ಬೆತ್ತದಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯಲಿದ್ದು, ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಬೆಳಗ್ಗೆ 8:50ಕ್ಕೆ ಮಾದಪ್ಪನ ರಥೋತ್ಸವ ನಡೆಯಲಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ನೆರೆದಿದೆ. ಕಾಲ್ನಡಿಗೆಯಲ್ಲಿ ಆಗಮಿಸಿರುವ ಸಹಸ್ರಾರು ಭಕ್ತರು, ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದಾರೆ. ನೆರೆಯ ರಾಜ್ಯದಿಂದಲೂ ಸಹಸ್ರಾರು ಭಕ್ತರು ಆಗಮಿಸಿದ್ದು, ರಥೋತ್ಸವದಲ್ಲಿ ಪಾಲ್ಗೊಳ್ಳಲು ಬೆಟ್ಟದಲ್ಲಿ ಲಕ್ಷಾಂತರ ಭಕ್ತರು ವಾಸ್ತವ್ಯ ಹೂಡಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ವಿದ್ಯುತ್ ದೀಪಾಲಂಕಾರ ನಡೆದಿದ್ದು, ಮಾದಪ್ಪನ ಬೆಟ್ಟದಲ್ಲಿ ಭಕ್ತರಿಗೆ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು:- ಸೋಮವಾರದ ಮೊದಲ 12 ಗಂಟೆಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಕಣಮಾಲಿನ್ಯ 2.5 ಮಟ್ಟದಲ್ಲಿ ಶೇಕಡಾ 55 ರಷ್ಟು ಹೆಚ್ಚಳವಾಗಿದೆ ಎಂದು ಎನ್‌ಸಿಎಪಿ ಟ್ರ್ಯಾಕರ್ ವರದಿ ತಿಳಿಸಿದೆ. ನವೆಂಬರ್ 11 ರಿಂದ ದೀಪಾವಳಿ ಪೂರ್ವದ ಕಣಮಾಲಿನ್ಯ 2.5 ಮಟ್ಟವನ್ನು ಸೋಮವಾರ ಬೆಳಿಗ್ಗೆ 12 ರಿಂದ ಮಧ್ಯಾಹ್ನ 12 ರವರೆಗಿನ 12 ಗಂಟೆಗಳ ಅಂಕಿಅಂಶಗಳ ಜೊತೆ ಹೋಲಿಕೆ ಮಾಡಿ ಸಂಶೋಧಕರು 11 ನಗರಗಳ ಗಾಳಿಯ ಗುಣಮಟ್ಟವನ್ನು ವಿಶ್ಲೇಷಿಸಿದ್ದಾರೆ. ಕಣಮಾಲಿನ್ಯ 2.5 ಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ದೈನಂದಿನ ಸುರಕ್ಷಿತ ಮಿತಿ ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಂಗಳು. 2022 ದೀಪಾವಳಿ ದಿನಗಳಿಗೆ ಹೋಲಿಸಿದರೆ, ಬೆಂಗಳೂರು ಉತ್ತಮವಾಗಿದೆ ಆದರೆ ಉಳಿದ ನಗರಗಳಲ್ಲಿ ಮಾಲಿನ್ಯ ಏರಿಕೆ ಕಂಡಿವೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಸರಾಸರಿ ಪಿಎಂ 2.5 ಕಳೆದ ವರ್ಷ ಪ್ರತಿ ಘನಕ್ಕೆ 81.5 ಮೈಕ್ರೋಗ್ರಾಂ ಆಗಿತ್ತು. ಈ ವರ್ಷ 65.8ಕ್ಕೆ ಇಳಿಕೆಯಾಗಿದೆ. ಆದಾಗ್ಯೂ, ಕೆಲವು ನಗರಗಳು ಅಂಕಿಅಂಶಗಳು ಸುಮಾರು ದ್ವಿಗುಣಗೊಂಡಿವೆ.
ಬೆಂಗಳೂರು:- ₹ 40 ಸಾವಿರ ಲಂಚ ಪಡೆಯುತ್ತಿದ್ದ ಬೆಸ್ಕಾಂನ ನಾಗವಾರ ಉಪ ವಿಭಾಗದ ಕಚೇರಿಯ ಸಹಾಯಕ ಲೆಕ್ಕಾಧಿಕಾರಿ ನವೀನ್ ಕುಮಾರ್ ಎಚ್.ಪಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ವಿದ್ಯುತ್ ಸಂಪರ್ಕವೊಂದರ ಗ್ರಾಹಕರ ಹೆಸರು ಬದಲಾವಣೆಗೆ ಪಿ.ಆರ್. ದೀಪಕ್ ಎಂಬುವವರು ಬೆಸ್ಕಾಂನ ನಾಗವಾರ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಪ್ರಕ್ರಿಯೆ ಪೂರ್ಣಗೊಳಿಸಲು ಸಹಾಯಕ ಲೆಕ್ಕಾಧಿಕಾರಿ ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ನಡೆಸಿದಾಗ ₹ 40 ಸಾವಿರ ಕೊಟ್ಟರೆ ಹೆಸರು ಬದಲಾವಣೆ ಮಾಡುವುದಾಗಿ ಒಪ್ಪಿಕೊಂಡಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ಸಲ್ಲಿಸಿದ್ದರು. ಆರೋಪಿಯ ಸೂಚನೆಯಂತೆ ದೀಪಕ್ ಅವರು ನಾಗವಾರ ಉಪ ವಿಭಾಗ ಕಚೇರಿಯಲ್ಲಿ ಸೋಮವಾರ ಭೇಟಿಮಾಡಿ ಹಣ ತಲುಪಿಸಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು. ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕದ ಎಸ್‌ಪಿ-2 ಕೆ. ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಕುಮಾರಸ್ವಾಮಿ, ಬಾಲಾಜಿ ಬಾಬು, ಶಂಕರಪ್ಪ…
ಅಸಮರ್ಪಕ ಆಹಾರ ಶೈಲಿ, ನಿದ್ದೆ ಸರಿಯಾಗಿ ಮಾಡದಿರುವುದು, ಹೆಚ್ಚು ಕರಿದ ಆಹಾರಗಳ ಸೇವನೆಯಿಂದ ಹೊಟ್ಟೆಯಲ್ಲಿ ಸರಿಯಾಗಿ ಆಹಾರ ಜೀರ್ಣವಾಗದೆ ಮಲಬದ್ಧತೆ ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಈ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಮಲಬದ್ಧತೆಯನ್ನು ಕಡೆಗಣಿಸಿದರೆ ಅದು ಗಂಭೀರ ಕಾಯಿಲೆಗೆ ಕಾರಣವಾಗಬಹುದು. ಹೀಗಾಗಿ ಆರಂಭದ ಹಂತದಲ್ಲಿಯೇ ಮಲಬದ್ಧತೆಯನ್ನು ಸರಿಪಡಿಸಿಕೊಳ್ಳುವುದು ಉತ್ತಮವಾಗಿದೆ. ಪ್ರತಿನಿತ್ಯ ಮಲವಿಸರ್ಜನೆ ಸರಿಯಾಗಿ ಆಗಬೇಕೆಂದರೆ ಒಂದಷ್ಟು ಮನೆಮದ್ದುಗಳು ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪಿನ ಜ್ಯೂಸ್ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಬೇಕೆಂದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು. ಮೈದಾ, ಕರಿದ ಆಹಾರಗಳನ್ನು ಹೆಚ್ಚು ಸೇವನೆ ಮಾಡಿದಾಗ ಅದು ಜೀರ್ಣವಾಗದೇ ಕರುಳಿಗೆ ಸುತ್ತಿಕೊಳ್ಳಬಹುದು. ಅದನ್ನು ಸರಿಪಡಿಸಲು ಸರಿಯಾದ ಆಹಾರ ಸೇವನೆ ಆಗತ್ಯವಾಗಿರುತ್ತದೆ. ಅದಕ್ಕೆ ಪಾಲಕ್ ಸೊಪ್ಪು ಸಹಾಯ ಮಾಡುತ್ತದೆ. ಹೀಗೆ ಮಾಡಿ ಪಾಲಕ್ ಸೊಪ್ಪನ್ನು ಮಿಕ್ಸಿ ಮಾಡಿ ಅದರ ರಸ ತೆಗೆದುಕೊಳ್ಳಿ. ನಂತರ ಅದಕ್ಕೆ ಅರ್ಧ ಚಮಚ ತುಪ್ಪವನ್ನು ಸೇರಿಸಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅದನ್ನು ಸೇವನೆ ಮಾಡಿ. ಮಲಬದ್ಧತೆ ಇರುವಾಗ ಸೇವನೆ ಮಾಡಿದರೆ…
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (HPCL) ಅಧಿಕೃತ ಅಧಿಸೂಚನೆಯ ಮೂಲಕ ಡೆಪ್ಯುಟಿ ಜನರಲ್ ಮ್ಯಾನೇಜರ್, ಸೀನಿಯರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. HPCL ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಹುದ್ದೆಗಳ ಸಂಖ್ಯೆ: 37 ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಹುದ್ದೆಯ ಹೆಸರು: ಉಪ ಜನರಲ್ ಮ್ಯಾನೇಜರ್, ಹಿರಿಯ ಅಧಿಕಾರಿ ವೇತನ: ರೂ.60000-280000/- ಪ್ರತಿ ತಿಂಗಳು HPCL ಹುದ್ದೆಯ ವಿವರಗಳು ಉಪ ಪ್ರಧಾನ ವ್ಯವಸ್ಥಾಪಕರು- 1 ಮುಖ್ಯ ವ್ಯವಸ್ಥಾಪಕರು/ಉಪ ಜನರಲ್ ಮ್ಯಾನೇಜರ್- 3 ಹಿರಿಯ ವ್ಯವಸ್ಥಾಪಕರು- 6 ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್- 14 ಹಿರಿಯ ಅಧಿಕಾರಿ- 13 HPCL ನೇಮಕಾತಿ 2023 ಅರ್ಹತಾ ವಿವರಗಳು ಡೆಪ್ಯುಟಿ ಜನರಲ್ ಮ್ಯಾನೇಜರ್- M.E ಅಥವಾ M.Tech, Ph.D ಮುಖ್ಯ ವ್ಯವಸ್ಥಾಪಕರು/ಉಪ ಜನರಲ್ ಮ್ಯಾನೇಜರ್- M.E ಅಥವಾ…
ಗೋವರ್ಧನ ಪೂಜಾ, ಸೂರ್ಯೋದಯ: 06.18 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಪಾಡ್ಯ 02:36 PM ತನಕ ನಂತರ ಬಿದಿಗೆ ನಕ್ಷತ್ರ: ಇವತ್ತು ವಿಶಾಖ 03:23 AM ತನಕ ನಂತರ ಅನುರಾಧ ಯೋಗ: ಇವತ್ತು ಶೋಭಾನ 01:57 PM ತನಕ ನಂತರ ಅತಿಗಂಡ ಕರಣ: ಇವತ್ತು ಕಿಂಸ್ತುಘ್ನ 02:50 AM ತನಕ ನಂತರ ಬವ 02:36 PM ತನಕ ನಂತರ ಬಾಲವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 05.00 PM to 06.36 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:38 ನಿಂದ ಮ.12:22 ವರೆಗೂ ಮೇಷ ರಾಶಿ ಗುತ್ತಿಗೆದಾರರಿಗೆ ಹೊಸ ಟೆಂಡರ್ ಭಾಗ್ಯ, ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್ ನವರಿಗೆ ಉದ್ಯಮದಲ್ಲಿ…
ಬೆಂಗಳೂರು:- ಜೆಡಿಎಸ್ ಮತ್ತು ಬಿಜೆಪಿ ಜತೆಯಾಗಿ ಲೋಕಸಭಾ ಚುನಾವಣೆ ಎದುರಿಸಲಿವೆ’ ಎಂದು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುನರಾಯ್ಕೆ ಮಾಡುವುದಕ್ಕಾಗಿ ಬೆಂಬಲ ನೀಡುತ್ತಿದ್ದೇವೆ. ಈ ಕಾರಣಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಜತೆಯಾಗಿ ಲೋಕಸಭಾ ಚುನಾವಣೆ ಎದುರಿಸಲಿವೆ ಎಂದರು. ಜಂಟಿ ಹೋರಾಟದಿಂದ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಹೆಚ್ಚಿನ ಲಾಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾವು ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುವುದರಿಂದ 22ರಿಂದ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಮೈತ್ರಿಗೆ ಸಂಬಂಧಿಸಿದಂತೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದೊಳಗೆ ಅದನ್ನು ಬಗೆಹರಿಸಿಕೊಳ್ಳುತ್ತೇವೆ’ ಎಂದರು. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿರುವುದು ಉತ್ತಮ ಆಯ್ಕೆ. ಯುವ ಸಮೂಹದಲ್ಲಿ ಸಂಚಲನ ಸೃಷ್ಟಿಸಿರುವ ನಾಯಕನಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ಒಳ್ಳೆಯ ನಿರ್ಧಾರ ಕೈಗೊಂಡಿದೆ’ ಎಂದು ಹೇಳಿದರು.
ಬೆಂಗಳೂರು:- ನಿಗದಿತ ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳನ್ನು ನಿರಾಕರಿಸುವುದು ಸರಿಯಲ್ಲ ಎಂದು ಬೆಂಗಳೂರು ಹೈಕೋರ್ಟ್ ಹೇಳಿದೆ. ಬೆಂಗಳೂರಿನ ನಿವಾಸಿ ಪಿ.ಆರ್. ದೇವರಾಜು ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿದಾರ ಸಲ್ಲಿಸಬೇಕಾದ ಮೂಲ ಜಾತಿ ಪ್ರಮಾಣಪತ್ರ ಸ್ವೀಕರಿಸಿ, ಸೂಪರ್ ನ್ಯೂಮರರಿ ಹುದ್ದೆಗೆ ಮೀಸಲಾತಿ ಅಡಿ ಲೆಕ್ಕ ಸಹಾಯಕ ಗ್ರೇಡ್ 1ಗೆ ನೇಮಕ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಜೊತೆಗೆ, ಅರ್ಜಿದಾರರನ್ನು ಸಾಮಾನ್ಯ ವರ್ಗಕ್ಕೆ ತಳ್ಳಿರುವ ಮೂಲಕ ಕರ್ನಾಟಕ ಹಾಲು ಮಹಾ ಮಂಡಳಿ ತಪ್ಪು ಮಾಡಿದೆ. ಸಣ್ಣ ಸೂಚನೆಯಲ್ಲಿ ಸರಿಪಡಿಸಿ ನೈಸರ್ಗಿಕ ನ್ಯಾಯ ಒದಗಿಸಬಹುದಾಗಿತ್ತು. ಆ ಕ್ರಮಕ್ಕೆ ಮುಂದಾಗದಿರುವುದಕ್ಕೆ ಸಕಾರಣ ನೀಡಿಲ್ಲ. ಈ ಬೆಳವಣಿಗೆ ಅರ್ಜಿದಾರರ ಪರ ವಕೀಲರ ವಾದಿಸಿರುವಂತೆ ಅನ್ಯಾಯದ ಪರಮಾವಧಿಯಾಗಿದೆ ಎಂದು ಪೀಠ ತಿಳಿಸಿದೆ. ಅಲ್ಲದೇ, ಜಾತಿ ಪ್ರಮಾಣ ಪತ್ರ ನಕಲಿ ಇದ್ದಲ್ಲಿ ಸ್ವೀಕಾರಾರ್ಹವಲ್ಲ ಎಂಬುದಾಗಿ ಕೆಎಂಎಫ್ ವಾದಿಸುತ್ತಿಲ್ಲ.…
ನವದೆಹಲಿ;- ಯುವಜನರ ಆಶೋತ್ತರಗಳನ್ನು ಕೇಂದ್ರ ಸರ್ಕಾರ ಹೊಸಕಿ ಹಾಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯುವಜನರ ಆಶೋತ್ತರಗಳನ್ನು ಹೊಸಕಿಹಾಕಿದೆ ಎಂದರು. ಯುವಜನರು ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿದ್ದರು. ಆದರೆ, ಮೋದಿ ನೇತೃತ್ವದ ಸರ್ಕಾರವು ಕಳೆದ 45 ವರ್ಷಗಳ ಅತಿಹೆಚ್ಚಿನ ನಿರುದ್ಯೋಗ ಪ್ರಮಾಣವನ್ನು ಕರುಣಿಸಿತು’ ಎಂದು ಖರ್ಗೆ ಅವರು ‘ಎಕ್ಸ್’ನ ಪೋಸ್ಟ್ ಮೂಲಕ ವ್ಯಂಗ್ಯವಾಡಿದ್ದಾರೆ. ಯುವಜನರು ಆರ್ಥಿಕ ಸಬಲೀಕರಣವನ್ನು ಎದುರು ನೋಡುತ್ತಿದ್ದರು. ಅದಕ್ಕೆ ಬದಲಾಗಿ ಸರ್ಕಾರವು ಬೆಲೆ ಏರಿಕೆಯ ಬಿಸಿ ಮುಟ್ಟಿಸಿತು. ಇದರಿಂದಾಗಿ ಜನರ ಉಳಿತಾಯವು 47 ವರ್ಷಗಳಷ್ಟು ಹಿಂದಕ್ಕೆ ಹೋಯಿತು. ಅವರು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಬಯಸಿದ್ದರು. ಆದರೆ ಮೋದಿ ನೇತೃತ್ವದ ಸರ್ಕಾರವು ದೇಶ ಹಿಂದೆಂದೂ ಕಾಣದ ಆರ್ಥಿಕ ಅಸಮಾನತೆ ಸೃಷ್ಟಿಸಿತು. ಮಧ್ಯಮ ವರ್ಗ ಮತ್ತು ಬಡವರು ಸಂಕಷ್ಟದಲ್ಲಿದ್ದಾರೆ, ದೇಶದ ಒಟ್ಟು ಆಸ್ತಿಯಲ್ಲಿ ಶೇ 60ರಷ್ಟು ಆಸ್ತಿಯು ಶೇ 5ರಷ್ಟು ಮಂದಿ ಶ್ರೀಮಂತರ ಬಳಿ ಇದೆ ಎಂದು ಹೇಳಿದ್ದಾರೆ.