ಏಳನೇ ವಾರದಲ್ಲಿ ಬಿಗ್‌ಬಾಸ್ (Bigg Boss Kannada) ಮನೆಯಿಂದ ನೀತು ವನಜಾಕ್ಷಿ (Neetu Vanajakshi) ಹೊರಬಿದ್ದಿದ್ದಾರೆ. ಏಳು ವಾರಗಳ ಸುದೀರ್ಘ ಅವಧಿಯಲ್ಲಿ ಬಿಗ್‌ಬಾಸ್ ಮನೆಯಲ್ಲಿ ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ಈ ವಾರ ಅವರೇ ಮನೆಯ ಕ್ಯಾಪ್ಟನ್ ಆಗಿರುವುದೂ ವಿಶೇಷ. ಆದರೆ ಆ ಕ್ಯಾಪ್ಟನ್ಸಿ ಅವಧಿಯನ್ನು ಪೂರ್ತಿಗೊಳಿಸುವ ಮುನ್ನವೇ ಅವರು ಹೊರಗೆ ಬರಬೇಕಾಗಿದೆ. ಬಿಗ್‌ಬಾಸ್‌ನ ಈ ಜರ್ನಿಯ ಕುರಿತು JioCinemaಗೆ ನೀಡಿರುವ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ (Interview) ನೀತು ಹಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈವಾಗಷ್ಟೇ ಹೊರಗೆ ಬಂದಿದೀನಿ. ಸ್ವಲ್ಪ ಬೇಜಾರು ಇದ್ದೇ ಇದೆ. ಆದರೆ 50 ದಿನ ಮುಗಿಸಿದ್ದೇನೆ ಎಂಬ ಖುಷಿಯಿದೆ. ಎಲ್ಲ ಕಂಟೆಸ್ಟೆಂಟ್‌ಗಳ ಮಧ್ಯ ನಾನೂ ಅಷ್ಟು ದಿನ ಸರ್ವೈವ್ ಆಗಿದ್ದೀನಿ ಎಂಬ ಹೆಮ್ಮೆ ಇದೆ. ತುಂಬ ಅನುಭವಗಳ ಜೊತೆಗೆ ಮನೆಗೆ ಹೋಗುತ್ತಿದ್ದೇನೆ. ಈ ಅನುಭವಗಳನ್ನು ಮುಂದೆ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಮುನ್ನುಗ್ಗುತ್ತೇನೆ. ಎಲಿಮಿನೇಷನ್ ನಿರೀಕ್ಷಿತವೇ ಆಗಿತ್ತು! ಹೊರಗಡೆ ಬರ್ತೀನಿ ಅನ್ನುವುದನ್ನು ನಿರೀಕ್ಷೆ ಮಾಡಿದ್ದೆ. ಯಾಕಂದ್ರೆ ಕಳೆದ ಎರಡು ವಾರದಿಂದ ನನ್ನ…
Author: AIN Author
ಮಂಡ್ಯ: ಕಳ್ಳರು ದೇವಸ್ಥಾನದ ಬೀಗ ಹೊಡೆದು ಹುಂಡಿ ಹೊತ್ತೊಯ್ದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಶಕ್ತಿದೇವತೆ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ತಡರಾತ್ರಿ ನಡೆದಿದೆ. ಒಂದೇ ತಿಂಗಳಲ್ಲಿ ಒಂದೇ ದೇವಸ್ಥಾನದಲ್ಲಿ ಎರಡು ಬಾರಿ ಕಳ್ಳತನ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಶಕ್ತಿದೇವತೆ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ತಡರಾತ್ರಿ ಕಳ್ಳತನ ನಡೆದಿದ್ದು ಹುಂಡಿಯಲ್ಲಿದ್ದ ಹಣ ದೋಚಿ ಹುಂಡಿ ಬಿಸಾಕಿ ಕಳ್ಳರು ಪರಾರಿಯಾಗಿದ್ದಾರೆ. ಈ ದೇವಸ್ಥಾನ ಮಳವಳ್ಳಿಯ- ಬೆಂಗಳೂರು ರಸ್ತೆಯಲ್ಲಿ ಬರುತ್ತದೆ. ತಡರಾತ್ರಿ ದೇವಸ್ಥಾನದ ಬೀಗ ಹೊಡೆದು ಒಳನುಗ್ಗಿ ಹುಂಡಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಮೊದಲಿಗೆ ಬೀಗ ಹೊಡೆದು ದೇವಸ್ಥಾನಕ್ಕೆ ನುಗ್ಗಿದ ಖದೀಮರು ದೇವಸ್ಥಾನದ ಫ್ಯೂಸ್ ಕಿತ್ತು, ದೊಣ್ಣೆಯಲ್ಲಿ ಬಲ್ಪ್ ಗಳನ್ನ ಹೊಡೆದು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಬೆಂಗಳೂರಿನ ಶಿವಾಜಿನಗರದಲ್ಲಿ(Shivajinagar) ನರ್ಸರಿ ಶಾಲೆ ಕಟ್ಟಡವೊಂದು (School building collapsed) ಕುಸಿದುಬಿದ್ದಿದೆ. ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ರಾತ್ರೋ ರಾತ್ರಿ ಬಿದ್ದಿದೆ. ಪರಿಣಾಮ ಕಟ್ಟಡ ಅವಶೇಷದಡಿ ವಾಹನಗಳು ಸಿಲುಕಿ ಸಂಪೂರ್ಣವಾಗಿ ಜಖಂ ಆಗಿವೆ. ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ ವೇಳೆ ಕಟ್ಟಡ ಬಿದ್ದಿದೆ. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ. ಇದು ಬಿಬಿಎಂಪಿಗೆ ಸೇರಿದ ಇಂಗ್ಲಿಷ್ ಸ್ಕೂಲ್. ಈ ಸ್ಕೂಲ್ ನಲ್ಲಿ ಒಟ್ಟು 90 ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. ಅದರೆ, 90 ಮಕ್ಕಳ ಪೈಕಿ 75 ಮಕ್ಕಳು ಮಾತ್ರ ಪ್ರತಿದಿನ ಶಾಲೆಗೆ ಬರುತ್ತಿದ್ದರು. ದೇವರ ದೇವರ ದಯೆಯಿಂದ ಶಾಲಾ ಸಮಯದಲ್ಲಿ ಕಟ್ಟಡ ಬಿದ್ದಿಲ್ಲ. ಇದೀಗ ಸ್ಥಳಕ್ಕೆ ಜೆಸಿಬಿ ಆಗಮಿಸಿದ್ದು, ಕಟ್ಟಡದ ಅವಶೇಷಗಳನ್ನು ತೆರವು ಕಾರ್ಯ ನಡೆದಿದೆ. ಇನ್ನು ವಾಹನಗಳಿಗೆ ಹಾನಿಯಾಗಿದ್ದರಿಂದ ಮಾಲೀಕರು ಕಂಗಾಲಾಗಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಎಗ್ಗಿಲ್ಲದೇ ಟ್ರಾನ್ಸ್‌ಫರ್ ದಂಧೆ ನಡೆಯುತ್ತಿದ್ಯಾ ಎಂಬ ಅನುಮಾನ ಮೂಡಿದ್ದು, ಟ್ರಾನ್ಸ್‌ಫರ್ ಬಗ್ಗೆ ಕಾಂಗ್ರೆಸ್ ನಾಯಕನ ಸ್ಫೋಟಕ ಆಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ನಾಯಕ ಉಮಾಪತಿಗೌಡ ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ಜೊತೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ಸ್‌ಪೆಕ್ಟರ್ ಟ್ರಾನ್ಸ್‌ಫರ್‌ಗೆ ಉಮಾಪತಿಗೌಡ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. https://ainlivenews.com/a-woman-shows-a-fake-ticket-and-enters-the-airport/ ಅದೇ ಠಾಣೆಯಲ್ಲಿ ಉಳಿಸಲು ಇನ್ಸ್‌ಪೆಕ್ಟರ್ ಹಣ ನೀಡಿದ್ದಾರೆ. ಈ ಹಣವನ್ನ ಹೋಂ ಮಿನಿಸ್ಟರ್‌ಗೆ ಕೊಟ್ಟಿರೋ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪ ಮಾಡಲಾಗಿದೆ. ಸಚಿವರಿಗೆ ಹಣ ಕೊಟ್ಟಿರೋದಾಗಿ ಉಮಾಪತಿಗೌಡ ಹೇಳಿದ್ದಾರೆ. ನಾನು ಹೇಳಿದರೇ ನಮ್ಮ ಸರ್ಕಾರದಲ್ಲಿ ಕೆಲಸ ಆಗೇ ಆಗುತ್ತೆ ಎಂದು ಕಾಂಗ್ರೆಸ್ ನಾಯಕ ಉಮಾಪತಿಗೌಡ ಹೇಳಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಜನಸ್ಪಂದನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಹಮ್ಮಿಕೊಂಡಿದ್ದು ಸಾಲು ಸಾಲು ಸಮಸ್ಯೆಗಳ ಅಹವಾಲುಗಳನ್ನು ಹೊತ್ತು ಬೆಳಗ್ಗೆಯಿಂದಲೇ ಸಿಎಂ ಮನೆಯ ಮುಂದೆ ಸಾಕುಕಟ್ಟಿ ನಿಂತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರೆ ಖುದ್ದು ಜನರ ಸಮಸ್ಯೆಗಳನ್ನು ಆಲಿಸಿದ್ದು ನಾಡಿನ ವಿವಿಧೆಡೆಗಳಿಂದ ಆಗಮಿಸಿರುವ ಜನರು ತಮ್ಮ ಸಮಸ್ಯೆಗಳ ಅಹವಾಲುಗಳನ್ನು ಹೊತ್ತು ಸಿಎಂ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳಯವ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಆಗುತ್ತಿರುವ ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ಕಿರುಕುಳದ ಬಗ್ಗೆ ಬಡ ವ್ಯಾಪಾರಿ ನಿಂಗಮ್ಮ ಅವರಿಂದ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದರು. ತಕ್ಷಣ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಕರೆಸಿ ನಿಂಗಮ್ಮ ಅವರಿಗೇ ಕಿರುಕುಳ ತಪ್ಪಿಸುವಂತೆ ಖಡಕ್ ಸೂಚನೆ ನೀಡಿದರು. ವೃದ್ದಾಪ್ಯ ವೇತನ ಮಂಜೂರಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆಸಿ ತಾಂತ್ರಿಕ ತೊಂದರೆ ಇದ್ದರೆ ತಕ್ಷಣ…
ಬೆಂಗಳೂರು: ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ 2 ಸಿನಿಮಾದ ಟೀಸರ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮೊದಲ ಭಾಗದಂತೆಯೇ, ಎರಡನೇ ಭಾಗವನ್ನು ಸಹ ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಲಿದ್ದಾರೆ, ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನ ವಿಜಯ್ ಕಿರಂಗಂದೂರು ನಿರ್ಮಿಸಿರುವ ಈ ಸೀಕ್ವೆಲ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಿದೆ. ನಟ ರಿಷಬ್ ಶೆಟ್ಟಿ ಅವರ ಸಿನಿಪಯಣದ ದಿಕ್ಕನ್ನು ಬದಲಿಸಿದ ಸಿನಿಮಾ ಕಾಂತಾರ. ವಿಶ್ವವ್ಯಾಪಿ ಪ್ರೇಕ್ಷಕರ ಮನಗೆಲ್ಲುವುದರೊಂದಿಗೆ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣವನ್ನೂ ಬಾಚಿತ್ತು. ಇದೀಗ ಈ ಸಿನಿಮಾದ ಪ್ರೀಕ್ವೆಲ್ ತೆರೆಯ ಮೇಲೆ ಬರಲಿದ್ದು, ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.
ಶಿರಾ:- ಮಾಜಿ ಸಚಿವ ಆರ್. ಅಶೋಕ ಅವರು ಪ್ರತಿಕ್ರಿಯೆ ನೀಡಿ, ಜಾತಿ ಗಣತಿಗೆ ಬಿಜೆಪಿ ವಿರೋಧ ಇಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಜಾತಿ ಗಣತಿಯನ್ನು ಬಿಜೆಪಿ ಎಂದೂ ವಿರೋಧ ಮಾಡುವುದಿಲ್ಲ. ಆದರೆ, ಜಾತಿ ಗಣತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದರು. ವೀರಶೈವ ಎಂದು ಜಾತಿ ಒಡೆಯುವ ಕೆಲಸ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಜಾತಿ, ಜಾತಿಗಳನ್ನು ಎತ್ತಿಕಟ್ಟುವ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. https://ainlivenews.com/upi-id-with-no-transaction-for-1-year-upi-number-de-activate-reason/#google_vignette ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅವರ ಸಂಪುಟದ ಸದಸ್ಯರೇ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಈಗಾಗಲೇ ಸೋರಿಕೆಯಾಗಿದ್ದು, ಅವೈಜ್ಞಾನಿಕವಾಗಿದೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಕೆಟ್ಟ ಸಂಪ್ರದಾಯ ಆರಂಭಿಸಿದೆ. ಸಂಪುಟ ಸಭೆಯನ್ನು ದುರುಪಯೋಗ ಮಾಡಿಕೊಂಡಿದೆ ಎಂದು ತರಾಟೆಗೆ ತೆಗೆದುಕೊಂಡರು. ಈ ಹಿಂದೆ ಲೋಕಾಯುಕ್ತ ಸಂಸ್ಥೆ…
ಮಂಡ್ಯ:- ಜಾತಿ ಗಣತಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಜಾತಿ ಗಣತಿಯಿಂದ ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ರಾಜ್ಯದಲ್ಲಿ ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತಾರೆ ಎಂದರು. ನನಗೆ ಸಿದ್ದರಾಮಯ್ಯ ನವರ ಮೇಲೆ ನಂಬಿಕೆ ಇದೆ. ಸಿದ್ದರಾಮಯ್ಯ ನವರು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಿ ಜಾತಿಗಣತಿ ಜಾರಿಗೊಳಿಸುತ್ತಾರೆ. ವರದಿ ಸ್ವೀಕಾರವು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು ಎಂದರು. ಮುಖ್ಯಮಂತ್ರಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ, ಎಲ್ಲ ಸಮಾಜದ ಅಹವಾಲು ಕೇಳಿದ್ದಾರೆ. ಯಾವ ಸಮಾಜದ ಆತಂಕ ಇದೆ ಅದನ್ನ ಮುಖ್ಯಮಂತ್ರಿ ಮುಂದೆ ಪ್ರಸ್ತಾಪ ಮಾಡಲಾಗಿದೆ. ಇದನ್ನು ಕ್ರೂಢೀಕರಿಸಿ ಸೂಕ್ತ ತೀರ್ಮಾನ ಮಾಡುತ್ತಾರೆ, ವರದಿ ಸಲ್ಲಿಕೆ ಆದ ಮೇಲೆ ಆತಂಕ ಪಡಬೇಕು. ಆತಂಕ ಪಟ್ಟಿರುವುದು ಸೂಕ್ತವಾಗಿದೀಯಾ ಆಮೇಲೆ ಅದನ್ನ ಸರಿ ಮಾಡಬೇಕು. ವರದಿ ಬಂದ ಮೇಲೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. https://ainlivenews.com/upi-id-with-no-transaction-for-1-year-upi-number-de-activate-reason/#google_vignette ಕಾಂಗ್ರೆಸ್ ಪಕ್ಷದವರೇ…
ಕಲಬುರಗಿ: ಜಾತಿ ಗಣತಿ ಸಮೀಕ್ಷೆ ಹೊರಬಂದ್ರೆ ನಮ್ಮ ಸಮುದಾಯಕ್ಕೆ ಸಿಗುವ ಸವಲತ್ತುಗಳ ತಪ್ಪಿ ಹೋಗಬಹುದಾ ಅನ್ನೋ ಆಲೋಚನೆ ವಿರೋಧಿಸುವವರಿಗಿದೆ ಅಂತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕಾನಾಥ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದ್ವಾರಕನಾಥ್ ಮೊದಲು ಸಮೀಕ್ಷೆ ಪ್ರಕಟ ಆಗಲಿ.. ಅದರಲ್ಲಿ ಏನಿದೆ ಅಂತ ತಿಳಿಯದೇ ವಿರೋಧಿಸುವುದು ಸರಿಯಲ್ಲ ಅಂದ್ರು..ಎಲ್ಲೋ ಕುಳಿತು ಸಮೀಕ್ಷೆ ಮಾಡಿದ್ದಾರೆ ಅಂತ ಆರೋಪಿಸುವವರು ದಾಖಲೆ ಇಟ್ಟು ಮಾತಾಡಿದ್ರೆ ಒಳಿತು ಅಂತ ಹೇಳಿದ್ರು.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ 2.೦ ಹಾಗೂ ಜಿಲ್ಲೆಗಳ ಪ್ರಗತಿ ಪರಿಶೀಲನೆ ಕುರಿತಂತೆ ಡಿ.ಐ.ಎಸ್. ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಇ-ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ 2.0 ರಾಜ್ಯದ ಆಯವ್ಯಯದಲ್ಲಿ ಕೈಗೊಂಡ ಎಲ್ಲಾ ಇಲಾಖೆಗಳ ರೂ 1 ಕೋಟಿಗಿಂತ ಹೆಚ್ಚಿನ ಕಾಮಗಾರಿಗಳ ಪ್ರಗತಿಯನ್ನು ಸಮಯಬದ್ದವಾಗಿ ಮೇಲ್ವಿಚಾರಣೆ ಮಾಡಲು ಕಾಂಟ್ರಾಕ್ಟ್ ಮ್ಯಾನೇಜಮೆಂಟ್ ಮಾಡ್ಯೂಲ್‌ನಲ್ಲಿ ಡ್ಯಾಷ್‌ಬೋರ್ಡ್‌ನ್ನು ಇ-ಆಡಳಿತ ಇಲಾಖೆಯ ವತಿಯಿಂದ ಸಿದ್ದಪಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಅದರ ವ್ಯಾಪ್ತಿಯಲ್ಲಿರುವ ಎಲ್ಲಾ ಮಂಡಳಿಗಳು ಮತ್ತು ನಿಗಮಗಳಡಿ ನೀಡಲಾದ ರೂ.50 ಲಕ್ಷ ಮತ್ತು ಅದಕ್ಕಿಂತ…