ಕಲಬುರಗಿ: ಜಾತಿ ಗಣತಿ ಸಮೀಕ್ಷೆ ಹೊರಬಂದ್ರೆ ನಮ್ಮ ಸಮುದಾಯಕ್ಕೆ ಸಿಗುವ ಸವಲತ್ತುಗಳ ತಪ್ಪಿ ಹೋಗಬಹುದಾ ಅನ್ನೋ ಆಲೋಚನೆ ವಿರೋಧಿಸುವವರಿಗಿದೆ ಅಂತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕಾನಾಥ್ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದ್ವಾರಕನಾಥ್ ಮೊದಲು ಸಮೀಕ್ಷೆ ಪ್ರಕಟ ಆಗಲಿ.. ಅದರಲ್ಲಿ ಏನಿದೆ ಅಂತ ತಿಳಿಯದೇ ವಿರೋಧಿಸುವುದು ಸರಿಯಲ್ಲ ಅಂದ್ರು..ಎಲ್ಲೋ ಕುಳಿತು ಸಮೀಕ್ಷೆ ಮಾಡಿದ್ದಾರೆ ಅಂತ ಆರೋಪಿಸುವವರು ದಾಖಲೆ ಇಟ್ಟು ಮಾತಾಡಿದ್ರೆ ಒಳಿತು ಅಂತ ಹೇಳಿದ್ರು.