ರಂಜನಿ ಅವರು ನಿರ್ಮಿಸುತ್ತಿರುವ ಹಾಗೂ ಎಂ.ಶಂಕರ್ (M. Shankar) ನಿರ್ದೇಶನದ ‘ಮುದುಡಿದ ಎಲೆಗಳು’ (Mududida Yelegalu) ಚಿತ್ರದ ಮುಹೂರ್ತ (Muhurta) ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಗಿತು. ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರತಂಡದವರು ಹಾಗೂ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು. ಚಿತ್ರದ ಕುರಿತು ಮೊದಲು ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ಎಂ.ಶಂಕರ್, ನಮ್ಮ ರಿಯೊ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ನನ್ನ ಪತ್ನಿ ರಂಜನಿ ಈ ಚಿತ್ರದ ಸಹ ನಿರ್ಮಾಪಕಿ.ಮನುಷ್ಯ ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಬರೆದಿದ್ದೇನೆ. ಮುದುಡಿದ ಎಲೆಗಳು ಹೇಗೆ ಚದರಿ ಹೋಗುತ್ತದೆ. ಮತ್ತೆ ಹೇಗೆ ಒಂದಾಗುತ್ತದೆ ಎಂಬ ಅಂಶವನ್ನೂ ಕಥೆ ಆಧರಿಸಿದೆ. ಮೂವತ್ತು ದಿನಗಳ ಒಂದೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಹಾಡುಗಳು ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಈ ಚಿತ್ರದಲ್ಲಿ ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್ (Pankaj) ಹಾಗೂ ದರ್ಶನ್…
Author: AIN Author
ಚಿಕ್ಕಮಗಳೂರು:- ನನ್ನನ್ನು ಸುಮ್ನೆ ಕೆಣಕಬೇಡಿ ಪರಿಣಾಮ ಸರಿ ಇರಲ್ಲ ಎಂದು ಸಿಎಂ ಸಿದ್ದುಗೆ ಎಚ್‌ಡಿಕೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜಕಾರಣದಲ್ಲಿ ದ್ವೇಷ ಮಾಡುವುದಾದರೆ ಕುಮಾರಸ್ವಾಮಿಗೆ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನನ್ನು ದ್ವೇಷ ಮಾಡಲು ನಾನು ಅವರ ಆಸ್ತಿ ತಿಂದಿದ್ದೀನಾ, ಅವರು ನನ್ನ ಆಸ್ತಿ ತಿಂದಿದ್ದಾರಾ ಎಂದು ಪ್ರಶ್ನಿಸಿದರು. ನಾನು ಆರಾಮಾಗಿದ್ದೇನೆ, ಮಾನಸಿಕವಾಗಿ ನೀವು ಕೆಟ್ಟು ಹೋಗಿದ್ದಿರಾ, ಪ್ರತಿದಿನ ನಿದ್ದೆ ಗೆಟ್ಟಿರುವವರು ನೀವು, ನನ್ನನ್ನು ಕೆಣಕಲು ಹೋಗಬೇಡಿ ಎಂದರು. ಸಿಂಹ ಒಬ್ಬಂಟಿಯಾಗೇ ಹೋರಾಟ ಮಾಡೋದು, ಯಾರ ಮೇಲಾದ್ರು ದಾಳಿ ಮಾಡೋದಿಕ್ಕೆ. ಅದಕ್ಕಾಗಿ ನಾನು ಡ್ಯಾಶ್….ಡ್ಯಾಶ್….ಡ್ಯಾಶ್…. ಎಂದು ಟ್ವಿಟ್ ಮಾಡಿ ದ್ದೇನೆ. ಆ ಡ್ಯಾಶ್ ಏನೆಂದು ಅವರಿಗೆ ಅರ್ಥ ಆಗುತ್ತೆ ಎಂದರು. ಅವರು ವಕೀಲರು, ನಾನು ಅಡ್ವೋಕೇಟ್ ಅಲ್ಲ, ಅವರು ಕಾನೂನು ಪದವೀಧರರು, ಕಾನೂನು ಕಾಲೇಜಿನಲ್ಲಿ ಉಪನ್ಯಾಸಕ ಆಗಿದ್ದವರು. ಲಾಯರ್ ಗಳಿಗೆ ಎಷ್ಟರಮಟ್ಟಿಗೆ ಪಾಠ ಹೇಳಿದ್ರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಈ ರಾಜ್ಯದಲ್ಲಿ ಎಷ್ಟು ಜನ ಆಶ್ರಯ…
ಬೆಂಗಳೂರು:- ಮಾರ್ಷಲ್ ಗಳ ಸೇವೆಯನ್ನು ಸ್ಥಗಿತಗೊಳಿಸಬೇಕೆಂದು ಡಿಸಿಎಂ ಡಿಕೆಶಿವಕುಮಾರ್ ಅವರಿಗೆ ಎನ್ ಆರ್ ರಮೇಶ್ ಪತ್ರ ಬರೆದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮಾರ್ಷಲ್ ಸೇವೆ ಸ್ಥಗಿತಗೊಳಿಸಿಬೇಕು. 198 ವಾರ್ಡ್ ಗಳಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಲು, 2017 ರಲ್ಲಿ ಪ್ರತೀ ವಾರ್ಡ್ ಗೆ ಒಬ್ಬರಂತೆ ನಿವೃತ್ತ ಸೈನಿಕರು ಅಥವಾ NCC ತರಬೇತಿ ಪೂರ್ಣಗೊಳಿಸಿರುವವರನ್ನು ಮಾರ್ಷಲ್ ಗಳ ಹೆಸರಿನಲ್ಲಿ ನಿಯೋಜಿಸಿಕೊಳ್ಳುವ ಕಾರ್ಯಕ್ಕೆ ಅಂದಿನ ರಾಜ್ಯ ಸರ್ಕಾರವು ಚಾಲನೆ ನೀಡಿತ್ತಲ್ಲದೇ ಈ ಕಾರ್ಯವನ್ನು ಕಾರ್ಯರೂಪಕ್ಕೆ ತರುವ ಹೊಣೆಯನ್ನು Department of Sainik welfare & Re – settlement ” ಇಲಾಖೆಗೆ ವಹಿಸಲಾಗಿತ್ತು. ಅದಾದ ನಂತರ – ವಾರ್ಡ್ ಮಟ್ಟದ ಮಾರ್ಷಲ್ ಗಳು, MSGP ಘಟಕ, ಪಾಲಿಕೆ ಕಛೇರಿಗಳು, Wireless Operators, ಪ್ರಹರಿ ದಳ, ಕೆ.ಆರ್. ಮಾರ್ಕೆಟ್, ರಸೆಲ್ ಮಾರ್ಕೆಟ್, ಮಡಿವಾಳ ಮಾರ್ಕೆಟ್, ಕಲಾಸಿಪಾಳ್ಯ ಮಾರ್ಕೆಟ್ ಮತ್ತು ಭೂಭರ್ತಿ ಕೇಂದ್ರಗಳಲ್ಲಿ ಒಟ್ಟು 384 ಮಂದಿ…
ಬೆಂಗಳೂರು:- ಗ್ಯಾರಂಟಿ ಜಾರಿ ಪರಿಶೀಲನೆಗೆ ಕಾಂಗ್ರೆಸ್‌ನಿಂದ ಸಮಿತಿ ರಚಿಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಗ್ಯಾರಂಟಿ ಯೋಜನೆಗಳು ಮನೆಮನೆಗೆ ತಲುಪಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕಾಂಗ್ರೆಸ್ ಪಕ್ಷದಿಂದ ಸಮಿತಿ ರಚಿಸಲಾಗುವುದು ಎಂದರು. ಕಾಂಗ್ರೆಸ್ ಸಂಸ್ಥಾಪನಾ ದಿನವಾದ ನ.28ರಂದು ಸಮಿತಿಗೆ ಚಾಲನೆ ನೀಡಲಾಗುತ್ತದೆ. ಕಾರ್ಯಕರ್ತರು ರಾಜ್ಯದ ಪ್ರತಿ ಮನೆ ಹಾಗೂ ಬೂತ್‌ಗೆ ತೆರಳಿ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಜನರೊಂದಿಗೆ ಮಾತನಾಡಿ ಏನಾದರೂ ಬದಲಾವಣೆ ಅಗತ್ಯವಿದೆಯೇ, ಸಮಸ್ಯೆಯಿದೆಯೇ, ತಿದ್ದುಪಡಿಯಾಗಬೇಕಿದೆಯೇ ಎಂಬುದನ್ನು ಕೇಳಿ, ಅವರ ಸಮಸ್ಯೆಗೆ ಸ್ಪಂದಿಸಬೇಕು. ರಾಜ್ಯದ ಎಲ್ಲ ಘಟಕಗಳ ಅಧ್ಯಕ್ಷರು, ಶಾಸಕರು ಹಾಗೂ ಬ್ಲಾಕ್ ಅಧ್ಯಕ್ಷರು ಈ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು. ಪರಿಶೀಲನೆ ವೇಳೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಮತ ಹಾಕಿದರೆ, ಅವರು ಗ್ಯಾರಂಟಿ ಯೋಜನೆಗಳನ್ನು ವಾಪಸ್ ತೆಗೆದುಕೊಳ್ಳುವಂತಹ ಕಾನೂನು ತರುತ್ತಾರೆ ಎಂಬ ವಿಚಾರಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಜನರಿಗೆ ಮನವರಿಕೆ ಮಾಡಿಕೊಡಬೇಕು.…
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ವೇಗದ ಬೌಲರ್ ಮೊಹಮ್ಮದ್ ಶಮಿಯನ್ನು ತಮ್ಮ ಬ್ರ್ಯಾಂಡ್‌ನತ್ತ ಸೆಳೆಯಲು ಕಂಪನಿಗಳು ಸಾಲುಗಟ್ಟಿ ನಿಂತಿವೆ. ಇದರ ಬೆನ್ನಲ್ಲೇ ವಿಶ್ವಕಪ್‌ನಲ್ಲಿನ ಉತ್ತಮ ಪ್ರದರ್ಶನದಿಂದ ಅವರ ಬ್ರ್ಯಾಂಡ್ ಅನುಮೋದನೆ ಶುಲ್ಕ ದುಪ್ಪಟ್ಟಾಗಿದ್ದು, ವಿಶ್ವಕಪ್ ಅವಧಿಯಲ್ಲೇ 1 ಕೋಟಿ ರೂ.ಗೆ ಏರಿಕೆ ಕಂಡಿದೆ. ಈ ಮೂಲಕ ವಿಕೆಟ್ ಗಳಿಕೆಯ ದಾಖಲೆ ಮುರಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ನ ಹೊಸ ಪೋಸ್ಟರ್ ಬಾಯ್ ಆಗಿ ಅವರು ಹೊರಹೊಮ್ಮಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ ಪೌಷ್ಠಿಕಾಂಶಯುಕ್ತ ಮತ್ತು ಆರೋಗ್ಯ ಪಾನೀಯಗಳು, ಎಲೆಕ್ಟ್ರಾನಿಕ್ಸ್ ಮತ್ತು ಹೆಡ್‌ಫೋನ್ ಕಂಪನಿಗಳು ಶಮಿಯನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಳ್ಳಲು ಉತ್ಸುಕವಾಗಿವೆ ಎಂದು ಫ್ಲೇರ್ ಮೀಡಿಯಾ ಸಂಸ್ಥಾಪಕ ಸೌರಜಿತ್ ಚಟರ್ಜಿ ಹೇಳಿದ್ದಾರೆ. ಫ್ಲೇರ್ ಮೀಡಿಯಾ ಕೋಲ್ಕತ್ತಾ ಮೂಲದ ಅಥ್ಲೀಟ್ ಮತ್ತು ಕ್ರೀಡಾ ನಿರ್ವಹಣಾ ಕಂಪನಿಯಾಗಿದ್ದು 33 ವರ್ಷದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿಯ ಜಾಹೀರಾತು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ. “ನಾವು ಶೀಘ್ರದಲ್ಲೇ ಕೆಲವು ಪ್ರಮುಖ ಬ್ರ್ಯಾಂಡ್ ಡೀಲ್‌ಗಳನ್ನು ಎದುರು…
ಬೆಂಗಳೂರು’:- ಎಂಪಿ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಸ್ಥಾನ ಗೆಲ್ಲುವುದು ನಮ್ಮ ಗುರಿ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಕೆ ಆರ್ ಪೇಟೆ ನಮ್ಮ ತಂದೆಯವರಿಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ಈ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಪರಿಶ್ರಮದಿಂದ ನಾರಾಯಣ ಗೌಡರು ಗೆಲ್ಲುವುದರ ಮೂಲಕ ದಾಖಲೆಯನ್ನು ನಿರ್ಮಾಣ ಮಾಡಿದ್ದೇವೆ. ಕಳೆದ ಚುನಾವಣೆಯಲ್ಲಿ ಕೆಲವು ಬದಲಾವಣೆಗಳು ಆಗಿವೆ. ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ನಮ್ಮ ನಿರೀಕ್ಷೆಗೆ ತಕ್ಕ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ನಮ್ಮ ಮುಂದೆ ಎರಡು ಗುರಿಗಳಿವೆ, ಒಂದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸುವುದು ಎಂದರು. ಎರಡಯದಾಗಿ, ಕರ್ನಾಟಕ ದಕ್ಷಿಣ ಭಾರತದ ಬಿಜೆಪಿಯ ಭದ್ರಕೋಟೆಯಾಗಿ ಪರಿವರ್ತನೆಯಾಗಬೇಕು ಮತ್ತು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು, ಸ್ಪಷ್ಟ ಬಹುಮತವನ್ನು ಪಡೆಯುವುದಾಗಿದೆ. ಈ ಮೂಲಕ ಬಿಜೆಪಿ ನೇತೃತ್ವದಲ್ಲಿ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಬೆಂಗಳೂರು:- ನ.23ರಿಂದ 3 ದಿನ ಕರ್ನಾಟಕದಲ್ಲಿ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ನ.23 ರಿಂದ ನ.26ರ ವರೆಗೆ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ನ.23 ಹಾಗೂ 24ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣ ಉಷ್ಣಾಂಶ ದಾಖಲಾದ ವರದಿಯಾಗಿದೆ. ಭಾನುವಾರ ಬಾದಾಮಿ (29.1), ಬಾಗಲಕೋಟೆ (29.5), ಬೆಂಗಳೂರು ನಗರದಲ್ಲಿ (26.9) ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ
ಬೆಂಗಳೂರು:- ಬಿಜೆಪಿ ಟಿಕೆಟ್ ಹೆಸರಲ್ಲಿ 5 ಕೋಟಿ ರೂ. ವಂಚನೆ ಕುರಿತು ಚೈತ್ರಾ ಕುಂದಾಪುರ ಹಾಗೂ ಇತರ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಅದರ ಪ್ರತಿ ಲಭ್ಯವಾಗಿದೆ. ಚಿಕ್ಕಮಗಳೂರು ಮೂಲದ ಆರ್ಎಸ್ಎಸ್ ಪ್ರಚಾರಕ ವಿಶ್ವನಾಥ್ ಜೀ ಎಂಬ ಪಾತ್ರ ಸೃಷ್ಟಿಸಿದ್ದು, ಇದಕ್ಕೆ ತಕ್ಕಂತೆ ಸಂಭಾಷಣೆಯ ಸ್ಕ್ರೀಪ್ಟ್ ಸಿದ್ಧಪಡಿಸಲಾಗಿತ್ತು. ಈ ಪಾತ್ರವನ್ನು ಆರೋಪಿ ರಮೇಶ್ಗೆ ವಹಿಸಿ ತರಬೇತಿ ಕೂಡ ನೀಡಲಾಗಿತ್ತು. ಗೋವಿಂದ ಪೂಜಾರಿಗೆ ಮತ್ತು ಪ್ರಸಾದ್ ಬೈಂದೂರಿಗೆ, ಆರೋಪಿ ಗಗನ್ ಕಡೂರ್ ವಿಶ್ವನಾಥ್ ಜೀ (ರಮೇಶ್) ಯನ್ನು ಪರಿಚಯಿಸಿದ್ದ. ಆಗ ಗೋವಿಂದ ಬಾಬು, ನಾನು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವು ಸಮಾಜ ಸೇವೆ ಮಾಡುತ್ತಿದ್ದು, ಈ ಬಾರಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಹೇಗಾದರೂ ಮಾಡಿ ಬಿಜೆಪಿ ಟಿಕೆಟ್ ಕೊಡಿಸಿ ಎಂದು ಕೇಳಿಕೊಂಡಿದ್ದರು. ಬಳಿಕ ತಮ್ಮ ಪ್ರೋಫೈಲ್ ಅನ್ನು ವಿಶ್ವನಾಥ್ಗೆ ನೀಡಿದ್ದರು. ಗೋವಿಂದ ಬಾಬು ಬುಟ್ಟಿಗೆ ಬೀಳುತ್ತಿರುವುದನ್ನು ಖಚಿತಪಡಿಸಿಕೊಂಡ ವಿಶ್ವನಾಥ್, ಸಾಕಷ್ಟು ಹಣ ನೀಡಿದರೆ ನಿಮಗೆ ಟಿಕೆಟ್ ಸಿಗಬಹದು. ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು…
ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆಎಷ್ಟು ಒಳ್ಳೆಯದು ಗೊತ್ತಾ.. ಒಬ್ಬೊಬ್ಬರಿಗೆ ಹಸಿ ಸೊಪ್ಪು ವಾಸನೆ ಆಗಿ ಬರೋದಿಲ್ಲ ಆಗ ನೀವು ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡಿ ನೋಡಿ. ಮಕ್ಕಳಿಗೂ ಇದು ತುಂಬಾ ಇಷ್ಟವಾಗುವ ರೆಸಿಪಿ. ನೀವು ಕೂಡಾ ಈ ರೆಸಿಪಿಯನ್ನು ಮಾಡಿ ಇಲ್ಲಿದೆ ನೋಡಿ ಕೊತ್ತಂಬರಿ ಸೊಪ್ಪಿನ ಹುಳಿ ಮಾಡುವ ವಿಧಾನ! ಬೇಕಾಗುವ ಪದಾರ್ಥಗಳು… ಕೊತ್ತಂಬರಿ ಸೊಪ್ಪು- 1 ಸಣ್ಣ ಗೊಂಚಲು ಜೀರಿಗೆ – 1/2 ಚಮಚ ಹಸಿರು ಮೆಣಸಿನಕಾಯಿ- 1 ತುರಿದ ತೆಂಗಿನಕಾಯಿ – 1/2 ಬಟ್ಟಲು ಮೊಸರು- 1 ಬಟ್ಟಲು ಕೆಂಪು ಮೆಣಸಿನಕಾಯಿ-1 ಅಡುಗೆ ಎಣ್ಣೆ / ತುಪ್ಪ- 2 ಚಮಚ ಸಾಸಿವೆ- ಸ್ವಲ್ಪ ಕರಿಬೇವು-ಸ್ವಲ್ಪ ಇಂಗು-ಸ್ವಲ್ಪ ಉಪ್ಪು- ರುಚಿಗೆ ತಕ್ಕಷ್ಟು ಮಾಡುವ ವಿಧಾನ… ಕೊತ್ತಂಬರಿ ಸೊಪ್ಪನ್ನು ಸ್ವಚ್ಛಗೊಳಿಸಿ, ಚೆನ್ನಾಗಿ ತೊಳೆಯಿರಿ. ನಂತರ ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಬಾಣಲೆಯನ್ನು ಬಿಸಿ ಮಾಡಿ, ಎಣ್ಣೆ ಹಾಗೂ ಜೀರಿಗೆಯನ್ನು ಹಾಕಿ. ನಂತರ ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ…
ಲಕ್ಸೆಂಬರ್ಗ್ (Luxembourg) ಜಗತ್ತಿನ ಶ್ರೀಮಂತ ದೇಶಗಳಲ್ಲಿ ಒಂದು. ಆದರೆ ಇಲ್ಲಿನ ಶ್ರೀಮಂತಿಕೆಯೇ ಜನರಿಗೆ ಮುಳುವಾಗಿದೆ. ಶ್ರೀಮಂತ ದೇಶವಾದ ಕಾರಣ ಲಕ್ಸೆಂಬರ್ಗ್ ನಲ್ಲಿ ವಾಸಿಸುವುದೇ ಕಷ್ಟವಾಗಿದೆ. ಇಲ್ಲಿ ಮನೆಯನ್ನು ಬಾಡಿಗೆಗೆ ಪಡೆಯುವುದಾಗಲೀ ಅಥವಾ ಮನೆಯನ್ನು ಖರೀದಿಸುವುದು ಸುಲಭ ಸಾಧ್ಯವಲ್ಲ. ಇದರಿಂದ ಅಲ್ಲಿ ವಾಸಿಸುವ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಲಕ್ಸೆಂಬರ್ಗ್ ನ ಹೆಚ್ಚಿನ ನಾಗರಿಕರು ಉದ್ಯೋಗಸ್ಥರೇ ಆಗಿರುವುದರಿಂದ ಇದು ಶ್ರೀಮಂತ ದೇಶವಾಗಿ ಹೊರಹೊಮ್ಮಿದೆ. ಐರೋಪ್ಯ ಒಕ್ಕೂಟದ ಶ್ರೀಮಂತ ವ್ಯಕ್ತಿಗಳು ಈ ದೇಶದಲ್ಲಿದ್ದಾರೆ. ಇಲ್ಲಿ ಮನೆ ಬಾಡಿಗೆ (Rent) ದುಬಾರಿಯಾಗಿದ್ದು ಜನರಿಗೆ ಅದನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಇಲ್ಲಿ ನೆಲೆಸುವ ಅರ್ಧದಷ್ಟು ಮಂದಿ ಅಲ್ಲಿನ ನಾಗರಿಕರಲ್ಲ. ಲಕ್ಸೆಂಬರ್ಗ್ ನಲ್ಲಿ ಫ್ಲಾಟ್ ಗಳು ಪ್ರತಿ ಚದರ ಮೀಟರ್ ಗೆ 10,700 ರಿಂದ 13,000 ಯುರೋಗಳಿಗೆ ಲಭ್ಯವಿದೆ. ಇಲ್ಲಿ ಒಂದು ಮನೆಯ ಸರಾಸರಿ ವೆಚ್ಚ 1.5 ಮಿಲಿಯನ್ ಯುರೋಗಳು. ದುಬಾರಿ ಬೆಲೆಯ ಕಾರಣದಿಂದಲೇ ಅನೇಕ ಜನರಿಗೆ ಅಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ವಿಪರೀತ ಹಣದುಬ್ಬರವಾದ್ದರಿಂದ ಮನೆಯನ್ನು ಖರೀದಿಸುವದರಲ್ಲಿ…