ಚಿಕ್ಕಮಗಳೂರು:- ನನ್ನನ್ನು ಸುಮ್ನೆ ಕೆಣಕಬೇಡಿ ಪರಿಣಾಮ ಸರಿ ಇರಲ್ಲ ಎಂದು ಸಿಎಂ ಸಿದ್ದುಗೆ ಎಚ್ಡಿಕೆ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜಕಾರಣದಲ್ಲಿ ದ್ವೇಷ ಮಾಡುವುದಾದರೆ ಕುಮಾರಸ್ವಾಮಿಗೆ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನನ್ನು ದ್ವೇಷ ಮಾಡಲು ನಾನು ಅವರ ಆಸ್ತಿ ತಿಂದಿದ್ದೀನಾ, ಅವರು ನನ್ನ ಆಸ್ತಿ ತಿಂದಿದ್ದಾರಾ ಎಂದು ಪ್ರಶ್ನಿಸಿದರು.
ನಾನು ಆರಾಮಾಗಿದ್ದೇನೆ, ಮಾನಸಿಕವಾಗಿ ನೀವು ಕೆಟ್ಟು ಹೋಗಿದ್ದಿರಾ, ಪ್ರತಿದಿನ ನಿದ್ದೆ ಗೆಟ್ಟಿರುವವರು ನೀವು, ನನ್ನನ್ನು ಕೆಣಕಲು ಹೋಗಬೇಡಿ ಎಂದರು.
ಸಿಂಹ ಒಬ್ಬಂಟಿಯಾಗೇ ಹೋರಾಟ ಮಾಡೋದು, ಯಾರ ಮೇಲಾದ್ರು ದಾಳಿ ಮಾಡೋದಿಕ್ಕೆ. ಅದಕ್ಕಾಗಿ ನಾನು ಡ್ಯಾಶ್….ಡ್ಯಾಶ್….ಡ್ಯಾಶ್…. ಎಂದು ಟ್ವಿಟ್ ಮಾಡಿ ದ್ದೇನೆ. ಆ ಡ್ಯಾಶ್ ಏನೆಂದು ಅವರಿಗೆ ಅರ್ಥ ಆಗುತ್ತೆ ಎಂದರು.
ಅವರು ವಕೀಲರು, ನಾನು ಅಡ್ವೋಕೇಟ್ ಅಲ್ಲ, ಅವರು ಕಾನೂನು ಪದವೀಧರರು, ಕಾನೂನು ಕಾಲೇಜಿನಲ್ಲಿ ಉಪನ್ಯಾಸಕ ಆಗಿದ್ದವರು. ಲಾಯರ್ ಗಳಿಗೆ ಎಷ್ಟರಮಟ್ಟಿಗೆ ಪಾಠ ಹೇಳಿದ್ರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಈ ರಾಜ್ಯದಲ್ಲಿ ಎಷ್ಟು ಜನ ಆಶ್ರಯ ಕಮಿಟಿ ಅಧ್ಯಕ್ಷರಿಲ್ಲ, ಅವರಿಗೆ ಕೊಟ್ಟಿರುವ ಪವರ್ ಏನು? ನಿಮ್ಮ ಮಗನಿಗೆ ಕೊಟ್ಟಿರುವ ಪವರ್ ಏನು? ರಾಜಕೀಯ ಮಾಡುವುದಕ್ಕೆ ತಕರಾರು ಇಲ್ಲ, ಆದ್ರೆ, ಅವರು ಈ ಹಿಂದೆ ಎಂಎಲ್ಎ ಆಗಿದ್ದವರು ಕ್ಷೇತ್ರದ ಜನರ ಕಷ್ಟ, ನಷ್ಟ ನೋಡಲು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಿರೀ, ಆಶ್ರಯ ಸಮಿತಿ ಅಧ್ಯಕ್ಷರಿಗೆ ಕೆಡಿಪಿ ಸಭೆ ಮಾಡುವ ಅಧಿಕಾರ ಇದಿಯಾ? ಎಂದು ಪ್ರಶ್ನಿಸಿದ್ದಾರೆ.