ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಬಿಜೆಪಿಯ ಮಾಜಿ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಿದ್ದು ಪುತ್ರಿ ವಿವಾಹ ಕಾರ್ಯಕ್ರಮದ ಆಮಂತ್ರಣ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ನನ್ನ ಮಗಳ ಮದುವೆಯ ಆಮಂತ್ರಣ ಪತ್ರ ಕೊಡಲು ಬಂದಿದ್ದೆ ಡಿಸಿಎಂ ಅವರು ಮದುವೆಗೆ ಬರುವುದಾಗಿ ಹೇಳಿದ್ದಾರೆ ಸಿಎಂ ಅವರನ್ನ ಭೇಟಿ ಮಾಡಿ ಆಮಂತ್ರಣ ಕೊಡುತ್ತೆನೆ ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ ಇದು ನನ್ನ ವೈಯಕ್ತಿಕ ಭೇಟಿ ಎಂದು ಡಿಕೆಶಿ ಭೇಟಿ ಬಳಿಕ ಮಾಜಿ ಸಚಿವ ರಾಮುಲು ಹೇಳಿಕೆ ನೀಡಿದ್ದಾರೆ.
Author: AIN Author
ಬೆಂಗಳೂರು: ಬಿಜೆಪಿ ಪಕ್ಷದ ವಿರೋಧ ಪಕ್ಷದ ನಾಯಕನಾಗಿ ಅಶೋಕ್ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಅವರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಭೇಟಿಯಾದರು. ಬೆಂಗಳೂರಿನ ವಿಜಯನಗರದ ಬಿಜಿಎಸ್ ಶಾಖ ಮಠದಲ್ಲಿ ಇಂದು ಬೆಳಿಗ್ಗೆ ಶಾಸಕರಾದ ಕೆ.ಗೋಪಾಲಯ್ಯನವರು ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರ ಆಶೀರ್ವಾದವನ್ನು ಪಡೆದರು. ಹಾಗೆ ಸ್ವಾಮಿಜಿಯವರು ಅಶೀಕ್ ಅವರಿಗೆ ಹೂವಿನಮಾಳೆ ಹಾಕಿ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಶಾಸಕರಾದ ಎಸ್. ಮುನಿರಾಜು ಹಾಗೂ ಮುಖಂಡರು ಉಪಸ್ಥಿತರಿದ್ದರು.
‘ಮಜಾಭಾರತ’ (Majabharatha) ಖ್ಯಾತಿಯ ಸುಶ್ಮಿತಾ (Sushmitha) ಮತ್ತು ಜಗಪ್ಪ (Jagappa) ಜೋಡಿ ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಕನ್ನಡ ಕಿರುತೆರೆಯ ಸೆಲೆಬ್ರಿಟಿಗಳ ದಂಡೇ ಸುಶ್ಮಿತಾ, ಜಗಪ್ಪ ಮದುವೆಗೆ ಆಗಮಿಸಿ ಹಾರೈಸಿದ್ದಾರೆ. ನಿನ್ನೆಯಷ್ಟೇ (ನ.18) ಸುಶ್ಮಿತಾ-ಜಗಪ್ಪ ಮೆಹೆಂದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಇಂದು (ನವೆಂಬರ್ 19) ಸಿಂಧೂರ ಕನ್ವೆಷನ್ ಹಾಲ್ ಜೆ.ಪಿ ನಗರ ಬೆಂಗಳೂರಿನಲ್ಲಿ ಮದುವೆ ಅದ್ದೂರಿಯಾಗಿ ನಡೆದಿದೆ. ಬೆಳಿಗ್ಗೆ 10 ಗಂಟೆಯ ಶುಭ ಮುಹೂರ್ತ ಮದುವೆದಲ್ಲಿ (Wedding) ನೆರವೇರಿದೆ ಮದುವೆಗೆ ರವಿಚಂದ್ರನ್, ಪ್ರಜ್ವಲ್ ದೇವರಾಜ್, ಸಿತಾರಾ, ನಿರಂಜನ್ ದೇಶಪಾಂಡೆ ದಂಪತಿ, ಮಂಜು ಪಾವಗಡ, ಮಜಭಾರತ ರಿಯಾಲಿಟಿ ಶೋ ತಂಡ ಸೇರಿದಂತೆ ಹಲವರು ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಅಂದಹಾಗೆ ಇತ್ತೀಚೆಗೆ ಜಗಪ್ಪ ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಸುಶ್ಮಿತಾ ಭಿನ್ನವಾಗಿ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ್ದರು. ಸದ್ಯ ನವ ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.
ನವದೆಹಲಿ: ವಿಶ್ವಕಪ್ 2023ರ ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ಬರೆದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು (Virat Kohli) ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಹಾಡಿ ಹೊಗಳಿದ್ದಾರೆ. ವಿರಾಟ್ ಕೊಹ್ಲಿ ಹೊಂದಿರುವ ಸಮರ್ಪಣೆ ಮತ್ತು ಉತ್ಸಾಹವು ಅಜೇಯವಾಗಿದೆ. ಸಮರ್ಪಣೆ ಮತ್ತು ಕಠಿಣ ಪರಿಶ್ರಮವಿಲ್ಲದೆ ಈ ಸ್ಥಾನವನ್ನು ತಲುಪಲು ಸಾಧ್ಯವಿಲ್ಲ. ವಿಶೇಷವಾಗಿ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಯನ್ನು ಮುರಿಯಲು ಅಸಾಧ್ಯವೆಂದು ಪರಿಗಣಿಸಲಾಗಿತ್ತು ಎಂದು ಸಲ್ಮಾನ್ ಹೇಳಿದ್ದಾರೆ. ಕೊಹ್ಲಿ ಅವರು ಈ ಸ್ಥಾನವನ್ನು ತಲುಪಲು ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಇದು ನಿಜವಾಗಿಯೂ ಶ್ಲಾಘನೀಯ ಎಂದು ಖಾನ್ ಬಣ್ಣಿಸಿದ್ದಾರೆ. ತಂಡದ ಕುರಿತು ಮಾತನಾಡಿದ ಬಾಲಿವುಡ್ ನಟ, ವಿಶ್ವಕಪ್ ಟ್ರೋಫಿಗೆ ಭಾರತ ತಂಡ 100 ಪ್ರತಿಶತ ಅರ್ಹ. ಈ ಟ್ರೋಫಿ ಭಾರತದಲ್ಲಿ ಮಾತ್ರ ಉಳಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ನನ್ನ ಅಭಿಪ್ರಾಯ. ಭಾರತ ತಂಡ ಇದುವರೆಗೂ ಉತ್ತಮ ಪ್ರದರ್ಶನ ತೋರಿದ್ದು, ಫೈನಲ್ ಪಂದ್ಯವನ್ನು ಕಳೆದುಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದಿದ್ದಾರೆ.
ಬೆಂಗಳೂರು: ಯಾರದ್ದೋ ಮಾತು ಕೇಳಿ ದುಡ್ಡು ವಸೂಲಿ ಮಾಡಿದ್ದ ಪ್ರೋಬೇಶನರಿ ಪಿ ಎಸ್ ಐ ಅರೆಸ್ಟ್ ಸಿದ್ದಾರೂಡ್ ಪಿಎಸ್ ಐ ಸಿದ್ದರೋಡ್, ರಾಜ್ ಕಿಶೋರ್ , ಅಲ್ಲಾಬಾಕಾಶ್ ಬಂಧಿತ ಅರೋಪಿಗಳಾಗಿರುತ್ತಾರೆ. ಈ ಹಿಂದೆ ಕೇಸ್ ಕೆಜಿ ಹಳ್ಳಿಯಲ್ಲಿ ಕೇಸ್ ಆದಾಗ ಮಡಿವಾಳ ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಪಿ ಎಸ್ ಐ… ಹಲವು ತಿಂಗಳ ಹಿಂದೆ ಪ್ರೊ ಪಿ ಎಸ್ ಐ ಗೆ ತಾನೊಬ್ಬ ಹೋಮ್ ಗಾರ್ಡ್ ಎಂದು ಪರಿಚಯ ಮಾಡಿಕೊಂಡಿದ್ದ ರಾಜ್ ಕಿಶೋರ್..ಸದ್ಯ ಎಲ್ಲಿಯೂ ಹೋಮ್ ಗಾರ್ಡ್ ಕೆಲಸ ಮಾಡದ ರಾಜ್ ಕಿಶೋರ್ https://ainlivenews.com/terminate-service-of-marshals-dcm-dk/ ಪಿ ಎಸ್ ಐ ಗೂ ಹೋಮ್ ಗಾರ್ಡ್ ಭದ್ರತೆಯಲ್ಲಿ ಹೋದಾಗ ಪರಿಚಯ ಆಗುತ್ತೆ ಠಾಣೆ ಹತ್ರ ಬೈಕ್ ಸ್ಟಾರ್ಟ್ ಮಾಡಲು ಯತ್ನಸುವಾಗ ಬಂದಿದ್ದ ರಾಜ್ ಕಿರೋಶ್ ಬೈಕ್ ಸಮಸ್ಯೆ ಆಗಿದೆ ತಾನೆ ರಿಪೇರಿ ಮಾಡಿಸುತ್ತೆನೆ ಎಂದು ಹತ್ತಿರವಾಗಿದ್ದ..ನಮ್ಮ ಅಣ್ಣನಿಗೆ ಹಣ ಬರ್ಬೇಕು ನೀವು ಬನ್ನಿ ಸಾರ್ ಕೊಡಿಸಿ ಎಂದು ಹೇಳಿದ್ದಾನೆ. ಆಗ ಪಿ…
ಭಾಗ್ಯಶ್ರೀ (Bhagyashree) ಅವರ ಬಿಗ್‌ಬಾಸ್ (Big Boss Kannada) ಪ್ರಯಾಣ ಈ ವಾರ ಕೊನೆಗೊಂಡಿದೆ. ಕೆಲವೊಮ್ಮೆ ಪರಿಶ್ರಮದಿಂದ, ಇನ್ನು ಕೆಲವೊಮ್ಮೆ ಅದೃಷ್ಟದ ಬಲದಿಂದ ಮಿಂಚುತ್ತ ಉಳಿದುಕೊಂಡಿದ್ದ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇಷ್ಟು ವಾರಗಳ ಕಾಲ ಅವರ ಬದುಕು ಹೇಗಿತ್ತು, ಮನೆಯಿಂದ ಹೊರಗೆ ಬರಲು ಕಾರಣವಾದ ಸಂಗತಿಗಳು ಯಾವವು, ಅವರ ಪ್ರಕಾರ ಮನೆಯೊಳಗೆ ಯಾರು ಫೇಕ್, ಯಾರು ಜೆನ್ಯೂನ್? ಈ ಎಲ್ಲದರ ಕುರಿತು ಭಾಗ್ಯಶ್ರೀ, ಬಿಗ್‌ಬಾಸ್ ಮನೆಯಿಂದ ಹೊರಬಂದು ಮರುಕ್ಷಣವೇ JioCinemaಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ. ಬಿಗ್‌ಬಾಸ್ ಮನೆಯಿಂದ ಈಗ ಜಸ್ಟ್ ಹೊರಗೆ ಬಂದಿದೀನಿ. ಇದು ಕೊನೆ ಅಂತ ಖಂಡಿತವಾಗಲೂ ಹೇಳೋದಿಲ್ಲ. ಅಲ್ಲಿ ತೆಗೆದುಕೊಂಡಿರುವ ಅನುಭವಗಳು ನನ್ನ ಜೀವನದಲ್ಲಿ ಹೊಸ ಪ್ರಾರಂಭ ಅಂತಲೇ ಹೇಳ್ತೀನಿ. ಈವತ್ತು ಮನೆಯಿಂದ ಹೊರಗಡೆ ಬರ್ತೀನಿ ಅಂತ ನಿರೀಕ್ಷೆ ಮಾಡಿದ್ದೆ. ಎಲ್ರೂ ನನ್ನ ನೋಡ್ತಿದ್ದ ರೀತಿ ಹೇಗಿತ್ತು ಅಂದ್ರೆ, ‘ಇವ್ರು ಟಾಸ್ಕ್‌ನಲ್ಲಿ ತುಂಬ ಹಿಂದೆ ಉಳಿಯುತ್ತಾರೆ’ ಎಂದೇ ನೋಡುತ್ತಿದ್ದರು. ಗ್ರೂಪ್‌ಗೆ ನನ್ನ ತೆಗೆದುಕೊಳ್ಳಬೇಕಾದರೆ, ನಾನು…
ಅಹಮ್ಮದಾಬಾದ್: ವಿಶ್ವಕಪ್ 2023 ರಲ್ಲಿ (World Cup 2023) ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದ ಬೆನ್ನಲ್ಲೇ ಇದೀಗ ತಂಡದ ಆಟಗಾರ ಮಿಚೆಲ್ ಮಾರ್ಷ್ (Mitchell Marsh) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹೌದು. ಮಿಚೆಲ್ ಟ್ರೋಫಿ (World Cup Trophy) ಮೇಲೆ ಕಾಲಿಟ್ಟು ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ರೋಫಿಗೆ ಅಗೌರವ ಸೂಚಿಸಿರುವ ಮಿಚೆಲ್ ನಡೆಯನ್ನು ಜನ ಖಂಡಿಸಿದ್ದು, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಮಿಚೆಲ್ ಅವರು ತಮ್ಮ ಎರಡೂ ಕಾಲುಗಳನ್ನು ವಿಶ್ವಕಪ್ ಟ್ರೋಫಿಯ ಮೇಲೆ ಇಟ್ಟು ಗೆದ್ದು ಬೀಗಿದ್ದೇವೆ ಎಂಬ ಸಿಂಬಲ್ ತೋರಿಸಿದ್ದಾರೆ. ಈ ಫೋಟೋವನ್ನು ಆರಂಭದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ಇನ್‍ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಮ್ಮಿನ್ಸ್ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಇದು ಭಾರೀ ವೈರಲ್ ಆಯಿತು. ಮಿಚೆಲ್ ವಿಶ್ವಕಪ್‍ಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗುತ್ತಿದೆ. ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದ ಕೆಲವೇ ಗಂಟೆಗಳ ನಂತರ ಈ…
ಅಮರಾವತಿ: ವಿಶಾಖಪಟ್ಟಣಂನ (Visakhapatnam) ಬಂದರಿನಲ್ಲಿ (Fishing Harbour) ಭಾನುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 40 ಮೀನುಗಾರಿಕಾ ದೋಣಿಗಳು (Boat) ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಸುಮಾರು 30 ಕೋಟಿ ರೂ. ನಷ್ಟವಾಗಿದೆ. ಕೆಲವು ಕಿಡಿಗೇಡಿಗಳು ದೋಣಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮೀನುಗಾರರು ಶಂಕಿಸಿದ್ದಾರೆ. ಘಟನೆಯ ಬಳಿಕ ಅಗ್ನಿಶಾಮಕ ದಳ ಬೆಂಕಿ ಆರಿಸಲು ಹರಸಾಹಸ ಪಟ್ಟರು. ಕೆಲವು ದೋಣಿಗಳಲ್ಲಿ ಸಿಲಿಂಡರ್, ಇಂಧನ ಟ್ಯಾಂಕ್‌ಗಳಿಗೆ ಬೆಂಕಿ ತಗುಲಿದ್ದರಿಂದ ಅವಘಡ ಸಂಭವಿಸಿದ್ದು, ಪ್ರದೇಶದ ಜನರು ಘಟನೆಯಿಂದ ಭೀತಿಗೊಂಡರು. ರಾತ್ರಿ 11:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ರೆಡ್ಡಿ ತಿಳಿಸಿದ್ದಾರೆ. https://ainlivenews.com/geo-scientist-statue-murder-case-explosive-issue-comes-to-light-during-investigation/ ದೋಣಿಗಳಲ್ಲಿನ ಸಿಲಿಂಡರ್‌ಗಳು ಸ್ಫೋಟಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ನಾವು ಜನರನ್ನು ದೂರವಿರಲು ಕೇಳುತ್ತಿದ್ದೇವೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ಕಾರ್ಯನಿರ್ವಹಿಸುತ್ತಿವೆ. ಬೆಂಕಿಗೆ ಕಾರಣವನ್ನು ಇನ್ನೂ ದೃಢಪಡಿಸಲಾಗಿಲ್ಲ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಈ ಕುರಿತು ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಆನಂದ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಕಿಚ್ಚನ ಮನೆ ಮುಂದೆ ವ್ಯಕ್ತಿಯೊಬ್ಬನ ಅತಿರೇಕದ ವರ್ತನೆ ಕಂಡು ಸೆಕ್ಯೂರಿಟಿ ಗಾರ್ಡ್ ಗಳು ಶಾಕ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿ ಕೊಡಿ ಅಂತ ರಾತ್ರೋ ರಾತ್ರಿ ಕಿಚ್ಚನ ಮನೆ ಮುಂದೆ ವ್ಯಕ್ತಿಯೊಬ್ಬ ಹೈ ಡ್ರಾಮ ಮಾಡಿದ್ದಾನೆ. ಚಾನ್ಸ್ ಕೇಳೋಕೆ ಅಂತ ಎತ್ತಿನ ಗಾಡಿ ಮೂಲಕ ಬಂದಿರೋ ಮಂಜು ಅನ್ನೋ ವ್ಯಕ್ತಿ ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ 10ಗಂಟೆವರೆಗೂ ಸುದೀಪ್ ಮನೆ ಮುಂದೆ ಕಾದು ನಿಂತಿದ್ದಾನೆ. ಟಿ ನರಸಿಪುರದಿಂದ ಬಂದಿದಿನಿ ಅಂತ ಹೇಳಿದ್ದ ಮಂಜು, ನಾವು ಅನಕ್ಷರಸ್ತರು ರೈತರು ಬಿಗ್ ಬಾಸ್ ಹೋಗಲು ಅವಕಾಶ ಕೊಡಿ ಅಂತ ಎತ್ತಿನ ಗಾಡಿ ತಂದು ಸುದೀಪ್ ಮನೆ ಮುಂದೆ ನಿಲ್ಲಿಸಿದ್ದ. ನಂತರ ಸುದೀಪ್ ಮನೇಲಿಲ್ಲ ಚೆನ್ನೈ ಹೋಗಿದ್ದಾರೆ ಅಂತ ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳಿಸಿದ್ದಾರೆ. ಮಂಜು ಹೇಳುವ ಪ್ರಕಾರ ಮನೆಯೊಳಗಿದ್ದ ವ್ಯಕ್ತಿಯೊಬ್ಬ ಮಂಜುಗೆ ಅವಾಚ್ಯಶಬ್ದಗಳಿಂದ ನಿಂದನೆ ಮಾಡಿದ್ರಂತೆ. ಧಮಾಕಿ ಸಹ ಹಾಕಿದ್ದಾರೆ ಅಂತ ಆರೋಪಿಸಿದ್ದಾನೆ. ಎತ್ತಿನ ಗಾಡಿಗೆ…
ಹುಬ್ಬಳ್ಳಿ: ಹುಬ್ಬಳ್ಳಿಯ ಧೀನಬಂದು ಕಾಲೋನಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಏಕೆಂದರೆ ಮದ್ಯಸೇವಿಸಿ ನಡುರಸ್ತೆಯಲ್ಲಿ ಚಾಕು ಹಿಡಿದು ವ್ಯಕ್ತಿ ಓಡಾಡುತ್ತಿದ್ದಾನೆ. ವಿನೋದ್ ನಡುಗಟ್ಟಿ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಚಾಕು ಹಿಡಿದು ಓಡಾಡುತ್ತಿದ್ದಾನೆ. ಕಳೆದ ಒಂದು ವಾರದಿಂದ ಇದೇ ಸ್ಥಿತಿ ಇದ್ದು ವಿನೋದ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.