ಡಾಲಿ, ರಮ್ಯಾ (Ramya) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಉತ್ತರಕಾಂಡ’ಗೆ (Uttarakanda Film) ಶೂಟಿಂಗ್‌ಗೆ ಶಿವಣ್ಣನ ಎಂಟ್ರಿಯಾಗಿದೆ. ರಮ್ಯಾ ಕಮ್‌ಬ್ಯಾಕ್ ಚಿತ್ರಕ್ಕೆ ಶಿವರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಇದರ ಬಗ್ಗೆ ನಿರ್ಮಾಣ ಸಂಸ್ಥೆ ‘ಕೆಆರ್‌ಜಿ’ ಸ್ಟುಡಿಯೋ ಮಾಹಿತಿ ನೀಡಿದೆ. ಉತ್ತರಕಾಂಡ’ (Uttarakanda) ಸಾಕಷ್ಟು ವಿಚಾರಗಳಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಮ್ಯಾ ಕಮ್ ಬ್ಯಾಕ್ ಚಿತ್ರ ಎಂಬ ನಿರೀಕ್ಷೆಯ ಜೊತೆ ಹಿಟ್ ಜೋಡಿ ಡಾಲಿ- ಶಿವಣ್ಣ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿರೋದು ಮತ್ತೊಂದು ಖುಷಿ. ಸದ್ಯ ಶೂಟಿಂಗ್‌ಗೆ ಹಾಜರಿ ಹಾಕಿರುವ ಶಿವಣ್ಣಗೆ ಚಿತ್ರತಂಡ ಸ್ವಾಗತ ಕೋರಿದೆ. ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಜೈಲರ್, ಘೋಸ್ಟ್ ಚಿತ್ರದ ಸಕ್ಸಸ್ ನಂತರ ‘ಉತ್ತರಕಾಂಡ’ ಶೂಟಿಂಗ್‌ಗೆ ಎಂಟ್ರಿ ಕೊಟ್ಟಿರೋ ಶಿವರಾಜ್‌ಕುಮಾರ್‌ಗೆ ಈ ಚಿತ್ರದಲ್ಲಿ ಖಡಕ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ ‘ಜೈಲರ್’ (Jailer) ಸಕ್ಸಸ್ ಬಳಿಕ ಶಿವಣ್ಣಗೆ ತಮಿಳಿನಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ…
Author: AIN Author
ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ 2 ಸಿನಿಮಾದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿವೆ. ಸಿನಿಮಾ ಮಹೂರ್ತದ (Muhurta) ಕುರಿತಂತೆ ಪಂಜುರ್ಲಿ (Panjurl) ಮತ್ತು ಗುಳಿಗ ದೈವಕ್ಕೆ ಚಿತ್ರತಂಡ ಮೊರೆ ಹೋಗಿದ್ದು, ದೈವಗಳು ಅಸ್ತು ಎಂದಿವೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಸಿನಿಮಾ ತಂಡ ಮುಹೂರ್ತಕ್ಕೆ ಸರ್ವ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದು ಸಮಾಚಾರವೆಂದರೆ, ಈ ಸಿನಿಮಾದಲ್ಲಿ 14ನೇ ಶತಮಾನದಿಂದ ಶುರುವಾಗುವ ಕಥೆ ಕೂಡ ಇರಲಿದೆಯಂತೆ. ಈ ಕುರಿತು ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಕಾಂತರ ಕಥೆ ಹಾಟ್ ಕೇಕ್ ತರಹ ಮಾರಾಟವಾಗುತ್ತಿದೆ. ‘ಕಾಂತಾರ’ ಸಿನಿಮಾ ವರ್ಲ್ಡ್ ವೈಡ್ ರೀಚ್ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ‘ಕಾಂತಾರ’ ಪಾರ್ಟ್ 2 ಯಾವಾಗ ಎಂದು ಕಾದು ಕುಳಿತ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಇದೇ ನವೆಂಬರ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರದ ಮುಹೂರ್ತ ಇದೇ…
ಬ್ರಿಟನ್: ಲಂಡನ್‌ನಲ್ಲಿರುವ (London) ಪ್ರಸಿದ್ಧ ಅಂತಾರಾಷ್ಟ್ರೀಯ ಹರಾಜು ಸಂಸ್ಥೆ ಸೋಥೆಬೈಸ್ ನಡೆಸಿದ ಹರಾಜಿನಲ್ಲಿ ಮಕಲನ್ ಕಂಪನಿ ತಯಾರಿಸಿದ ಸಿಂಗಲ್ ಮಾಲ್ಟ್ ವಿಸ್ಕಿ 22 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. 2019ರಲ್ಲಿ ಇದೇ ಕಂಪನಿ ತಯಾರಿಸಿದ್ದ ವಿಸ್ಕಿಯು 15 ಕೋಟಿ ರೂ. ಮಾರಾಟವಾಗಿತ್ತು. ಆ ದಾಖಲೆಯನ್ನು ‘ದಿ ಮಕಲನ್ ಅದಾಮಿ 1926’ ಹೆಸರಿನ ವಿಸ್ಕಿ ಮುರಿದಿದೆ. ಮಕಲನ್ ಕಂಪನಿಯು 1926 ರಲ್ಲಿ ಈ ವಿಸ್ಕಿಯನ್ನು ತಯಾರಿಸಿತ್ತು. ಅದನ್ನು 60 ವರ್ಷಗಳ ವರೆಗೆ ಉಳಿಸಿಕೊಂಡಿತ್ತು. ಸೋಥೆಬೈಸ್‌ನಲ್ಲಿ ವಿಸ್ಕಿಯನ್ನು ಹರಾಜಿಗೆ ಇಡಲಾಗಿತ್ತು. ಇದು 22 ಲಕ್ಷ ಪೌಂಡ್ (22.48 ಕೋಟಿ ರೂ.)ಗೆ ಹರಾಜಾಗಿ ಹೊಸ ದಾಖಲೆ ಬರೆದಿದೆ. ಪ್ರತಿಯೊಬ್ಬ ಹರಾಜುದಾರರು ಈ ರೀತಿಯ ವಿಸ್ಕಿಯನ್ನು ಮಾರಾಟ ಮಾಡಲು ಬಯಸುತ್ತಾರೆ. ಹಾಗೆಯೇ ಖರೀದಿದಾರರು ಅದನ್ನು ಹೊಂದಲು ಬಯಸುತ್ತಾರೆ ಎಂದು ಹರಾಜನ್ನು ಆಯೋಜಿಸಿದ ಸೋಥೆಬಿ ಕಂಪನಿಯ ವ್ಯವಸ್ಥಾಪಕರು ಹೇಳಿದ್ದಾರೆ.
ಅಹಮದಾಬಾದ್: ತಮ್ಮ ಸಿಡಿಲಬ್ಬರದ ಶತಕ (137 ರನ್) ದಿಂದ ಆಸ್ಟ್ರೇಲಿಯಾಕ್ಕೆ 6 ವಿಕೆಟ್ ಗಳ ಗೆಲುವು ತಂದುಕೊಡುವಲ್ಲಿ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮಹತ್ತರ ಪಾತ್ರ ವಹಿಸಿದ್ದರು. ಇದರಿಂದ ಕಾಂಗರೂ ಪಡೆ 6ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಹೆಡ್, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾರನ್ನು ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಎಂದು ಕರೆದಿದ್ದಾರೆ. ಟೀಮ್ ಇಂಡಿಯಾ ನೀಡಿದ 241 ರನ್ ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ,47 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸೋಲಿನತ್ತ ಹೆಜ್ಜೆ ಹಾಕಿತ್ತು. ಆದರೆ ಸಿಡಿಲಬ್ಬರದ ಆಟಗಾರ ಟ್ರಾವಿಸ್ ಹೆಡ್ 137 ರನ್ ಗಳಿಸುವ ಮೂಲಕ ಕಾಂಗರೂ ಪಡೆಯಲ್ಲಿ ಗೆಲುವಿನ ಆಸೆ ಚಿಗುರಿಸಿದರು. 4 ನೇ ವಿಕೆಟ್ ಗೆ ಟ್ರಾವಿಸ್ ಹೆಡ್ ಜೊತೆಗೂಡಿದ ಮಾರ್ನಸ್ ಲ್ಯಾಬುಶೇನ್ (58* ರನ್) 192 ರನ್ ಗಳ ಕಾಣಿಕೆಯನ್ನು ನೀಡಿದರು. 43ನೇ ಓವರ್ ನಲ್ಲಿ…
ಕೇಂದ್ರ ಹಣಕಾಸು ಸಚಿವಾಲಯವು ನನ್ನ ಬಿಲ್ ನನ್ನ ಅಧಿಕಾರ (ಮೇರಾ ಬಿಲ್ ಮೇರಾ ಅಧಿಕಾರ್) ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಮೂಲಕ ಜನರು ತಮ್ಮ ಖರೀದಿಗಳಿಗೆ ಜಿಎಸ್‌ಟಿ ಬಿಲ್‌ಗಳನ್ನು ಪಾವತಿಸುವುದಕ್ಕೆ ಉತ್ತೇಜನ ನೀಡುವ ಕ್ರಮವನ್ನು ಕೇಂದ್ರ ಹಣಕಾಸು ಸಚಿವಾಲಯ ಕೈಗೊಂಡಿದೆ. ಗ್ರಾಹಕರು ತಮ್ಮ ಜಿಎಸ್‌ಟಿ ಬಿಲ್‌ಗಳನ್ನು ಮೇರಾ ಬಿಲ್ ಮೇರಾ ಅಧಿಕಾರ್ ಅಪ್ಲಿಕೇಶನ್‌ನಲ್ಲಿ ಅಥವಾ ವೆಬ್ ಪೋರ್ಟಲ್ web.merabill.gst.gov.in ನಲ್ಲಿ ಅಪ್‌ಲೋಡ್ ಮಾಡಬಹುದು. ಈ ಯೋಜನೆಯು ಜಿಎಸ್‌ಟಿ ಬಿಲ್‌ಗಳನ್ನು ಕೇಳುವ ಅಭ್ಯಾಸವನ್ನು ಉತ್ತೇಜಿಸುವ ಮೂಲಕ ತೆರಿಗೆ ವಂಚನೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಕೇಂದ್ರ ಸರಕಾರ ಪ್ರತಿ ತಿಂಗಳು ಲಕ್ಕಿ ಡ್ರಾ ನಡೆಸಲಿದೆ. ಈ ಯೋಜನೆಯು ಹೆಚ್ಚು ಹೆಚ್ಚು ಜನರು ಖರೀದಿಯ ಮೇಲೆ ಜಿಎಸ್‌ಟಿ ಬಿಲ್ ಕೇಳಲು ಉತ್ತೇಜಿಸುತ್ತದೆ. ತೆರಿಗೆ ವಂಚನೆಯನ್ನು ಎದುರಿಸಲು ಪರಿಣಾಮಕಾರಿಯಾಗಿದೆ,” ಎಂದು ಹರಿಯಾಣ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಮಾಸಿಕ ಲಕ್ಕಿ ಡ್ರಾಗೆ ಅರ್ಹರಾಗಲು, ಗ್ರಾಹಕರು ಹಿಂದಿನ ತಿಂಗಳಲ್ಲಿ ನೀಡಲಾದ ಎಲ್ಲಾ ಬಿ2ಸಿ (ಬ್ಯುಜಿನೆಸ್ ಟು ಕಸ್ಟಮರ್) ಇನ್‌ವಾಯ್ಸ್‌ಗಳನ್ನು…
ಬೆಂಗಳೂರು:-ರಾಜಧಾನಿ ಬೆಂಗಳೂರಿನ ಹಲವೆಡೆ ಇಂದಿನಿಂದ ಎರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಇಂದು ಮತ್ತು ನಾಳೆ ಕೆಲವು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಮಾಡುತ್ತಿರುವ ಹಿನ್ನೆಲೆ ನ.21 ಮತ್ತು ನ.22ರಂದು ಬೆಂಗಳೂರು ನಗರದಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯಿದೆ. ಎಸ್.ಜೆ.ಎಂ.ನಗರ, ಬಾಬು ಜಗಜೀವನ ನಗರ ಹಾಗೂ ಇತರೆ ಪ್ರದೇಶಗಳು, ದೇವರಾಜ್ ಅರಸ್ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್ಪಿ ಕಚೇರಿ, ಆರ್ಟಿಒ ಕಚೇರಿ ಹಾಗೂ ಎಸ್.ಎಂ.ಕೆ. ಚೋಳೂರುಪಾಳ್ಯ, ಪ್ರೇಮನಗರ, ಶಂಕರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಯುನಾನಿ ಆಸ್ಪತ್ರೆ, ನಿರೀಕ್ಷಿತ ಭವನ ಮತ್ತು ಪಿ ಆಯಂಡ್ ಟಿ ಲೇಔಟ್ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಫೋಟೋಗಳು, ಸಂದೇಶಗಳು ಅಥವಾ ವೀಡಿಯೊಗಳನ್ನು ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸುವ ಮೂಲಕ ಪರಿಹಾರ ಪಡೆದುಕೊಳ್ಳಲು ಬೆಸ್ಕಾಂ ಸಲಹೆ ನೀಡಿದೆ.
ಮಳೆ ಕೊರತೆ, ವೈರಸ್, ಚೆಂಡು ಮುದುರು, ಕರಿಹೇನು ಮತ್ತು ಬೂದಿ ರೋಗದಿಂದ ಮೆಣಸಿನಕಾಯಿ ಬೆಳೆ ಹಾನಿಯಾಗಿದ್ದು ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಯಿಂದ ಸಹಸ್ರಾರು ಎಕರೆಯಲ್ಲಿ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ ಫಲ ಕೈಗೆ ಬರುವ ಸಮಯದಲ್ಲಿಕಾಲುವೆಗೆ ನೀರು ಸ್ಥಗಿತವಾಗುವ ಸ್ಥಿತಿ, ರೋಗದ ಭಯದಿಂದ ಬೆಳೆಗಾರರ ಸಾಲದ ಬಾಧೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲಎಂಬ ಕೊರುಗು ಕಾಡುತ್ತಿದೆ. ಬಿತ್ತನೆಯಾದ ಮೆಣಸಿನಕಾಯಿ ಎರಡೂವರೆಯಿಂದ ನಾಲ್ಕು ಅಡಿ ಎತ್ತರ ಬೆಳೆದು ನೀರಿಗಾಗಿ ಬಾಯಿ ತೆರೆಯಿತು. ಆಕಾಶ ಮಳೆ ಬಿತ್ತುವ ಬದಲು ಬೆಂಕಿ ಬಿಸಿಲು ಮತ್ತು ಬರ ಬಿದ್ದಿತು. ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹಣೆಗೊಳ್ಳದೇ ಎಚ್‌ಎಲ್‌ಸಿ ಮತ್ತು ಎಲ್‌ಎಲ್‌ಸಿ ಕಾಲುವೆಗೆ ನೀರು ಕಡಿತಗೊಳಿಸಲು ನ. 20ರವರೆಗೆ ಗಡುವು ನೀಡಿದೆ. ಈ ವರ್ಷ ಲಾಭ ಪಡೆಯುವ ನಿರೀಕ್ಷೆಯಿಂದ ತಾಲೂಕಿನಲ್ಲಿ ಒಟ್ಟು 15 ರಿಂದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ತಲೆ ಎತ್ತಿದೆ. ರೈತರು ಇಂಪ್ರೂವ್ಡ್ ತಳಿಯ ಮೆಣಸಿನಕಾಯಿ ಬೀಜದಿಂದ ನರ್ಸರಿಯಲ್ಲಿ ಬೆಳೆಸಿ,…
ಬೆಂಗಳೂರು:- ಹೆಚ್ಚುವರಿ ವೆಚ್ಚ ಮಾಡದೆ ಡಬ್ಬಲ್ ವೇ ಮಾದರಿ ಮೆಟ್ರೋ ಮಾರ್ಗ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು DCM ಡಿಕೆಶಿ ಹೇಳಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ನಿಯಂತ್ರಿಸಲು ಅಗತ್ಯ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚುವರಿ ವೆಚ್ಚ ಮಾಡದೆ ಡಬ್ಬಲ್ ವೇ ಮಾದರಿ ಮೆಟ್ರೋ ಮಾರ್ಗ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ತನ್ಮೂಲಕ ಮೆಟ್ರೋ ಮಾರ್ಗದ ಪಕ್ಕದಲ್ಲೇ ಎಲಿವೇಟೆಡ್ ರಸ್ತೆ ಅನುಷ್ಠಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ನಮ್ಮ ಮೆಟ್ರೋ ರೈಲು ಯೋಜನೆ ಜಾರಿಯಾಗುವ ಕಡೆಗಳಲ್ಲಿ ರಸ್ತೆ ಕಂ ರೈಲು ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ. ಇದರಡಿ ಮೆಟ್ರೋ ಮಾರ್ಗವನ್ನು ಮೇಲ್ಸೇತುವೆಗಳ ಮೇಲೆ ನಿರ್ಮಾಣ ಮಾಡಲಾಗುವುದು. ಯೋಜನೆಗೆ ತಗಲುವ ವೆಚ್ಚವನ್ನು ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಸಂಸ್ಥೆಗಳು ಹಂಚಿಕೊಳ್ಳಬಹುದು. ಅದರಿಂದ ಭೂಸ್ವಾಧೀನ ಹಾಗೂ ರಸ್ತೆ ನಿರ್ಮಾಣಕ್ಕೆ ಆಗುವ ಹೆಚ್ಚುವರಿ ವೆಚ್ಚವೂ ತಪ್ಪಲಿದ್ದು, ಶೀಘ್ರದಲ್ಲಿ ಮೇಲ್ಸೇತುವೆ ಮತ್ತು ಮೆಟ್ರೋ ರೈಲು ಮಾರ್ಗ ನಿರ್ಮಾಣವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು
ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಲು ಬಳಸಲಾಗುತ್ತದೆ. ಕತ್ತರಿಸಿದ ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಬ್ಯಾಕ್ಟೀರಿಯಾದ ಸೋಂಕು ಉಂಟಾಗುತ್ತದೆ. ಇದನ್ನು ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. 1) ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಕೆಟ್ಟ ವಾಸನೆ ಬರುತ್ತದೆ. ಆ ವಾಸನೆಯು ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಇತರ ಆಹಾರ ಪದಾರ್ಥಗಳಿಗೂ ಹರಡುತ್ತದೆ. ಪರಿಣಾಮವಾಗಿ, ಅವರು ತಮ್ಮ ರುಚಿಯನ್ನು ಕಳೆದುಕೊಳ್ಳುತ್ತಾರೆ. 2) ಕತ್ತರಿಸಿದ ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಬ್ಯಾಕ್ಟೀರಿಯಾದ ಸೋಂಕು ಉಂಟಾಗುತ್ತದೆ. 3) ಕತ್ತರಿಸಿದ ಈರುಳ್ಳಿ ಪೇಸ್ಟ್ ಮಾಡಿ ಹೆಚ್ಚಿನ ದಿನಗಳ ವರೆಗೆ ಸಂಗ್ರಹಿಸಿ ಇಡುವುದರಿಂದ ಪೋಷಕಾಂಶಗಳ ಮಟ್ಟವೂ ಕಡಿಮೆಯಾಗುತ್ತದೆ. 4) ಈರುಳ್ಳಿಯನ್ನು ಕತ್ತರಿಸಿ ಸಿಪ್ಪೆ ತೆಗೆದು ಶೇಖರಿಸಿದಾಗ ಹಲವು ಬಗೆಯ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವು ಬ್ಯಾಕ್ಟೀರಿಯಾವನ್ನು ಆಕರ್ಷಿಸುವ ಮತ್ತು ಅವುಗಳ ಬೆಳವಣಿಗೆಗೆ ಕಾರಣವಾಗುವ ಪೋಷಕಾಂಶಗಳಾಗುತ್ತವೆ. 5) ಈರುಳ್ಳಿಯನ್ನು ಕತ್ತರಿಸಿದ ನಂತರ ಅದನ್ನು ಎಂದಿಗೂ ತೆರೆದಿಡಬೇಡಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಇದು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ. 6) ಇರುಳ್ಳಿಯನ್ನು ಕತ್ತರಿಸಿದರೆ ತುಂಬಾ ದಿನಗಳವರೆಗೆ…
ಅಹಮದಾಬಾದ್: 13ನೇ ಆವೃತ್ತಿಯ ಏಕದಿನ ವಿಶ್ವಕಪ್ (ODI World Cup) ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ (Team India) ಭಾರೀ ನಿರಾಸೆಯಾಗಿದೆ. ಶತಕೋಟಿ ಭಾರತೀಯರ ಕನಸು ಭಗ್ನಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಅತೀವ ನೋವುಂಟುಮಾಡಿದೆ. ಬೆಳಗ್ಗೆಯಿಂದಲೂ ಹರ್ಷೋದ್ಘಾರ ಹಾಕುತ್ತಾ ಟೀಂ ಇಂಡಿಯಾ ಗೆಲುವಿಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಆಸ್ಟ್ರೇಲಿಯಾ (Australia) ತಂಡದ ಗೆಲುವು ಹೇಳತೀರದ ನೋವು ತರಿಸಿತು. ಭಾರತದ ಧ್ವಜ ಹಾರಿಸುತ್ತಾ ದೇಶಾಭಿಮಾನ ಮೆರೆಯುತ್ತಿದ್ದ ಅಭಿಮಾನಿಗಳು ಕೊನೆಯಲ್ಲಿ ಕಣ್ಣಲ್ಲಿ ನೀರು ಕಚ್ಚಿಕೊಂಡು ಹೋಗುವಂತೆ ಮಾಡಿತು. 12 ವರ್ಷಗಳ ನಂತರ ಟ್ರೋಫಿ ಗೆಲ್ಲುವ ಭಾರತದ ಕನಸು ಮತ್ತೆ ಕನಸಾಗಿಯೇ ಉಳಿಯಿತು. ಕೈತಪ್ಪಿದ 9ನೇ ಟ್ರೋಫಿ: ಭಾರತ ತಂಡ ಮಾಜಿ ಕ್ರಿಕೆಟಿಗ ಎಂ.ಎಸ್ ಧೋನಿ (MS Dhoni) ನಾಯಕತ್ವದಲ್ಲಿ 2011ರಲ್ಲಿ ಕೊನೆಯ ವಿಶ್ವಕಪ್ ಕಿರೀಟ ಗೆದ್ದು ಬೀಗಿತ್ತು. ಆದ್ರೆ 2013ರಿಂದ ಈಚೆಗೆ 9 ಐಸಿಸಿ ಟ್ರೋಫಿಗಳನ್ನ ಕಳೆದುಕೊಂಡಿರುವುದನ್ನು ಮರೆಯುವಂತಿಲ್ಲ. 2014ರ ಟಿ20 ವಿಶ್ವಕಪ್ ಟೂರ್ನಿ ಫೈನಲ್, 2015ರಲ್ಲಿ ಏಕದಿನ ವಿಶ್ವಕಪ್ ಸೆಮಿಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್,…