Author: AIN Author

ಶಾರುಖ್‌ ಖಾನ್‌ ನಟನೆಯ ಡಂಕಿ ಸಿನಿಮಾದ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್‌ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಡಂಕಿ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಡಂಕಿ ಸಿನಿಮಾದ ರೋಮ್ಯಾಂಟಿಕ್ ನಂಬರ್ ಇದೇ ತಿಂಗಳ‌ 22ರಂದು ರಿಲೀಸ್ ಆಗಲಿದೆ. ಲಪ್ ಪಟ್ ಗಯಾ ಎಂಬ ಸಾಹಿತ್ಯವುಳ್ಳ ಸುಮಧುರ ಹಾಡಿಗೆ ಪ್ರೀತಂ ಚಕ್ರವರ್ತಿ ಟ್ಯೂನ್ ಹಾಕಿದ್ದಾರೆ. ಹೇಗಿರಲಿ ಡಂಕಿ ಮೊದಲ ಗಾನಬಜಾನ ಎಂಬ ನಿರೀಕ್ಷೆ ಹೆಚ್ಚಿಸಿದೆ. ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.…

Read More

ಟೆಲ್ ಅವಿವ್: ಯುದ್ಧಪೀಡಿತ ಗಾಜಾ ಪಟ್ಟಿಯ (Gaza Strip) ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾವನ್ನು (Al-Shifa hospital) ಹಮಾಸ್ (Hamas) ತಮ್ಮ ಉಗ್ರ ಚಟುವಟಿಕೆಗಳ ತಾಣವಾಗಿಸಿಕೊಂಡಿರುವುದಾಗಿ ಇಸ್ರೇಲ್ (Israel) ವೀಡಿಯೋ ಸಾಕ್ಷಿ ಸಮೇತ ತಿಳಿಸಿದೆ. ಅಲ್ ಶಿಫಾ ಆಸ್ಪತ್ರೆಯಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನು (Hostages) ಇಟ್ಟಿರುವ ವೀಡಿಯೋವೊಂದನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ಹಮಾಸ್ ಉಗ್ರರ ಮತ್ತೊಂದು ಮುಖ ಬಯಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ನೇಪಾಳ, ಥಾಯ್ಲೆಂಡ್ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದೆ. ಆ ಒತ್ತೆಯಾಳುಗಳನ್ನು ಅಲ್ ಶಿಫಾ ಆಸ್ಪತ್ರೆಯಲ್ಲಿಯೇ ಇರಿಸಿದೆ. ಇಸ್ರೇಲ್‌ನಲ್ಲಿದ್ದ ಇವರನ್ನು ಹಮಾಸ್ ಉಗ್ರರು ಅಪಹರಿಸಿ ಅವರ ಮೇಲೆ ಹಲ್ಲೆ ನಡೆಸಿ ಗಾಜಾ ಆಸ್ಪತ್ರೆಯಲ್ಲಿ ಇರಿಸಿದೆ ಎಂದು ವೀಡಿಯೋ ಸಮೇತ ಇಸ್ರೇಲ್ ಸೇನೆ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ. https://twitter.com/IDF/status/1726319791865016493?ref_src=twsrc%5Etfw%7Ctwcamp%5Etweetembed%7Ctwterm%5E1726319791865016493%7Ctwgr%5E26a1097b952dd255050354de47f06b81f2459ea9%7Ctwcon%5Es1_&ref_url=https%3A%2F%2Fpublictv.in%2Fisrael-shares-video-of-hostages-at-gazas-al-shifa-hospital%2F ಇಷ್ಟು ಮಾತ್ರವಲ್ಲದೇ ಅಲ್ ಶಿಫಾ ಆಸ್ಪತ್ರೆಯಲ್ಲಿ ಸುರಂಗವೊಂದನ್ನು ಪತ್ತೆಹಚ್ಚಿರುವ ಮತ್ತೊಂದು ವೀಡಿಯೋವನ್ನು ಇಸ್ರೇಲ್ ಸೇನೆ ಹಂಚಿಕೊಂಡಿದೆ. ಅಲ್ ಶಿಫಾ ಆಸ್ಪತ್ರೆಯ ಸಂಕೀರ್ಣದ ಕೆಳಗಡೆ ಸುಮಾರು 55 ಮೀ.…

Read More

ಬೆಂಗಳೂರು: ನನ್ನನ್ನು ಅಮಾನತು ಮಾಡಿರೋ ಪಕ್ಷದ ನಿರ್ಧಾರವೇ ಕಾನೂನು ಬಾಹಿರ ಎಂದು ಮತ್ತೆ ದೇವೇಗೌಡ (HD Deve Gowda) ಹಾಗೂ ಕುಮಾರಸ್ವಾಮಿ (HD Kumaraswamy) ವಿರುದ್ಧ ಸಿಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದ್ದಾರೆ. ಅಮಾನತು ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ಪ್ರಧಾನಿ ಆಗಿದ್ದರು. 70 ವರ್ಷ ರಾಜಕೀಯದಲ್ಲಿ ಇರೋರು. ದೇವೇಗೌಡರು ತಪ್ಪು ಮೇಲೆ ತಪ್ಪು ಮಾಡ್ತಿದ್ದಾರೆ. ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದಿದ್ದೇ ತಪ್ಪು. ನನ್ನನ್ನು ತೆಗೆಯಬೇಕಾದ್ರೆ ಸಭೆ ಮಾಡಿ 2/3 ಮೆಜಾರಿಟಿಯಲ್ಲಿ ತೆಗೆಯಬೇಕು. ಇಲ್ಲದೆ ಹೋದ್ರೆ ಅವಧಿ ಮುಗಿಯಬೇಕು. ಇಲ್ಲ ನಾನು ಸಾಯಬೇಕು ಎಂದು ಹೇಳಿದರು. ಕೇರಳದಲ್ಲಿ ಮೀಟಿಂಗ್ ಕರೆದಿದ್ದು ನಾನು ಅಲ್ಲ. ರಾಷ್ಟ್ರೀಯ ಉಪಾಧ್ಯಕ್ಷ ಸಿಕೆ ನಾನು ಕರೆದಿದ್ದರು. 12 ರಾಜ್ಯದ ಜಿಲ್ಲಾ ಅಧ್ಯಕ್ಷರು ಆ ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ದೇವೇಗೌಡರು ಮಗನ ಮಾತು ಕೇಳಿ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ದೇವೇಗೌಡರಿಗೆ ಮತ್ತೊಮ್ಮೆ ಅವಕಾಶ ಕೊಡೋಣ ಅಂತ ತೀರ್ಮಾನ ಆಗಿದೆ ಎಂದರು. ಕುಮಾರಸ್ವಾಮಿ ಏಕಾಏಕಿಯಾಗಿ ಮೈತ್ರಿ ಮಾಡಿಕೊಂಡಿದ್ದಾರೆ.…

Read More

ಬೆಂಗಳೂರು:- ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕಳೆದ 5 ವರ್ಷದಲ್ಲಿ 81 ಜನರಿಗೆ ವಿದ್ಯುತ್​ ತಂತಿ ತಗುಲಿದ್ದು, ಇದರಲ್ಲಿ ಒಟ್ಟು 70 ಜನ ಮೃತಪಟ್ಟಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಮ್ ಆದ್ಮಿ ಪಕ್ಷ ದೂರಿದೆ. ನೆನ್ನೆಯಷ್ಟೇ ತಾಯಿ ಮತ್ತು ಮಗು ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದೆ. ಈ ಸಂಬಂಧ ಬ್ರ್ಯಾಂಡ್ ಬೆಂಗಳೂರಿನ ಕುರಿತು ಮಾತನಾಡುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಸವಾಲು ಹಾಕಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮುನ್ನ ನಮ್ಮೊಂದಿಗೆ ಪಾದಯಾತ್ರೆ ಮಾಡಿ ಎಂದು ಆಗ್ರಹಿಸಿದ್ದಾರೆ. ಈ ವರ್ಷ ಬೆಸ್ಕಾಂ ವಿದ್ಯುತ್‌ ತಂತಿ ಅವಘಡದಿಂದ 8 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಒಟ್ಟು 21 ಜನರಿಗೆ ಬೆಸ್ಕಾಂ ವಿದ್ಯುತ್​ ತಂತಿ ತಗುಲಿತ್ತು. ಈ ಪೈಕಿ 19 ಜನ ಸಾವೀಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಅಧಿಕಾರಿಗಳ ಬೇಜವಾಬ್ದಾರಿಗಳಿಂದ ಸಂಭವಿಸುತ್ತಿರುವ ಸಾವು-ನೋವುಗಳು ಅಮಾನವೀಯವಾಗಿವೆ ಎಂದರು. ನಿರಂತರವಾಗಿ ಇಂತಹ ದುರಂತಗಳು ನಡೆಯುತ್ತಿದ್ದರೂ ಅಧಿಕಾರದಲ್ಲಿರುವವರು ಮೃತಪಟ್ಟ ದುರ್ದೈವಿಗಳ ಕುಟುಂಬ…

Read More

ತಮಿಳು ನಾಡಿನ ಹೆಸರಾಂತ ನಟ ಹಾಗೂ ಡಿಎಂಡಿಕೆ (DMDK) ಮುಖ್ಯಸ್ಥ ಕ್ಯಾಪ್ಟನ್ ವಿಜಯಕಾಂತ್ (Captain Vijayakanth) ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಕಳೆದೆರಡು ದಿನಗಳಿಂದ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕ್ಯಾಪ್ಟನ್ ವಿಜಯಕಾಂತ್ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿದರೆ, ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷ ಅದನ್ನು ನಿರಾಕರಿಸಿದೆ. ಮಾಧ್ಯಮಗಳು ಪ್ರಸಾರ ಮಾಡುವಂತೆ ಕ್ಯಾಪ್ಟನ್ ಅವರ ಆರೋಗ್ಯ ತೀರಾ ಹದಗೆಟ್ಟಿಲ್ಲ. ಜ್ವರ ಮತ್ತು ಶೀತದಿಂದ ಅವರು ಬಳಲುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಮನೆಗೆ ಬರಲಿದ್ದಾರೆ ಎಂದು ಹೇಳಿದ್ದಾರೆ. ಹಲವಾರು ವರ್ಷಗಳ ಕಾಲ ನಟರಾಗಿ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸಿರುವ ಕ್ಯಾಪ್ಟನ್ ವಿಜಯಕಾಂತ್ ಅವರಿಗೆ 71 ವರ್ಷ ವಯಸ್ಸಾಗಿದೆ. ವಯೋ ಸಹಜ ಕಾಯಿಲೆಗಳು ಅವರನ್ನೂ ಕಾಡುತ್ತಿವೆ. ಎರಡು ದಿನಗಳ ಹಿಂದೆ ಅವರು ರೆಗ್ಯುಲರ್ ತಪಾಸಣೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲೆಯಾಗಿದ್ದಾರೆ ಎಂದು ಗೊಂದಲದ ಹೇಳಿಕೆಗಳನ್ನೂ ಪಕ್ಷ…

Read More

ದಾವಣಗೆರೆ: ಸ್ಪೀಕರ್ ಯು ಟಿ ಖಾದರ್ ಗೆ ಬಿಜೆಪಿಯ ಶಾಸಕರು ಕೈ ಮುಗಿದು ನಮಸ್ಕಾರ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಚಿವ ಜಮೀರ್ ಅಹ್ಮದ್ ರನ್ನು ಮುಲಾಜಿಲ್ಲದೇ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯ ಮಾಡಿದ್ದಾರೆ. ನಗರದಲ್ಲಿ ಸಚಿವ ಜಮೀರ್ ಅಹ್ಮದ್ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೇಣುಕಾಚಾರ್ಯ, ಜಮೀರ್ ನೀವು ರಾಜ್ಯದ ಸಚಿವರಾ? ಕೇವಲ ಅಲ್ಪ ಸಂಖ್ಯಾತರ ಸಚಿವರಾ..? ಈ ಬಗ್ಗೆ ಸಚಿವ ಜಮೀರ್ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಮುಲಾಜಿಲ್ಲದೇ ಅವರನ್ನ ಮುಖ್ಯಮಂತ್ರಿಗಳು ವಜಾ ಮಾಡಬೇಕು ಎಂದು ಒತ್ತಾಯ ಮಾಡಿದರು. https://ainlivenews.com/geo-scientist-statue-murder-case-explosive-issue-comes-to-light-during-investigation/ ಇನ್ನು, ಟೀ ಮಾರಿಕೊಂಡು ಜೀವನ ಮಾಡುತ್ತೇನೆಂಬ ಬಿಜೆಪಿ ಶಾಸಕ ಬಸನಗಡೌಡ ಪಾಟೀಲ್ ಯತ್ನಾಳ ಹೇಳಿಕೆಗೆ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಿವೈ ವಿಜಯೇಂದ್ರರ ಆಯ್ಕೆಯನ್ನು ಸ್ವಾಗತ ಮಾಡಲಾಗಿದೆ. ಯತ್ನಾಳ ಜೊತೆ ಹಿರಿಯರು ಮಾತನಾಡುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರು ಒಟ್ಟಾಗಿ…

Read More

ಕೊಲ್ಕತ್ತಾ:- ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಕಂಡ ಸೋಲನ್ನು ಸಹಿಸಲಾಗದೆ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ವರದಿಯಾಗಿದೆ. ಬಂಕುರಾದ ಬೆಲಿಯತೋರ್ ಸಿನಿಮಾ ಹಾಲ್ ಬಳಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿದೆ. ಘಟನೆ ಇದೀಗ ಬೆಳಕಿಗೆ ಬಂದಿದ್ದು, ಮೃತ ಯುವಕನನ್ನು ರಾಹುಲ್ ಲೋಹರ್ ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ‘ಕ್ರಿಕೆಟ್ ಹುಚ್ಚ’ ಎಂದು ಕರೆಯಲ್ಪಡುವ ರಾಹುಲ್, ಫೈನಲ್ ಪಂದ್ಯ ವೀಕ್ಷಿಸಲು ಕೆಲಸದಿಂದ ರಜೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋಲನ್ನು ಅನುಭವಿಸಿದ ನಂತರ ಈ ಬೇಸರವನ್ನು ತಾಳಲಾರದೆ, ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಘಟನೆಯ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ’ ಎಂದು ಮೃತ ಲೋಹರ್ ಅಳಿಯ ಬಾಬು ಉತ್ತಮ್ ಸುರ್ ತಿಳಿಸಿದ್ದಾರೆ. ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಲೋಹರ್ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ಕುರಿತು ಮಾತನಾಡಿದ…

Read More

ಬೆಂಗಳೂರು:- ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ಬೋಡಬಂಡೆನಹಳ್ಳಿ ಹಾಗೂ ದಿನ್ನೆಪಾಳ್ಯ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ದೇವರುಗಳ ವಿಸರ್ಜನಾ ಕಾರ್ಯಕ್ರಮವನ್ನು ಎರಡು ಗ್ರಾಮದ ಯುವಕರು ಜಾತಿ ಭೇದವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರುತ್ತಾ ಸ್ನೇಹಪೂರ್ವಕವಾಗಿ ಜೊತೆಗೂಡಿ ಅದ್ದೂರಿಯಾಗಿ ನೆರವೇರಿಸಿದರು.. ಗ್ರಾಮಗಳ ಪ್ರಮುಖ ಬೀದಿಯಲ್ಲಿ ಅದ್ದೂರಿ ಮೆರವಣಿಗೆ ಜೊತೆಗೆ ವಿವಿಧ ವಾದ್ಯಗೋಷ್ಠಿಗಳೊಂದಿಗೆ.. ಜನಸ್ನೇಹಿ ಪೊಲೀಸ್ ಅಧಿಕಾರಿ ಸಬ್ ಇನ್ಸ್ಪೆಕ್ಟರ್ ಚೇತನ್ ಗೌಡ ರವರ ಮಾರ್ಗದರ್ಶನದಲ್ಲಿ. ಗ್ರಾಮದ ರಾಜನಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.ನಂತರ ಗ್ರಾಮಸ್ಥರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು ಇದೇ ಸಂದರ್ಭದಲ್ಲಿ ಎರಡು ಗ್ರಾಮದ ಯುವಕರು ಹಿರಿಯರು ಮಹಿಳೆಯರು ಮಕ್ಕಳು ಉಪಸಿತರಿದ್ದರು..

Read More

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.‌ಎಸ್ ಯಡಿಯೂರಪ್ಪ ಅವರನ್ನ ಯಾಕೆ ಕೆಳಗೆ ಇಳಿಸಿದರು ಗೊತ್ತಾ? ಅಲ್ಲಿಯೂ ಅಪ್ಪನ ಆಡಳಿತದಲ್ಲಿ ಮಗ ವಿಜೇಯೇಂದ್ರ ಹಸ್ತಕ್ಷೇಪ ಇತ್ತು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಬಿಜೆಪಿಯವರು ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯದ ಆಡಳಿತದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವ ಕುರಿತು ಮಾತನಾಡುತ್ತಾರೆ. ಭ್ರಷ್ಟಾಚಾರ ಮುಕ್ತ ಅಭಿಯಾನ ಆರಂಭಕ್ಕೆ ಮುಂದಾಗಿದ್ದಾರೆ. ಬಿಜೆಪಿಯವರು ಯಾವ ನೈತಿಕತೆಯಿಂದ ಈ ಅಭಿಯಾನ ಮಾಡುತ್ತಾರೆ? ಈ ಹಿಂದೆ ಬಿ. ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ವಿಜಯೇಂದ್ರ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದರು. https://ainlivenews.com/geo-scientist-statue-murder-case-explosive-issue-comes-to-light-during-investigation/ ಹೀಗಾಗಿ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದರು’ ಎಂದು ಸಂತೋಷ್ ಲಾಡ್ ಆರೋಪಿಸಿದ್ದಾರೆ. ಇನ್ನು ಬರ ಕಾಮಗಾರಿ ಕುರಿತು ಕೇಂದ್ರ ಸರ್ಕಾರ ಯಾವುದೇ ರೀತಿಯ ಅನುದಾನ ಕೊಡುತ್ತಿಲ್ಲ. ಕೇಂದ್ರದ ಸಚಿವರನ್ನ ಭೇಟಿ ಮಾಡಲು ಸಹ ಅನುಮತಿ ಸಿಗುತ್ತಿಲ್ಲ ಎಂದರು.

Read More

ಬೆಂಗಳೂರು:- ಪೆನ್‌ಡ್ರೈನ್ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸತ್ಯವನ್ನ ಬಿಚ್ಚಿಟ್ಟಿದ್ದಾರೆ. ಪೆನ್‌ಡ್ರೈವ್ ತೋರಿಸಿದಾಗ ಅಣ್ಣ ನಿನ್ನ ಋಣದಲ್ಲಿದ್ದೇವೆ ನಿಮ್ಮಿಂದ ಬೆಳೆದಿದ್ದೇವೆ ಅಣ್ಣಾ ಅಂತ ಯಾಕೆ ಹೇಳಿದ್ರು? ಪೆನ್‌ಡ್ರೈವ್‌ನಲ್ಲಿ ನಂದು ಇದಿಯಾ ಅಂತ ನಿದ್ದೆಗೆಟ್ರಲಾ, ಯಾಕೆ ನಿದ್ರೆಗೆಟ್ಟರು ನಿಮ್ಮ ಮಂತ್ರಿಗಳು, ಯಾಕೆ ನನ್ನ ಬಳಿ ಬಂದರು. ಹಾವು ಬಿಡದೆ ಇಷ್ಟೆಲ್ಲಾ ನಿದ್ದೆಗೆಟ್ಟಿದ್ದೀರಿ, ಹಾವೇ ಇದೆ ಅಂದಿದ್ದಕ್ಕೆ ಇಷ್ಟು ಬೆಚ್ಚಿ ಹೋಗಿದಿರಲ್ಲಾ, ಹಾವು ಬಿಟ್ಟರೆ ಏನಾಗ್ತಿರಾ ನೀವು? ಟೈಂ ಬರುತ್ತೆ ರಿಲೀಸ್ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರಿಗೆ ಹೆದರಲ್ಲ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಇವರ ದುಡ್ಡಿಗೆ, ಇವರ ಪೊಗರಿಗೆ ನಾನು ಇದಕ್ಕೆ ಹೆದರುತ್ತೇನಾ? ಇವರ ರೌಡಿಸಂಗೆ ನಾನು ಹೆದರುತ್ತೇನಾ, ನಾನು ಅದಕ್ಕೇನು ಹೆದರುವವನಲ್ಲ, ಅದ್ಯಾವನೋ ಬಂದು ಕರೆಂಟ್ ಕನೆಕ್ಷನ್ ಕೊಟ್ಟಿದ್ದಾನೆ, ನಾನು ನಿಂತುಕೊಂಡು ಹಾಕ್ಸಿದ್ದೀನಾ. ಎಲ್ಲ ಹೇಳಿದ್ರು ಯಾರು ಕನೆಕ್ಷನ್ ಕೊಟ್ಟವ್ನೆ ಅವನ ಮೇಲೆ ಆಯಕ್ಷನ್ ತೆಗೊಳಲಿ ಅಂತ. ನಾನು…

Read More